Ramanagara Rename: ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಯಾಕೆ? ಇಲ್ಲಿದೆ 5 ಕಾರಣಗಳು
ಕನ್ನಡ ಸುದ್ದಿ  /  ಕರ್ನಾಟಕ  /  Ramanagara Rename: ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಯಾಕೆ? ಇಲ್ಲಿದೆ 5 ಕಾರಣಗಳು

Ramanagara Rename: ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಯಾಕೆ? ಇಲ್ಲಿದೆ 5 ಕಾರಣಗಳು

Why Ramanagara District Name Changed?: ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಹಿಂದೆ ಹಲವು ಕಾರಣಗಳು ಇವೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಮನಗರದ ಹೆಸರು ಬದಲಾವಣೆ ಏಕೆ ಮಾಡಬೇಕೆಂದು ಡಿಕೆ ಶಿವಕುಮಾರ್‌ ಈ ಹಿಂದೆಯೇ ಹೇಳಿದ್ದಾರೆ. ಜಿಲ್ಲೆಯ ಹೆಸರು ಬದಲಾವಣೆಗೆ ಪ್ರಮುಖವಾದ 5 ಕಾರಣಗಳು ಇಲ್ಲಿವೆ.

ಇದೇ ಜುಲೈ 9ರಂದು ಬೆಂಗಳೂರು ದಕ್ಷಿಣ ಜಿಲ್ಲೆಗೆ ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿಯನ್ನು ಸೇರಿಸಬೇಕೆಂದು ಎಂಎಲ್‌ಎಗಳ ಜತೆ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಇದೇ ಜುಲೈ 9ರಂದು ಬೆಂಗಳೂರು ದಕ್ಷಿಣ ಜಿಲ್ಲೆಗೆ ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿಯನ್ನು ಸೇರಿಸಬೇಕೆಂದು ಎಂಎಲ್‌ಎಗಳ ಜತೆ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. (ANI Picture Service)

ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಹಿಂದೆ ಹಲವು ಕಾರಣಗಳು (ramanagara rename reasons) ಇವೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಮನಗರದ ಸಮಗ್ರ ಅಭಿವೃದ್ಧಿಯ ಕನಸು ಇದರ ಹಿಂದಿದೆ. ಇದರೊಂದಿಗೆ ರಾಮನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ರಿಯಲ್‌ ಎಸ್ಟೆಟ್‌ಗೆ ಬೂಸ್ಟ್‌ ನೀಡುವುದು ಇದರ ಪ್ರಮುಖ ಉದ್ದೇಶ ಎನ್ನಲಾಗುತ್ತಿದೆ. ಈ ಹಿಂದೆ ಡಿಕೆ ಶಿವಕುಮಾರ್‌ ಮತ್ತು ಇನ್ನಿತರರು ನೀಡಿರುವ ಕಾರಣಗಳು ಈ ಮುಂದಿನಂತೆ ಇದೆ.

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಏಕೆ?

1. ರಾಮನಗರದವರು ಮೂಲತಃ ಬೆಂಗಳೂರಿಗರು

ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿ ತಾಲೂಕುಗಳ ಅಭಿವೃದ್ಧಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೆಸರು ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಈ ಹಿಂದೆ ಹೇಳಿದ್ದರು. ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಭಾಗದ ಜನರು ಮೂಲತಃ ಬೆಂಗಳೂರಿಗರು ಎಂದು ಅವರು ಹೇಳಿದ್ದಾರೆ.

2. ಬೆಂಗಳೂರಿಗೆ ಇರುವ ಜಾಗತಿಕ ಖ್ಯಾತಿಯ ಪ್ರಯೋಜನಗಳನ್ನು ಪಡೆಯುವುದು

ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲೂಕುಗಳಿಗೆ ಬೆಂಗಳೂರಿನ ಜಾಗತಿಕ ಖ್ಯಾತಿಯ ಪ್ರಯೋಜನಗಳನ್ನು ವಿಸ್ತರಿಸುವುದು ನಮ್ಮ ಉದ್ದೇಶವಾಗಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಮತ್ತು ರಾಮನಗರ ನಗರವನ್ನು ಹೊಸ ಜಿಲ್ಲೆಯ ಕೇಂದ್ರವಾಗಿ ಮಾಡುವುದು ನಮ್ಮ ಉದ್ದೇಶ ಎಂದು ಡಿಕೆ ಶಿವಕುಮಾರ್‌ ಹೇಳಿದ್ದರು.

3. ರಾಮನಗರಕ್ಕೆ ಕೈಗಾರಿಕೆಗಳ ಆಗಮನ ಹೆಚ್ಚಿಸುವುದು

ಈ ರೀತಿ ರಾಮನಗರದ ಹೆಸರನ್ನು ಬದಲಾಯಿಸುವುದರಿಂದ ಇಲ್ಲಿಗೆ ಹೆಚ್ಚು ಕೈಗಾರಿಕೆಗಳು ಆಗಮಿಸುವಂತೆ ಮಾಡಲು ಸಾಧ್ಯವಾಗುತ್ತದೆ. ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹತ್ತಿರದಲ್ಲಿರುವ ಕಾರಣದಿಂದ ಬೆಂಗಳೂರು ರಾಮನಗರ ಮತ್ತು ತುಮಕೂರು ಕಡೆಗೆ ಮಾತ್ರ ಕೈಗಾರಿಕೆಗಳು ಬೆಳೆಯಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

4. ರಿಯಲ್‌ ಎಸ್ಟೆಟ್‌ ಪ್ರಯೋಜನಗಳು

ರಾಮನಗರದ ಭೂಮಿಯ ಮೌಲ್ಯವೂ ಇದರಿಂದ ಹೆಚ್ಚುತ್ತದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದರು. "ನೀವ್ಯಾರು ನಿಮ್ಮ ಭೂಮಿಯನ್ನು ಈಗ ಮಾರಬೇಡಿ. ಮುಂದೆ ಇದರ ಬೆಲೆ ಹಲವು ಪಟ್ಟು ಹೆಚ್ಚಲಿದೆ" ಎಂದು ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಈ ರೀತಿ ಹೆಸರು ಬದಲಾವಣೆಯ ಉದ್ದೇಶ ರಿಯಲ್‌ ಎಸ್ಟೆಟ್‌ ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

5. ಅಭಿವೃದ್ಧಿ, ಇನ್ನಷ್ಟು ಅಭಿವೃದ್ಧಿ

ರಾಮನಗರದ ನೇರ ಬೆಳವಣಿಗೆಗೆ ಉತ್ತೇಜನ ನೀಡುವುದು ನಮ್ಮ ಉದ್ದೇಶ. ನಾವೆಲ್ಲರೂ ಬೆಂಗಳೂರು ನಗರ ಜಿಲ್ಲೆಗೆ ಸೇರಿರುವವರು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆ ಎಂದು ಆಡಳಿತಾತ್ಮಕವಾಗಿ ಮಾಡಲಾಗಿದೆ. ಆದರೆ, ಇದರಿಂದ ನಮಗೆ ಪ್ರಯೋಜನವಿಲ್ಲ. ಇದರ ಬದಲು ನಾವು ಬೆಂಗಳೂರು ದಕ್ಷಿಣ ಜಿಲ್ಲೆಯವರಾದರೆ ಹೆಚ್ಚಿನ ಲಾಭವಿದೆ ಎಂದು ಹೇಳಿದ್ದರು.

Whats_app_banner