Beauty Tips: ಬೇಸಿಗೆಯಲ್ಲೂ ನೀವು ಮಾಡಿದ ಮೇಕಪ್ ಹೆಚ್ಚು ಸಮಯ ಉಳಿಯಬೇಕೆಂದರೆ ಈ ಸುಲಭ ಟಿಪ್ಸ್ ಫಾಲೋ ಮಾಡಿ
Make Up Tips: ಬೇಸಿಗೆಕಾಲದಲ್ಲಿ ಮೇಕಪ್ ಹಚ್ಚುವುದು ತುಂಬಾನೇ ಕಷ್ಟ. ಬೆವರಿನಿಂದಾಗಿ ಮುಖದ ಮೇಲೆ ಮೇಕಪ್ ಹೆಚ್ಚು ಸಮಯ ಉಳಿಯುವುದಿಲ್ಲ. ಆದರೆ ಬೇಸಿಗೆ ಕಾಲದಲ್ಲಿ ನೀವು ಈ ಎಲ್ಲಾ ಮೇಕಪ್ ಟಿಪ್ಸ್ ಅನುಸರಿಸುವ ಮೂಲಕ ನಿಮ್ಮ ಮೇಕಪ್ ಹೆಚ್ಚು ಕಾಲ ಇರುವಂತೆ ಕಾಪಾಡಿಕೊಳ್ಳಬಹುದಾಗಿದೆ.
Make Up Tips: ಬೇಸಿಗೆ ಆರಂಭಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಬೇಸಿಗೆ ಕಾಲದಲ್ಲಿ ನಿಶ್ಚಿತಾರ್ಥ, ಮದುವೆಯಂತಹ ಶುಭ ಕಾರ್ಯವು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತದೆ. ಆದರೆ ಅತಿಯಾದ ಬಿಸಿಲಿನಿಂದಾಗಿ ಮುಖವು ಹೆಚ್ಚು ಬೆವರುವುದರಿಂದ ಎಷ್ಟೇ ದುಬಾರಿ ಬೆಲೆಯ ಮೇಕಪ್ ಮಾಡಿಕೊಂಡರೂ ಸಹ ಮುಖದ ಮೇಲೆ ಉಳಿಯುವುದೇ ಇಲ್ಲ. ಹೀಗಾಗಿ ಬೇಸಿಗೆಯಲ್ಲೂ ವಾಟರ್ ಪ್ರೂಫ್ ಮೇಕಪ್‌ಗಾಗಿ ನೀವು ಯಾವೆಲ್ಲ ಸಲಹೆಗಳನ್ನು ಪಾಲಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ
ಮೇಕಪ್‌ಗೆ ಮುನ್ನ ಇರಲಿ ಈ ತಯಾರಿ
ಮೇಕಪ್ ಮಾಡುವ ಮುನ್ನ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಬೇಕು. ಮುಖಕ್ಕೆ ಮೇಕಪ್ ಹಚ್ಚುವ ಮುನ್ನ ನಿಮ್ಮ ತ್ವಚೆಯನ್ನು ಮಂಜುಗಡ್ಡೆಯಿಂದ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಮಂಜುಗಡ್ಡೆಯು ನಿಮ್ಮ ಮುಖದ ಮೇಲೆ ಬೆವರು ಬರುವುದನ್ನು ತಡೆಯುತ್ತದೆ. ಮೊದಲು ಮುಖಕ್ಕೆ ಮಂಜುಗಡ್ಡೆಯಿಂದ ಮಸಾಜ್ ನೀಡಿ ಬಳಿಕ ಮೇಕಪ್ ಮಾಡಿಕೊಳ್ಳಿ
ವಾಟರ್ ಪ್ರೂಫ್ ಮೇಕಪ್ ಉತ್ಪನ್ನಗಳನ್ನು ಬಳಸಿ
ಕಡಿಮೆ ಗುಣಮಟ್ಟದ ಮೇಕಪ್ ಉತ್ಪನ್ನಗಳು ಹೆಚ್ಚು ಕಾಲ ಮುಖದ ಮೇಲೆ ನಿಲ್ಲುವುದಿಲ್ಲ. ಅಲ್ಲದೇ ಇವುಗಳಿಗೆ ಮುಖದ ಮೇಲೆ ಬರುವ ಬೆವರನ್ನು ತಡೆಯುವ ಸಾಮರ್ಥ್ಯವೂ ಇರುವುದಿಲ್ಲ. ಹೀಗಾಗಿ ಉತ್ತಮ ಬ್ರ್ಯಾಂಡ್‌ಗಳ ಪ್ರಾಡಕ್ಟ್‌ಗಳನ್ನೇ ಮೇಕಪ್‌ಗೆ ಬಳಕೆ ಮಾಡಿ. ವಾಟರ್ ಪ್ರೂಫ್ ಮೇಕಪ್‌ಗಳು ಬೆವರನ್ನು ತಡೆಯುವ ಸಾಮರ್ಥ್ಯ ಹೊಂದಿರುತ್ತವೆ.
ಮೇಕಪ್ ಫಿಕ್ಸರ್ ಬಳಕೆ
ನಿಮ್ಮ ಮೇಕಪ್ ಪೂರ್ಣಗೊಂಡ ಬಳಿಕ ಮೇಕಪ್ ಫಿಕ್ಸರ್ ಬಳಕೆ ಮಾಡುವುದನ್ನು ಮರೆಯುವಂತಿಲ್ಲ. ಮಾರುಕಟ್ಟೆಯಲ್ಲಿ ಸಾಕಷ್ಟು ಮೇಕಪ್ ಫಿಕ್ಸರ್‌ಗಳು ಲಭ್ಯವಿದೆ. ನಿಮ್ಮ ಸಂಪೂರ್ಣ ಮೇಕಪ್ ಮುಗಿದ ಬಳಿಕ ದೂರದಿಂದ ಮೇಕಪ್ ಫಿಕ್ಸರ್ ಸ್ಪ್ರೇ ಮಾಡಿಕೊಳ್ಳಬೇಕು. ಇದು ಕೂಡ ಬೆವರಿನ ವಿರುದ್ಧ ನಿಮಗೆ ರಕ್ಷಣೆ ನೀಡುತ್ತದೆ .
ಟಿಶ್ಯೂ ಬಳಕೆ
ಮಾರುಕಟ್ಟೆಗಳಲ್ಲಿ ನಿಮಗೆ ಬೆವರನ್ನು ಹೀರಿಕೊಳ್ಳುವ ಟಿಶ್ಯೂಗಳು ಸಿಗುತ್ತದೆ. ಇವುಗಳು ಸ್ವೆಟ್ ಕಂಟ್ರೋಲ್ ಟಿಶ್ಯೂ ಎನ್ನುತ್ತಾರೆ. ನಿಮಗೆ ಯಾವ ಜಾಗದಲ್ಲಿ ಹೆಚ್ಚು ಬೆವರುತ್ತದೆಯೋ ಆ ಜಾಗದ ಮೇಲೆ ಟಿಶ್ಯೂಗಳನ್ನು ಇರಿಸಿದರೆ ಸಾಕು ಮೇಕಪ್‌ಗೆ ಕಿಂಚಿತ್ತೂ ಹಾನಿಯಾಗದಂತೆ ಈ ಟಿಶ್ಯೂ ಬೆವರನ್ನು ಮಾತ್ರ ಹೀರಿಕೊಳ್ಳುತ್ತದೆ. ಇದನ್ನು ಯಾವಾಗಲೂ ನಿಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ.