Chanakya Niti: ಬದುಕಿನ ಯಶಸ್ಸಿಗೆ ಈ 4 ಗುಣಗಳು ನಮ್ಮಲ್ಲಿರಬೇಕು; ಚಾಣಕ್ಯರು ಉಲ್ಲೇಖಿಸಿದ ಗುಣಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಬದುಕಿನ ಯಶಸ್ಸಿಗೆ ಈ 4 ಗುಣಗಳು ನಮ್ಮಲ್ಲಿರಬೇಕು; ಚಾಣಕ್ಯರು ಉಲ್ಲೇಖಿಸಿದ ಗುಣಗಳಿವು

Chanakya Niti: ಬದುಕಿನ ಯಶಸ್ಸಿಗೆ ಈ 4 ಗುಣಗಳು ನಮ್ಮಲ್ಲಿರಬೇಕು; ಚಾಣಕ್ಯರು ಉಲ್ಲೇಖಿಸಿದ ಗುಣಗಳಿವು

ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸ. ಇವರು ತಮ್ಮ ನೀತಿಶಾಸ್ತ್ರದಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಸೋಲು, ಗೆಲುವು, ಸಂಸಾರ ಈ ವಿಚಾರವಾಗಿ ಚಾಣಕ್ಯರು ಅಂದು ಹೇಳಿದ ಮಾತು ಇಂದಿಗೂ ಪ್ರಸ್ತುತ. ಚಾಣಕ್ಯರ ಪ್ರಕಾರ ಈ ಗುಣಗಳನ್ನು ಹೊಂದಿರುವವರು ಮಾತ್ರ ಗೆಲುವು ಸಾಧಿಸಲು ಸಾಧ್ಯ. ಆ ಗುಣಗಳು ಯಾವುವು ನೋಡಿ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಬದುಕಿನಲ್ಲಿ ಸುಧಾರಣೆ ಕಾಣಬೇಕು ಎಂದಾದರೆ ಚಾಣಕ್ಯರ ನೀತಿಗಳನ್ನು ಪಾಲಿಸಬೇಕು. ನೀತಿಶಾಸ್ತ್ರದಲ್ಲಿ ಚಾಣಕ್ಯರು ಹೇಳಿರುವ ತಂತ್ರಗಳನ್ನು ಅನುಸರಿಸುವ ಮೂಲಕ ಬದುಕಿನಲ್ಲಿ ಯಶಸ್ಸು ಗಳಿಸಬಹುದು. ಚಾಣಕ್ಯರ ತತ್ವಗಳು ಮತ್ತು ಆಲೋಚನೆಗಳನ್ನು ಅಳವಡಿಸಿಕೊಂಡರೆ, ಜೀವನದಲ್ಲಿ ಬಹಳ ಬೇಗ ಉತ್ತುಂಗಕ್ಕೆ ಏರಬಹುದು.

ಚಾಣಕ್ಯರ ಪ್ರಕಾರ ಜೀವನದಲ್ಲಿ ಈ ಕೆಲವು ಗುಣಗಳನ್ನು ಹೊಂದಿರುವವರು ಮಾತ್ರ ಯಶಸ್ಸು ಕಾಣಲು ಸಾಧ್ಯ. ಹಾಗಾದರೆ ಆ ಗುಣಗಳು ಯಾವುವು ನೋಡಿ.

ಇನ್ನಷ್ಟು ಚಾಣಕ್ಯ ನೀತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಸಮರ್ಪಣಾ ಭಾವ

ಚಾಣಕ್ಯರ ಪ್ರಕಾರ, ಸಮರ್ಪಣೆ ಇಲ್ಲದ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಯಾವುದೇ ಸಂಬಂಧ, ಕೆಲಸ ಏನೇ ಆಗಿರಲಿ ಅದರಲ್ಲಿ ಸಮರ್ಪಣಾ ಭಾವವಿದ್ದರೆ ಮಾತ್ರ ಯಶಸ್ಸು ಸಾಧ್ಯ. ಜೀವನದಲ್ಲಿ ಇತರರಿಗೆ ಸಹಾಯ ಮಾಡುವ ಗುಣವಿರಬೇಕು. ಕೆಲಸದ ಕಡೆ ಗಮನವಿರಬೇಕು. ಎಲ್ಲರನ್ನೂ ಪ್ರೀತಿಸಬೇಕು. ಅಂತಹವರಿಗೆ ದೇವರ ಆಶೀರ್ವಾದ ಸದಾ ಇದ್ದು, ಯಶಸ್ಸಿನ ಕಡೆ ಸಾಗಲು ದೇವರು ದಾರಿ ತೋರುತ್ತಾನೆ.

ಶಿಸ್ತು

ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಶಿಸ್ತಿಲ್ಲದವರು ಯಶಸ್ವಿಯಾಗಲಾರರು. ಅವರು ಏನೇ ಸಾಧಿಸಿದರೂ ಹೆಚ್ಚು ಕಾಲ ಉಳಿಯುವುದಿಲ್ಲ. ಯಶಸ್ಸು ಗಳಿಸಲು ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಮುಖ್ಯ. ಕೆಲವೊಮ್ಮೆ ಶಿಸ್ತು ನಮ್ಮನ್ನು ಗೆಲ್ಲಿಸುತ್ತದೆ ಎನ್ನುತ್ತಾರೆ ಚಾಣಕ್ಯ.

ಪ್ರಾಮಾಣಿಕತೆ

ಮನುಷ್ಯನಿಗೆ ಏಕಾಗ್ರತೆ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯ. ನೀವು ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಬಯಸಿದರೆ, ಯಾವುದೇ ಕೆಲಸವನ್ನು ಸಂಪೂರ್ಣ ಏಕಾಗ್ರತೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು. ಮಾಡುವ ಕೆಲಸದಲ್ಲಿ ನಿಷ್ಕಾಳಜಿ ತೋರಿದವರಿಗೆ ಯಶಸ್ಸು ಸಿಗುವುದಿಲ್ಲ.

ಜ್ಞಾನ

ಜ್ಞಾನವು ಮನುಷ್ಯನ ನಿಜವಾದ ಸ್ನೇಹಿತ. ಚಾಣಕ್ಯನ ಪ್ರಕಾರ, ಪುಸ್ತಕಗಳ ಮೂಲಕ ಅಥವಾ ಯಾವುದೇ ಕೆಲಸದಿಂದ ಸಂಪಾದಿಸಿದ ಜ್ಞಾನವು ಎಂದಿಗೂ ವ್ಯರ್ಥವಾಗುವುದಿಲ್ಲ. ಜ್ಞಾನ, ಅನುಭವ ಇಲ್ಲದ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸುವುದು ಕಷ್ಟ.

ಭವಿಷ್ಯದ ಬಗ್ಗೆ ಯೋಚನೆ

ಜೀವನದಲ್ಲಿ ಯಶಸ್ವಿಯಾಗಲು ಕಳೆದ ಸಮಯವನ್ನು ಚಿಂತಿಸುವ ಮತ್ತು ಪಶ್ಚಾತ್ತಾಪ ಪಡುವ ಬದಲು ಮುಂಚಿತವಾಗಿ ಯೋಜಿಸಿ. ವರ್ತಮಾನ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಒಬ್ಬ ವ್ಯಕ್ತಿಯು ವಿಫಲವಾದಾಗ, ಅವನು ಏಕೆ ಮತ್ತು ಹೇಗೆ ವಿಫಲನಾದನೆಂದು ಯೋಚಿಸಿ. ಹೊಸ ರೀತಿಯಲ್ಲಿ ತಂತ್ರಗಳನ್ನು ರಚಿಸಿ.

ಇದನ್ನೂ ಓದಿ

Chanakya Niti: ಚಾಣಕ್ಯರ ಪ್ರಕಾರ ಹೆಂಡತಿಯು ಈ ಕೆಲವು ವಿಚಾರದಲ್ಲಿ ಗಂಡನಿಗೆ ಎಂದಿಗೂ ಬೆಂಬಲ ನೀಡಬಾರದು; ಇದರಿಂದ ಜೀವನ ವಿನಾಶವಾಗುವುದು ಖಂಡಿತ

ಮದುವೆಯಾದ ಮೇಲೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಆಸರೆಯಾಗುವುದು ಸಹಜ. ಆದರೆ ಹೆಣ್ಣುಮಕ್ಕಳು ಸಾಮಾನ್ಯವಾಗಿ ಗಂಡನ ಕೆಟ್ಟ ಅಭ್ಯಾಸಗಳನ್ನು ಮುಚ್ಚಿಡುತ್ತಾರೆ. ಮನೆಯಲ್ಲಿ ಕೇಳುತ್ತಾರೆ, ಇದರಿಂದ ಬೇರೆಯವರು ನೊಂದುಕೊಳ್ಳಬಹುದು, ಮರ್ಯಾದೆ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಗಂಡನಿಗೆ ಸಂಬಂಧಿಸಿ ಕೆಲವು ವಿಚಾರಗಳನ್ನು ಮುಚ್ಚಿಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರಲ್ಲಿ ಕೆಟ್ಟ ಅಭ್ಯಾಸಗಳು ಇನ್ನಷ್ಟು ರೂಢಿಯಾಗಬಹುದು. ಅಲ್ಲದೆ ಭವಿಷ್ಯದಲ್ಲಿ ಕೆಟ್ಟ ಅಭ್ಯಾಸಗಳಿಂದ ನಿಮ್ಮ ಪತಿಯನ್ನು ದೂರ ಮಾಡಲು ಅಸಾಧ್ಯದ ಪರಿಸ್ಥಿತಿ ಎದುರಾಗಬಹುದು.

Whats_app_banner