Bhut Jolokia chilli: ವಿಶ್ವದ ಅತ್ಯಂತ ಖಾರದ ಮೆಣಸು ಯಾವುದು ಗೊತ್ತಾ? ಅದು ಭಾರತದ್ದೇ ಅನ್ನೋದು ವಿಶೇಷ
Bhut Jolokia chilli: ಭಾರತದ ಈಶಾನ್ಯ ರಾಜ್ಯಗಳಲ್ಲಿ ಬೆಳೆಯುವ ʼಭೂತ್ ಜೊಲೊಕಿಯಾʼ ವಿಶ್ವದ ಅತ್ಯಂತ ಖಾರದ ಮೆಣಸು. ಇದನ್ನು ʼಫೋಸ್ಟ್ ಪೆಪ್ಪರ್ʼ ಎಂದೂ ಕರೆಯುತ್ತಾರೆ. ಈ ಮೆಣಸು ಗಿನ್ನಿಸ್ ಪುಟದಲ್ಲೂ ತನ್ನ ಹೆಸರು ದಾಖಲಿಸಿಕೊಂಡಿದೆ.
ವಿಶ್ವದ ಅತ್ಯಂತ ಖಾರದ ಮೆಣಸು ಯಾವುದು ನಿಮಗೆ ಗೊತ್ತಾ? ಈ ಮೆಣಸನ್ನು ಭಾರತದಲ್ಲಿ ಬೆಳೆಯುತ್ತಾರೆ ಎಂದರೆ ನೀವು ನಂಬಲೇಬೇಕು. ಭಾರತದ ಈಶಾನ್ಯ ರಾಜ್ಯಗಳಲ್ಲಿ ಬೆಳೆಯುವ ʼಭೂತ್ ಜೊಲೊಕಿಯಾʼ ವಿಶ್ವದ ಅತ್ಯಂತ ಖಾರದ ಮೆಣಸು. ಇದನ್ನು ʼಫೋಸ್ಟ್ ಪೆಪ್ಪರ್ʼ ಎಂದೂ ಕರೆಯುತ್ತಾರೆ. ಈ ಮೆಣಸು ಗಿನ್ನಿಸ್ ಪುಟದಲ್ಲೂ ತನ್ನ ಹೆಸರು ದಾಖಲಿಸಿಕೊಂಡಿದೆ.
ವಿಶ್ವದಲ್ಲಿ ಬೆಳೆಯಲಾಗುವ ಎಲ್ಲಾ ಮೆಣಸುಗಳಿಗಿಂತಲೂ ಹೆಚ್ಚು ಖಾರ ಇರುವ ಭೂತ್ ಜೊಲೊಕಿಯಾವನ್ನು ತಿಂದರೆ ಉಸಿರಾಡಲೂ ಕಷ್ಟವಾಗಬಹುದಂತೆ. ಅಷ್ಟು ಖಾರ ಹೊಂದಿರುತ್ತದೆ ಈ ಮೆಣಸು. 2007ರಲ್ಲಿ ಇದನ್ನು ಗಿನ್ನೆಸ್ ಪುಸ್ತಕದಲ್ಲಿ ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ ಎಂದು ಪ್ರಮಾಣೀಕರಿಸಲಾಗಿದೆ.
ಇದನ್ನು ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಬೆಳೆಯಲಾಗುತ್ತದೆ. ಒಣಗಿದ ಅಥವಾ ಹುದುಗಿಸಿದ ಮೀನು ಮತ್ತು ಹಂದಿಮಾಂಸದೊಂದಿಗೆ ಇದನ್ನು ಹೆಚ್ಚು ಜನಪ್ರಿಯವಾಗಿ ಬಳಸಲಾಗುತ್ತದೆ.
ಕಾಡಾನೆ ಬೇಲಿಗೂ ಬಳಕೆ
ಈ ಮೆಣಸಿನ ಘಾಟು ಎಷ್ಟೆಂದರೆ ಹಳ್ಳಿಗಳಲ್ಲಿ ಕಾಡಾನೆಗಳ ಕಾಟವನ್ನು ತಪ್ಪಿಸಲು ಬೇಲಿಗಳಿಗೆ ಈ ಮೆಣಸನ್ನು ಕಟ್ಟಲಾಗುತ್ತದೆ. ಭೂತ್ ಜೊಲೊಕಿಯಾವನ್ನು ಭಾರತೀಯ ಸೇನೆಯು ಹೊಗೆ ಗ್ರೆನೇಡ್ ಹಾಗೂ ಆತ್ಮರಕ್ಷಣೆಗಾಗಿ ಬಳಸುವ ಪೆಪ್ಪರ್ ಸ್ಪ್ರೇಗಳಲ್ಲೂ ಬಳಸುತ್ತದೆ.
ಇದು ಸ್ಕೊವಿಲ್ಲೆ ಮಾಪಕದಲ್ಲಿ 1 ಮಿಲಿಯನ್ ಯೂನಿಟ್‌ಗಳನ್ನು ತಲುಪಿದ ಮೊದಲ ಮೆಣಸು. ಸ್ಕೊವಿಲ್ಲೆಯು ಮೆಣಸಿನ ಘಾಟು ಅಥವಾ ಖಾರವನ್ನು ಅಳೆಯುವ ಮಾಪನವಾಗಿದೆ. ಆದರೆ ಕೆರೊಲಿನಾ ರೀಪರ್ ಹಾಗೂ ಟ್ರಿನಿಟಾಡ್ ಮೊರುಗಾ ಸ್ಕಾರ್ಪಿಯನ್ ಖಾರದಲ್ಲಿ ಈ ಮೆಣಸನ್ನೂ ಮೀರಿದ್ದವು ಎಂದು ಹೇಳಲಾಗುತ್ತದೆ.
ಭೂತ್ ಜೊಕೊಲಿಯಾ ಅಂದರೆ ಭೂತಾನ್ ಮೆಣಸು. ಇದನ್ನು ಭೂತ ಮೆಣಸು (ಘೋಸ್ಟ್ ಪೆಪ್ಪರ್) ಹಾಗೂ ನಾಗ ಮೆಣಸಿನಕಾಯಿ ಅಥವಾ ರಾಜ ಮಿರ್ಚಿ ಎಂದೂ ಕರೆಯಲಾಗುತ್ತದೆ.
ಮಾಂಸಹಾರ ಖಾದ್ಯಕ್ಕೆ ಹೆಚ್ಚು ಬಳಕೆ
ಇದರ ವಿಶಿಷ್ಟವಾದ ಪರಿಮಳ ಹಾಗೂ ಖಾರದ ಕಾರಣಗಳಿಂದ ಶತಮಾನಗಳಿಂದಲೂ ಮಾಂಸ ಭಕ್ಷ್ಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಈಶಾನ್ಯ ರಾಜ್ಯಗಳಲ್ಲಿ ದೇಶದ ಉಳಿದ ಭಾಗಗಳಿಗಿಂತ ಮಸಾಲೆಗಳು ಕಡಿಮೆ ಜನಪ್ರಿಯತೆಯನ್ನು ಹೊಂದಿವೆ. ಆ ಕಾರಣಕ್ಕೆ ಕೋಳಿ ಅಥವಾ ಹಂದಿ ಮಾಂಸದ ಮಸಾಲೆಗೆ ಹೆಚ್ಚು ಕಿಕ್ ನೀಡುವ ಉದ್ದೇಶದಿಂದ ಈ ಮೆಣಸನ್ನು ಬಳಸಲಾಗುತ್ತದೆ. ಕೋಳಿಮಾಂಸವನ್ನು ಬಿದಿರು ಹಾಗೂ ಘೋಸ್ಟ್ ಪೆಪ್ಪರ್‌ನೊಂದಿಗೆ ಬೇಯಿಸುವುದು ವಿಶೇಷ. ಆಕ್ಸೋನ್ (ಹುದುಗಿಸಿಟ್ಟ ಸೋಯಾಬೀನ್), ನಾಗಾ ಬೆಳ್ಳುಳ್ಳಿ ಹಾಗೂ ಒಣಮೀನುಗಳಿಂದ ತಯಾರಿಸುವ ಚಟ್ನಿ ತಯಾರಿಕೆಯಲ್ಲಿ ಈ ಮೆಣಸವನ್ನು ಬಳಸಲಾಗುತ್ತದೆ.
ಗುಣಲಕ್ಷಣಗಳು
ಈ ಮೆಣಸು 2.4 ರಿಂದ 3.3 ಇಂಚು ಉದ್ದವಿರುತ್ತದೆ. 1.0 ರಿಂದ 1.2 ಇಂಚು ಅಗಲವಿರುತ್ತದೆ. ಕೆಂಪು, ಹಳದಿ, ಕಿತ್ತಳೆ ಹಾಗೂ ಚಾಕೊಲೇಟ್ ಬಣ್ಣಗಳನ್ನು ಹೊಂದಿರುತ್ತವೆ. ಈ ಘೋಸ್ಟ್ ಪೆಪ್ಪರ್ ಅತ್ಯಂತ ವೈವಿಧ್ಯಮಯ ಸಸ್ಯವಾಗಿದೆ. ಇವು ಬೇರೆ ಮೆಣಸಿಗಿಂತ ಭಿನ್ನವಾಗಿದ್ದು, ವಿಶಿಷ್ಟ ಆಕಾರ ಹಾಗೂ ತೆಳುವಾದ ಮೇಲ್ಮೈ ಹೊಂದಿರುತ್ತವೆ. ಈ ಮೆಣಸಿನ ಸಸ್ಯಗಳು ಹೆಚ್ಚು ಎತ್ತರವಾಗಿದ್ದು, ಕೊಂಬೆಗಳು ದುರ್ಬಲವಾಗಿರುತ್ತದೆ. ಈ ಸಸ್ಯವು 32-38 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೊಳಕೆಯೊಡೆಯಲು ಇದು ಸುಮಾರು 7-12 ದಿನಗಳನ್ನು ತೆಗೆದುಕೊಳ್ಳುತ್ತದೆ.
ಮೆಣಸಿಗೆ ಸಂಬಂಧಿಸಿದ ಈ ಸುದ್ದಿಯನ್ನೂ ಓದಿ
Pushpa Chilli vs Byadagi Chilli: ಬ್ಯಾಡಗಿಯಲ್ಲಿ ಗುಜರಾತ್‌ನ ಪುಷ್ಪ ಮೆಣಸಿನಕಾಯಿ ಘಾಟು, ಕರ್ನಾಟಕದ ತಳಿಗಿದು ಸವಾಲು
ಕರ್ನಾಟಕದ ದೇಸಿ ವಹಿವಾಟವನ್ನು ಗುಜರಾತ್ ಮೂಲಕ ಅಮೂಲ್ ಅಲುಗಾಡಿಸಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ದೊಡ್ಡ ಸದ್ದು ಮಾಡಿತ್ತು. ಈಗ ಮೆಣಸಿನಕಾಯಿ ಸರದಿ. ಮುಂದಿನ ದಿನಗಳಲ್ಲಿ ಇದು ದೊಡ್ಡಮಟ್ಟದ ಚರ್ಚೆ ಹುಟ್ಟುಹಾಕಬಹುದು ಎಂದು ಹೇಳಲಾಗುತ್ತಿದೆ.
ವಿಭಾಗ