What is a Cath lab: ಬೆಂಗಳೂರಿನಲ್ಲಿ ಅತ್ಯಾಧುನಿಕ ಕ್ಯಾಥ್‌ಲ್ಯಾಬ್ ಉದ್ಘಾಟಿಸಿದ ಸಚಿವ ಡಾ. ಅಶ್ವತ್ಥ್ ನಾರಾಯಣ್; ಏನಿದು? ಏನಿದರ ಉಪಯೋಗ?
What is a Cath lab: ಉನ್ನತ ಮಟ್ಟದ ಇಂಟಿಗ್ರೇಡೆಡ್ ಐಎಫ್‌ಆರ್ ಸೌಲಭ್ಯದ ಜತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಕ್ಯಾಥ್‌ಲ್ಯಾಬ್ ಒಳಗೊಂಡಿರುತ್ತದೆ. ಹೃದಯಾಘಾತವಾದ ಸಂದರ್ಭದಲ್ಲಿ ಪರಿಧಮನಿಗಳ ಕ್ರಿಯಾತ್ಮಕ ಚಲನೆಯ ನೋಡುವ ಡೈನಾಮಿಕ್ ಕರೋನರಿ ರೋಡ್‌ಮ್ಯಾಪ್ (ಡಿಸಿಆರ್) ನಂತಹ ವಿಶಿಷ್ಟ ಸುಧಾರಿತ ಮೀಡಿಯೇಟರ್ ಡಿವೈಸ್ ಇದರಲ್ಲಿ ಅಡಕವಾಗಿದೆ.
ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗಳಿಗೆ ಕ್ಷಿಪ್ರ ಚಿಕಿತ್ಸೆ ನೀಡುವುದಕ್ಕೆ ಅನುಕೂಲ ಒದಗಿಸುವ ಅಗತ್ಯವಾದ ಅತ್ಯಾಧುನಿಕ ಫಿಲಿಪ್ಸ್ AZURION 7C12 ʻಕ್ಯಾಥ್ ಲ್ಯಾಬ್ʼ ಅನ್ನು ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಉದ್ಘಾಟಿಸಿದರು.
ಹಠಾತ್ ಹೃದಯಾಘಾತ ಅಥವಾ ಗಂಭೀರ ಹೃದಯ ಸಂಬಂಧಿತ ಕಾಯಿಲೆ ಹೊಂದಿರುವವರಿಗೆ ಶೀಘ್ರವಾಗಿ ಚಿಕಿತ್ಸೆ ನೀಡುವುದು ಅತ್ಯವಶ್ಯಕವಾಗಿರುತ್ತದೆ. ಇಂತಹ ಪ್ರಕರಣದಲ್ಲಿ ಸಮಯ ಅತ್ಯಂತ ಅಮೂಲ್ಯವಾದದ್ದು. ಇದೀಗ ಫೋರ್ಟಿಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಕ್ಯಾಥ್‌ಲ್ಯಾಬ್ ತೆರೆದಿರುವುದು ಅತ್ಯಂತ ಉಪಯುಕ್ತಕರವಾಗಿದೆ. ಇಂತಹ ಲ್ಯಾಬ್‌ಗಳ ಸಂಖ್ಯೆ ಹೆಚ್ಚಬೇಕು ಎಂದು ಡಾ.ಅಶ್ವತ್ಥ ನಾರಾಯಣ ಇದೇ ವೇಳೆ ಹೇಳಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ. ಮಹದೇವಯ್ಯ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಉಪಕರಣ ಹೊಂದಿರುವುದು ಅನಿವಾರ್ಯ. ಇಂದು ಯಾವುದೇ ವಯಸ್ಸಿನ ಮಿತಿ ಇಲ್ಲದೇ ಹೃದಯಾಘಾತ ಸಂಭವಿಸುತ್ತಿದೆ. ಅಂಥವರನ್ನು ದೂರದ ಆಸ್ಪತ್ರೆಗೆ ಕರೆದೊಯ್ಯುವ ಸಮಯದೊಳಗೆ ಮೃತಪಡುವ ಸಾಧ್ಯತೆ ಹೆಚ್ಚಾಗಿದೆ. ಹತ್ತಿರದಲ್ಲಿಯೇ ಇಂತಹ ಅತ್ಯಾಧುನಿಕ ಲ್ಯಾಬ್ ಹೊಂದಿರುವುದು ಜನರ ಆರೋಗ್ಯದ ದೃಷ್ಟಿಯಿಂದ ಒಳಿತು ಎಂದು ಹೇಳಿದರು.
ಫೋರ್ಟಿಸ್ ಆಸ್ಪತ್ರೆಯ ಹೃದಯ ತಜ್ಞ ಡಾ. ವಿವೇಕ್ ಜವಳಿ, ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಸಿ ಪ್ರಭಾಕರ ಕೋರೆಗೋಳ್ ಹಾಗೂ ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಉಪಸ್ಥಿತರಿದ್ದರು.
ಏನಿದು ಕ್ಯಾಥ್ ಲ್ಯಾಬ್?
ಉನ್ನತ ಮಟ್ಟದ ಇಂಟಿಗ್ರೇಡೆಡ್ ಐಎಫ್‌ಆರ್ ಸೌಲಭ್ಯದ ಜತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಕ್ಯಾಥ್‌ಲ್ಯಾಬ್ ಒಳಗೊಂಡಿರುತ್ತದೆ. ಹೃದಯಾಘಾತವಾದ ಸಂದರ್ಭದಲ್ಲಿ ಪರಿಧಮನಿಗಳ ಕ್ರಿಯಾತ್ಮಕ ಚಲನೆಯ ನೋಡುವ ಡೈನಾಮಿಕ್ ಕರೋನರಿ ರೋಡ್‌ಮ್ಯಾಪ್ (ಡಿಸಿಆರ್) ನಂತಹ ವಿಶಿಷ್ಟ ಸುಧಾರಿತ ಮೀಡಿಯೇಟರ್ ಡಿವೈಸ್ ಇದರಲ್ಲಿ ಅಡಕವಾಗಿದೆ. ಇದರಲ್ಲಿ ಆಟೋಮ್ಯಾಟಿಕ್ 2D ಫ್ಲೋರೋಸ್ಕೋಪಿ ಮೂಲಕ ಹೃದಯದ ಒಳಗಿನ ಚಲನವನಗಳ ಮೂಲಕ ನೋಡಬಹುದು.
ಕ್ಯಾಥ್ ಲ್ಯಾಬ್‌ನಲ್ಲಿ ಏನು ಮಾಡುತ್ತಾರೆ?
ಟೆಸ್ಟ್ ಮತ್ತು ಅಬ್ಲೇಶನ್, ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮುಂತಾದ ಪ್ರೊಸೀಜರ್‌ಗಳು ಹಾಗೂ ಪೇಸ್‌ಮೇಕರ್ಸ್/ಐಸಿಡಿಗಳ ಇಂಪ್ಲಾಂಟೇಶನ್ ಅನ್ನು ಕ್ಯಾಥ್ ಲ್ಯಾಬ್‌ನಲ್ಲಿ ನೆರವೇರಿಸಲಾಗುತ್ತದೆ. ಸಾಮಾನ್ಯವಾಗಿ ಕಾರ್ಡಿಯಾಲಜಿಸ್ಟ್ ನೇತೃತ್ವದ ವಿವಿಧ ಪರಿತಣರ ತಂಡ ಈ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತದೆ.
ಹೃದಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಚಿಕಿತ್ಸೆ ನೀಡುವಲ್ಲಿ ಕ್ಯಾಥ್ ಲ್ಯಾಬ್ ಪ್ರಮುಖ ಪಾತ್ರವಹಿಸುತ್ತದೆ. ಕೊರೊನರಿ ಆರ್ಟೆರಿ ಡಿಸೀಸ್, ಹಾರ್ಟ್ ಅಟ್ಯಾಕ್, ಎದೆನೋವು, ಕಂಜೆಸ್ಟಿವ್ ಹಾರ್ಟ್ ಫೇಲ್ಯೂರ್, ಪೆರಿಫೆರಲ್ (ಲಿಂಬ್) ವಾಸ್ಕುಲರ್ ಡಿಸೀಸ್, ಪಲ್ಮನರಿ ಹೈಪರ್ ಟೆನ್ಶನ್, ಪಲ್ಮನರಿ ಎಂಬೋಲಿಸಂ (ರಕ್ತ ಹೆಪ್ಪುಗಟ್ಟುವಿಕೆ) ಮುಂತಾದ ಆರೋಗ್ಯ ಸಮಸ್ಯೆಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ರೋಗಿಯನ್ನು ಕ್ಯಾಥ್ ಲ್ಯಾಬ್‌ಗೆ ಕರೆದೊಯ್ಯುತ್ತಾರೆ.
ಕ್ಯಾಥ್ ಲ್ಯಾಬ್‌ನಲ್ಲಿ ಚಿಕಿತ್ಸೆ ರಿಸ್ಕ್ ಇರುವಂಥದ್ದಾ?
ಕ್ಯಾಥ್ ಲ್ಯಾಬ್‌ನಲ್ಲಿ ಕೆಲವು ಚಿಕಿತ್ಸೆಗಳನ್ನು ನೀಡುವಾಗ ಒಂದಿಷ್ಟು ರಿಸ್ಕ್ ಇದ್ದೇ ಇರುತ್ತದೆ. ಕಾರ್ಡಿಯಾಕ್ ಕ್ಯಾಥರೈಸೇಷನ್ ಅನ್ನು ಅನುಭವಿ ಮೆಡಿಕಲ್ ಟೀಮ್ ಅದನ್ನು ನೆರವೇರಿಸಿದರೆ ಒಂದು ಸುರಕ್ಷಿತ ಪ್ರೊಸೀಜರ್ ಆಗಿರುತ್ತದೆ. ಆದರೆ, ಇಲ್ಲೂ ರಕ್ತಸ್ರಾವ, ಸೋಂಕು, ರಕ್ತ ಹೆಪ್ಪುಗಟ್ಟುವಿಕೆ ಮುಂತಾದ ರಿಸ್ಕ್ ಇದ್ದೇ ಇದೆ. ಇಂತಹ ಸನ್ನಿವೇಶದಲ್ಲಿ ಹಾರ್ಟ್ ಅಟ್ಯಾಕ್ ಅಥವಾ ಸ್ಟ್ರೋಕ್ ಆಗುವಂಥ ಸಂದರ್ಭ ಬಹಳ ವಿರಳ. ಅತ್ಯಾಧುನಿಕ ಸೌಲಭ್ಯ ಮತ್ತು ನುರಿತ ಡಾಕ್ಟರ್ ಇದ್ದಾಗ ಈ ರೀತಿ ಅಪಾಯಗಳು ಕಡಿಮೆ ಇರುತ್ತವೆ.