ಕನ್ನಡ ಸುದ್ದಿ  /  ಕರ್ನಾಟಕ  /  ಬೇಸಿಗೆ ರಜೆ ಹಿನ್ನೆಲೆ ಬೆಂಗಳೂರು-ಬೀದರ್ ವಿಶೇಷ ರೈಲು ಸಂಚಾರ; ಟಿಕೆಟ್ ದರ, ಸಮಯ, ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಬೇಸಿಗೆ ರಜೆ ಹಿನ್ನೆಲೆ ಬೆಂಗಳೂರು-ಬೀದರ್ ವಿಶೇಷ ರೈಲು ಸಂಚಾರ; ಟಿಕೆಟ್ ದರ, ಸಮಯ, ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬೆಂಗಳೂರು-ಬೀದರ್ ನಡುವೆ 2 ವಿಶೇಷ ರೈಲು ಸಂಚಾರವನ್ನು ಆರಂಭಿಸಲಾಗಿದೆ. ದಿನಾಂಕ, ಸಮಯ ಸೇರಿದಂತೆ ರೈಲು ಸಂಚಾರಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿ ತಿಳಿಯಿರಿ.

2024ರ  ಏಪ್ರಿಲ್ 21 ರಿಂದ ಮೇ 31ರ ವರೆಗೆ ಬೆಂಗಳೂರು-ಬೀದರ್ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ.
2024ರ ಏಪ್ರಿಲ್ 21 ರಿಂದ ಮೇ 31ರ ವರೆಗೆ ಬೆಂಗಳೂರು-ಬೀದರ್ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ.

ಕಲಬುರಗಿ: ಬೇಸಿಗೆ ರಜೆಯಿಂದ ಎದುರಾಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಹಾಗೂ ಬೀದರ್ (Bengaluru-Bidar Special Train) ನಡುವೆ ಎರಡು ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್) ಘೋಷಣೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ವಿಭಾಗವು, ಮೊದಲ ರೈಲು ಏಪ್ರಿಲ್ 21ರ ಭಾನುವಾರದಿಂದ ಮೇ 13ರ ಸೋಮವಾರದ ವರೆಗೆ ತನ್ನ ಸಂಚಾರವನ್ನು ಆರಂಭಿಸಿದರೆ, ಎರಡನೇ ರೈಲು ಏಪ್ರಿಲ್ 26ರ ಶುಕ್ರವಾರದಿಂದ ಜೂನ್ 14ರ ಶುಕ್ರವಾರದ ವರೆಗೆ ಸಂಚರಿಸಲಿದೆ. ಒಟ್ಟು ಎರಡು ಹೆಚ್ಚುವರಿ ವಿಶೇಷ ರೈಲುಗಳು ಸಂಚಾರ ನಡೆಸಲಿವೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಬೀದರ್‌ಗೆ ವಾರದಲ್ಲಿ ಎರಡು ದಿನ ಈ ವಿಶೇಷ ರೈಲು ಸಂಚಾರ ನಡೆಸುತ್ತದೆ. 06589 ಸಂಖ್ಯೆಯ ರೈಲು ಭಾನುವಾರ ಮತ್ತು ಮಂಗಳವಾರ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರಾತ್ರಿ 11 ಗಂಟೆಗೆ ಹೊರಟು ಮರು ದಿನ ಮಧ್ಯಾಹ್ನ 12 ಗಂಟೆಗೆ ಬೀದರ್‌ ತಲುಪುತ್ತದೆ. 06597 ಸಂಖ್ಯೆಯ ರೈಲು ಪ್ರತಿ ಶುಕ್ರವಾರ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೀದರ್‌ಗೆ ಆಗಮಿಸಲಿದೆ.

ಬೆಂಗಳೂರಿನಿಂದ ಬೀದರ್‌ಗೆ ರೈಲು ಟಿಕೆಟ್ ದರ ಎಷ್ಟಿದೆ?

ಮತ್ತೆ ಆ ಕಡೆಯಿಂದ 06598 ಸಂಖ್ಯೆಯ ರೈಲು ಪ್ರತಿ ಶನಿವಾರ ಮಧ್ಯಾಹ್ನ 2.10ಕ್ಕೆ ಬೀದರ್ ರೈಲ್ವೆ ನಿಲ್ದಾಣದಿಂದ ಹೊರಟು ಮರುದಿನ ಮುಂಜಾನೆ 4.15ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ತಲುಪುತ್ತದೆ. 400 ರೂಪಾಯಿಯಿಂದ ಹಿಡಿದು 1,560 ರೂಪಾಯಿಗಳ ಟಿಕೆಟ್ ಧರ ಇದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲು ಸೇವೆಯನ್ನು ಒದಗಿಸಲಾಗಿತ್ತು ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು-ಬೀದರ್ ನಡುವೆ ಮಾತ್ರವಲ್ಲದೆ, ಇನ್ನೂ ಕೆಲವೊಂದು ಸ್ಥಳಗಳಿಗೆ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ಮೈಸೂರು-ಬಿಹಾರ ನಡುವೆ ವಿಶೇಷ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಬಿಹಾರದ ಮುಜಾಫರ್‌ಫುರ ನಿಲ್ದಾಣದವರೆಗೆ ನಾಲ್ಕು ಟ್ರಿಪ್‌ಗಳ ವಿಶೇಷ ರೈಲು ಸಂಚಾರ ನಡೆಸಿವೆ. ಏಪ್ರಿಲ್ 15 ರಿಂದ ಮೇ 6 ರವರೆಗೆ ಈ ರೈಲು ಸೇವೆ ಇರಲಿದೆ. ಬೇಸಿಗೆ ರಜೆಯಲ್ಲಿ ಪ್ರಮಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.

IPL_Entry_Point