ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯಕ್ಕೆ ಇದು ಕಾರಣ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯಕ್ಕೆ ಇದು ಕಾರಣ

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯಕ್ಕೆ ಇದು ಕಾರಣ

ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ವ್ಯಾವಹಾರಿಕ ಬಳಕೆ ವಿಚಾರ ಸದಾ ಚರ್ಚೆಗೆ ಒಳಗಾಗುವಂಥದ್ದು. ಈ ಬಾರಿ ವಿಚಾರ ಪ್ರಸ್ತಾಪಿಸಿದ್ದು ಝೊಹೊ ಕಂಪನಿಯ ಸಿಇಒ ಶ್ರೀಧರ ವೆಂಬು. “ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು” ಎಂಬ ಅವರ ಅಬಿಪ್ರಾಯಕ್ಕೆ ಕಾರಣ ಇಲ್ಲಿದೆ.

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯ ಈಗ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಅಭಿಪ್ರಾಯ ಈಗ ಚರ್ಚೆಗೆ ಕಾರಣವಾಗಿದೆ. (X)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು. ಕರ್ನಾಟಕದ ಪ್ರಾದೇಶಿಕ ಭಾಷೆ ಕನ್ನಡ. ನವೆಂಬರ್ ಬಂದಾಗ ಕನ್ನಡ ಭಾಷಾ ಅಭಿಮಾನ, ರಾಜ್ಯೋತ್ಸವದ ಸಂಭ್ರಮ ಇದ್ದೇ ಇದೆ. ಬೆಂಗಳೂರಿನಲ್ಲಿ ವ್ಯಾವಹಾರಿಕ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಪೂರಕವಾಗಿ ಭಾರತದ ಬಹು ರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಝೊಹೊ ಕಾರ್ಪೊರೇಷನ್‌ನ ಸಿಇಒ ಶ್ರೀಧರ ವೆಂಬು ಅವರ ಅಭಿಪ್ರಾಯ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಅವರು, ಯಾರೆಲ್ಲ ಬೆಂಗಳೂರಿನಲ್ಲಿ ನೆಲೆಸಿದ್ದೀರೋ ಅವರು ಮತ್ತು ಅವರ ಮಕ್ಕಳು ಕನ್ನಡ ಕಲಿಯಬೇಕು. ಕನ್ನಡ ಕಲಿಯದೇ ಇದ್ದರೆ ಅದು ಈ ನೆಲಕ್ಕೆ, ಈ ನಾಡಿಗೆ ಅಗೌರವ ತೋರಿದಂತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಹಿಂದಿ - ನ್ಯಾಷನಲ್ ಲಾಂಗ್ವೇಜ್‌” ಎಂದು ಬರೆದಿದ್ದ ಟೀ ಶರ್ಟ್‌ ಫೋಟೋಗಳೊಂದಿಗೆ ಬೆಂಗಳೂರು ಪ್ರವಾಸಕ್ಕೆ ಹೇಳಿ ಮಾಡಿಸಿದ ಟೀ ಶರ್ಟ್‌ (“ಪರ್ಫೆಕ್ಟ್‌ ಟಿ- ಶರ್ಟ್‌ ಫಾರ್ ಬೆಂಗಳೂರು ಟ್ರಿಪ್‌”) ಎಂದು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಪೂರಕವಾಗಿ ಶ್ರೀಧರ ವೆಂಬು ಪ್ರತಿಕ್ರಿಯಿಸಿದರು.

ಝೊಹೊ ಟೆಕ್ನಾಲಜೀಸ್‌ನ ಸಿಇಒ ಶ್ರೀಧರ ವೆಂಬು ಹೇಳಿರುವುದೇನು?

ಝೊಹೊ ಟೆಕ್ನಾಲಜೀಸ್‌ನ ಸಿಇಒ ಶ್ರೀಧರ ವೆಂಬು ಅವರು ಎಕ್ಸ್‌ ತಾಣದಲ್ಲಿ, “ನೀವು ಬೆಂಗಳೂರನ್ನು ನಿಮ್ಮ ನೆಲೆಯಾಗಿಸಿಕೊಳ್ಳುವುದಾದರೆ, ನೀವು ಕನ್ನಡ ಕಲಿಯಬೇಕು, ನಿಮ್ಮ ಮಕ್ಕಳೂ ಕನ್ನಡ ಕಲಿಯಬೇಕು. ಬೆಂಗಳೂರಿನಲ್ಲಿ ಹಲವಾರು ವರ್ಷ ಇದ್ದ ಬಳಿಕವೂ ನೀವು ಕನ್ನಡ ಕಲಿಯದೇ ಇದ್ದರೆ ಅದು ಅಗೌರವ ತೋರಿದಂತೆ. ನಾನು ಪದೇಪದೆ ಚೆನ್ನೈನಲ್ಲಿರುವ ನಮ್ಮ ಉದ್ಯೋಗಿಗಳಿಗೆ ವಿಶೇಷವಾಗಿ ಹೊರ ರಾಜ್ಯಗಳಿಂದ ಬಂದವರಿಗೆ, ಬರುವವರಿಗೆ ತಮಿಳು ಕಲಿಯುವಂತೆ ಹೇಳುತ್ತೇನೆ” ಎಂದಿದ್ಧಾರೆ. ಶ್ರೀಧರ ವೆಂಬು ಅವರ ಟ್ವೀಟ್ ಹೀಗಿದೆ ನೋಡಿ

ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಟ್ವೀಟ್‌
ಬೆಂಗಳೂರಲ್ಲಿ ಇದ್ದೀರಿ ಅಂದ್ರೆ ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು; ಝೊಹೊ ಸಿಇಒ ಶ್ರೀಧರ್ ವೆಂಬು ಅವರ ಟ್ವೀಟ್‌ (X@svembu)

ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ

“ನನಗೆ ಮುಂಬೈನಲ್ಲಿ ಅನೇಕ ಕನ್ನಡ ಸ್ನೇಹಿತರಿದ್ದಾರೆ. ದಶಕಗಳಿಂದ ಅವರು ಇಲ್ಲಿ ವಾಸವಿದ್ದಾರೆ. ಯಾರಿಗೂ ಮರಾಠಿ ಬರುವುದಿಲ್ಲ. ಒಂದು ಪದ ಕೂಡ ಬರಲ್ಲ. ಇದು ನ್ಯಾಯವೇ?” ಎಂದು ಎಕ್ಸ್ ಬಳಕೆದಾರರೊಬ್ಬರು ವಾದಿಸಿದ್ದಾರೆ.

ಇನ್ನೊಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದು, “ನೀವು ಇಲ್ಲಿ ಬಹಳ ಅಪ್ರಬುದ್ಧರಂತೆ ಕಾಣುತ್ತೀರಿ. ಯಾವುದೇ ಭಾಷೆ, ಸಂಸ್ಕೃತಿಗೆ ಅಗೌರವ ತೋರುವುದು ಸ್ವೀಕಾರಾರ್ಹವಲ್ಲ. ಆದರೆ ಭಾಷೆಯನ್ನು ಕಲಿಯದಿರುವುದು ಅಗೌರವವೆ? ಈ ನಿಲುವಿನಲ್ಲಿ ಲಾಜಿಕ್ ಸಾಯುತ್ತದೆ" ಎಂದು ಹೇಳಿದ್ದಾರೆ.

“ಕೋಲ್ಕತ್ತದಲ್ಲಿ ವಾಸಿಸುವ ಹೆಚ್ಚಿನ ತಮಿಳರು ಮತ್ತು ಮಲಯಾಳಿಗಳು ಬಂಗಾಳಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಅವರಲ್ಲಿ ಒಬ್ಬರು ನನ್ನ ಇಂಗ್ಲಿಷ್ ಪ್ರಾಧ್ಯಾಪಕ ದಿವಂಗತ ಎನ್ ವಿಶ್ವನಾಥನ್. ಅವರು ಪ್ರಶಸ್ತಿ ವಿಜೇತ ನಟರೂ ಆಗಿದ್ದರು. ನೀವು ದೀರ್ಘಕಾಲ ಬದುಕುತ್ತಿದ್ದರೆ ಸ್ಥಳೀಯ ಭಾಷೆಯ ಉಪಭಾಷೆಯನ್ನಾಗಿ ಪ್ರೀತಿಸಿ. ಈ ನಿಲುವು ಅದ್ಭುತವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

“ಭಾಷೆಯು ಸಂವಹನದ ಸಾಧನವಾಗಿದೆ. ಜನರು ತಮ್ಮ ಉಳಿವಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಇದು ಸಾಮಾನ್ಯ ಜ್ಞಾನವಲ್ಲವೇ? ಬೆಂಗಳೂರಿನಲ್ಲಿ ನಾನು ಕನ್ನಡಿಗರಿಗಿಂತ ಕನ್ನಡೇತರರನ್ನು ಹೆಚ್ಚು ಭೇಟಿಯಾಗುತ್ತೇನೆ. ಅವರಲ್ಲಿ ಶೇಕಡಾ 90 ರಷ್ಟು ಜನರು ಮಾತನಾಡುವಾಗ ಇಂಗ್ಲಿಷ್ ಬಳಸುತ್ತಾರೆ. ಬೆಂಗಳೂರಿಗೆ ತೆರಳುವ ಯಾರಾದರೂ ಇಂಗ್ಲಿಷ್‌ಗಿಂತ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ? ಭಾಷೆಗಳು ಪುಸ್ತಕಗಳಿಂದ ಕಲಿಯುವುದಿಲ್ಲ, ಸುತ್ತಮುತ್ತಲಿನ ಪರಿಸರದಿಂದ ಕಲಿಯುತ್ತವೆ" ಎಂದು ನಾಲ್ಕನೇಯವರು ಹೇಳಿದ್ದಾರೆ.

ಶ್ರೀಧರ ವೆಂಬು ಯಾರು?

ಫೋರ್ಬ್ಸ್ ಪ್ರಕಾರ, ಶ್ರೀಧರ ವೆಂಬು ಅವರ ನಿವ್ವಳ ಸಂಪತ್ತಿನ ಮೌಲ್ಯವು 5.8 ಬಿಲಿಯನ್ ಡಾಲರ್‌ ಆಗಿದೆ. ಅವರು ಕ್ಲೌಡ್-ಆಧಾರಿತ ವ್ಯಾಪಾರ ಸಾಫ್ಟ್‌ವೇರ್ ಅನ್ನು ರಚಿಸುವ ಖಾಸಗಿ ಕಂಪನಿ ಝೋಹೋ ಟೆಕ್ನಾಲಜೀಸ್‌ನ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಅವರು ತಮ್ಮ ಇಬ್ಬರು ಒಡಹುಟ್ಟಿದವರು ಮತ್ತು ಮೂವರು ಸ್ನೇಹಿತರೊಂದಿಗೆ ಅಡ್ವೆಂಟ್‌ನೆಟ್ ಎಂಬ ಕಂಪನಿಯನ್ನು ಶುರುಮಾಡಿದದರು. ಅದಾಗಿ, 1994ರಲ್ಲಿ ಕ್ವಾಲ್ಕಾಮ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ರಿನ್ಸ್‌ಟನ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದರು.

Whats_app_banner