ಚಳಿಗಾಲದಲ್ಲಿ ಮಾತ್ರ ಕಾಣಿಸುವ ಅಧಿಕ ರಕ್ತದೊತ್ತಡದ 5 ಲಕ್ಷಣಗಳಿವು, ಇವುಗಳನ್ನ ನಿರ್ಲಕ್ಷ್ಯ ಮಾಡಿದ್ರೆ ಅಪಾಯ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಮಾತ್ರ ಕಾಣಿಸುವ ಅಧಿಕ ರಕ್ತದೊತ್ತಡದ 5 ಲಕ್ಷಣಗಳಿವು, ಇವುಗಳನ್ನ ನಿರ್ಲಕ್ಷ್ಯ ಮಾಡಿದ್ರೆ ಅಪಾಯ

ಚಳಿಗಾಲದಲ್ಲಿ ಮಾತ್ರ ಕಾಣಿಸುವ ಅಧಿಕ ರಕ್ತದೊತ್ತಡದ 5 ಲಕ್ಷಣಗಳಿವು, ಇವುಗಳನ್ನ ನಿರ್ಲಕ್ಷ್ಯ ಮಾಡಿದ್ರೆ ಅಪಾಯ

ಚಳಿಗಾಲದಲ್ಲಿ ಹತ್ತು, ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಸಮಯದಲ್ಲಿ ಮಾತ್ರ ಕಾಣಿಸುವ ಕೆಲವು ಅಧಿಕ ರಕ್ತದೊತ್ತಡದ ಲಕ್ಷಣಗಳಿವೆ. ಇವುಗಳನ್ನು ನಾವು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಅಂತಹ ಲಕ್ಷಣಗಳು ಯಾವುದು ಎಂದು ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಮಾತ್ರ ಕಾಣಿಸುವ ರಕ್ತದೊತ್ತಡ ಲಕ್ಷಣಗಳು
ಚಳಿಗಾಲದಲ್ಲಿ ಮಾತ್ರ ಕಾಣಿಸುವ ರಕ್ತದೊತ್ತಡ ಲಕ್ಷಣಗಳು

ಚಳಿಗಾಲದಲ್ಲಿ ಮೂಗಿನಿಂದ ರಕ್ತದ ಬರುವ ಸಾಧ್ಯತೆ ಇದೆ. ಸೋಂಕು, ನೆಗಡಿ ಅಥವಾ ಇನ್ನಾವುದೋ ಕಾರಣದಿಂದಲೂ ಮೂಗಿನಲ್ಲಿ ರಕ್ತ ಬರಬಹುದು. ಆದರೆ ಮೂಗಿನಲ್ಲಿ ರಕ್ತ ಬರುವುದು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದಲೂ ಆಗಿರಬಹುದು. ರಕ್ತದೊತ್ತಡ ಹೆಚ್ಚಿದಾಗ ಮೂಗಿನ ರಕ್ತನಾಳಗಳ ಮೇಲೂ ಒತ್ತಡ ಹೆಚ್ಚುತ್ತದೆ. ಈ ಕಾರಣದಿಂದಾಗಿ ಮೂಗಿನ ರಕ್ತನಾಳಗಳು ಒಡೆದು ರಕ್ತಸ್ರಾವವಾಗುತ್ತದೆ.

ಅಧಿಕ ರಕ್ತದೊತ್ತಡದ ಲಕ್ಷಣಗಳು

ಬಿಪಿ ರೋಗಿಗಳಲ್ಲಿ ಎಪಿಸ್ಟಾಕ್ಸಿಸ್ ಅಥವಾ ಮೂಗಿನಿಂದ ರಕ್ತ ಬರುವುದು ಗಂಭೀರ ಲಕ್ಷಣವಾಗಿದೆ. ಆದರೆ ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಇದರೊಂದಿಗೆ ಜನರು ಜನರು ಸಾಮಾನ್ಯವಾಗಿ ನಿರ್ಲಕ್ಷಿಸುವ ಅಧಿಕ ರಕ್ತದೊತ್ತಡದ ಕೆಲವು ಗಂಭೀರ ಲಕ್ಷಣಗಳಿವೆ ಅಥವಾ ಇದು ರಕ್ತದೊತ್ತಡದ ಮಟ್ಟಕ್ಕೆ ಸಂಬಂಧಿಸಿಲ್ಲದೇ ಇರಬಹುದು. ಆದರೆ, ಪರಿಣಾಮಗಳು ಗಂಭೀರವಾಗಿರಬಹುದು. ಅಧಿಕ ರಕ್ತದೊತ್ತಡದ ಕೆಲವು ರೋಗಲಕ್ಷಣಗಳ ಬಗ್ಗೆ ತಿಳಿಯಿರಿ. ಇವು ಚಳಿಗಾಲದಲ್ಲಿ ಮಾತ್ರ ಕಾಣಿಸಬಹುದು.

ತಲೆನೋವು

ಚಳಿಗಾಲದಲ್ಲಿ ತಲೆನೋವು ಸಾಮಾನ್ಯ. ಶೀತ ವಾತಾವರಣ, ಅಲರ್ಜಿ ಮತ್ತು ಆರ್ದ್ರತೆ ಕಡಿಮೆ ಇರುವುದು ಜನರಲ್ಲಿ ತಲೆನೋವು ಉಂಟುಮಾಡಬಹುದು. ತಲೆನೋವಿನ ಜೊತೆಗೆ ಮೂಗಿನಲ್ಲಿ ರಕ್ತಸ್ರಾವ ಇದ್ದರೆ ನಿರ್ಲಕ್ಷ್ಯ ಮಾಡದಿರಿ. ಇದು ಅಧಿಕರಕ್ತದೊತ್ತಡ ಸಮಸ್ಯೆಯನ್ನು ಸೂಚಿಸಬಹುದು.

ತಲೆತಿರುಗುವುದು

ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರಕ್ತದೊತ್ತಡ ಹೆಚ್ಚಾದಾಗ ಅವರಿಗೆ ತಲೆತಿರುಗುವ ಸಮಸ್ಯೆ ಎದುರಾಗಬಹುದು. ಚಳಿಗಾಲದಲ್ಲಿ ತಲೆ ಒಂದು ರೀತಿ ಭಾರತ, ತಿರುಗಿದಂತಾಗುವುದು ಸಹಜ. ಆದರೆ ಅತಿಯಾಗಿ ತಲೆ ತಿರುಗುವುದು ಅಧಿಕ ರಕ್ತದೊತ್ತಡ ಲಕ್ಷಣವಾಗಿರಬಹುದು ಎಚ್ಚರ.

ಉಸಿರಾಟದ ತೊಂದರೆ

ರಕ್ತದೊತ್ತಡದ ಮಟ್ಟ ಹೆಚ್ಚಾದ ನಂತರ, ಅಪಧಮನಿಗಳು ಮತ್ತು ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಶ್ವಾಸಕೋಶಕ್ಕೆ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ. ಇದು ಸಾಮಾನ್ಯವಾಗಿ ಉಸಿರಾಡಲು ತೊಂದರೆ ಉಂಟುಮಾಡಬಹುದು. ಆದರೆ ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆ ಸಹಜವಾಗಿರುವುದರಿಂದ ನಾವು ಅದರ ಮೇಲೆ ಗಮನ ಹರಿಸುವುದಿಲ್ಲ.

ಕಿವಿಯಲ್ಲಿ ರಿಂಗಣಿಸಿದಂತೆ ಶಬ್ದ

ಅಧಿಕ ರಕ್ತದೊತ್ತಡದ ಮಟ್ಟದಿಂದಾಗಿ, ನೀವು ಕಿವಿಯಲ್ಲಿ ವಿವಿಧ ಶಬ್ದಗಳನ್ನು ಕೇಳಬಹುದು. ಇದು ವಿಚಿತ್ರ ಅಥವಾ ರಿಂಗಿಂಗ್ ಶಬ್ದವಾಗಿರಬಹುದು. ನೀವು ಈ ರೋಗಲಕ್ಷಣವನ್ನು ಹೊಂದಿದ್ದರೆ, ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವಿರಿ ಎಂದರ್ಥ.

ಆಯಾಸ ಮತ್ತು ನಿಶಕ್ತಿ 

ಚಳಿಗಾಲದಲ್ಲಿ ಒಂದು ರೀತಿಯ ನಿಶಕ್ತಿ ನಮ್ಮನ್ನು ಕಾಡುವುದು ಸಹಜ. ಆದರೆ ಇದು ರಕ್ತದೊತ್ತಡ ಹೆಚ್ಚಿಸುವುದರ ಸಂಕೇತವೂ ಆಗಿರಬಹುದು. ಹಾಗಾಗಿ ಆಯಾಸ, ನಿಶಕ್ತಿಯನ್ನು ಕಡೆಗಣಿಸದಿರಿ. 

ಎದೆನೋವು, ಎದೆಭಾರ 

ಅತಿಯಾದ ಎದೆನೋವು ಹಾಗೂ ಎದೆಭಾರದ ಲಕ್ಷಣವೂ ಕೂಡ ಅಧಿಕ ರಕ್ತದೊತ್ತಡವನ್ನು ಸೂಚಿಸಬಹುದು. ಹೃದಯರಕ್ತನಾಳದ ಸಮಸ್ಯೆಗಳನ್ನು ಸೂಚಿಸುವ ಲಕ್ಷಣಗಳು ನಿಮಗೆ ಹೈಬಿಪಿ ಇದೆ ಎಂಬುದನ್ನು ಸೂಚಿಸಬಹುದು. 

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner