ದಕ್ಷಿಣ ಭಾರತದ ಪ್ರತ್ಯೇಕ ದೇಶ ಬೇಡಿಕೆ ಇಟ್ಟ ಎಂಕೆ ಸ್ಟಾಲಿನ್: ಕರ್ನಾಟಕದವರ ಖಡಕ್ ಪ್ರತಿಕ್ರಿಯೆ
MK Stalin separate South India Demand ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್( Tamilnadu Cm Stalin) ಅವರು ಕೇಂದ್ರ ಸರ್ಕಾರದ ಮೇಲಿನ ಸಿಟ್ಟಿಗೆ ಪ್ರತ್ಯೇಕ ದಕ್ಷಿಣ ಭಾರತ ದೇಶದ ಬೇಡಿಕೆಯಿಟ್ಟರು. ಇದಕ್ಕೆ ಕರ್ನಾಟಕದ ಪ್ರತಿಕ್ರಿಯೆಗಳು ಹೀಗಿದ್ದವು.
ಕೇಂದ್ರ ಸರ್ಕಾರದ ನಡೆಯಿಂದ ಬೇಸರಗೊಂಡಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೆಲ ದಿನಗಳ ಹಿಂದೆ ಒಂದು ಹೇಳಿಕೆ ನೀಡಿದ್ದರು. ಅದು ನೇರವಾಗಿ ಕೇಂದ್ರ ಸರ್ಕಾರವನ್ನೇ ಗುರಿಯಾಗಿಸಿಟ್ಟುಕೊಂಡು ನೀಡಿದ ಹೇಳಿಕೆಯಾಗಿತ್ತು.
ನೀವು ಸಂವಿಧಾನ ಬದಲಾವಣೆ ಮಾಡುವುದಾದರೆ ದಕ್ಷಿಣ ಭಾರತವನ್ನು ಬೇರ್ಪಡಿಸಿ, ಯಾರಿಗೆ ಸಂವಿಧಾನ ಬೇಕಿಲ್ಲವೋ ಅವರು ಉತ್ತರ ಭಾರತಕ್ಕೆ ಹೋಗಬಹುದು. ಇಲ್ಲಿಂದ ಹೋದ ತೆರಿಗೆ ಅಷ್ಟೇ ಪ್ರಮಾಣದಲ್ಲಿ ಮರಳಿ ಇಲ್ಲಿಗೆ ಬಂದಿದ್ದರೆ ದಕ್ಷಿಣ ಭಾರತ ಏಷ್ಯಾದಲ್ಲಿಯೇ ಅತೀ ಶ್ರೀಮಂತ ಮುಂದುವರೆದ ಭಾಗವಾಗಿರುತ್ತಿತ್ತು ಎನ್ನುವುದು ಸ್ಟಾಲಿನ್ ಹೇಳಿಕೆಯಾಗಿತ್ತು.
ಇದಕ್ಕೆ ಕೊಂಚ ಕಾರವಾಗಿಯೇ ಉತ್ತರ ನೀಡಿದವರು ಕರ್ನಾಟಕದ ಲೇಖಕಿ ರೇಣುಕಾ ಮಂಜುನಾಥ್..
ನಾವೀಗ ಉತ್ತರದವರ ಮೇಲೆ ಯಾವ್ಯಾವ ವಿಷಯವಾಗಿ ಅವಲಂಬಿಸಿದ್ದೇವೆ?
ಬರಿಯ ದಕ್ಷಿಣದವರದ್ದೇ ಒಂದು ದೇಶವಾದರೆ, ಹೇಗಿರಬಹುದು? ಯಾವ ಭಾಷೆಯವರು ಮತ್ಯಾವ ಭಾಷೆಯಿಂದ ಆಕ್ರಮಣಕ್ಕೊಳಗಾಗಬಹುದು? ಸಿನಿಮಾಗಳಲ್ಲಿ ಯಾವುದು ಮೇಲುಗೈ ಸಾಧಿಸುವುದು? ನದಿನೀರು ಹಂಚಿಕೆ ಸಮಸ್ಯೆಗೆ ಏನಾಗಬಹುದು? ರಾಜಧಾನಿ ಎಲ್ಲಿರಬಹುದು?
ತಿರುಪತಿ ವೆಂಕಟರಮಣ, ಧರ್ಮಸ್ಥಳ ಮಂಜುನಾಥ, ಶಬರಿಮಲೈ ಅಯ್ಯಪ್ಪ ಸ್ವಾಮಿ, ಮದುರೈ ಮೀನಾಕ್ಷಿ, ಹೀಗೆ ಸಾಲುಸಾಲು ದೇವಾಲಯಗಳಲ್ಲಿ ಯಾವು ಅತಿ ಹೆಚ್ಚು ಶ್ರೀಮಂತವಾಗಬಹುದು?
ಸೌಹಾರ್ದತೆ ಹೇಗಿರಬಹುದು? ಈ ನಾಲ್ಕು ರಾಜ್ಯಗಳ ಭೌಗೋಳಿಕ, ಸಾಂಸ್ಕೃತಿಕ, ಪ್ರಾಕೃತಿಕ ಹಿನ್ನೆಲೆಯಲ್ಲಿ ಈ ಹೊಸ ದೇಶದ ಹೆಸರು ಏನಾಗಬಹುದು?
ಅಂತೆಲ್ಲಾ ಯೋಚಿಸುವಂತಾಯ್ತು ಈ ನಕ್ಷೆ ನೋಡಿ...
ಜಿಎಸ್‌ಟಿ ಮೋಸ ಮಾಡ್ತಿದಾರೆ ಅಂತ 'ಮೇರಾ ಭಾರತ್ ಮಹಾನ್' ಎಂಬುದನ್ನು ತೊರೆದು, ಬೇರೆ ಮನೆ ಮಾಡುವ ಬಗ್ಗೆ ಯೋಚಿಸುವ ಸೊಸೆಯ ಕ್ಯಾತೆಯಂತಿದೆ ಈ ಬೇಡಿಕೆ...
ಇದಕ್ಕೆ ಪುಟ್ಟರಾಜು ಪ್ರಭುಸ್ವಾಮಿ ಉತ್ತರವೂ ಕರ್ನಾಟಕದ ಪರವಾಗಿಯೇ ಇದ್ದಂತಿದೆ
ಆ ರೀತಿ ನಡೆದರೆ ಮಾತ್ರ ಉತ್ತರದವರು ಬಗ್ಗುವದು.
ಈಗ ಕರ್ನಾಟಕದಲ್ಲಿ ಉತ್ತರ ಸೀಮೆ ಬೇರೆ ರಾಜ್ಯ ಬೇಕು ಅಂದಾಗ ಅವರ ಸೀಮಿಗೆ ಅಭಿವೃದ್ಧಿ ಫಂಡ್ಸ್ ನೀಡಲಾಗಿದೆ.
ಹಿಂದಿ ವಿರುದ್ಧ ಚಳುವಳಿ ಮಾಡಿದಾಗ ಮಾತ್ರ ಅದರ ಹೇರಿಕೆ ಮುಂದೂಡಲಾಗಿದೆ ಎಂಬುದು ಪುಟ್ಟರಾಜು ಅಭಿಪ್ರಾಯ.
ಚಾಮರಾಜನಗರ ಬರಹಗಾರ ಕೆ.ವೆಂಕಟರಾಜು ಪ್ರತಿಕ್ರಿಯೆ ತಮಿಳುನಾಡಿನ ಇತಿಹಾಸದ ಹೆಜ್ಜೆಗಳನ್ನೇ ತಿಳಿಸಿದಂತ್ತಿತ್ತು.
ಈ ರೀತಿ ಅಗತ್ಯ ಬಿದ್ದರೆ ಒಕ್ಕೂಟದಿಂದ ರಾಜ್ಯಗಳು ಹೊರಬರಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿಲ್ಲ ಎಂಬ ಕಾರಣದಿಂದ ಪೆರಿಯಾರ್ ಚೆನೈ ನ ಮೆರಿನಾ ಕಡಲ ದಂಡೆಯಲ್ಲಿ ಸಂವಿಧಾನವನ್ನು ಸುಟ್ಟರು.
ಸ್ವತಂತ್ರ ಬಂದು ಇಷ್ಟು ವರ್ಷವಾದ ಮೇಲೆ ಕೇಂದ್ರೀಕರಣದ ಹಿಂಸೆ ಅರ್ಥವಾಗುತ್ತದೆ. ಒಂದು ಸರಕಾರ ಒಂದು ದೇಶ ಒಂದುವತೆರಿಗೆ ಇತ್ಯಾದಿಗಳಿಗೂ ಸಂವಿಧಾನ ಆಸ್ಪದ ಕಲ್ಪಿಸಿದೆ.ಹೀಗಾಗಿ ಜಿಎಸ್ಟಿ ಯ ನ್ಯಾಯವಾದ ಭಾಗ ಕೊಡದೇ ಇದ್ದರೂ ಪ್ರತಿಪಕ್ಷದ ನಾಯಕನನ್ನೂ ನೇಮಕಮಾಡದಿದ್ದರೂ ರಾಜ್ಯದಲ್ಲಿ ತಮ್ಮ ಪಕ್ಷದ ಸರಕಾರ ಇಲ್ಲದಿದ್ದರೂ ಪರವಾಗಿಲ್ಲ ಮ್ಯಾನೇಜ್ ಮಾಡಬಲ್ಲೆವು ಎಂಬ ಸ್ಥಿತಿ ಇದೆ ಎಂಬುದು ವೆಂಕಟರಾಜು ನಿಖರ ಅಭಿಪ್ರಾಯ.
ತಮಿಳುನಾಡು ಬೇರೆ ದೇಶ ಆದ್ರೆ ಅದೇ ಪ್ರಪಂಚದ ನಂಬರ್ ಒನ್ ದೇಶ ಆಗುತ್ತೆ ಅದು ಬಿಟ್ಟು ಉಳಿದ 4 ರಾಜ್ಯ ಯಾಕೆ ಸುಮ್ನೆ ಎಂದು ಗುರುದತ್ತ ಅವರು ಸ್ಟಾಲಿನ್ ಅಭಿಪ್ರಾಯಕ್ಕ ಚೆನ್ನಾಗಿಯೇ ಕಾಲೆಳೆದಿದ್ದಾರೆ.