Shobha Karandlaje: ಶಂಕಿತ ಉಗ್ರ ಶಾರೀಕ್‌ಗೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ತರಬೇತಿ, 40ಕ್ಕೂ ಹೆಚ್ಚು ಜನರಿಗೆ ತರಬೇತಿ: ಶೋಭಾ ಕರಂದ್ಲಾಜೆ-mangaluru blast accused got isis training taught same to over 40 people union minister ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Shobha Karandlaje: ಶಂಕಿತ ಉಗ್ರ ಶಾರೀಕ್‌ಗೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ತರಬೇತಿ, 40ಕ್ಕೂ ಹೆಚ್ಚು ಜನರಿಗೆ ತರಬೇತಿ: ಶೋಭಾ ಕರಂದ್ಲಾಜೆ

Shobha Karandlaje: ಶಂಕಿತ ಉಗ್ರ ಶಾರೀಕ್‌ಗೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ತರಬೇತಿ, 40ಕ್ಕೂ ಹೆಚ್ಚು ಜನರಿಗೆ ತರಬೇತಿ: ಶೋಭಾ ಕರಂದ್ಲಾಜೆ

ಶಾರೀಕ್‌ (24) ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌)ನಿಂದ ತರಬೇತಿ ಪಡೆದಿದ್ದಾನೆ ಮತ್ತು ಆತನು 40ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾನೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Shobha Karandlaje: ಶಂಕಿತ ಉಗ್ರ ಶಾರೀಕ್‌ಗೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ತರಬೇತಿ, 40ಕ್ಕೂ ಹೆಚ್ಚು ಜನರಿಗೆ ತರಬೇತಿ: ಶೋಭಾ ಕರಂದ್ಲಾಜೆ
Shobha Karandlaje: ಶಂಕಿತ ಉಗ್ರ ಶಾರೀಕ್‌ಗೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ತರಬೇತಿ, 40ಕ್ಕೂ ಹೆಚ್ಚು ಜನರಿಗೆ ತರಬೇತಿ: ಶೋಭಾ ಕರಂದ್ಲಾಜೆ

ಬೆಂಗಳೂರು: ಮಂಗಳೂರು ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ನಲ್ಲಿ ವಶದಲ್ಲಿರುವ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ (24) ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌)ನಿಂದ ತರಬೇತಿ ಪಡೆದಿದ್ದಾನೆ ಮತ್ತು ಆತನು 40ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾನೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕರಾವಳಿ ಜಿಲ್ಲೆಯಲ್ಲಿ ದೇವಸ್ಥಾನ ಸ್ಫೋಟ ನಡೆಸುವುದು, ಕೋಮು ಗಲಭೆ ಸೃಷ್ಟಿಸುವುದು ಕುಕ್ಕರ್‌ ಬಾಂಬ್‌ ಸ್ಪೋಟದ ಆರೋಪಿ ಮೊಹಮ್ಮದ್‌ ಶಾರೀಕ್‌ ಉದ್ದೇಶವಾಗಿತ್ತು ಎಂದು ಅವರು ಇಂದು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ಗೋಡೆ ಬರಹ ಬರೆದ ಈತನೇ ಈಗ ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ ಎಂದರು.

ಈಗ 40ಕ್ಕೂ ಹೆಚ್ಚು ಜನರಿಗೆ ಐಎಸ್‌ ತರಬೇತಿ ನೀಡಿದ್ದಾನೆ ಎಂಬ ಮಾಹಿತಿಯಿದೆ. ಅವನೇ ಸ್ವತಃ ಐಎಸ್‌ ತರಬೇತಿ ಪಡೆದಿದ್ದಾನೆ. ಈ ಹಿಂದೆ ಗೋಡೆ ಬರಹ ಬರೆದಿದ್ದ. ಆ ವಿಷಯದ ಕುರಿತು ಸರಿಯಾದ ತನಿಖೆಯಾಗದ ಕಾರಣ ಈಗ ಈ ಕೃತ್ಯ ನಡೆಸಿದ್ದಾನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕದ್ರಿ ದೇಗುಲದಲ್ಲಿ ಬಾಂಬ್‌ ಸ್ಫೋಟಿಸುವುದು ಅವನ ಉದ್ದೇಶವಾಗಿತ್ತು. ಮಂಗಳೂರು ಸುತ್ತಮುತ್ತ ಇರುವ ಹಲವು ದೇವಾಲಯಗಳು ಅವನ ಟಾರ್ಗೆಟ್‌ ಆಗಿತ್ತು. ಕರಾವಳಿ ಜಿಲ್ಲೆಯಲ್ಲಿ ದೇವಸ್ಥಾನದಲ್ಲಿ ಬಾಂಬ್‌ ಸ್ಫೋಟಿಸುವುದು, ಕೋಮುಗಲಭೆ ಸೃಷ್ಟಿಸುವ ಉದ್ದೇಶ ಹೊಂದಿದ್ದ ಎಂದರು.

ಉಗ್ರ ತರಬೇತಿ ಪಡೆದವರು, ಪಿಎಫ್‌ಐನಲ್ಲಿ ಸಕ್ರಿಯರಾಗಿರುವವರು ಇಂದು ಭಯೋತ್ಪಾದನಾ ಚಟುವಟಿಕೆಗಳಲ್ಲಿ ನಿರತರಾಗಿದೆ. ಎನ್‌ಐಎ ತನಿಖೆಯಿಂದ ಈಗ ಸತ್ಯಾಂಶ ಹೊರಕ್ಕೆ ಬರುತ್ತಿದೆ ಎಂದು ಅವರು ಹೇಳಿದ್ದಾರೆ.

ಈಗ ಕೇಂದ್ರ ತನಿಖಾ ತಂಡವು ಕರ್ನಾಟಕದಲ್ಲಿದೆ. ಪ್ರವೀಣ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದೆ. ಎನ್‌ಐಎ ತಂಡಕ್ಕೆ ರಾಜ್ಯದ ಪೊಲೀಸರು ಸಹಕಾರ ನೀಡಬೇಕು. ಭಯೋತ್ಪಾದಕ ಕೃತ್ಯಗಳಿಗೆ ಹಣದ ಸಹಕಾರ, ಶಸ್ತ್ರಾಸ್ತ್ರಗಳ ಪೂರೈಕೆ, ತರಬೇತಿ ನಡೆದ ಕುರಿತು ಮಾಹಿತಿ ಇದೆ. ಕೇಂದ್ರ ಮತ್ತು ರಾಜ್ಯ ತನಿಖಾ ತಂಡವು ಭಯೋತ್ಪಾದನಾ ನಿರ್ನಾಮ ಮಾಡಲು ಕ್ರಮ ಕೈಗೊಳ್ಳಲಿದೆ. ಜನರು ಆತಂಕಗೊಳ್ಳುವುದು ಬೇಡ ಎಂದು ಅವರು ಹೇಳಿದ್ದಾರೆ.

ತಾರೀಕ್‌ ತನಿಖೆ ಎನ್‌ಐಎಗೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಂಕನಾಡಿ ಸಮೀಪ, ಇತ್ತೀಚೆಗೆ ನಡೆದ ಕುಕ್ಕರ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು, ಕೇಂದ್ರ ತನಿಖಾ ಸಂಸ್ಥೆ NIA ಗೆ ವರ್ಗಾಯಿಸಿದ್ದು, ಕೇಂದ್ರ ಗೃಹ ಇಲಾಖೆಯು, ರಾಜ್ಯದ ಶಿಫಾರಸನ್ನು ಮಾನ್ಯ ಮಾಡಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಪ್ರಾಥಮಿಕ ತನಿಖೆ ಯಲ್ಲಿ, ಸಂಗ್ರಹಿಸಲಾದ, ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ, ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡು, ಕೇಂದ್ರ ತನಿಖಾ ಸಂಸ್ಥೆ NIA ಗೆ ವಹಿಸಲು, ಶಿಫಾರಸು ಮಾಡಲಾಗಿತ್ತು.

ಕುಕ್ಕರ್‌ ಸ್ಫೋಟದ ವಿಚಾರವಾಗಿ ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ ಸಂಘಟನೆಯ ಪತ್ರಿಕಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೋಸ್ಟ್‌ ಜೊತೆ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಆರೋಪಿ ಶಾರೀಕ್‌ ಫೋಟೋಗಳನ್ನು ಕೂಡ ಅಳವಡಿಸಿ ನವೆಂಬರ್‌ 23 ರಂದು ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ, ಪೊಲೀಸರು ಈ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದರ ಜೊತೆ ಎಡಿಜಿಪಿ ಅಲೋಕ್‌ ಕುಮಾರ್‌ಗೆ ನಿಮ್ಮ ಸಂತೋಷ ಕ್ಷಣಿಕವಾದದ್ದು, ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಸದ್ಯದಲ್ಲಿಯೇ ಅನುಭವಿಸಲಿದ್ದೀರಿ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

mysore-dasara_Entry_Point