ಕನ್ನಡ ಸುದ್ದಿ  /  Karnataka  /  Rss Prashiksha Varga Opposed By Sfi And Other Organisations In Karnataka

RSS Prashiksha Varga: ವಸತಿ ಶಾಲೆಯಲ್ಲಿ ಆರೆಸ್ಸೆಸ್‌ ಪ್ರಶಿಕ್ಷಾ ವರ್ಗ; ಎಸ್‌ಎಫ್‌ಐ ವಿರೋಧ

RSS Prashiksha Varga: ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪ್ರಶಿಕ್ಷಾ ವರ್ಗ ಆಯೋಜಿಸುತ್ತಿದೆ. ಇದು ಸರಿಯಲ್ಲ ಎಂದು ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (SFI) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪ್ರಶಿಕ್ಷಾ ವರ್ಗ ಆಯೋಜನೆಗೆ ಸ್ಟೂಡೆಂಟ್‌ ಫೆಡರೇಶನ್‌ ಆಫ್‌ ಇಂಡಿಯಾ (SFI) ವಿರೋಧ.
ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪ್ರಶಿಕ್ಷಾ ವರ್ಗ ಆಯೋಜನೆಗೆ ಸ್ಟೂಡೆಂಟ್‌ ಫೆಡರೇಶನ್‌ ಆಫ್‌ ಇಂಡಿಯಾ (SFI) ವಿರೋಧ. (ANI)

ದೇಶದ ಅತಿದೊಡ್ಡ ಸಾಮಾಜಿಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸರ್ಕಾರಿ ಶಾಲೆಗಳಲ್ಲಿ ವಿಶೇಷವಾಗಿ ವಸತಿ ಶಾಲೆಗಳಲ್ಲಿ ಪ್ರಶಿಕ್ಷಾ ವರ್ಗ ಆಯೋಜಿಸುತ್ತಿರುವುದನ್ನು ಸ್ಟೂಡೆಂಟ್‌ ಫೆಡರೇಶನ್‌ ಆಫ್‌ ಇಂಡಿಯಾ ಖಂಡಿಸಿದೆ.

ಈ ಪ್ರಶಿಕ್ಷಾ ವರ್ಗ ಆಯೋಜನೆಗೆ ಅನುಮತಿ ಪಡೆಯಲು ಆರೆಸ್ಸೆಸ್‌, ಪ್ರೇರಣಾ ಪ್ರತಿಷ್ಠಾನ ಮತ್ತು ಅಕ್ಷಯ ಸೇವಾ ಪ್ರತಿಷ್ಠಾನದ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಎಸ್‌ಎಫ್‌ಐ ಮತ್ತು ಇತರೆ ಸಂಘಟನೆಗಳು ಆರೋಪಿಸಿರುವುದಾಗಿ ಟಿವಿ9 ಕನ್ನಡ ವರದಿ ಮಾಡಿದೆ.

ಕೋಲಾರದ ಮುಳಬಾಗಿಲು ತಾಲೂಕಿನ ಕೂತಾಂಡ್ಲಹಳ್ಳಿ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಆರ್​ಎಸ್​ಎಸ್​ ಪ್ರಶಿಕ್ಷಾ ವರ್ಗ ನಡೆಸಲು ಸಿದ್ಧತೆ ನಡೆದಿದೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅನುಮತಿ ಕೊಟ್ಟಿದ್ದಾರೆ.

ಈ ಶಿಬಿರಕ್ಕೆ ವಿರೋಧ ವ್ಯಕ್ತವಾದ ಕಾರಣ, ಕೋಲಾರದಲ್ಲಿ ಪ್ರೇರಣಾ ಪ್ರತಿಷ್ಠಾನದ ಹೆಸರಲ್ಲಿ ಶಿಬಿರಕ್ಕೆ ಅನುಮತಿ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಷಯ ಸೇವಾ ಪ್ರತಿಷ್ಠಾನ ಹೆಸರಲ್ಲಿ ಅನುಮತಿ ನೀಡಲಾಗಿದೆ. ಯುವಕರಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಯೋಗಾಸನ, ರಾಷ್ಟ್ರೀಯ ಚಿಂತನೆ ಕುರಿತು ತರಬೇತಿ ನೀಡುವುದಾಗಿ ಉಲ್ಲೇಖ ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ಹೇಳಿದೆ.

ದಿನದ ಗಮನಾರ್ಹ ಸುದ್ದಿಗಳು

1) PFI Bhagya poster ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಇದೇ ವೇಳೆ, ಚಿತ್ರದುರ್ಗದ ಚಳ್ಳಕೆರೆ ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಪಿಎಫ್‌ಐ ಭಾಗ್ಯ ಪೋಸ್ಟರ್‌ ಅಭಿಯಾನ ಗಮನಸೆಳೆದಿದೆ. PFI Bhagya poster: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿತ್ರದುರ್ಗದಲ್ಲಿ ಪಿಎಫ್‌ಐ ಭಾಗ್ಯ ಪೋಸ್ಟರ್‌ ಅಭಿಯಾನ

2) What does a crocodile eat: ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ದೇಗುಲದ ದೇವರ ಮೊಸಳೆ ಬಬಿಯಾ ವೆಜಿಟೇರಿಯನ್‌ ಕ್ರೊಕೊಡೈಲ್‌ ಎಂದೆನಿಸಿಕೊಂಡದ್ದು ಹೇಗೆ? ಮೊಸಳೆಗಳ ಆಹಾರ ಕ್ರಮ ಏನು? ಇಲ್ಲಿದೆ ವಿವರ. What does a crocodile eat: ದೇವರ ಮೊಸಳೆ ಸಸ್ಯಾಹಾರಿ ಎನಿಸಿಕೊಂಡದ್ದು ಹೇಗೆ? ಆಹಾರ ಏನು?

3) Heart-shaped traffic light: ಹೃದಯಾಕಾರದ ಟ್ರಾಫಿಕ್ ಲೈಟ್‌ ಫೋಟೋ ಇಂಟರ್‌ನಟ್‌ ಜಗತ್ತನ್ನು ಬೆರಗುಗೊಳಿಸಿವೆ. ಅನೇಕರು ಈ ಹೊಸ ಸಿಗ್ನಲ್‌ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಏನಿದು? ಯಾಕೆ ಈ ರೀತಿ - ಇಲ್ಲಿದೆ ವಿವರ. Heart-shaped traffic light: ಬೆಂಗಳೂರಲ್ಲಿ ಹೃದಯದಾಕಾರದ ಟ್ರಾಫಿಕ್‌ ಲೈಟ್‌ ಗಮನಿಸಿದ್ದೀರಾ? ಏನದು!

4) Bommai, BSY tour from today: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮಧ್ಯ ಕರ್ನಾಟಕ ಪ್ರದೇಶದಲ್ಲಿ ಸಂಚರಿಸುತ್ತಿದೆ. ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಬಿಜೆಪಿ ಕೂಡ ಸಜ್ಜಾಗಿದೆ. ಬಿಜೆಪಿ ನಾಯಕರು ಇಂದು ಕಲ್ಯಾಣ-ಕರ್ನಾಟಕದಿಂದ ಸಂಘಟನಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಸದ ಹಿನ್ನೆಲೆ ವಿವರ ಇಲ್ಲಿದೆ. Bommai, BSY tour from today: ಬೊಮ್ಮಾಯಿ, ಬಿಎಸ್‌ವೈ ಜನಸಂಕಲ್ಪ ಯಾತ್ರೆ ಇಂದು ಶುರು; ಏಳು ಬೃಹತ್‌ ಸಮಾವೇಶ ಎಲ್ಲಿ ಏನು? ವಿವರ ಇಲ್ಲಿದೆ

5) Aishwarya Rai’s photo on admit card: ಜಾರ್ಖಂಡ್‌ನ ಧನ್‌ಬಾದ್‌ನಲ್ಲಿರುವ ಬಿಬಿಎಂಕೆಯುನಲ್ಲಿ ಆಕೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ. ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಆಕೆ ಅಡ್ಮಿಟ್‌ ಕಾರ್ಡ್‌ ಪಡೆದುಕೊಂಡು, ಅದರಲ್ಲಿರುವ ಫೋಟೋ ಮತ್ತು ಸಹಿ ನೋಡಿ ಬೇಸ್ತುಬಿದ್ದಳು. ಆದರೆ ಆಕೆ ಐಶ್ವರ್ಯ ರೈ ಅಲ್ಲ! Aishwarya Rai’s photo on admit card: ಧನ್‌ಬಾದ್‌ನ ಬಿಬಿಎಂಕೆಯು ಎಡವಟ್ಟು; ಕಂಗಾಲಾದ ಕಾಜಲ್‌

IPL_Entry_Point