ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್‌ ಸೃಷ್ಟಿಸಿದ ʼನಾನು ನಂದಿನಿʼ; ಒಂದೂವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದ ಈ ಹಾಡು ವೈರಲ್‌ ಆಗಲು ಕಾರಣ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್‌ ಸೃಷ್ಟಿಸಿದ ʼನಾನು ನಂದಿನಿʼ; ಒಂದೂವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದ ಈ ಹಾಡು ವೈರಲ್‌ ಆಗಲು ಕಾರಣ ಇಲ್ಲಿದೆ

ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್‌ ಸೃಷ್ಟಿಸಿದ ʼನಾನು ನಂದಿನಿʼ; ಒಂದೂವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದ ಈ ಹಾಡು ವೈರಲ್‌ ಆಗಲು ಕಾರಣ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಎಲ್ಲಿ ನೋಡಿದ್ರು ಒಂದೇ ಹಾಡು, ʼನಾನು ನಂದಿನಿ, ಬೆಂಗಳೂರಿಗ್‌ ಬಂದೀನಿʼ. ಇದು ಕರ್ನಾಟಕದ ಮನೆ ಮನೆಯ ಹಾಡಾಗಿದೆ. ಮಕ್ಕಳ ಬಾಯಲ್ಲೂ ಇದೇ ಹಾಡು. ಹಾಗಾದ್ರೆ ಈ ಹಾಡು ಇಷ್ಟು ಫೇಮಸ್‌ ಆಗಲು ಕಾರಣವೇನು? ಇಲ್ಲಿದೆ ಉತ್ತರ

ನಾನು ನಂದಿನಿ ಸಾಂಗ್‌ ವೈರಲ್‌ ಆಗಲು ಕಾರಣವಿದು
ನಾನು ನಂದಿನಿ ಸಾಂಗ್‌ ವೈರಲ್‌ ಆಗಲು ಕಾರಣವಿದು

ʼನಾನು ನಂದಿನಿ, ಬೆಂಗಳೂರಿಗ್‌ ಬಂದೀನಿʼ ಬಹುಶಃ ಈ ಹಾಡು ಕೇಳದ ಕಿವಿಗಳಿಲ್ಲ ಅಂತಲೇ ಹೇಳಬಹುದು. ಈ ಹಾಡು ಈಗ ಎಷ್ಟು ಫೇಮಸ್‌ ಆಗಿದೆ ಎಂದರೆ, ಯಾವ ಮಕ್ಕಳ ಬಾಯಲ್ಲೂ ಕೇಳಿದ್ರೂ ಅದೇ. ಯಾವ ರೀಲ್ಸ್‌ ನೋಡಿದ್ರೂ ಅದೇ ಹಾಡು.

ದಿನೇ ದಿನೇ ನಂದಿನಿ ಹಾಡಿನ ಕ್ರೇಜ್‌ ಹೆಚ್ಚಾಗುತ್ತಲೇ ಇದೆ. ಆ ಮ್ಯೂಸಿಕ್‌ಗೆ ಸಿಂಕ್‌ ಆಗುವ ರೀತಿ ಹೊಸ ಹೊಸ ಲಿರಿಕ್ಸ್‌ ಸೃಷ್ಟಿಯಾಗುತ್ತಲೇ ಇವೆ.

ಹೌದು, ಇನ್‌ಸ್ಟಾಗ್ರಾಂ, ಯೂಟ್ಯೂಬ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಕಿಪಿಡೀಯಾ ಅನ್ನುವ ಪೇಜ್‌ ಅನ್ನು ನೋಡಿಲ್ಲದೇ ಇರಲು ಸಾಧ್ಯವಿಲ್ಲ. ಅಷ್ಟು ಫೇಮಸ್‌ ಆಗಿರುವ ಇವರು ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಪೇಜ್‌ನಲ್ಲಿ ಕಂಟೆಂಟ್‌ ಬಹಳ ಭಿನ್ನವಾಗಿರುತ್ತದೆ. ರಾಜಕೀಯ, ಫ್ರೆಂಡ್‌ಶಿಪ್‌, ಟ್ರೆಂಡಿಂಗ್‌, ಸೊಸೈಟಿ, ಕ್ರೈಂ ಸೇರಿದಂತೆ ಎಲ್ಲಾ ಬಗೆಯ ಕಂಟೆಂಟ್‌ ಇರುತ್ತದೆ. ಈಗ ವಿಕಿಪೀಡಿಯ ತಂಡದ ನಾನು ನಂದಿನಿ ಹಾಡು ಪ್ರತಿಯೊಬ್ಬರ ಬಾಯಲ್ಲೂ ಗುನುಗುತ್ತಿದೆ.

ವಿಕಿಪೀಡಿಯಾದ ವಿಕಾಸ್‌ ಹಾಗೂ ಅಮಿತ್‌ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಪರಿಚಿತ ಮುಖ. ನಾನು ನಂದಿನಿ ಹಾಡು ಇದೀಗ 16 ಮಿಲಿಯನ್‌ ವೀಕ್ಷಣೆಯನ್ನು ಪಡೆದಿದೆ ಎಂದು ಸ್ವತಃ ತಂಡವೇ ಪ್ರಕಟಿಸಿದೆ. ಈ ಹಾಡು ಸೋಷಿಯಲ್‌ ಮೀಡಿಯಾಗೆ ಬಂದ ದಿನವೇ 5 ಮಿಲಿಯನ್‌ ವೀಕ್ಷಣೆ ಪಡೆದಿತ್ತು.

ಫೇಮಸ್‌ ಆಗಲು ಕಾರಣ

ʼನಾನು ನಂದಿನಿʼ ಹಾಡು ಬೆಂಗಳೂರಿಗರಿಗೆ ತುಂಬಾ ಕನೆಕ್ಟ್‌ ಆಗಿದೆ. ಹೀಗಾಗಿಯೇ ಈ ಹಾಡು ತುಂಬಾನೇ ವೈರಲ್‌ ಆಗ್ತಿದೆ. 2000 ಇಸವಿ ನಂತರ ಬೆಂಗಳೂರು ಬೃಹತ್‌ ಆಗಿ ಬೆಳೆಯ ತೊಡಗಿತು. ಐಟಿ ಕಂಪನಿಗಳು ತಲೆ ಎತ್ತಲು ಶುರು ಮಾಡಿದವು. ಆಗ ಉದ್ಯೋಗ ಅರಸಿ ರಾಜ್ಯ, ದೇಶದ ಮೂಲೆ ಮೂಲೆಗಳಿಂದ ಪದವಿ ಪಡೆದ ಯುವಜನತೆ ಬೆಂಗಳೂರಿಗೆ ಬಂದರು. ಆ ದಿನಗಳಲ್ಲಿ ಪಿಜಿಗಳು ಸಹ ಹೆಚ್ಚಾಗಿ ಯುವತಿಯರಿಗೆ ಆಸರೆಯಾದವು. ಅಲ್ಲಿನ ಊಟ, ಸ್ಥಿತಿಗತಿ ಪಿಜಿಯಲ್ಲಿದ್ದವರಿಗೆ ಚೆನ್ನಾಗಿ ಗೊತ್ತಿದೆ. ಇನ್ನು, ಹೆಚ್ಚಾಗಿ ಕನ್ನಡ ಮೀಡಿಯಂನಲ್ಲಿ ಓದಿ ಬಂದವರೇ ಹೆಚ್ಚಿದ್ದರು. ಇಂಗ್ಲೀಷ್‌ನಲ್ಲಿ ಅಷ್ಟೇನೂ ಪರ್ಫೆಕ್ಟ್‌ ಅಲ್ಲದಿದ್ದರೂ ಬಟ್ಲರ್‌ ಇಂಗ್ಲೀಷ್‌ನಲ್ಲಿ ಮ್ಯಾನೇಜ್‌ ಮಾಡುತ್ತಿದ್ದರು ಆಗಿನ ಯುವಜನತೆ. ಐಟಿಯಲ್ಲಿ ಕೆಲಸ ಮಾಡೋಕೆ ಇಂಗ್ಲೀಷ್‌ ಬೇಕೆ ಬೇಕು ಎಂಬ ಅಂದಿನ ಪರಿಸ್ಥಿತಿಯನ್ನು ಈ ಹಾಡು ಕಟ್ಟಿಕೊಟ್ಟಿದೆ. ಹೀಗಾಗಿ, ಸಾಕಷ್ಟು ಜನರಿಗೆ ಈ ಹಾಡು ಕನೆಕ್ಟ್‌ ಆಗಿದೆ ಎಂದರೆ ತಪ್ಪಾಗಲಾರದು.

ಮತ್ತೊಂದು ವಿಷಯ ಅಂದರೆ ಇದರ ಮೂಲ ಇಂಗ್ಲೀಷ್‌ ಹಾಡು. ಐ ಆಮ್‌ ಎ ಬಾರ್ಬಿ ಗರ್ಲ್…..‌ ಇದು ಕೂಡ 90ರ ದಶಕದಲ್ಲಿ ಹಿಟ್‌ ಆಗಿದ್ದ ಹಾಡು. ಶಾಲೆಗಳಲ್ಲಿ ಮನರಂಜನೆ ಕಾರ್ಯಕ್ರಮ ಎಂದಾಗ ಈ ಹಾಡಿಗೆ ಮಕ್ಕಳು ಡ್ಯಾನ್ಸ್‌ ಮಾಡಿದ್ದೇ ಮಾಡಿದ್ದು. ಆಗಿನಿಂದಲೂ ಈಗಿನ ತನಕ ಈ ಹಾಡು ಫೇಮಸ್‌ ಅಂತಾನೇ ಹೇಳಬಹುದು.

ಇದೀಗ ಈ ಹಾಡಿನ ರೀಲ್ಸ್‌ ಹೆಚ್ಚಾಗುತ್ತಿದೆ. ಅಲ್ಲದೇ ಈ ಹಾಡನ್ನು ರಿಕ್ರಿಯೇಟ್‌ ಮಾಡುವ ಮೂವರು ಕ್ರಿಯೇಟರ್ಸ್‌ಗೆ ಸರ್‌ಪ್ರೈಸ್‌ ಅನ್ನು ತಂಡದಿಂದಲೇ ಘೋಷಿಸಲಾಗಿತ್ತು. ನಾನು ನಂದಿನಿ ಹ್ಯಾಷ್‌ಟ್ಯಾಗ್‌ ಇದೀಗ ರೀಲ್ಸ್‌, ಮೀಮ್ಸ್‌ನಿಂದ ತುಂಬಿಹೋಗಿದೆ. ಒಟ್ಟಿನಲ್ಲಿ ನಾನು ನಂದಿನಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜೊತೆಗೆ ಟ್ರೆಂಡ್‌ ಕೂಡ ಆಗ್ತಿದೆ.

ಹಾಗೆಯೇ, ಲಿರಿಕ್ಸ್‌ ಬಲಾಯಿಸಿಕೊಂಡು ಹಾಡನ್ನು ಮತ್ತಷ್ಟು ವಿಭಿನ್ನವಾಗಿಸುತ್ತಿದಾರೆ ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್ಸ್. ಗಿಚ್ಚಿಗಿಲಿ ಶೋನಲ್ಲಿ ಫೇಮಸ್‌ ಆಗಿದ್ದ ಮಹಿತ ತನ್ನದೇ ಆದ ಶೈಲಿಯಿಂದ ಈ ಹಾಡನ್ನು ರಿಕ್ರಿಯೇಟ್‌ ಮಾಡಿದ್ದಾಳೆ. ಅದು ಕೂಡ ಫೇಮಸ್‌ ಆಗಿ ಮಕ್ಕಳನ್ನು ಸೆಳೆಯುತ್ತಿದೆ.

Whats_app_banner