Iron Deficiency: ದೇಹದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸುವ 10 ಸರಳ ಆಹಾರಗಳಿವು; ಹಿಮೊಗ್ಲೋಬಿನ್‌ ಹೆಚ್ಚಲೂ ಇವು ಸಹಕಾರಿ
ಕನ್ನಡ ಸುದ್ದಿ  /  ಜೀವನಶೈಲಿ  /  Iron Deficiency: ದೇಹದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸುವ 10 ಸರಳ ಆಹಾರಗಳಿವು; ಹಿಮೊಗ್ಲೋಬಿನ್‌ ಹೆಚ್ಚಲೂ ಇವು ಸಹಕಾರಿ

Iron Deficiency: ದೇಹದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸುವ 10 ಸರಳ ಆಹಾರಗಳಿವು; ಹಿಮೊಗ್ಲೋಬಿನ್‌ ಹೆಚ್ಚಲೂ ಇವು ಸಹಕಾರಿ

ದೇಹದಲ್ಲಿ ಕಬ್ಬಿಣಾಂಶ ಕೊರತೆ ಆದ್ರೆ ಆಯಾಸ, ಸುಸ್ತು, ತಲೆಸುತ್ತು ಇಂತಹ ಸಮಸ್ಯೆಗಳು ಎದುರಾಗುತ್ತವೆ. ಆದರೆ ಕಬ್ಬಿಣಾಂಶ ಕೊರತೆ ನೀಗಿಸಲು ಮಾತ್ರೆ ತಿನ್ನಬೇಕು ಅಂತೇನಿಲ್ಲ. ನಮ್ಮ ಅಡುಗೆಮನೆಯಲ್ಲೇ ಸಿಗುವ ಕೆಲವು ಆಹಾರ ಪದಾರ್ಥಗಳು ಇದರ ನಿವಾರಣೆಗೆ ಸಹಾಯ ಮಾಡುತ್ತವೆ. ಅಂತಹ ಆಹಾರಗಳು ಯಾವುವು ನೋಡಿ.

ದೇಹದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸುವ 10 ಆಹಾರ ಪದಾರ್ಥಗಳಿವು
ದೇಹದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸುವ 10 ಆಹಾರ ಪದಾರ್ಥಗಳಿವು

ಆಗಾಗ ಆಯಾಸವಾಗೋದು, ಸುಸ್ತು ಕಾಡ್ತಿದ್ಯಾ? ಊಟ, ತಿಂಡಿ ಚೆನ್ನಾಗಿ ಮಾಡಿದ್ರು ತಲೆಸುತ್ತು ಬರೋದು, ಮೈ ನಡುಕ ಇಂತಹ ಸಮಸ್ಯೆ ಎದುರಾಗ್ತಿದೆ ಅಂದ್ರೆ ನಿಮ್ಮ ದೇಹದಲ್ಲಿ ಹಿಮೊಗ್ಲೋಬಿನ್‌ ಮಟ್ಟ ಕಡಿಮೆಯಾಗಿದೆ, ಕಬ್ಬಿಣಾಂಶ ಕೊರತೆ ಹಾಗೂ ಅನಿಮಿಯಾದಂತಹ ಸಮಸ್ಯೆ ಕಾಡ್ತಿದೆ ಅಂತ ಅರ್ಥ. ಆದ್ರೆ ಇದಕ್ಕಾಗಿ ನೀವು ಔಷಧಿ ತಗೋಬೇಕು ಅಂತೇನಿಲ್ಲ. ನಮ್ಮ ಮನೆಯ ಅಡುಗೆ ಮನೆಯಲ್ಲೇ ಇರುವ ಉತ್ಪನ್ನಗಳಿಂದ ನೈಸರ್ಗಿಕವಾಗಿ ರಕ್ತದ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು, ಅಲ್ಲದೆ ಕಬ್ಬಿಣಾಂಶ ಕೊರತೆಯನ್ನೂ ನೀಗಿಸಿಕೊಳ್ಳಬಹುದು. ಅಂತಹ ಆಹಾರ ಪದಾರ್ಥಗಳು ಯಾವುವು ನೋಡಿ.

ಪಾಲಕ್‌

ಪಾಲಕ್‌ನಂತಹ ಹಸಿರು ಸೊಪ್ಪಿನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿ ಕಬ್ಬಿಣಾಂಶ ಹಾಗೂ ಇತರ ಪೋಷಕಾಂಶಗಳು ಹೇರಳವಾಗಿರುತ್ತದೆ. ನಾನ್‌ ಹೀಮ್‌ ಐರನ್‌ ಎಂದೂ ಕರೆಯಲ್ಪಡುವ ಈ ಸಸ್ಯ ಆಧಾರಿತ ಕಬ್ಬಿಣದ ಮೂಲವು ಆಕ್ಸಲೇಟ್‌ಗಳನ್ನು ಹೊಂದಿರುತ್ತದೆ. ಪಾಲಕ್‌ಸೊಪ್ಪಿನಲ್ಲಿ ಮಿಟಮಿನ್‌ ಸಿ ಸಮೃದ್ಧವಾಗಿದ್ದು ಇದು ರಕ್ತದಲ್ಲಿ ಕಬ್ಬಿಣವನ್ನು ಉತ್ತಮವಾಗಿ ಹೀರಿಕೊಳ್ಳಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬ್ರೊಕೊಲಿ

ಕ್ರೂಸಿಫೆರಸ್ ತರಕಾರಿಗಳು ಫೈಬರ್, ಕಬ್ಬಿಣ ಮತ್ತು ವಿಟಮಿನ್ ಸಿ ಯ ಆರೋಗ್ಯಕರ ಮೂಲವಾಗಿದೆ, ಇದು ಆಹಾರದಿಂದ ಪೋಷಕಾಂಶಗಳ ಉತ್ತಮ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವುಗಳಲ್ಲಿ ಬ್ರೊಕೊಲಿ ಕೂಡ ಒಂದು.

ಸಿಟ್ರಸ್‌ ಹಣ್ಣುಗಳು

ಸಿಟ್ರಸ್‌ ಅಂಶ ಇರುವ ಹಣ್ಣುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿರುತ್ತದೆ. ಈ ಹಣ್ಣು ದೇಹಕ್ಕೆ ಕಬ್ಬಿಣಾಂಶ ಒದಗಿಸಲು ಸಹಾಯ ಮಾಡುತ್ತವೆ.

ಸ್ಟ್ರಾಬೆರಿಗಳು

ಸ್ಟ್ರಾಬೆರಿಗಳಲ್ಲಿ ಕೂಡ ಮಿಟಮಿನ್‌ ಸಿ ಸಮೃದ್ಧವಾಗಿರುತ್ತದೆ. ಇದು ಕಬ್ಬಿಣಾಂಶ ಹೀರಿಕೊಳ್ಳಲು ಅವಶ್ಯ ಎನ್ನಿಸುತ್ತದೆ.

ಆಲೂಗೆಡ್ಡೆ

ಕಬ್ಬಿಣಾಂಶ ಕೊರತೆ ಇದ್ದರೆ ಆಲೂಗೆಡ್ಡೆಯನ್ನು ಸಿಪ್ಪೆಯೊಂದಿಗೆ ಸೇವಿಸುವುದು ಬಹಳ ಉತ್ತಮ.

ಬೀನ್ಸ್‌

ಬೀನ್ಸ್‌, ಮಸೂರ ಬೇಳೆಗಳು ಕಬ್ಬಿಣಾಂಶ ಸಮೃದ್ಧವಾಗಿರುತ್ತವೆ. ಇವುಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಕಬ್ಬಿಣಾಂಶ ಕೊರತೆ ಕಾಡುವುದಿಲ್ಲ.

ಪನೀರ್‌

ಪನೀರ್‌ ಕಬ್ಬಿಣಾಂಶ ಹೆಚ್ಚಳಕ್ಕೆ ಬಹಳ ಮುಖ್ಯ. ಇದನ್ನು ತಿನ್ನುವುದರಿಂದ ಹಿಮೊಗ್ಲೊಬಿನ್‌ ಮಟ್ಟವೂ ಹೆಚ್ಚುತ್ತದೆ. ಅಲ್ಲದೆ ಇದರಿಂ ಒಟ್ಟಾರೆ ಆರೋಗ್ಯವು ಸುಧಾರಿಸುತ್ತದೆ.

ಕಿನೋವಾ

ಸಂಪೂರ್ಣ ಆರೋಗ್ಯ ಸುಧಾರಣೆ ಮಾತ್ರವಲ್ಲ, ದೇಹಕ್ಕೆ ಸಾಕಷ್ಟು ಐರನ್‌ ಹಾಗೂ ಪ್ರೊಟೀನ್‌ ಕಟೆಂಟ್‌ ಸಿಗಬೇಕು ಎಂದರೆ ಕಿನೋವಾ ಸೇವಿಸಬೇಕು. ಇದರಲ್ಲಿ ನಾರಿನಾಂಶವೂ ಸಮೃದ್ಧವಾಗಿರುತ್ತದೆ.

ಒಣಹಣ್ಣುಗಳು ಹಾಗೂ ಬೀಜಗಳು

ಒಣಹಣ್ಣುಗಳು ಹಾಗೂ ಕುಂಬಳಬೀಜ, ಗೋಡಂಬಿ, ಬಾದಾಮಿ ಅವುಗಳಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ.

ಬಲವರ್ಧಿತ ಆಹಾರಗಳು

ಸಿರಲ್ಸ್‌, ಜ್ಯೂಸ್‌, ಮೊಳಕೆ ಕಾಳಿನಂತಹ ಆಹಾರಗಳು ದೇಹದಲ್ಲಿ ಕಬ್ಬಿಣಾಂಶ ಹೆಚ್ಚಲು ಸಹಾಯ ಮಾಡುತ್ತವೆ.

ದ್ವಿದಳ ಧಾನ್ಯಗಳು

ಸುಮಾರು 100 ಗ್ರಾಂ ದ್ವಿದಳ ಧಾನ್ಯಗಳಲ್ಲಿ ಶೇ 32ರಷ್ಟು ಕಬ್ಬಿಣಾಂಶವಿರುತ್ತದೆ. ಇವುಗಳಲ್ಲಿ ಪೊಲೇಟ್‌, ಮೆಗ್ನೀಶಿಯಂ, ಪೊಟ್ಯಾಶಿಯಂ ಹಾಗೂ ಫೈಬರ್‌ ಅಂಶ ಕೂಡ ಸಮೃದ್ಧವಾಗಿರುತ್ತದೆ. ಇವು ತೂಕ ನಷ್ಟಕ್ಕೂ ಸಹಾಯ ಮಾಡಬಹುದು. ಜೊತೆಗೆ ದೇಹದಲ್ಲಿ ರಕ್ತದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Whats_app_banner