Karnataka Election 2023 LIVE: ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ಅಧಿಕಾರಿಗಳ ದಾಳಿ
Karnataka Election 2023 LIVE in Kannada: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಅಂದರೆ ನಾಳೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. . ಮೇ 13ರಂದು ಕರ್ನಾಟಕ ಚುನಾವಣಾ (Karnataka Poll 2023) ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಮುನ್ನ ದಿನವಾದ ಇಂದು (ಮೇ 09) ರಾಜ್ಯದಲ್ಲಿ ತೆರೆಮರೆಯ ಕಸರತ್ತು ನಡೆಯುತ್ತಿದೆ.
Tue, 09 May 202305:41 PM IST
ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆ ಮೇಲೆ ದಾಳಿ
ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಅವರ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಗ್ರಾಮದಲ್ಲಿರುವ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Tue, 09 May 202302:45 PM IST
ಶಿಗ್ಗಾವಿಯಲ್ಲಿ ನಾಳೆ ಸಿಎಂ ಬೊಮ್ಮಾಯಿ ಮತದಾನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಳೆ (ಮೇ 10. ರಂದು) ತಮ್ಮ ವಿಧಾನಸಭಾ ಕ್ಷೇತ್ರ ಶಿಗ್ಗಾವಿಯ ಸರ್ಕಾರಿ ಕನ್ನಡ ಮಾದರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಬೂತ್ 102ರಲ್ಲಿ ಬೆಳಿಗ್ಗೆ 8 ರಿಂದ 8.30 ರೊಳಗೆ ಮತದಾನ ಮಾಡಲಿದ್ದಾರೆ.
Tue, 09 May 202302:05 PM IST
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ವರ್ಣ ರಂಚಿತ ಮತಗಟ್ಟೆಗಳ ಸ್ಥಾಪನೆ
ದಕ್ಷಿಣ ಕನ್ನಡ ಜಿಲ್ಲೆಯ ಜೀವನವನ್ನು ಬಿಂಬಿಸುವ ಚಿತ್ರಗಳು, ಮೀನುಗಾರಿಕೆ, ಸಮುದ್ರದ ಚಿತ್ರಣ, ಕಂಬಳ, ಯಕ್ಷಗಾನದ ಸೊಬಗಿನ ವರ್ಣಚಿತ್ತಾರಗಳಿರುವ 100 ಮತಗಟ್ಟೆಗಳೊಂದಿಗೆ ಒಟ್ಟು 1,860 ಮತಗಟ್ಟೆಗಳು ಮೇ.10ರ ಮತದಾನಕ್ಕೆ ಸಜ್ಜಾಗಿವೆ.
Tue, 09 May 202312:21 PM IST
ಶಿಗ್ಗಾವಿಯ ತಾಂಡಾಗಳಲ್ಲಿ ಸಿಎಂ ಬೊಮ್ಮಾಯಿ ಮತಯಾಚನೆ
ಈ ಭಾರಿ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿಗ್ಗಾಂವ ಕ್ಷೇತ್ರದ ಕೋಣನಕೇರಿ, ಚಂದಾಪುರ, ಜಕ್ಕಿನಕಟ್ಟಿ, ಯತ್ತಿನಹಳ್ಳಿ, ದುಂಢಸಿ, ಮಮದಾಪುರ ತಾಂಡಾಗಳಲ್ಲಿ ಮನೆಗಳಿಗೆ ತೆರಳಿ ಪ್ರಚಾರದ ಬಳಿಕ ಮಾತನಾಡಿದ ಸಿಎಂ, ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದು, ನನಗೆ ಬಹಳ ಖುಷಿ ತಂದಿದೆ. ನಾನು ಇಂದು ತಾಂಡಾಗಳಿಗೆ ಭೇಟಿ ಮಾಡಿದ್ದೇನೆ. ಜನರೆ ಚುನಾವಣೆ ಮಾಡುತ್ತಿದ್ದಾರೆ, ನಾನು ಮಾಡುತ್ತಿಲ್ಲ. ಚುನಾವಣೆ ಅಲ್ಲಾ, ಇದೊಂದು ಹಬ್ಬ ಅಂತ ಅನಿಸುತ್ತಿದೆ. ಜನರು ಬಹಳಷ್ಟು ತಿಳುವಳಿಕೆಯಿಂದ ಇದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
Tue, 09 May 202306:05 AM IST
ಚುನಾವಣೆಯ ಮುನ್ನ ಮುಖ್ಯಮಂತ್ರಿಗಳಿಂದ ಹನುಮಾನ್ ಚಾಲಿಸ್ ಪಠಣ
ಹುಬ್ಬಳ್ಳಿಯ ವಿಜಯನಗರದ ಆಂಜನೇಯ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹನುಮಾನ್ ಚಾಲಿಸ್ ಪಠಣ ಮಾಡಿದರು.
ಮುಖ್ಯಮಂತ್ರಿಗಳಿಗೆ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ್, ಪಾಲಿಕೆ ಸದಸ್ಯ ಸಂತೋಷ ಸೇರಿದಂತೆ ಸ್ಥಳೀಯ ನಿವಾಸಿಗಳು ಜೊತೆಯಾದರು.
ಇದೇ ವೇಳೆ ಆಂಜನೇಯನಿಗೆ ಮುಖ್ಯಮಂತ್ರಿಗಳು ವಿಶೇಷ ಪೂಜೆ ಸಲ್ಲಿಸಿದರು.
ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮನೆಯ ಮೇಲೆ ಐಟಿ ದಾಳಿ ನಡೆದಿರುವ ಸಂಬಂಧ ಮಾತನಾಡಿದ ಅವರು, ತಪ್ಪು ಮಾಡಿದವರ ಮೇಲೆ ದಾಳಿಯಾಗುವುದು ಸಹಜ ಎಂದರು. ಕಾಂಗ್ರೆಸ್ ಹೋಮ ಹವನ ಕೈಗೊಂಡಿರುವ ಬಗ್ಗೆ ಮಾತನಾಡಿ ತಂತ್ರಮಂತ್ರ ಯಾವುದೂ ನಡೆಯುವುದಿಲ್ಲ ಎಂದರು.
Tue, 09 May 202304:40 AM IST
ಕರುನಾಡಲ್ಲೇ ತಯಾರಾಗುತ್ತೆ ಅಳಿಸಲಾಗದ ಶಾಯಿ
Tue, 09 May 202304:34 AM IST
ಮತ ಹಾಕದೆ ಪ್ರವಾಸಿ ತಾಣಕ್ಕೆ ಹೋಗುವಂತಿಲ್ಲ
ನಾಳೆ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯ ರಜೆಯನ್ನು ಪ್ರವಾಸಕ್ಕೆ ಹೋಗಲು ಬಳಸುವವರಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗಿದೆ.
ಪ್ರಮುಖ ಪ್ರವಾಸಿ ತಾಣಗಳಿಗೆ ಮತದಾನದ ದಿನದಂದು ನಿರ್ಬಂಧ ಹಾಕಲಾಗಿದ್ದು, ಮತ ಚಲಾಯಿಸದೆ ಹೋಗುವಂತಿಲ್ಲ.
ಮತ ಹಾಕಿದವರಿಗೆ ಮಾತ್ರ ಪ್ರವಾಸ ಕೈಗೊಳ್ಳಲು ಅವಕಾಶ ನೀಡಲು ಮೈಸೂರು ಜಿಲ್ಲಾ ಟ್ರ್ಯಾವಲ್ಸ್ ಮಾಲೀಕರು ನಿರ್ಧರಿಸಿದ್ದಾರೆ.
Tue, 09 May 202304:32 AM IST
ಮೇ10 ರಂದು ವೇತನ ಸಹಿತ ರಜೆ ಘೋಷಿಸಿದ ಗೋವಾ
ಕರ್ನಾಟಕ ಚುನಾವಣೆಯಲ್ಲಿ ಸರಕಾರಿ ಮತ್ತು ಕೈಗಾರಿಕಾ ನೌಕರರಿಗೆ ಸೇರಿದಂತೆ ಎಲ್ಲಾ ಕನ್ನಡಿಗರಿಗೂ ಗೋವಾ ಸರಕಾರ ವೇತನ ಸಹಿತ ರಜೆ ಘೋಷಿಸಿದೆ.
ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಅಲ್ಲಿನ ಈ ಸರಕಾರ ಈ ನಿರ್ಧಾರ ಕೈಗೊಂಡಿದ್ದು, ಪ್ರತಿಪಕ್ಷಗಳು ಟೀಕಿಸಿವೆ.
Tue, 09 May 202304:29 AM IST
ಹುನಗುಂದ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202303:56 AM IST
ಗೋಕಾಕ್ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202303:56 AM IST
ಯಮಕನಮರಡಿ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202303:53 AM IST
#ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202303:52 AM IST
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202303:49 AM IST
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202303:14 AM IST
ಬೆಂಗಳೂರಿನಲ್ಲಿ ಥೀಮ್ ಬೇಸ್ಡ್ ಮತಗಟ್ಟೆ
ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯಲ್ಲಿ 4 ಅಪರ ಜಿಲ್ಲಾ ಚುನಾವಣಾಧಿಕಾರಿ(ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ನಗರ) ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಮಾಡಲಾಗಿದ್ದು, ಅದರಂತೆ ಪಿಂಕ್ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ(ಹಸಿರು ಬಣ್ಣದ) ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆ, ಮಾದರಿ ಮತಗಟ್ಟೆಗಳಿರಲಿವೆ.
Tue, 09 May 202303:12 AM IST
1.20 ಲಕ್ಷ ಬಾಟಲಿ ಶಾಯಿ ಪೂರೈಕೆ
ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಮೈಸೂರು ಪೈಂಟ್ಸ್ ಮತ್ತು ವಾರ್ನಿಸ್ ಸಂಸ್ಥೆಯು ಅಳಿಸಲಾಗದ 1.20 ಲಕ್ಷ ಬಾಟಲಿ ಶಾಯಿ ಪೂರೈಸಲಾಗಿದೆ.
Tue, 09 May 202303:11 AM IST
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿಷೇಧಾಜ್ಞೆ
ಕರ್ನಾಟಕ ವಿಧಾನಸಭಾ ಚುನಾವನಾ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜಿಲಾಧಿಕಾರಿ ರಮೇಶ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನಿನ್ನೆಯಿಂದ ನಾಳೆ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಇರುತ್ತದೆ.
Tue, 09 May 202302:49 AM IST
ನಿಪ್ಪಾಣಿ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202302:38 AM IST
ಚಿಕ್ಕೋಡಿ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202302:37 AM IST
ಅಥಣಿ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202302:36 AM IST
ಕಾಗವಾಡ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202302:36 AM IST
ಕುಡಚಿ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202302:34 AM IST
ರಾಯಬಾಗ್ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202302:33 AM IST
ಹುಕ್ಕೇರಿ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ?
Tue, 09 May 202301:18 AM IST
ಮತದಾರರಿಗೆ ತಮ್ಮೂರಿಗೆ ತೆರಳಿ ಮತದಾನ ಮಾಡಲು ಹೆಚ್ಚುವರಿ ರೈಲು, ಹೆಚ್ಚುವರಿ ಕೋಚ್ ವ್ಯವಸ್ಥೆ
ವಿವಿಧ ರಾಜ್ಯಗಳು, ವಿವಿಧ ನಗರಗಳಿಂದ ತಮ್ಮ ಮತಗಟ್ಟೆಗಳಿಗೆ ಆಗಮಿಸುವವರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್, ಹೆಚ್ಚುವರಿ ರೈಲು, ಹೆಚ್ಚುವರಿ ರೈಲು ಕೋಚುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ನೈಋತ್ಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಘೋಷಿಸಿದೆ. ಇದರೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ. ಬೆಂಗಳೂರು-ಹುಬ್ಬಳ್ಳಿ ಜನಶತಾಬ್ಧಿ ಎಕ್ಸ್ಪ್ರೆಸ್, ಬಾಗಲಕೋಟೆ, ಮೈಸೂರು, ಬಸವ ಎಕ್ಸ್ಪ್ರೆಸ್, ಬೆಂಗಳೂರು ನಾಂದೇಡ್ ವಯಾ ರಾಯಚೂರು, ಯಾದಗಿರಿ ರೈಲು, ಬೆಂಗಳೂರು-ಕಾರವಾರ ರೈಲಿಗೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಬೆಂಗಳೂರು ಹಾಗೂ ಬೆಳಗಾವಿ ನಡುವೆ ಹುಬ್ಬಳ್ಳಿ ಮಾರ್ಗವಾಗಿ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಬೀದರ್ಗೆ ಕಲಬುರಗಿ ಮಾರ್ಗವಾಗಿ ರೈಲು ವ್ಯವಸ್ಥೆ ಮಾಡಲಾಗಿದೆ. . ಬೆಂಗಳೂರಿನಿಂದ (ಯಶವಂತಪುರ) ಮುರುಡೇಶ್ವರಕ್ಕೆ ವಿಶೇಷ ರೈಲು ಪ್ರಯಾಣಿಸಲಿದೆ ಎಂದು ವರದಿಗಳು ತಿಳಿಸಿವೆ.
Tue, 09 May 202301:18 AM IST
ಸೋನಿಯಾ ಗಾಂಧಿ, ನಳಿನ್ ಕುಮಾರ್ ಕಟೀಲಿಗೆ ನೋಟಿಸ್
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಕೇಂದ್ರ ಚುಣಾವಣಾ ಆಯೋಗ ನೋಟಿಸ್ ನೀಡಿದೆ.
ಚುನಾವಣಾ ನೀತಿ ಉಲ್ಲಂಘಿಸಿ ಹೇಳಿಕೆ ನೀಡಿರುವುದು ಮತ್ತು ಜಾಹೀರಾತು ಪ್ರಕಟಿಸಿರುವುದಕ್ಕೆ ನೋಟಿಸ್ ನೀಡಲಾಗಿದೆ.
Tue, 09 May 202301:18 AM IST
ಮತದಾರರಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಕೆಎಸ್‌ಆರ್‌ಟಿಸಿಯು ಇಂದು ರಾತ್ರಿ ಮತದಾರರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ಗಳನ್ನು ಬಿಡಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ರೀತಿ ಖಾಸಗಿ ಬಸ್‌ಗಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲಿದೆ. ವಿವಿಧ ರಾಜಕೀಯ ಪಕ್ಷಗಳು ವಿವಿಧ ನಗರಗಳಿಂದ ತಮ್ಮ ಊರುಗಳಿಗೆ ತೆರಳುವವರಿಗಾಗಿ ಬಸ್ ವ್ಯವಸ್ಥೆಯನ್ನೂ ಮಾಡಿವೆ.
Tue, 09 May 202301:18 AM IST
ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ
ನಾಳೆ ಅಂದರೆ ಮೇ 10ರಂದು ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಜಾಪ್ರಭುತ್ವದ ಮಹಾಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಈ ಬಾರಿ 5.24 ಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಈ ಪೈಕಿ 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆಯರು. 100 ವರ್ಷ ದಾಟಿರುವ 16,976 ಮತದಾರರಿದ್ದರೆ, 18ರಿಂದ 19 ವರ್ಷದ ಯುವ ಮತದಾರರ ಸಂಖ್ಯೆ 9.58 ಲಕ್ಷ. 80 ವರ್ಷ ದಾಟಿದವರ ಸಂಖ್ಯೆಯೂ (12.15 ಲಕ್ಷ) ಗಣನೀಯ ಪ್ರಮಾಣದಲ್ಲಿದೆ.