Holi: 2024 ರಲ್ಲಿ ಹೋಳಿ ಹಬ್ಬ ಯಾವಾಗ? ಕೆಡುಕನ್ನು ಸುಡುವ ಬಣ್ಣದ ಹಬ್ಬದ ಮಹತ್ವ ತಿಳಿಯಿರಿ
ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. 2024ರಲ್ಲಿ ಹೋಳಿ ಹಬ್ಬ ಯಾವ ದಿನದಂದು ಆಚರಿಸಲಾಗುತ್ತದೆ ಅನ್ನೋದರ ಮಾಹಿತಿ ಇಲ್ಲಿದೆ.
ಬೆಂಗಳೂರು: ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಗೆ ಯಾವುದೇ ವಯಸ್ಸಿ ಭೇದಭಾವ ಇಲ್ಲದೆ ಖುಷಿ ಖುಷಿಯಾಗಿ ಆಚರಿಸುವಂತ ಕಲರ್‌ಫುಲ್ ಹಬ್ಬವೇ ಹೋಳಿ (Holi Festival 2024). ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
ಹೋಳಿ ಹಬ್ಬವನ್ನು 2 ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಹೋಳಿ ದಹನವನ್ನು ಮಾಡಲಾಗುತ್ತದೆ. ಇದನ್ನು ಚೋಟಿ ಹೋಳಿ ಅಂತಲೂ ಕರೆಯುತ್ತಾರೆ. 2ನೇ ದಿನ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಲಾಗುತ್ತದೆ. ಹೋಳಿ ಹಬ್ಬವು ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ ಕೊನೆಯಲ್ಲಿ ಬರುತ್ತದೆ. 2024ರಲ್ಲಿ ಹೋಳಿ ಹಬ್ಬವು ಮಾರ್ಚ್ 25 ರಂದು ಬರುತ್ತದೆ. ಮಾರ್ಚ್ 24 ರಂದು ಹೋಳಿಕಾ ದಹನ ನಡೆಯಲಿದೆ. ಇದಕ್ಕೆ ವಿಶೇಷವಾದ ಮಹತ್ವವಿದೆ.
2024ರಲ್ಲಿ ಹೋಳಿ ದಿನಾಂಕ, ಶುಭ ಸಮಯ
2024 ರಲ್ಲಿ ಹೋಲಿಕಾ ದಹನದ ಶುಭ ಸಮಯ ರಾತ್ರಿ 7.19 ರಿಂದ 9.18 ರವರೆಗೆ ಇರುತ್ತದೆ. 2023 ರಲ್ಲಿ ಹೋಳಿ ಮತ್ತು 2024 ರಲ್ಲಿನ ಹೋಳಿ ದಿನಾಂಕಗಳು ಸ್ವಲ್ಪ ವಿಭಿನ್ನವಾಗಿವೆ. 2023 ರಲ್ಲಿ ಹೋಳಿಯನ್ನು ಮಾರ್ಚ್ 6 ರಂದು ಆಚರಿಸಲಾಗಿತ್ತು. ಆದರೆ 2024ರಲ್ಲಿ ಮಾರ್ಚ್ 25 ರಂದು ಆಚರಿಸಲಾಗುತ್ತಿದೆ. ಜ್ಯೋತಿಷಿಗಳ ಪ್ರಕಾರ ಹೋಳಿಕಾ ದಹನವನ್ನು ಫಾಲ್ಗುಣ ಪೂರ್ಣಿಮಾ ಪ್ರಮೋಷ ವ್ಯಾಪಿನಿ ಅಥವಾ ಅಸುರಕ್ಷಿತ ಮುಹೂರ್ತದ ಸಮಯದಲ್ಲಿ ಮಾತ್ರ ಮಾಡಲಾಗುತ್ತದೆ. ಹೀಗಾಗಿ ಈ ವರ್ಷ ಹೋಳಿ ಹಬ್ಬ ಸ್ವಲ್ಪ ತಡವಾಗಿ ಬರಲಿದೆ.
2024ರ ಮಾರ್ಚ್ 24 ರಂದು ಹೋಳಿಕಾ ದಹನ್ ಅಥವಾ ಚೋಟಿ ಹೋಳಿ ಆಚರಿಸಲಾಗುತ್ತದೆ. ಹೋಳಿ ಹಬ್ಬದ ದಿನವೇ ಚಂದ್ರಗ್ರಹಣ ಸಂಭವಿಸುವುದು ವಿಶೇಷ. ಆದರೆ ಭಾರತದಲ್ಲಿ ಚಂದ್ರಗ್ರಹಣದ ಪರಿಣಾಮ ಬೀರುವುದಿಲ್ಲ. ಭಾರತದಲ್ಲಿ ಚಂದ್ರಗ್ರಹಣವು ಗೋಚರಿಸದ ಕಾರಣ, ಸೂತಕದ ಸಮಯವೂ ಮಾನ್ಯವಾಗಿರುವುದಿಲ್ಲ.
ಹೋಳಿ ಹಬ್ಬದ ಹಿಂದಿರುವ ಕಥೆಗಳು
ಪುರಾಣಗಳ ಪ್ರಕಾರ, ರಾಕ್ಷಸ ರಾಜ ಹಿರಣ್ಯಕಶಿಪು ಬಹಳ ಕಾಲ ತಪಸ್ಸು ಮಾಡಿ ಮರಣವನ್ನು ತಪ್ಪಿಸಲು ವರನ್ನು ಪಡೆಯುತ್ತಾನೆ. ತಾನು ಅಮರನೆಂಬ ಗರ್ವದಿಂದ ದೇವತೆಗಳ ಮೇಲೆ ದಾಳಿ ಮಾಡುತ್ತಾನೆ. ಮನುಷ್ಯರು ಯಾರೂ ಕೂಡ ದೇವರುಗಳನ್ನು ಪೂಜಿಸಬಾರದು. ನನ್ನನ್ನು ಮಾತ್ರ ಪೂಜಿಸಬೇಕೆಂದು ಅಜ್ಞಾಪಿಸುತ್ತಾನೆ. ಆದರೆ ಹಿರಣ್ಯಕಶಿಪು ಮಗ ಪ್ರಹ್ಲಾದನು ವಿಷ್ಣುವನ್ನು ಆರಾಧಿಸುತ್ತಾನೆ. ಇದರಿಂದ ಕುಪಿತಗೊಂಡ ರಾಕ್ಷಸ ರಾಜ ತನ್ನ ಮಗನನ್ನೇ ಕೊಲ್ಲಲು ನಿರ್ಧರಿಸುತ್ತಾನೆ.
ಹಿರಣ್ಯಕಶಿಪುವಿನ ಸಹೋದರಿಂದ ಯಾವಾಗಲೂ ಬೆಂಕಿಯಲ್ಲೇ ಉರಿಯುತ್ತಿರುತ್ತಾಳೆ. ಆಕೆಗೆ ಬೆಂಕಿ ತಗುಲದಂತೆ ರಕ್ಷಣಾ ಕವಚವನ್ನು ಹೊಂದಿರುತ್ತಾಳೆ. ಮಡಿಲಿನಲ್ಲಿ ಪ್ರಹ್ಲಾದನನ್ನು ಕೂರಿಸಿಕೊಂಡು ಬೆಂಕಿಯ ಮೇಲೆ ಕುಳಿತುಕೊಳ್ಳುವಂತೆ ಹೇಳುತ್ತಾನೆ. ಅಣ್ಣ ಹೇಳಿದಂತೆ ತಂಗಿ ಮಾಡುತ್ತಾಳೆ. ಆದರೆ ಪ್ರಹ್ಲಾದನು ವಿಷ್ಣುವಿನ ಆರಾಧನೆಯಿಂದಾಗಿ ಬೆಂಕಿ ಆತನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಹಿರಣ್ಯಕಶಿಪು ತಂಗಿ ಬೆಂಕಿಯಲ್ಲಿ ಸುಟ್ಟು ಹೋಗುತ್ತಾಳೆ. ಅಂದಿನಿಂದ ಇದರ ಗುರುತಾಗಿ ಹೋಳಿಕಾ ದಹನವನ್ನು ಆಚರಿಸಲಾಗುತ್ತದೆ.
ಹೋಳಿ ಹಬ್ಬದ ಹಿಂದೆ ಇನ್ನೊಂದು ಕಥೆಯಿದೆ. ಕೃಷ್ಣ ರಾಧೆಯನ್ನು ಪ್ರೀತಿಯಿಂದ ಚಿತ್ರಿಸಲು ಮುಂದಾಗುತ್ತಾನೆನ. ಅಲ್ಲಿನ ಗೋಪಿಕೆಯರನ್ನೂ ಬಣ್ಣಿಸುತ್ತಾನೆ. ಆ ಸಮಯದಲ್ಲಿ ಗೋಪಿಯರು ಕೃಷ್ಣನನ್ನು ಹೊಡೆಯಲು ಕೋಲುಗಳಿಂದ ಬೆನ್ನಟ್ಟುತ್ತಾರೆ. ಉತ್ತರ ಪ್ರದೇಶದಲ್ಲಿ ಹೋಳಿ ಆಚರಣೆಯ ವೇಳೆ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಲತ್ಮಾರ್ ಹೋಳಿ ಹೆಸರಿನಲ್ಲಿ ಇಲ್ಲಿ ಆಚರಣೆಗಳು ನಡೆಯುತ್ತವೆ. ಅಲ್ಲಿನ ಮಹಿಳೆಯರು ತಮ್ಮ ಪತಿಯನ್ನು ಕೋಲನಿಂದ ಹೊಡೆಯುತ್ತಾರೆ. ಆದರೆ ಇದರಲ್ಲಿ ಪ್ರೀತಿ ಉದ್ದೇಶವೇ ಹೊರತು ಉದ್ದೇಶ ಪೂರಕವಾಗಿ ಹೊಡೆಯುವುದಿಲ್ಲ. ಹೋಳಿ ದಿನದಂದು ವಸಂತ ಋತು ಪ್ರಾರಂಭವಾಗುತ್ತದೆ. ಚಳಿಗಾಲ ಮುಗಿದು ವಸಂತ ಋತುವಿಗೆ ಸ್ವಾಗತವೂ ಆ ದಿನದಿಂದ ಪ್ರಾರಂಭವಾಗುತ್ತದೆ. ವಾತಾವರಣದಲ್ಲಿ ಬದಲಾವಣೆಯಾಗಿ ಚರ್ಚದ ಕಿರಿಕಿರಿ ಉಂಟಾಗುತ್ತದೆ. ಆ ಸಮಯದಲ್ಲಿ ಬಣ್ಣಗಳನ್ನು ಎರಚುವುದರಿಂದ ಕಿರಿಕಿರಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಹೋಳಿ ದಿನದಿಂದ ವಸಂತ ಋತು ಪ್ರಾರಂಭವಾಗುತ್ತದೆ. ಶೀತ ಋತುವಿನ ಅಂತ್ಯ ಮತ್ತು ವಸಂತ ಋತುವಿನ ಸ್ವಾಗತವೂ ಆ ದಿನದಿಂದ ಪ್ರಾರಂಭವಾಗುತ್ತದೆ. ಹವಾಮಾನದಲ್ಲಿನ ಹಠಾತ್ ಬದಲಾವಣೆಯು ಚರ್ಮವನ್ನು ಕೆರಳಿಸುತ್ತದೆ. ಆ ಸಮಯದಲ್ಲಿ ಬಣ್ಣಗಳನ್ನು ಎರಚುವುದರಿಂದ ಕಿರಿಕಿರಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಈ ಆಧಾರದಲ್ಲಿ ಪ್ರತಿ ವರ್ಷ ಹೋಳಿಯನ್ನು ಆಚರಿಸಲಾಗುತ್ತದೆ. ಆದರೆ ಕೋವಿಡ್ ಸಮಯದಲ್ಲಿ ಹೋಳಿಗೆ ಅವಕಾಶ ನೀಡಿರಲಿಲ್ಲ.