ಕಾಶ್ಮೀರದಲ್ಲಿ ಬಿಸ್ಕತ್ಗಳ ಸಹಾಯದಿಂದ ಎಲ್ಇಟಿ ಕಮಾಂಡರ್ ಉಸ್ಮಾನ್ ಹೊಡೆದುರುಳಿಸಿದ ಭದ್ರತಾ ಪಡೆ, ಹೇಗೆ?
ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೈಬಾದ ಪಾಕಿಸ್ತಾನಿ ಭಯೋತ್ಪಾದಕ ಉಸ್ಮಾನ್ ನನ್ನು ಭಾರತದ ಭದ್ರತಾ ಪಡೆ ಹೊಡೆದುರುಳಿಸಿದೆ.
ನವದೆಹಲಿ: ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹೈ-ಪ್ರೊಫೈಲ್ ಲಷ್ಕರ್-ಎ-ತೈಬಾ (LET) ಕಮಾಂಡರ್ ಉಸ್ಮಾನ್ನನ್ನು (Usman) ಭದ್ರತಾ ಪಡೆ ಹೊಡೆದುರುಳಿಸಿದೆ. ಅಚ್ಚರಿ ಅಂದರೆ ಭಯೋತ್ಪಾದಕ ಹತ್ಯೆಗೆ ನೆರವಾಗಿದ್ದು ಬಿಸ್ಕತ್ತು. ಗುಪ್ತಚರ ದಳ(Intelligence Bureau) ನೀಡಿದ್ದ ಖಚಿತ ಮಾಹಿತಿ ಮೇರಗೆ ದಾಳಿ ನಡೆಸಿದ್ದ ಭದ್ರತಾ ಪಡೆ, ಯಶಸ್ವಿ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆ ನಡೆಸಿದ ವೇಳೆ ಬೀದಿ ನಾಯಿಗಳು (Stray Dogs) ಬೊಗಳಲು ಪ್ರಾರಂಭಿಸಿವು. ಹೀಗಾಗಿ ನಾಯಿಗಳು ಬೊಗಳುವುದನ್ನು ನಿಯಂತ್ರಿಸಲು ಅಧಿಕಾರಿಗಳು ಬಿಸ್ಕತ್ತುಗಳನ್ನು (biscuits) ಬಳಸಿದರು.
ಖನ್ಯಾರ್ನ ಜನನಿಬಿಡ ವಸತಿ ಪ್ರದೇಶದಲ್ಲಿ ಉಸ್ಮಾನ್ ಇರುವ ಬಗ್ಗೆ ಭದ್ರತಾ ಪಡೆಗಳಿಗೆ ಗುಪ್ತಚರ ಮಾಹಿತಿ ಸಿಕ್ಕಿತು. 9 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಬೀದಿ ನಾಯಿಗಳು ಅಡ್ಡಿಪಡಿಸಿದವು. ಇದು ಭದ್ರತಾ ಪಡೆಗೆ ಸಾಕಷ್ಟು ಸಂಕಷ್ಟ ತಂದೊಡ್ಡಿತು. ನಾಯಿಗಳು ಬೊಗಳುತ್ತಿದ್ದ ಕಾರಣ ಭಯೋತ್ಪಾದಕ ಎಚ್ಚರಗೊಳ್ಳುತ್ತಾನೆ ಎನ್ನುವ ಆತಂಕ ಶುರುವಾಗಿತ್ತು. ಮಿಷನ್ ಫೇಲ್ ಆಗಬಹುದು ಎಂಬ ಭೀತಿ ಶುರುವಾಗಿತ್ತು. ಆದರೆ ಈ ಹಂತದಲ್ಲಿ ಬೀದಿ ನಾಯಿಗಳನ್ನು ಸುಮ್ಮನಿರಿಸಲು ಬಿಸ್ಕತ್ ಹಾಕಿದರು. ಅದು ಕೂಡ ಬೊಗಳುವಿಕೆ ಹೆಚ್ಚಾಗಿದ್ದು ಇನ್ನೇನು ಹೊಡೆಯಬೇಕು ಎನ್ನುವಾಗ.
ತೀವ್ರ ಗುಂಡಿನ ಚಕಮಕಿ
ಇನ್ನೇನು ಉಸ್ಮಾನ್ನನ್ನು ಹೊಡೆಯಬೇಕು ಎನ್ನುವಾಗ ನಾಯಿಗಳು ಹೆಚ್ಚಾಗಿ ಬೊಗಳಲು ಆರಂಭಿಸಿದವು. ನಾಯಿಗಳು ಬೊಗಳಲು ಕಾರಣವೂ ಇದೆ. ಏಕೆಂದರೆ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದ್ದು ಮುಂಜಾನೆ ಪ್ರಾರ್ಥನೆ ಸಲ್ಲಿಸುವುದಕ್ಕೂ ಮುನ್ನ. ಭದ್ರತಾ ಪಡೆ 30 ಮನೆಗಳ ಸುತ್ತಲೂ ಸುತ್ತುವರೆದಿತ್ತು. ಹೀಗಾಗಿ ಭದ್ರತಾ ಪಡೆಯು ಬಿಸ್ಕತ್ಗಳನ್ನು ಹಾಕಿದ ಕಾರಣ ನಾಯಿಗಳು ಬೊಗಳುವುದನ್ನು ನಿಲ್ಲಿಸಿದವು. ಎಕೆ -47, ಪಿಸ್ತೂಲ್, ಅನೇಕ ಗ್ರೆನೇಡ್ಗಳನ್ನು ಹೊಂದಿದ್ದ ಉಸ್ಮಾನ್, ಭದ್ರತಾ ಪಡೆ ಜತೆ ತೀವ್ರ ಗುಂಡಿನ ಚಕಮಕಿ ನಡೆಸಿದರು. ಇದರಿಂದ ಪರಿಸ್ಥಿತಿ ತೀವ್ರ ಉಲ್ಬಣಗೊಂಡಿತು.
ಗ್ರೆನೇಡ್ಗಳು ಸ್ಫೋಟ
ದಾಳಿಯ ಸಮಯದಲ್ಲಿ ಹಲವಾರು ಗ್ರೆನೇಡ್ಗಳು ಸ್ಫೋಟಗೊಂಡವು. ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿತು. ಬೆಂಕಿಯು ಪಕ್ಕದ ಕಟ್ಟಡಗಳಿಗೆ ಹರಡದಂತೆ ಭದ್ರತಾ ಸಿಬ್ಬಂದಿ ನಿಯಂತ್ರಿಸಿದರು. ಹಲವು ಗಂಟೆಗಳ ತೀವ್ರ ಗುಂಡಿನ ದಾಳಿಯ ನಂತರ, ಉಸ್ಮಾನ್ ಅವರನ್ನು ತಟಸ್ಥಗೊಳಿಸಲಾಯಿತು. ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಈ ದಾಳಿ ವೇಳೆ ಸ್ಥಳೀಯ ಪೊಲೀಸರು, ಸಿಆರ್ಪಿಎಫ್ ನೆರವು ನೀಡಿತು.
ಕಣಿವೆಯ ಭೂಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿದ್ದ ಉಸ್ಮಾನ್, 2000ರ ದಶಕದ ಆರಂಭದಲ್ಲಿ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿದ್ದರು. ಹಲವು ಭಯೋತ್ಪಾದಕ ದಾಳಿಗಳನ್ನು ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಈತ 2016-17ರಲ್ಲಿ ಶ್ರೀನಗರಕ್ಕೆ ನುಸುಳಿದ್ದ. ಕಳೆದ ವರ್ಷ ಪೊಲೀಸ್ ಇನ್ಸ್ಪೆಕ್ಟರ್ ಮಸ್ರೂರ್ ವಾನಿ ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಭಾಗಿಯಾಗಿದ್ದರು.