Income tax returns: ಆದಾಯ ತೆರಿಗೆ ಪಾವತಿ ಮರೆತಿದ್ದರೆ ಹೀಗೆ ಮಾಡಿ; ಲಾಸ್ಟ್ ಚಾನ್ಸ್ ಇದೆ..
ಆದಾಯ ತೆರಿಗೆ ವ್ಯಾಪ್ತಿಗೆ ಬರುವವರು ಐಟಿಆರ್ ಸಲ್ಲಿಸಲೇಬೇಕು. ಆದರೆ ಕೆಲವರು ಗಡುವು ಮುಂದೂಡುತ್ತಾ ಐಟಿ ರಿಟರ್ನ್ಸ್ ಮರೆತುಬಿಡುತ್ತಾರೆ. ನಿರ್ಲಕ್ಷಿಸಿದರೆ ಆದಾಯ ತೆರಿಗೆ ಇಲಾಖೆಯ ನೋಟಿಸ್‌ಗಳನ್ನು ಎದುರಿಸಬೇಕಾಗುತ್ತದೆ.
ಬೆಂಗಳೂರು: ಆದಾಯ ತೆರಿಗೆ ಸಲ್ಲಿಕೆಗೆ ಇನ್ನ ಕೆಲವೇ ದಿನಗಳು ಬಾಕಿಯಿದ್ದು, ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಮಾಡಬೇಕು. ತೆರಿಗೆ ವ್ಯಾಪ್ತಿಗೆ ಬರುವವರು ಆದಾಯ ತೆರಿಗೆ ಪಾವತಿ ಕಡ್ಡಾಯವಾಗಿದೆ.
ಆದಾಯದ ಪ್ರತಿ ರೂಪಾಯಿಯಲ್ಲಿ ಎಷ್ಟು ಖರ್ಚಾಗಿದೆ ಎಂಬ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
ನೀವು ಅನಗತ್ಯವಾಗಿ ಕಾನೂನು ತೊಡಕುಗಳಿಗೆ ಸಿಲುಕುವುದನ್ನು ತಪ್ಪಿಸಿಕೊಳ್ಳಬೇಕಾದರೆ ಆದಾಯ ತೆರಿಗೆ ಪಾವತಿಸಿರಬೇಕು. ಅದೇ ರೀತಿ ಸಾಲದ ವಿಚಾರದಲ್ಲೂ ಯಾವುದೇ ತೊಂದರೆ ಇರುವುದಿಲ್ಲ. ನೀವು ಯಾವುದೇ ಬ್ಯಾಂಕ್ ಅಥಾವ ಇತರೆ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಬೇಕಾದರೆ ಮೊದಲು ನಿಮ್ಮ ವ್ಯವಹಾರದಲ್ಲಿನ ಆದಾಯಕ್ಕೆ ತೆರಿಗೆ ಪಾವತಿಸಿರಬೇಕು.
ಆದರೆ ಆದಾಯ ತೆರಿಗೆ ಪಾವತಿ - ಐಟಿಆರ್ ಸಲ್ಲಿಸಲು ಮರೆತವರು ಕೂಡಲೇ ಇದನ್ನು ಪಾವತಿಸಬೇಕು. ಇನ್ನೂ ಟೈಮ್ ಇದೆ ಬಿಡಿ ಅಂತ ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಇಂತಹ ಜನರು ಕೊನೆಯಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡಲು ಬಯಸುತ್ತಾರೆ. ವಿಳಂಬವಿಲ್ಲದೆ ಕೊನೆಯ ದಿನಾಂಕದ ಮೊದಲು ಐಟಿಆರ್ ಸಲ್ಲಿಸಿದರೆ ಯಾವುದೇ ತೊಂದರೆಗೆ ಸಿಲುಕುವುದಿಲ್ಲ.
ನಿಗದಿತ ಸಮಯದೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ವಿಫಲವಾದರೆ, ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 142 ರ ಅಡಿಯಲ್ಲಿ ನೋಟಿಸ್ ನೀಡಬಹುದು. ನೀವು ತೆರಿಗೆ ವ್ಯಾಪ್ತಿಯಲ್ಲಿ ಐಟಿಆರ್ ಸಲ್ಲಿಸದಿದ್ದರೆ, ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೋಟಿಸ್ ನೋಡಿ ಗಾಬರಿ ಪಡುವ ಅಗತ್ಯವಿಲ್ಲ.
ಇದು ಇಲಾಖೆಯಿಂದ ಜ್ಞಾಪನೆಯಾಗಿದೆ. ತಪ್ಪನ್ನು ಸರಿಪಡಿಸಲು ಐಟಿಆರ್ ಅನ್ನು ಸಲ್ಲಿಸದವರಿಗೆ ನೆನಪಿಸಲು ಇದನ್ನು ಕಳುಹಿಸಲಾಗಿದೆ. ಈ ಸೂಚನೆಯನ್ನು ಲಘುವಾಗಿ ಪರಿಗಣಿಸದರೆ, ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ತೆರಿಗೆ ಪಾವತಿಸುವ ಅವಕಾಶವನ್ನು ಕಳೆದುಕೊಂಡರೆ ಏನು ಮಾಡಬೇಕೆಂದು ಕೆಲವರಿಗೆ ತಿಳಿದಿರುವುದಿಲ್ಲ.
ಹಣಕಾಸು ಕಾಯಿದೆ 2022 ಹೊಸ ಐಟಿಆರ್ ಅನ್ನು ಸಲ್ಲಿಸುವ ಸೌಲಭ್ಯವನ್ನು ಒದಗಿಸಿದೆ. ಇದನ್ನು ನವೀಕರಿಸಿದ ರಿಟರ್ನ್ (ITR-U) ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಕ್ಕೆ ಹೊಸ ಉಪವಿಭಾಗ 8(ಎ) ಅನ್ನು ಸೇರಿಸಲಾಗಿದೆ.
ನಿಮ್ಮ ಹಳೆಯ ಐಟಿಆರ್‌ನಲ್ಲಿ ಯಾವುದೇ ತಪ್ಪಾಗಿದ್ದರೆ ಅಥವಾ ತೋರಿಸಲು ನೀವು ಮರೆತಿದ್ದರೆ, ಯಾವುದಾದರೂ ಆದಾಯವಿದ್ದರೆ ನೀವು ನವೀಕರಿಸಿದ ರಿಟರ್ನ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರ ಹೊರತಾಗಿ ನೀವು ಈ ಹಿಂದೆ ರಿಟರ್ನ್ ಸಲ್ಲಿಸದಿದ್ದರೂ ಅಪ್‌ಡೇಟ್ ರಿಟರ್ನ್ ಅನ್ನು ಸಹ ಬಳಸಬಹುದು.
ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದ ನಂತರ ಎರಡು ವರ್ಷಗಳವರೆಗೆ ನವೀಕರಿಸಿದ ರಿಟರ್ನ್‌ಗಳನ್ನು ಸಲ್ಲಿಸಬಹುದು. ಆದರೆ ಇದಕ್ಕಾಗಿ ದಂಡ ತೆರಬೇಕಾಗುತ್ತದೆ. ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದ 12 ತಿಂಗಳೊಳಗೆ ನವೀಕರಿಸಿದ ರಿಟರ್ನ್ ಅನ್ನು ಸಲ್ಲಿಸಿದರೆ ತೆರಿಗೆ ಮತ್ತು ಬಡ್ಡಿಯ ಶೇ. 25 ರಷ್ಟು ಸಮಾನವಾದ ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಅದೇ ರೀತಿ 12 ತಿಂಗಳ ನಂತರ, 2 ವರ್ಷಗಳ ಮೊದಲು ನವೀಕರಿಸಿದ ರಿಟರ್ನ್‌ಗಳನ್ನು ಸಲ್ಲಿಸಲು ಶೇ. 50 ರಷ್ಟು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರ ಹೊರತಾಗಿ ವಿಳಂಬ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.
ವಿಶೇಷವಾಗಿ ನೆನಪಿಡಿ. ನವೀಕರಿಸಿದ ರಿಟರ್ನ್ ಅನ್ನು ಒಮ್ಮೆ ಮಾತ್ರ ಸಲ್ಲಿಸಲು ನಿಮಗೆ ಅವಕಾಶವಿದೆ. ನವೀಕರಿಸಿದ ರಿಟರ್ನ್ ಅನ್ನು ಸಲ್ಲಿಸುವಾಗ ಹೆಚ್ಚುವರಿ ಆದಾಯದ ವಿವರಗಳನ್ನು ಸಲ್ಲಿಸುವುದನ್ನು ಮರೆಯಬೇಡಿ.
ನೀವು ಯಾವುದೇ ಆದಾಯವನ್ನು ತೋರಿಸಲು ಮರೆತರೆ, ಮತ್ತೆ ನವೀಕರಿಸಿದ ರಿಟರ್ನ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಐಟಿಆರ್ ಸಲ್ಲಿಸುವಾಗ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮುಂದಾಗುವ ಸಮಸ್ಯೆಗಳಿಂದ ಪಾರಾಗಿ.
ವಿಭಾಗ