Personality Test: ಕೆನ್ನೆ ಉಬ್ಬಿದ್ದಂತೆ ಇದ್ದರೆ ನೀವೇ ಅದೃಷ್ಟವಂತರು; ವ್ಯಾಪಾರದಲ್ಲಿ ತೃಪ್ತಿ ಸೇರಿ ನಿಮ್ಮ ಜೀವನ ಹೀಗಿರುತ್ತೆ-personality test horoscope if you have puffy cheeks you are very lucky fully satisfaction in business sts ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಕೆನ್ನೆ ಉಬ್ಬಿದ್ದಂತೆ ಇದ್ದರೆ ನೀವೇ ಅದೃಷ್ಟವಂತರು; ವ್ಯಾಪಾರದಲ್ಲಿ ತೃಪ್ತಿ ಸೇರಿ ನಿಮ್ಮ ಜೀವನ ಹೀಗಿರುತ್ತೆ

Personality Test: ಕೆನ್ನೆ ಉಬ್ಬಿದ್ದಂತೆ ಇದ್ದರೆ ನೀವೇ ಅದೃಷ್ಟವಂತರು; ವ್ಯಾಪಾರದಲ್ಲಿ ತೃಪ್ತಿ ಸೇರಿ ನಿಮ್ಮ ಜೀವನ ಹೀಗಿರುತ್ತೆ

Personality Test: ಎಲ್ಲರ ಮುಖ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಸ್ವಲ್ಪ ಉದ್ದ ಇದ್ದರೆ, ಮತ್ತೊಬ್ಬರಿಗೆ ಅಗಲ, ಮೋಟು ಹೀಗೆಲ್ಲಾ ಇರುತ್ತೆ. ಕೆನ್ನೆಯ ಆಕಾರದ ಮೂಲಕವೂ ನಮ್ಮ ವ್ಯಕ್ತಿತ್ವ ತಿಳಿಯಬಹುದು. ಉಬ್ಬಿದ ಆಕಾರದಲ್ಲಿ ಕೆನ್ನೆಯಿಂದ ಇದ್ದರೆ ಏನೆಲ್ಲಾ ಶುಭಫಲಗಳಿವೆ ಅನ್ನೋದನ್ನ ತಿಳಿಯೋಣ. (ಬರಹ: ಜ್ಯೋತಿಷಿ ಎಚ್‌. ಸತೀಶ್)

Personality Test: ಕೆನ್ನೆ ಉಬ್ಬಿದಂತೆ ಇದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ತಿಳಿಯಿರಿ.
Personality Test: ಕೆನ್ನೆ ಉಬ್ಬಿದಂತೆ ಇದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ತಿಳಿಯಿರಿ.

Personality Test: ತಾಯಿ ಮಕ್ಕಳಾಗಲಿ, ತಂದೆ ಮಕ್ಕಳಾಗಲಿ ಅಥವಾ ದಂಪತಿಯಾಗಲಿ ತೋರುವ ಪ್ರೀತಿ ವಿಶ್ವಾಸಕ್ಕೆ ಶುಕ್ರನೆ ಅಧಿಪತಿ ಆಗುತ್ತಾನೆ. ಇದೇ ರೀತಿ ಕೆನ್ನೆಗೆ ಅಧಿಪತಿಯು ಶುಕ್ರನೇ ಆಗಿದ್ದಾನೆ. ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಇರುವ ಶುಕ್ರನ ಸ್ಥಿತಿ ಗತಿಯು ಕೆನ್ನೆಯ ಸ್ವರೂಪವನ್ನು ತಿಳಿಸುತ್ತದೆ. ಕುಂಡಲಿಯಲ್ಲಿ ಶುಕ್ರನು ಶಕ್ತಿಶಾಲಿಯಾಗಿದ್ದಲ್ಲಿ ಅವರ ಕೆನ್ನೆಯು ಆಕರ್ಷಕವಾಗಿರುತ್ತದೆ. ಯಾವುದೇ ವ್ಯಕ್ತಿಯ ಕೆನ್ನೆಯು ಉಬ್ಬಿದ್ದಲ್ಲಿಅವರ ಜೀವನದಲ್ಲಿ ಸುಖ ಸಂತೋಷಗಳು ತುಂಬಿರುತ್ತವೆ. ಸ್ತ್ರೀಯರಿಗೆ ವಿವಾಹದ ನಂತರ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಣ್ಣ ಪುಟ್ಟ ವ್ಯಾಪಾರದಲ್ಲಿ ತೃಪ್ತಿ ಪಡುತ್ತಾರೆ. ಗೌರವ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇವರಿಗೆ ಸಂಗಾತಿಯ ಜೊತೆಯಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ.

ಕೆನ್ನೆ ಉಬ್ಬಿದಂತೆ ಇರುವ ವ್ಯಕ್ತಿಗಳಿಗೆ ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಕುಟುಂಬದಲ್ಲಿನ ಸಂತಸಕ್ಕೆ ಇವರು ನೇರವಾಗಿ ಕಾರಣರಾಗುತ್ತಾರೆ. ಇವರ ಗಲ್ಲ ಮತ್ತು ಹುಬ್ಬು ಲಕ್ಷಣವಾಗಿದ್ದಲ್ಲಿ ಹೆಚ್ಚಿನ ಶುಭ ಫಲಗಳು ದೊರೆಯುತ್ತವೆ. ಇವರಿಗೆ ಉತ್ತಮ ಆರೋಗ್ಯ ವಿರುತ್ತದೆ. ವಂಶದಲ್ಲಿ ಉತ್ತಮ ಹೆಸರು ಗಳಿಸುತ್ತಾರೆ. ಮುಂದಾಲೋಚನೆಯಿಂದ ಹಣ ಉಳಿಸುತ್ತಾರೆ. ಸ್ವಂತ ಆಸ್ತಿಯ ಬಗ್ಗೆ ಹೆಚ್ಚಿನ ಗಮನ ತೋರುವುದಿಲ್ಲ. ಸಮಾಜದ ನಾಯಕತ್ವದ ಹೊಣೆ ನಿಮದಾಗುತ್ತದೆ. ಮಕ್ಕಳ ಜೀವನವು ಸಂತೋಷದಿಂದ ಕೂಡಿರುತ್ತದೆ.

ಉಬ್ಬಿದ ಕೆನ್ನೆಯ ಮೇಲೆ ಬಿಳಿ ಮಟ್ಟೆಗಳಿದ್ದರೆ ಏನೆಲ್ಲಾ ಲಾಭಗಳಿವೆ?

ಕೆನ್ನೆ ಉಬ್ಬಿದ್ದರೂ ಕೆನ್ನೆಯ ಮೇಲೆ ಬಿಳಿ ಮಚ್ಚೆಗಳು ಇದ್ದಲ್ಲಿ ಉತ್ತಮ ಆದಾಯ ವಿರುತ್ತದೆ. ಆದರೆ ಬೇಡದ ವಿಚಾರಗಳಿಗೆ ಹಣವನ್ನು ಖರ್ಚು ಮಾಡುತ್ತಾರೆ. ಸಾಮಾನ್ಯವಾಗಿ ದಂಪತಿ ನಡುವೆ ಅನಾವಶ್ಯಕ ವಾದ ವಿವಾದಗಳಿರುತ್ತವೆ. ದಂಪತಿಗಳಲ್ಲಿ ದೈಹಿಕ ನಿಶ್ಯಕ್ತಿ ಇರುತ್ತದೆ. ಕುಟುಂಬದ ಹಿರಿಯರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ವಾದ ವಿವಾದಗಳು ಇರುತ್ತವೆ. ಮೂರನೇ ವ್ಯಕ್ತಿಗಳ ಸಂಧಾನದ ಫಲವಾಗಿ ಸುಖ ಸಂತೋಷ ಮರುಕಳಿಸುತ್ತದೆ. ಇವರ ಜೀವನದಲ್ಲಿ ಬದಲಾವಣೆಗಳು ಸಾಮಾನ್ಯವಾಗಿ ಇರುತ್ತದೆ. ಇವರ ನಡೆನುಡಿ ಸರಿ ಇದ್ದರೂ ಬೇರೆಯವರ ಮಾತನ್ನು ಒಪ್ಪಬೇಕಾಗುತ್ತದೆ.

ಪ್ರವಾಸ ಪ್ರಿಯರು. ಮಕ್ಕಳ ಜೊತೆ ಹೊಂದಿಕೊಂಡು ಬಾಳಬೇಕಾಗುತ್ತದೆ. ಸ್ವಂತಂತ್ರವಾಗಿ ಆರಂಭಿಸುವ ವ್ಯಾಪಾರ ವ್ಯವಹಾರದಲ್ಲಿ ಆತಂಕದ ಪರಿಸ್ಥಿತಿ ಎದುರಾಗುತ್ತದೆ. ಕುಟುಂಬದವರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಮಾಡಿದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಉದ್ಯೋಗದ ವಿಚಾರದಲ್ಲಿ ಬೇರೆಯವರನ್ನು ಅನುಸರಿಸಿಕೊಂಡು ಬಾಳಬೇಕಾಗುತ್ತದೆ. ಒಡವೆ ವಸ್ತ್ರಗಳ ಬಗ್ಗೆ ಹೆಚ್ಚಿನ ಒಲವು ತೋರುತ್ತಾರೆ. ವಂಶದ ಆಸ್ತಿಯ ವಿವಾದವು ಬೇರೆಯವರ ಮಧ್ಯಸ್ಥಿಕೆಯಿಂದ ಪರಿಹರಿಯುತ್ತದೆ.

ಕೆನ್ನೆಯು ಸಮತಟ್ಟಾಗಿದ್ದಲ್ಲಿ ಆ ವ್ಯಕ್ತಿಯ ಜೀವನವು ಸರಳವಾಗಿರುತ್ತದೆ. ಇವರಿಗೆ ಉತ್ತಮ ಅನುಕೂಲತೆ ದೊರೆತರು ಅದನ್ನು ಉಳಿಸಿಕೊಳ್ಳಲಾರದೆ ಹೋಗುತ್ತಾರೆ. ಉತ್ತಮ ಆದಾಯ ಇದ್ದರೂ ಉಳಿಸಿಕೊಳ್ಳಲು ವಿಫಲರಾಗುತ್ತಾರೆ. ಕೈಯಲ್ಲಿರುವ ಅವಕಾಶಗಳನ್ನು ಕಳೆದುಕೊಳ್ಳುವ ಮಂದಿ ಇವರಾಗಿರುತ್ತಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಬೇರೆಯವರನ್ನು ಆಶ್ರಯಿಸುತ್ತಾರೆ. ಆದರೆ ಇವರ ಮಕ್ಕಳು ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುತ್ತಾರೆ. ದಾಂಪತ್ಯ ಜೀವನ ಸಾಮಾನ್ಯವಾಗಿರುತ್ತದೆ. ಸ್ವಂತ ಆಸ್ತಿ ಮಾಡುವ ಅಥವಾ ಹಣ ಶೇಖರಣೆ ಮಾಡುವ ವಿಚಾರದಲ್ಲಿ ಹಿಂದುಳಿಯುತ್ತಾರೆ. ಕೇವಲ ಬಾಳ ಸಂಗಾತಿಯ ಸಹಾಯದಿಂದ ಇವರು ಕಷ್ಟದಿಂದ ಪಾರಾಗಬಹುದು.

ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಉಂಟಾದರೂ ಅದನ್ನು ಸ್ವೀಕರಿಸಲು ಸಿದ್ಧರಾಗುವುದಿಲ್ಲ. ಒಂದೇ ರೀತಿಯ ದುಡಿಮೆ ಇವರಿಗೆ ಇಷ್ಟವಾಗುತ್ತದೆ. ಅನಾವಶ್ಯಕವಾಗಿ ಪ್ರವಾಸಗಳಿಗೆ ಹಣವನ್ನು ಖರ್ಚು ಮಾಡುತ್ತಾರೆ. ಐಷಾರಾಮಿ ಜೀವನ ಇವರ ಗುರಿಯಾಗಿರುತ್ತದೆ. ವಂಶದ ಆಸ್ತಿಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಯತ್ನಬೇಕು. ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡದೆ ಸಾಧಾರಣ ಮಟ್ಟದಲ್ಲಿ ಸಾಗುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ ಇರುತ್ತದೆ. ಇವರು ಯಾರನ್ನು ಸುಲಭವಾಗಿ ನಂಬುವುದಿಲ್ಲ. ತಾನಾಗಿಯೇ ದೊರೆಯುವ ಸಹಾಯವನ್ನು ಬಳಸಿಕೊಳ್ಳಲು ಸಫರಾಗುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point