Navratri fasting 2022: ನವರಾತ್ರಿ ಉಪವಾಸ ಮಾಡ್ತಿದ್ದೀರಾ...ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Navratri Fasting 2022: ನವರಾತ್ರಿ ಉಪವಾಸ ಮಾಡ್ತಿದ್ದೀರಾ...ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

Navratri fasting 2022: ನವರಾತ್ರಿ ಉಪವಾಸ ಮಾಡ್ತಿದ್ದೀರಾ...ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

ಉಪವಾಸದ ಸಮಯದಲ್ಲಿ, ಜನರು ಸಾಮಾನ್ಯವಾಗಿ ಸೋಡಾ, ಕಾಫಿ, ಟೀ, ನಿಂಬೆ ಶರಬತ್ತು ಅಥವಾ ಐಸ್ ಟೀಗಳನ್ನು ಸೇವಿಸುತ್ತಾರೆ. ಈ ಪಾನೀಯಗಳ ಸೇವನೆಯಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ ಎಂದು ಸಂಶೋಧನೆಗಳಲ್ಲಿ ತಿಳಿದುಬಂದಿದೆ.

<p>ನವರಾತ್ರಿ ಉಪವಾಸ</p>
ನವರಾತ್ರಿ ಉಪವಾಸ (PC: unsplash.com)

ಸೆಪ್ಟೆಂಬರ್‌ 26 ರಿಂದ ನವರಾತ್ರಿ ಆರಂಭವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ತಮ್ಮದೇ ರೀತಿಯಲ್ಲಿ ನವರಾತ್ರಿ ಆಚರಿಸಲಾಗುತ್ತದೆ. 9 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಕೆಲವರು ಉಪವಾಸ ಕೂಡಾ ಇರುತ್ತಾರೆ. ಆದರೆ ಈ ಉಪವಾಸದ ಸಮಯದಲ್ಲಿ ಕೆಲವೊಂದು ವಿಚಾರಗಳನ್ನು ನೀವು ಗಮನದಲ್ಲಿಡುವುದು ಮುಖ್ಯವಾಗಿದೆ.

ಈ 9 ದಿನಗಳಲ್ಲಿ ಆಹಾರದ ಬಗ್ಗೆ ಕಾಳಜಿ ವಹಿಸದಿದ್ದರೆ ದೇಹದಲ್ಲಿ ದೌರ್ಬಲ್ಯ ಉಂಟಾಗುತ್ತದೆ. ಉಪವಾಸ ಇದ್ದೇವೆ ಎಂಬ ಕಾರಣಕ್ಕೆ ಕೆಲವರು ಚಹಾ ಮತ್ತು ಕಾಫಿಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಉಪವಾಸ ಮಾಡುವ ವೇಳೆ ಚಹಾ ಮತ್ತು ಕಾಫಿ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಚಹಾ ಮತ್ತು ಕಾಫಿ ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ನಿಮಗೆ ಇನ್ನಷ್ಟು ಸುಸ್ತು ಕಾಡುತ್ತದೆ. ಆದ್ದರಿಂದ ಉಪವಾಸದ ಸಮಯದಲ್ಲಿ ದೇಹ ನಿರ್ಜಲೀಕರಣವಾಗದಂತೆ ತಡೆಯಬೇಕಿದೆ.

ಅತಿಯಾಗಿ ಕಾಫಿ-ಟೀ ಕುಡಿಯಬೇಡಿ

ನೀವು ನವರಾತ್ರಿ ಉಪವಾಸ ಮಾಡುತ್ತಿದ್ದರೆ, ದಿನವಿಡೀ ಚಹಾ ಮತ್ತು ಕಾಫಿ ಸೇವಿಸುತ್ತಾ ಇರಬೇಡಿ. ಇದು ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಉಪವಾಸದ ಸಮಯದಲ್ಲಿ ಲಿಕ್ವಿಡ್ ಡಯಟ್ ಮಾಡಬೇಕೆಂದರೆ ನೀರು, ಹಣ್ಣಿನ ರಸ, ಲಸ್ಸಿ, ಎಳನೀರು, ನಿಂಬೆರಸ ಅಥವಾ ಹಾಲು ಕುಡಿಯಬೇಕು. ಇಂತಹ ಆಹಾರಗಳು ದೇಹವನ್ನು ತೇವಾಂಶದಿಂದ ಇಡುತ್ತವೆ. ದೇಹದ ದೌರ್ಬಲ್ಯವನ್ನು ನಿವಾರಿಸುತ್ತದೆ. ದ್ರವ ಆಹಾರವು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.

ಸಕ್ಕರೆ ಪಾನೀಯಗಳು ಬೇಡ

ಉಪವಾಸದ ಸಮಯದಲ್ಲಿ, ಜನರು ಸಾಮಾನ್ಯವಾಗಿ ಸೋಡಾ, ಕಾಫಿ, ಟೀ, ನಿಂಬೆ ಶರಬತ್ತು ಅಥವಾ ಐಸ್ ಟೀಗಳನ್ನು ಸೇವಿಸುತ್ತಾರೆ. ಈ ಪಾನೀಯಗಳ ಸೇವನೆಯಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ ಎಂದು ಸಂಶೋಧನೆಗಳಲ್ಲಿ ತಿಳಿದುಬಂದಿದೆ. ಈ ಪಾನೀಯಗಳನ್ನು ಅತಿಯಾಗಿ ಸೇವಿಸುವುದರಿಂದ ತಲೆನೋವು ಕಾಡುತ್ತದೆ. ಮತ್ತೆ ಬಾಯಿ ಒಣಗಿದಂತಾಗುತ್ತದೆ. ಸಕ್ಕರೆ ಸೇರಿಸಿದ ಈ ಪದಾರ್ಥಗಳು ಹಾಗೂ ಕೃತಕ ಹಣ್ಣಿನ ರಸ ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚು ಸಿಹಿ ಅಂಶವಿರುವ ಪಾನೀಯಗಳನ್ನು ಸೇವಿಸಬೇಡಿ.

ಉಪವಾಸದ ಸಮಯದಲ್ಲಿ ದೇಹ ಸದಾ ಹೈಡ್ರೇಟ್‌ ಆಗಿರಲು ಈ ಅಂಶಗಳನ್ನು ಗಮನದಲ್ಲಿಡಿ

ಉಪವಾಸದ ಸಮಯದಲ್ಲಿ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಿರಿ

ಉಪ್ಪು ಅಥವಾ ಸಕ್ಕರೆ ರಹಿತ ಮಜ್ಜಿಗೆ, ನಿಂಬೆ ಶರಬತ್ತು, ಗ್ರೀನ್‌ ಟೀ, ಪುದೀನ ನೀರು, ಕಾರ್ಡಮಮ್‌ ಟೀ, ಸ್ಮೂಥಿಗಳು ಮತ್ತು ಎಳನೀರಿನಂತ ಕಡಿಮೆ ಕ್ಯಾಲೋರಿ ಪಾನೀಯಗಳನ್ನು ಸೇವಿಸಿ.

ಸ್ಮೂಥಿ ಮಾಡುವಾಗ ಬಾಳೆಹಣ್ಣಿನ ಬದಲು ಸೇಬು ಬಳಸಿದರೆ ಉತ್ತಮ.

Whats_app_banner