Onam 2023: ಓಣಂ ಯಾವಾಗ; 10 ದಿನಗಳ ಕಾಲ ನಡೆಯುವ ಈ ಸುಗ್ಗಿ ಹಬ್ಬದ ವಿಶೇಷಗಳೇನು; ಈ ಕುರಿತ ಸಂಪೂರ್ಣ ಮಾಹಿತಿ
ಮಲೆಯಾಳಿಗರ ಪ್ರಸಿದ್ಧ ಹಬ್ಬ ಓಣಂ ಆರಂಭವಾಗಿದೆ. ಓಣಂ ಅನ್ನು ಕೇರಳಿಗರು 10 ದಿನಗಳ ಕಾಲ ಆಚರಿಸುತ್ತಾರೆ. ಹತ್ತೂ ದಿನಗಳನ್ನು ವಿಶೇಷವಾಗಿ ಆಚರಿಸುವುದು ವಾಡಿಕೆ. ಈ ದಿನಗಳ ಆಚರಣೆ ಹಾಗೂ 2023 ರಲ್ಲಿ ತಿರುವೋಣಂ ಆಚರಣೆ ಯಾವಾಗ ಈ ಕುರಿತ ವಿವರ ಇಲ್ಲಿದೆ.
ಓಣಂ ಕೇರಳಿಗರ ಪ್ರಮುಖ ಹಬ್ಬ. ಪ್ರತಿವರ್ಷ ಪ್ರಪಂಚದಾದ್ಯಂತ ಇರುವ ಕೇರಳಿಗರು ಓಣಂ ಅನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಈ ವರ್ಷವು ಈ ಹಬ್ಬ ಸಮೀಪದಲ್ಲಿದ್ದು, ಜನರು ಇದರ ಆಚರಣೆಗೆ ಸಜ್ಜಾಗುತ್ತಿದ್ದಾರೆ. ಇದನ್ನು ತಿರು ಓಣಂ ಅಥವಾ ತಿರುವೋಣಂ ಎಂದೂ ಕರೆಯುತ್ತಾರೆ. ಇದು ಸುಗ್ಗಿ ಹಬ್ಬವಾಗಿದ್ದು, ರಾಜ ಮಹಾಬಲಿ ತನ್ನ ಸಾಮ್ರಾಜ್ಯಕ್ಕೆ ಹಿಂದಿರುಗಿದುದ್ದನ್ನು ಆಚರಿಸುತ್ತದೆ. ಓಟ್ಟು ಹತ್ತು ದಿನಗಳವರೆಗೆ ಓಣಂ ಆಚರಣೆ ಇರುತ್ತದೆ. ಅಲ್ಲದೆ ಪ್ರತಿದಿನವೂ ಬಹಳಷ್ಟು ಮಹತ್ವವನ್ನು ಹೊಂದಿದೆ. ಈ ಹಬ್ಬದ ಮೊದಲ ದಿನವನ್ನು ಆಠಂ ಎಂದು ಕರೆಯಲಾಗುತ್ತದೆ. ನಂತರ ಚಿತಿರಾ, ಚೋಡಿ, ವಿಶಾಕಂ, ಅನಿಜಂ, ತ್ರಿಕೆಟ್ಟ, ಮೂಲಂ, ಪೂರದಂ, ಉತ್ರದೋಂ ಮತ್ತು ತಿರುವೋಣಂ ಎಂದು ಆಚರಿಸಲಾಗುತ್ತದೆ. 10 ದಿನಗಳ ಕಾಲ ನಡೆಯುವ ಹಬ್ಬಗಳಲ್ಲಿ ತಿರುವೋಣಂ ಅತ್ಯಂತ ಮಂಗಳಕರ ದಿನವಾಗಿದೆ.
ಮಲೆಯಾಳಿ ಕ್ಯಾಲೆಂಡರ್ ಪ್ರಕಾರ ಆಗಸ್ಟ್ ಹಾಗೂ ಸೆಪ್ಟೆಂಬರ್ ನಡುವೆ ಬರುವ ಚಿಂಗಮ್ ತಿಂಗಳಲ್ಲಿ ಓಣಂ ಆಚರಿಸಲಾಗುತ್ತದೆ. ಇದು ಮಲೆಯಾಳಂ ವರ್ಷದ ಆರಂಭವನ್ನು ಸೂಚಿಸುತ್ತದೆ. ಇದನ್ನು ಕೊಲ್ಲ ವರ್ಷಂ ಎಂದೂ ಕರೆಯಲಾಗುತ್ತದೆ.
2023 ರಲ್ಲಿ ಓಣಂ ಯಾವಾಗ
ಈ ವರ್ಷ ಆಗಸ್ಟ್ 20 ರಂದು ಓಣಂ ಆರಂಭವಾಗುತ್ತದೆ ಮತ್ತು ತಿರುವೋಣಂ ಅನ್ನು ಆಗಸ್ಟ್ 31 ರಂದು ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ತಿರುವೋಣಂ ನಕ್ಷತ್ರವು ಆಗಸ್ಟ್ 29 ರಂದು ಬೆಳಿಗ್ಗೆ 2.43ಕ್ಕೆ ಪ್ರಾರಂಭವಾಗಿ ರಾತ್ರಿ 11.50ಕ್ಕೆ ಮುಕ್ತಾಯವಾಗುತ್ತದೆ.
ಓಣಂನ 10 ಮಹತ್ವದ ದಿನಗಳು
ಆಠಂ ಓಣಂ ಹಬ್ಬಗಳ ಆರಂಭವನ್ನು ಸೂಚಿಸುತ್ತದೆ ಮತ್ತು ಮಹಾಬಲಿ ತನ್ನ ರಾಜ್ಯಕ್ಕೆ ಹಿಂದಿರುಗುವ ದಿನದ ಸಿದ್ಧತೆಯನ್ನು ಸೂಚಿಸುತ್ತದೆ. ಇದು ಅತ್ಯಂತ ಮಂಗಳಕರ ಸುಗ್ಗಿ ಹಬ್ಬದ ದಿನವಾಗಿದೆ. ವಾಮನಮೂರ್ತಿ ತಿರಿಕಾರ ದೇವಸ್ಥಾನದಲ್ಲಿ ಮತ್ತು ಕೊಚ್ಚಿಯಾದ್ಯಂತ ಭವ್ಯವಾದ ಮೆರವಣಿಗೆಗಳ ಮೂಲಕ ಆಚರಿಸಲಾಗುತ್ತದೆ. ಈ ದಿನ ಪೂಕಳಂ (ಹಳದಿ ಹೂವಿನ ಪಕಳೆಗಳಿಂದ ರಂಗೋಲಿ) ರಚಿಸುವುದು ವಿಶೇಷ. ಮೊದಲ ದಿನ, ಮೂಲ ಪದರವನ್ನು ಅಥಾಪೂ ಎಂದು ಕರೆಯಲಾಗುತ್ತದೆ.
- ಚಿತಿರಾ
ಓಣಂನ ಎರಡನೆ ದಿನ ಚಿತಿರಾ. ಇದನ್ನು ಮಲೆಯಾಳಿ ಆಡಂಬರದಿಂದ ಆಚರಿಸುತ್ತವೆ. ಈ ದಿನದಂದು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಕಿತ್ತಳೆ ಹಾಗೂ ಹಳದಿ ಹೂಗಳ ದಳಗಳಿಂದ ಪೂಕಳಂ ರಚಿಸಲಾಗುತ್ತದೆ.
- ಚೋಡಿ
ಓಣಂ ಮೂರನೇ ದಿನವನ್ನು ಚೋಡಿ ಎಂದು ಕರೆಯಲಾಗುತ್ತದೆ. ಈ ದಿನದಂದು ತಮ್ಮ ಪ್ರೀತಿಪಾತ್ರರಿಗೆ ಹೊಸ ಬಟ್ಟೆ ಹಾಗೂ ಆಭರಣಗಳನ್ನು ಖರೀದಿಸುತ್ತಾರೆ. ಈ ಆಚರಣೆಗೆ ಒನಕ್ಕೋಡಿ ಎಂದು ಕರೆಯುತ್ತಾರೆ. ಪುರುಷರು ಮುಂಡು ಪಂಚೆ, ಹುಡುಗರು ಪಟ್ಟು ಪವಾಡ ಹಾಗೂ ಮಹಿಳೆಯರು ಕಸವಿ ಸೀರೆ ಧರಿಸುವುದು ವಾಡಿಕೆ.
- ವಿಶಾಕಂ
ಓಣಂನ ನಾಲ್ಕನೇ ದಿನ, ವಿಶಾಕಂ. ಓಣ ಸದ್ಯಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸುವ ದಿನ. ಜನರು ವಿವಿಧ ಭಕ್ಷ್ಯಗಳೊಂದಿಗೆ ಈ ಮಂಗಳಕರ ಹಬ್ಬವನ್ನು ಆಚರಿಸುವುದರಿಂದ ಈ ಋತುವಿನಲ್ಲಿ ಬೆಳೆದ ಮೊದಲ ಬೆಳೆಗಳನ್ನು ಮನೆಯಲ್ಲಿ ತಂದು ಸಂಗ್ರಹಿಸುತ್ತಾರೆ.
- ಅನಿಜಮ್
ಐದನೇ ದಿನ ಅನಿಜಮ್ ಎಂದು ಕರೆಯಲಾಗುತ್ತದೆ. ಈ ದಿನ ವಲ್ಲಂಕಾಳಿ ಪಂಭಾನದಿಯಲ್ಲಿ ಪ್ರಸಿದ್ಧ ದೋಣಿ ಓಟದ ಸ್ಪರ್ಧೆ ನಡೆಯುತ್ತದೆ.
- ತ್ರಿಕೆಟ್ಟಾ
ತ್ರಿಕೆಟ್ಟಾ ಓಣಂ ಹಬ್ಬದ ಆರನೇ ದಿನವಾಗಿದೆ. ಆ ದಿನ ಜನರು ತಮ್ಮ ಪೂರ್ವಜರ ಮನೆ ಮತ್ತು ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ಆ ದಿನ ಪೂಕಳಂ ಅನ್ನು ಹೊಸ ಹೂವುಗಳಿಂದ ಅಲಂಕರಿಸುತ್ತಾರೆ.
- ಮೂಲಂ
ಓಣಂ ಆಚರಣೆಯ ಏಳನೇ ದಿನವನ್ನು ಮೂಲಂ ಎಂದು ಕರೆಯಲಾಗುತ್ತದೆ. ಈ ದಿನದಿಂದ ದೇವಾಲಯಗಳಲ್ಲಿ ಓಣಸದ್ಯವನ್ನು ನೀಡಲು ಪ್ರಾರಂಭಿಸಲಾಗುತ್ತದೆ. ಪುಲಿಕಲಿ ಮತ್ತು ಕೈಕೊಟ್ಟುಕಳಿಯಂತಹ ವೈವಿಧ್ಯಮಯ ಜಾನಪದ ನೃತ್ಯಗಳನ್ನು ಕೇರಳದಾದ್ಯಂತ ಪ್ರದರ್ಶಿಸಲಾಗುತ್ತದೆ.
- ಪೂರದಂ
ಪೂರದಂ ಹಬ್ಬದ ಎಂಟನೇ ದಿನ. ಪ್ರತಿದಿನ ಹೆಚ್ಚು ಹೂವುಗಳನ್ನು ಸೇರಿಸುವುದರಿಂದ ಪೂಕಳಂ ಏಳನೇ ದಿನದಲ್ಲಿ ದೊಡ್ಡದಾಗಿ ಕಾಣುತ್ತದೆ. ಮಹಾಬಲಿ ಮತ್ತು ವಾಮನನ ಜೇಡಿಮಣ್ಣಿನ ಪ್ರತಿಮೆಗಳು ಪೂಕಳಂನ ಮಧ್ಯದಲ್ಲಿ ಇರಿಸಿ ಪೂರದಂ ಆಚರಣೆಯನ್ನು ಪ್ರಾರಂಭಿಸಲಾಗುತ್ತದೆ. ದಂತಕಥೆಯ ಪ್ರಕಾರ, ಮಹಾಬಲಿಗೆ ಆ ಸೂಚಕದ ಮೂಲಕ ಪ್ರತಿ ಮನೆಗೆ ಭೇಟಿ ನೀಡಲು ಆಹ್ವಾನವನ್ನು ನೀಡಲಾಯಿತು.
- ಉತ್ತರೋಮ್
ಒಂಬತ್ತನೇ ದಿನವನ್ನು ಉತ್ತರೋಮ್ ಎಂದು ಕರೆಯಲಾಗುತ್ತದೆ. ಜನರು ಮಹಾಬಲಿಯ ಆಗಮನವನ್ನು ಸ್ವಾಗತಿಸಿಲು, ಅವನನ್ನು ಗೌರವಿಸಲು ಅಸಾಮಾನ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಾರೆ, , ಇದನ್ನು ಮೊದಲ ಓಣಂ ಎಂದೂ ಕರೆಯುತ್ತಾರೆ.ಇತ್ತೀಚೆಗೆ ಕೊಯ್ಲು ಮಾಡಿದ ತಾಜಾ ಹಣ್ಣುಗಳು ಮತ್ತು ತರಕಾರಿಗಳಿಂದ ಹಲವಾರು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.
- ತಿರುವೋಣಂ
ತಿರುವೋಣಂ ಓಣಂನ ಹತ್ತನೇ ದಿನ ಮತ್ತು ಹಬ್ಬದ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ. ಇದು ಓಣಂ ಆಚರಣೆಯ ಅಂತ್ಯವನ್ನು ಸೂಚಿಸುತ್ತದೆ. ಈ ದಿನದಂದು, ರಾಜ ಮಹಾಬಲಿಯನ್ನು ಸ್ವಾಗತಿಸಲು ಜನರು ತಮ್ಮ ಮುಂಭಾಗದ ಬಾಗಿಲುಗಳ ಮೇಲೆ ಅಕ್ಕಿ ಹಿಟ್ಟಿನಿಂದ ಸಂಕೀರ್ಣವಾದ ವಿನ್ಯಾಸಗಳನ್ನು ಚಿತ್ರಿಸುತ್ತಾರೆ. ಕುಟುಂಬಗಳು ಓಣಂ ಔತಣವಾದ ಓಣಸದ್ಯವನ್ನು ತಯಾರಿಸಿ ಆನಂದಿಸುತ್ತಾರೆ.