ಕನ್ನಡ ಸುದ್ದಿ  /  ಜೀವನಶೈಲಿ  /  ನೈಸರ್ಗಿಕ ಮೌತ್ ಫ್ರೆಶ್ನರ್ ಲವಂಗ ಪ್ರತಿದಿನ ಸೇವಿಸುವುದರಿಂದ ಆಗುವ ಪ್ರಯೋಜನಗಳಿವು; ಇಲ್ಲಿದೆ ಮಾಹಿತಿ

ನೈಸರ್ಗಿಕ ಮೌತ್ ಫ್ರೆಶ್ನರ್ ಲವಂಗ ಪ್ರತಿದಿನ ಸೇವಿಸುವುದರಿಂದ ಆಗುವ ಪ್ರಯೋಜನಗಳಿವು; ಇಲ್ಲಿದೆ ಮಾಹಿತಿ

ಲವಂಗ ನೋಡಲು ಚಿಕ್ಕ ವಸ್ತುವಾಗಿದ್ದರೂ ಸಹ ಇದರಿಂದ ಸಾಕಷ್ಟು ಆರೋಗ್ಯ ಲಾಭಗಳಿವೆ. ದಿನನಿತ್ಯ ಲವಂಗ ಸೇವನೆ ಮಾಡುವುದರಿಂದ ನಿಮಗೆ ಏನೆಲ್ಲ ಲಾಭಗಳಿವೆ? ಯಾರೆಲ್ಲ ಲವಂಗ ಸೇವನೆ ಮಾಡಬಾರದು? ಇಲ್ಲಿದೆ ಮಾಹಿತಿ

ನೈಸರ್ಗಿಕ ಮೌತ್ ಫ್ರೆಶ್ನರ್ ಲವಂಗ ಪ್ರತಿದಿನ ಸೇವಿಸುವುದರಿಂದ ಆಗುವ ಪ್ರಯೋಜನಗಳಿವು
ನೈಸರ್ಗಿಕ ಮೌತ್ ಫ್ರೆಶ್ನರ್ ಲವಂಗ ಪ್ರತಿದಿನ ಸೇವಿಸುವುದರಿಂದ ಆಗುವ ಪ್ರಯೋಜನಗಳಿವು

ಭಾರತೀಯರು ತಮ್ಮ ಅಡುಗೆಗಳಲ್ಲಿ ಮಸಾಲೆಯ ಘಮವನ್ನು ಹೆಚ್ಚಿಸಲು ಲವಂಗ ಬಳಕೆ ಮಾಡುತ್ತಾರೆ. ಅಲ್ಲದೇ ಈ ಲವಂಗಗಳಲ್ಲಿ ಇರುವ ಆಂಟಿ ಆಕ್ಸಿಡಂಟ್ ಗುಣಗಳು ಹಾಗೂ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ದೇಹಕ್ಕೆ ಸಾಕಷ್ಟು ಲಾಭಗಳಿವೆ. ಹೀಗಾಗಿ ನಿಯಮಿತವಾಗಿ ಲವಂಗಗಳ ಸೇವನೆ ಒಳ್ಳೆಯದು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಪ್ರತಿದಿನ ಲವಂಗ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಬೀರಬಹುದೇ ಎಂದು ಕೇಳಿದರೆ ಈ ಪ್ರಶ್ನೆಗೆ ನಿಸ್ಸಂದೇಹವಾಗಿ ಹೌದು ಎಂದು ಉತ್ತರ ನೀಡಬಹುದು. ಪ್ರತಿದಿನ ಲವಂಗ ಸೇವನೆ ಮಾಡುವುದರಿಂದ ನೀವು ಸಾಕಷ್ಟು ರೀತಿಯ ಆರೋಗ್ಯ ಪ್ರಯೋಜನ ಪಡೆಯಬಹುದಾಗಿದೆ. ಇದು ಬಾಯಿಯ ಆರೋಗ್ಯವನ್ನು ಕಾಪಾಡುವುದರ ಜೊತೆಯಲ್ಲಿ ಕಡಿಮೆ ರಕ್ತದೊತ್ತಡದ ಸಮಸ್ಯೆಗೂ ಪರಿಹಾರ ನೀಡುತ್ತದೆ.

ಲವಂಗದಲ್ಲಿರುವ ಆಂಟಿ ಆಕ್ಸಿಡಂಟ್ ಗುಣಗಳಾದ ಫ್ಲೇವನಾಯ್ಡ್‌ಗಳು ಹಾಗೂ ಐಸೋಫ್ಲೇವೊನ್‌ಗಳು ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಲಾಭವನ್ನು ನೀಡುತ್ತವೆ. ಇವುಗಳು ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಸಮಸ್ಯೆಗಳ ಅಪಾಯವನ್ನೂ ದಿನನಿತ್ಯ ಲವಂಗ ಸೇವನೆ ಅಭ್ಯಾಸ ದೂರವಿರಿಸುತ್ತದೆ.

ಲವಂಗಗಳಲ್ಲಿ ಯುಜೆನಾಲ್ ಎಂಬ ಅಂಶ ಅಡಗಿದೆ. ಇದು ಬಾಯಿಗೆ ಸಂಬಂಧಿಸಿದ ಕಾಯಿಲೆಗಳಾದ ಜಿಂಗೈವಿಟಿಸ್ ಮತ್ತು ಪಿರಿಯಾಂಟೈಟಿಸ್‌ಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಇದು ಮಾತ್ರವಲ್ಲದೇ ಹಲ್ಲು ನೋವನ್ನು ಕಡಿಮೆ ಮಾಡುವುದರಲ್ಲಿ ಹಾಗೂ ವಸಡಿನ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಕೂಡ ಲವಂಗ ಸಹಕಾರಿಯಾಗಿದೆ.

ಇದನ್ನೂ ಒದಿ | World Malaria Day: ಜೀವಕ್ಕೆ ಅಪಾಯ ತರಬಹುದು ಮಲೇರಿಯಾ, ಸೊಳ್ಳೆಗಳ ನಿರ್ಲಕ್ಷ್ಯ ಸಲ್ಲ; ಮಕ್ಕಳ ಆರೈಕೆಗೆ ಪೋಷಕರಿಗಿಲ್ಲಿದೆ ಸಲಹೆ

ಹಲ್ಲು ನೋವು ಹಾಗೂ ವಸಡಿನ ನೋವಿನಿಂದ ಪಾರಾಗಲು ನಿಮಗೆ ಲವಂಗ ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ:

ನೋವು ನಿವಾರಕ ಗುಣಲಕ್ಷಣಗಳು

ಲವಂಗಗಳಲ್ಲಿ ಕಂಡುಬರುವ ಯುಜೆನಾಲ್ ಎನ್ನುವ ಅಂಶವು ನೈಸರ್ಗಿಕ ನೋವು ನಿವಾರಕ ಹಾಗೂ ಅರವಳಿಕೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಹಲ್ಲು ನೋವಿಗೆ ತಾತ್ಕಾಲಿಕ ಪರಿಹಾರ ನೀಡುತ್ತದೆ. ಹೀಗಾಗಿ ಹಲ್ಲು ನೋವಿನ ಸಮಸ್ಯೆಗೆ ಲವಂಗ ಮೊದಲಿನಿಂದಲೂ ಪ್ರಬಲವಾದ ಮನೆ ಮದ್ದಾಗಿ ಬಳಕೆಯಾಗುತ್ತಿದೆ.

ವಸಡಿನ ಆರೋಗ್ಯ

ವಸಡಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ವಸಡನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ ವಸಡಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಬಾರದಂತೆ ಲವಂಗಗಳು ಕಾಪಾಡುತ್ತದೆ. ಅಲ್ಲದೇ ಲವಂಗ ಅಂಶ ಹೊಂದಿರುವ ಮೌತ್ ವಾಶರ್‌ಗಳಿಂದ ಬಾಯಿಯ ದುರ್ವಾಸನೆ ಕಡಿಮೆ ಮಾಡಬಹುದಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ

ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ನೀವು ಪ್ರತಿನಿತ್ಯ ಲವಂಗ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಬಹುದಾಗಿದೆ. ಲವಂಗದಲ್ಲಿರುವ ಜೀರ್ಣಕಾರಿ ಕಿಣ್ವಗಳು ಅಜೀರ್ಣ, ಹೊಟ್ಟೆಯುಬ್ಬರದಂತಹ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ.

ಲವಂಗದಲ್ಲಿರುವ ಯುಜೆನಾಲ್ ಅಂಶವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ ಸಹ ಅತಿಯಾದ ಲವಂಗದ ಸೇವನೆಯಿಂದ ಯಕೃತ್ತಿಗೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಲವಂಗಗಳಲ್ಲಿ ರಕ್ತವನ್ನು ತೆಳುಗೊಳಿಸುವ ಅಂಶ ಇರುತ್ತದೆ. ಹೀಗಾಗಿ ರಕ್ತ ದಪ್ಪಗಾಗುವುದಕ್ಕೆ ಸಂಬಂಧಿಸಿದ ಯಾವುದೇ ಚಿಕಿತ್ಸೆ ಅಥವಾ ಮಾತ್ರೆಗಳನ್ನು ನೀವು ತೆಗೆದುಕೊಳ್ಳುತ್ತಿದ್ದರೆ ಲವಂಗವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

ದೈನಂದಿನ ಆಹಾರದಲ್ಲಿ ಲವಂಗವನ್ನು ಹೇಗೆ ಸೇರಿಸಿಕೊಳ್ಳಬಹುದು?

ದಿನಕ್ಕೆ ಒಂದರಿಂದ ಎರಡು ಸಣ್ಣ ಗಾತ್ರದ ಲವಂಗ ಸೇವನೆ ಮಾಡುವುದು ಒಳ್ಳೆಯ ಅಭ್ಯಾಸವಾಗಿದೆ. ನೀವು ಊಟದ ಜೊತೆಯಲ್ಲಿ ಅಂದರೆ ನಿಮ್ಮ ಯಾವುದೇ ಮಸಾಲಾ ಖಾದ್ಯಗಳಲ್ಲಿ ಅಥವಾ ಚಹಾದಲ್ಲಿ ಬೆರೆಸಿ ಹೀಗೆ ನಾನಾ ರೂಪದಲ್ಲಿ ನೀವು ಲವಂಗ ಸೇವನೆ ಮಾಡಬಹುದಾಗಿದೆ.

ಗರ್ಭಿಣಿಯರು, ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ರಕ್ತ ತೆಳುವಾಗಿಸುವ ಔಷಧಿಯನ್ನು ಸೇವನೆ ಮಾಡುತ್ತಿರುವವರು ವೈದ್ಯಕೀಯ ಸಲಹ ಪಡೆದು ಲವಂಗ ಸೇವನೆ ಮಾಡುವುದು ಒಳಿತು. ಅಲ್ಲದೆ ಮಕ್ಕಳಿಗೆ ಲವಂಗ ನೀಡುವ ಮೊದಲು ಕೂಡ ಮಕ್ಕಳ ವೈದ್ಯರಲ್ಲಿ ಸಲಹೆ ಪಡೆದು ಅವರು ತಿಳಿಸಿದ ಪ್ರಮಾಣದಲ್ಲಿ ಮಾತ್ರ ಲವಂಗ ಸೇವಿಸಲು ನೀಡುವುದು ಒಳ್ಳೆಯದು.