Kalaburagi-Kolhapur train: ಕಲಬುರಗಿ - ಕೊಲ್ಹಾಪುರ ರೈಲಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ
ಕನ್ನಡ ಸುದ್ದಿ  /  ಕರ್ನಾಟಕ  /   Kalaburagi-kolhapur Train: ಕಲಬುರಗಿ - ಕೊಲ್ಹಾಪುರ ರೈಲಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ

Kalaburagi-Kolhapur train: ಕಲಬುರಗಿ - ಕೊಲ್ಹಾಪುರ ರೈಲಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ

ಕಲಬುರಗಿ-ಕೊಲ್ಹಾಪುರ ರೈಲು ಸಂಚಾರಕ್ಕೆ ಇಂದು ಹಸಿರು ನಿಶಾನೆ ತೋರಿಸಲಾಯಿತು. ಕಲಬುರಗಿ ರೈಲ್ವೇ ನಿಲ್ದಾಣದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಮೂಲಕ ಕಲಬುರಗಿ ಕೊಲ್ಹಾಪುರ ಮಾರ್ಗದ ರೈಲು ಸಂಚಾರಕ್ಕೆ ಚಾಲನೆ ನೀಡಿದರು.‌

<p>ಹಸಿರು ನಿಶಾನೆ ತೋರಿಸುವ ಮೂಲಕ ಕಲಬುರಗಿ - ಕೊಲ್ಹಾಪುರ ರೈಲಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ</p>
ಹಸಿರು ನಿಶಾನೆ ತೋರಿಸುವ ಮೂಲಕ ಕಲಬುರಗಿ - ಕೊಲ್ಹಾಪುರ ರೈಲಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ

ಕಲಬುರಗಿ-ಕೊಲ್ಹಾಪುರ ರೈಲು ಸಂಚಾರಕ್ಕೆ ಇಂದು ಹಸಿರು ನಿಶಾನೆ ತೋರಿಸಲಾಯಿತು. ಕಲಬುರಗಿ ರೈಲ್ವೇ ನಿಲ್ದಾಣದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಮೂಲಕ ಕಲಬುರಗಿ ಕೊಲ್ಹಾಪುರ ಮಾರ್ಗದ ರೈಲು ಸಂಚಾರಕ್ಕೆ ಚಾಲನೆ ನೀಡಿದರು.‌

ಇಲ್ಲಿಯ ವರೆಗೆ ಸೊಲ್ಹಾಪುರ-ಮೀರಜ್ ನಡುವೆ ಮಾತ್ರ ಸಂಚಾರ ನಡೆಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನು ಕೊಲ್ಹಾಪುರದ ವರೆಗೂ ವಿಸ್ತರಣೆ ಮಾಡಲಾಗಿದೆ. ಕಲಬುರಗಿ - ಕೊಲ್ಹಾಪುರ ರೈಲು ಸಂಚಾರಕ್ಕೆ ಜನರು ಹೆಚ್ಚಿನ ಬೇಡಿಕೆ ಇಟ್ಟಿದ್ದರು. ಸಂಸದ ಉಮೇಶ್ ಜಾಧವ್ ಕೇಂದ್ರ ಸರ್ಕಾರಕ್ಕೆ ಈ ಕುರಿತಂತೆ ಮನವಿ ಮಾಡಿದ್ದರು.

ರೈಲು ಸಂಚಾರದ ಸಮಯ

ಕಲಬುರಗಿ-ಕೊಲ್ಹಾಪುರ ನಡುವೆ ಸಂಚರಿಸಲಿರುವ ರೈಲು, ಕಲಬುರಗಿ ನಗರದಿಂದ ಪ್ರತಿದಿನ ಮುಂಜಾನೆ 6.40ಕ್ಕೆ ಪ್ರಯಾಣ ಆರಂಭಿಸಲಿದೆ. ಮಧ್ಯಾಹ್ನ 2.15ಕ್ಕೆ ಕೊಲ್ಹಾಪುರಕ್ಕೆ ತಲುಪಲಿದೆ. ಕೊಲ್ಹಾಪುರದಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿದ್ದು, ರಾತ್ರಿ 10.45ಕ್ಕೆ ಕಲಬುರಗಿ ತಲುಪಲಿದೆ.

ರೈಲು ಮಾರ್ಗ ವಿಸ್ತರಣೆಯಿಂದ ಗಾಣಗಾಪುರದ ದತ್ತಾತ್ರೇಯ, ಪಂಡರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮೀ ದೇವಾಲಯಗಳಿಗೆ ತೆರಳುವ ಭಕ್ತರಿಗೆ ಸಹಾಯಕವಾಗಲಿದೆ. ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ನೇರ ರೈಲಿಗೆ ಬೇಡಿಕೆ ಇಟ್ಟಿದ್ದ ಜನರಿಗೆ ಕೊನೆಗೂ ಕೇಂದ್ರ ಸರ್ಕಾರ ಸ್ಪಂದಿಸಿದೆ.

ಕಲಬುರಗಿಯಿಂದ ಹೊರಡುವ ರೈಲು 7.05ಕ್ಕೆ ಗಾಣಗಾಪುರ, 7.46ಕ್ಕೆ ಅಕ್ಕಲಕೋಟ, 9.30ಕ್ಕೆ ಕುರುಡ್ವಾಡಿ, 10.20ಕ್ಕೆ ಪಂಡರಾಪುರ, 12.45 ಮೀರಜ್, 1.10ಕ್ಕೆ ಜೈಸಿಂಗ್‌ಪುರ, 1.25ಕ್ಕೆ ಹತ್ಕಣಂಗಲೆ ಮೂಲಕ ಕೊಲ್ಹಾಪುರ ತಲುಪಲಿದೆ.

ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ 8% ರಷ್ಟು ಹೆಚ್ಚಳ

ಇತ್ತೀಚೆಗಷ್ಟೆ ಹೈದರಾಬಾದ್​​​ನಲ್ಲಿ ನಡೆದ ರಾಷ್ಟ್ರೀಯ ಗಣಿಗಾರಿಕೆ ಸಚಿವರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ದ ಜೋಶಿ, ಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಹೊಸ ಮೈಲುಗಲ್ಲು ಸಾಧಿಸುತ್ತಿದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ‌ ಶೇ 8% ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದರು.

ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ. ಖನಿಜ ಕ್ಷೇತ್ರದಲ್ಲಾದ ಸುಧಾರಣೆ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯ ಪಾತ್ರವು ಮುಖ್ಯವಾಗಿದೆ. ಕಳೆದ ವರ್ಷ ಹರಾಜಾದ ಗಣಿಗಳಿಂದ ಸರಕಾರಕ್ಕೆ ಒಟ್ಟು 25,170 ಕೋಟಿ ಆದಾಯ ಬಂದಿದೆ ಎಂದು ಜೋಶಿ ತಿಳಿಸಿದರು.

2030ರ ವೇಳೆಗೆ ಭಾರತದ ಜಿಡಿಪಿಯಲ್ಲಿ ಗಣಿ ಮತ್ತು ಖನಿಜಗಳ ಪಾಲು ಶೇ 2.5ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳು ಸಹಕರಿಸುವಂತೆ ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದ್ದರು.

Whats_app_banner