Giraffe: ದಿನದಲ್ಲಿ ಬರೀ 10 ನಿಮಿಷ ನಿದ್ದೆ ಮಾಡುವ, ನಿರಂತರ ತಿನ್ನುವ ಜಿರಾಫೆ ಬಗ್ಗೆ ನಿಮಗೆಷ್ಟು ಗೊತ್ತು;ಆಸಕ್ತಿದಾಯಕ 10 ಅಂಶ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  Giraffe: ದಿನದಲ್ಲಿ ಬರೀ 10 ನಿಮಿಷ ನಿದ್ದೆ ಮಾಡುವ, ನಿರಂತರ ತಿನ್ನುವ ಜಿರಾಫೆ ಬಗ್ಗೆ ನಿಮಗೆಷ್ಟು ಗೊತ್ತು;ಆಸಕ್ತಿದಾಯಕ 10 ಅಂಶ ನೋಡಿ

Giraffe: ದಿನದಲ್ಲಿ ಬರೀ 10 ನಿಮಿಷ ನಿದ್ದೆ ಮಾಡುವ, ನಿರಂತರ ತಿನ್ನುವ ಜಿರಾಫೆ ಬಗ್ಗೆ ನಿಮಗೆಷ್ಟು ಗೊತ್ತು;ಆಸಕ್ತಿದಾಯಕ 10 ಅಂಶ ನೋಡಿ

ಜಿರಾಫೆ(Giraffe) ನೋಡುವುದೇ ಚಂದ. ಉದ್ದ ಕತ್ತಿನ ಅತೀ ಎತ್ತರ ಪ್ರಾಣಿಗಳ ಪಟ್ಟಿಯಲ್ಲಿ ಜಿರಾಫೆಗೆ ಮೊದಲ ಸ್ಥಾನ. ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ನೆಲೆ ಕಂಡುಕೊಂಡಿರುವ ಜಿರಾಫೆಗಳು ಕರ್ನಾಟಕದ ಮೃಗಾಲಯಗಳಲ್ಲೂ ಉಂಟು. ಜಿರಾಫೆ ಕುರಿತ ಆಸಕ್ತಿದಾಯಕ ಮಾಹಿತಿ ಇಲ್ಲಿದೆಮಾಹಿತಿ: ಪರಿಸರ ಪರಿವಾರ

ಜಿರಾಫೆ ಕುರಿತು ಆಸಕ್ತಿದಾಯಕ ಹಲವು ಮಾಹಿತಿಗಳಿವೆ. ಕೆಲವೇ ನಿಮಿಷ ನಿದ್ರೆ ಮಾಡುವ ಜಿರಾಫೆಗಳು ಎತ್ತರದ ಪ್ರಾಣಿಗಳು.
ಜಿರಾಫೆ ಕುರಿತು ಆಸಕ್ತಿದಾಯಕ ಹಲವು ಮಾಹಿತಿಗಳಿವೆ. ಕೆಲವೇ ನಿಮಿಷ ನಿದ್ರೆ ಮಾಡುವ ಜಿರಾಫೆಗಳು ಎತ್ತರದ ಪ್ರಾಣಿಗಳು.

 

  1. ಜಿರಾಫೆ (Giraffe ) ಎನ್ನುವ ಹೆಸರಿನ ಮೂಲ ಆಫ್ರಿಕನ್‌ ದೇಶವಾದ ಸೋಮಾಲಿಯಾದ ಭಾಷೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ನಂತರದ ದಿನಗಳಲ್ಲಿ ಅರೆಬಿಕ್‌ ಭಾಷೆಯಲ್ಲಿ ಜಿರಾಫ ಎನ್ನುವ ಹೆಸರು ಬಳಕೆಗೆ ಬಂತು. ನಂತರದ ದಿನಗಳಲ್ಲಿ ಇಟಾಲಿಯನ್‌, ಸ್ಪ್ಯಾನಿಷ್‌, ಪೋರ್ಚಗೀಸ್‌ ಭಾಷೆಯಲ್ಲಿ ಜಿರಾಫ ಮತ್ತು ಫ್ರೆಂಚ್ ಭಾಷೆಯಲ್ಲಿ ಜಿರಾಫೆ ಎಂದು ಬಳಸಲಾಗಿದೆ.
  2. ಈಗ ಇಂಗ್ಲೀಷ್‌ ಭಾಷೆಯಲ್ಲಿ ಬಳಸಲಾಗುತ್ತಿರುವ ಜಿರಾಫ ಹೆಸರನ್ನು ಫ್ರೆಂಚ್‌ ಭಾಷೆಯಿಂದ ಪಡೆಯಲಾಗಿದೆ. ಹಾಗಾದರೆ, ಎಂದು ಇಂಗ್ಲೀಷ್‌ನಲ್ಲಿ ಕರೆಯುವ ಮೊದಲು ಏನು ಹೆಸರು ಬಳಸಲಾಗುತ್ತಿತ್ತು ಎಂದು ನೀವು ಕೇಳಬಹುದು. ನೋಡಲು ಒಂಟೆಯಂತೆ ಇದೆ, ಚಿರತೆಯಂತೆ ಮೈ ಮೇಲೆ ಚುಕ್ಕೆಗಳಿವೆ ಎನ್ನುವ ಕಾರಣದಿಂದ ಇಂಗ್ಲೀಷ್‌ನಲ್ಲಿ ಕೇಮ್‌ ಲೊಪರ್ಡ್‌( Camelopard) ಎಂದು ಕರೆಯುತ್ತಿದ್ದರು.ಈಗ ಜಗತ್ತಿನಲ್ಲಿ ಅತ್ಯಂತ ಎತ್ತರದ ಸಸ್ತನಿಯಂದು ಜಿರಾಫೆ ಯನ್ನು ಗುರುತಿಸಲಾಗಿದೆ. ಅದರ ಕಾಲುಗಳು ಸುಮಾರು ಆರು ಅಡಿಗಳಷ್ಟಿವೆ.

    ಇದನ್ನೂ ಓದಿರಿ: Forest News: ಭಾರತದ ಅರಣ್ಯದಲ್ಲಿ 12 ವರ್ಷದ ನಂತರ ವಿಶಿಷ್ಟ ಬಗೆಯ ಕಾಡು ಬೆಕ್ಕು ಪತ್ತೆ, ಏನಿದರ ವಿಶೇಷ
  3. 24 ಗಂಟೆಗಳ ಅವಧಿಯಲ್ಲಿ ಐದರಿಂದ ಮೂವತ್ತು ನಿಮಿಷಗಳು ಮಾತ್ರ ಜಿರಾಫೆ ನಿದ್ರಿಸುತ್ತದೆ. ಒಂದು ಸಲ, ಕೇವಲ ಒಂದು ಅಥವಾ ಎರಡು ನಿಮಿಷಗಳ ಕಾಲ ಮಾತ್ರ ಜಿರಾಫೆಗಳು ನಿದ್ದೆ ಮಾಡುತ್ತದೆ.
  4. ಜಿರಾಫೆ ತನಗೆ ಬೇಕಾದ ನೀರಿನ ಹೆಚ್ಚಿನ ಭಾಗವನ್ನು ತಾನು ತಿನ್ನುವ ಗಿಡ, ಸೊಪ್ಪುಗಳಿಂದ ಪಡೆಯುತ್ತದೆ. ಹೀಗಾಗಿ ಕೆಲವು ದಿನಗಳಗೊಮ್ಮೆ ಇದು ನೀರು ಕುಡಿಯುತ್ತದೆ.
  5. ಜಿರಾಫೆ ಮರಿ, ಹುಟ್ಟಿದ ಒಂದು ಗಂಟೆಯ ಅವಧಿಯಲ್ಲಿ ಎದ್ದು ನಿಂತು, ನಡೆಯಲು ಆರಂಭಿಸುತ್ತದೆ. ನಂತರ ಒಂದು ವಾರದಲ್ಲಿ ಅದು ತಾಯಿಯಂತೆ ಸೊಪ್ಪು, ಗಿಡಗಳನ್ನು ತಿನ್ನಲು ಪ್ರಯತ್ನಿಸುತ್ತದೆ.

    ಇದನ್ನೂ ಓದಿರಿ: ಸಫಾರಿಗೆ ಹೋದವರಿಗೆ ಎದುರಾದ ಭಾರಿ ಗಾತ್ರದ ಗಜರಾಜ, ಅನಿರೀಕ್ಷಿತ ಆಘಾತದಲ್ಲಿ ಎದೆಗುಂಡಿಗೆ ಕಿತ್ಕೊಂಡು ಬಂದ ಹಾಗಾಗುತ್ತೆ, ಈ ವಿಡಿಯೋ ನೋಡಿ
  6. ಸಿಂಹ, ಚಿರತೆ, ಹೈನಾ, ಕಾಡು ನಾಯಿಗಳಿಂದ ತನ್ನ ಮರಿಯನ್ನು ರಕ್ಷಿಸಿಕೊಳ್ಳು ತಾಯಿ ಜಿರಾಫೆ ಬಹಳ ಹೋರಾಡುತ್ತದೆ. ಆದರೆ ಹುಟ್ಟಿದ ಮರಿಗಳಲ್ಲಿ ಬಹುಪಾಲು ಮರಿಗಳು ಬೇರೆ ಪ್ರಾಣಿಗಳಿಗೆ ಆಹಾರವಾಗುತ್ತವೆ
  7. ಅರಣ್ಯ ಒತ್ತುವರಿ ಮತ್ತು ಮಾಂಸಕ್ಕಾಗಿ, ಮೋಜಿಗಾಗಿ ಬೇಟೆಯಾಡುವ ಸ್ಥಳೀಯರು ಹಾಗೂ ಶ್ರೀಮಂತ ಪ್ರವಾಸಿಗರ ಪ್ರಕರಣಗಳು ಹೆಚ್ಚಾಗಿರುವುದು ಸೇರಿದಂತೆ ಮೊದಲಾದ ಕಾರಣಗಳಿಂದ ಕೆಲವು ದಶಕಗಳ ಹಿಂದೆ ಲಕ್ಷಗಳಲ್ಲಿ ಇದ್ದ ಜಿರಾಫೆಗಳ ಸಂಖ್ಯೆ ಈಗ ಬಹಳ ಕಡಿಮೆಯಾಗಿದೆ.

    ಇದನ್ನೂ ಓದಿರಿ: Award to IFS Officer: ಕರ್ನಾಟಕ ಹುಲಿ ಯೋಜನೆ ನಿರ್ದೇಶಕ, ಐಎಫ್‌ಎಸ್‌ ಅಧಿಕಾರಿ ಡಾ.ರಮೇಶ್‌ಕುಮಾರ್‌ಗೆ ಎಕೋ ವಾರಿಯರ್‌ ಪ್ರಶಸ್ತಿ
  8. ಆಫ್ರಿಕಾದ ಉತ್ತರ ದೇಶಗಳಲ್ಲಿ ಇರುವ ಜಿರಾಫೆಗಳ ಸಂಖ್ಯೆ 5,919 ಮಾತ್ರ (ವರ್ಷ 2020). ಆಫ್ರಿಕಾದ ಮಸಾಯಿ ಪ್ರದೇಶದಲ್ಲಿರುವ ಜಿರಾಫೆಗಳ ಸಂಖ್ಯೆ 45,402 ಮಾತ್ರ ಆಫ್ರಿಕಾದ ದಕ್ಷಿಣ ಪ್ರದೇಶದಲ್ಲಿರುವ ಜಿರಾಫೆಗಳ ಸಂಖ್ಯೆ 48,016 ಮಾತ್ರ.
  9. ಭಾರತದ ಅರಣ್ಯದಲ್ಲಿ ಜಿರಾಫೆಗಳಿಲ್ಲ. ಆಫ್ರಿಕಾದಲ್ಲಿನ ಅರಣ್ಯ ಪ್ರದೇಶದಲ್ಲಿನ ವಾತಾವರಣ, ಆಹಾರ ಹಾಗೂ ನೀರಿನ ಲಭ್ಯತೆ, ರಕ್ಷಣೆ ದೃಷ್ಟಿಯಿಂದ ಅವುಗಳ ಆವಾಸ ಸ್ಥಾನ ಇರುವುದು ಆಫ್ರಿಕಾದಲ್ಲೇ ಅಧಿಕ. ಭಾರತದ ಅರಣ್ಯದಲ್ಲಿ ಜಿರಾಫೆ ಇದ್ದುದು ಕಡಿಮೆ.
  10. ಭಾರತದ ಮೃಗಾಲಯಗಳಲ್ಲಿ ಜಿರಾಫೆಗಳಿವೆ. ಕರ್ನಾಟಕದ ಮೈಸೂರು, ಬೆಂಗಳೂರು, ಹಂಪಿ ಮೃಗಾಲಯಗಳಲ್ಲಿ ಜಿರಾಫೆಗಳ ಪ್ರದರ್ಶನವಿದೆ. ಭಾರತದಲ್ಲೂ ಹಲವು ಮೃಗಾಲಯಗಳಲ್ಲಿ ಜಿರಾಫೆ ನೋಡಬಹುದು. ಮೈಸೂರು ಮೃಗಾಲಯದಲ್ಲಂತೂ ಜರ್ಮನಿಯಿಂದ ತಂದ ಜಿರಾಫೆಗಳು, ನಂತರ ಲಖ್ನೋದಿಂದ ಜಿರಾಫೆ ಖುಷಿಯಿಂದ ಹದಿನೈದು ವರ್ಷದಲ್ಲಿ 22 ಜಿರಾಫೆಗಳು ಜನಿಸಿವೆ.

 

Whats_app_banner