ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Independence Day 2023: ದೇಶದೆಲ್ಲೆಡೆ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ಈ ವರ್ಷದ ಥೀಮ್‌, ಮುಖ್ಯ ಅತಿಥಿಗಳು, ಕಾರ್ಯಕ್ರಮ ವಿವರ ಇಲ್ಲಿದೆ

Independence Day 2023: ದೇಶದೆಲ್ಲೆಡೆ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ; ಈ ವರ್ಷದ ಥೀಮ್‌, ಮುಖ್ಯ ಅತಿಥಿಗಳು, ಕಾರ್ಯಕ್ರಮ ವಿವರ ಇಲ್ಲಿದೆ

ಭಾರತವು ಇಂದು 77ನೇ ಸ್ವಾತಂತ್ರೋತ್ಸವವನ್ನು ಆಚರಿಸಲಿದೆ. ಪ್ರಧಾನಿ ಮೋದಿ ಅವರು ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ ಮತ್ತು ಅಲ್ಲಿಂದಲೇ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದಿನ ಧ್ವಜಾರೋಹಣ ಕಾರ್ಯಕ್ರಮದಲ್ಲಿ 1800 ಮಂದಿ ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ. ಇಂದಿನ ಕಾರ್ಯಕ್ರಮದ ಕುರಿತ ವಿವರ ಇಲ್ಲಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 77 ವಸಂತಗಳು ಸಂದಿವೆ. 2023 ಆಗಸ್ಟ್‌ 15 ಭಾರತದ 77ನೇ ವರ್ಷದ ಸ್ವಾತಂತ್ರ್ಯೋತ್ಸವ. ಈ ದಿನವನ್ನು ದೇಶದಾದ್ಯಂತ ದೇಶಭಕ್ತಿ ಹಾಗೂ ಸಂಭ್ರಮದೊಂದಿಗೆ ಆಚರಿಸುತ್ತಾರೆ. ದೇಶಭಕ್ತಿಯ ಹೆಸರಿನಲ್ಲಿ ಇಡೀ ದೇಶವನ್ನು ಒಂದುಗೂಡಿಸುವ ದಿನ ಸ್ವಾತಂತ್ರ್ಯದಿನ. ಇಂದು ಸರ್ಕಾರಿ ಕಟ್ಟಡಗಳು, ಶಾಲೆಗಳು ಮತ್ತು ಸಾರ್ವಜನಿಕ ಪ್ರದೇಶಗಳು ಸೇರದಂತೆ ಎಲ್ಲಾ ಪ್ರಮುಖ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಇದು ದಿನ ಸ್ವಾತಂತ್ರ್ಯದ ಮೌಲ್ಯವನ್ನು ನಾಗರೀಕರಿಗೆ ನೆನಪಿಸುತ್ತದೆ ಮತ್ತು ದೇಶವನ್ನು ರಕ್ಷಿಸುವ ಪ್ರತಿಯೊಬ್ಬರ ಕರ್ತವ್ಯ, ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ.

ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಲಿರುವ ಪ್ರಧಾನಿ ಮೋದಿ

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯವನ್ನು ಆಚರಿಸಲಿದ್ದಾರೆ, ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಾರ್ಚ್‌ 12,2021ರಲ್ಲಿ ಪಿಎಂ ಮೋದಿ ಆರಂಭಿಸಿದ ಆಜಾದಿ ಕಾ ಅಮೃತ್‌ ಮಹೋತ್ಸವದ ಮೂಲಕ ಈ ದಿನ ಸ್ವಾತಂತ್ರ್ಯೋತ್ಸವವು ಸಮಾಪ್ತಿಯಾಗಲಿದೆ.

ಭಾರತದ 77ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಹೊಸ ಉಪಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ.

ಮೋದಿಯವರಿಗೆ ಗೌರವ ವಂದನೆ

ಸಶಸ್ತ್ರ ಪಡೆಗಳು ಮತ್ತು ದೆಹಲಿ ಪೊಲೀಸರು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ವಂದನೆ ಸಲ್ಲಿಸಲಿವೆ. ಇದೇ ಸಂದರ್ಭದಲ್ಲಿ ರಾಷ್ಟ್ರಗೀತೆ ಮೊಳಗಿಸುವ ಜೊತೆಗೆ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಗುಂಡು ಹಾರಿಸುವ ಮೂಲಕ ಸೆಲ್ಯೂಟ್‌ ಮಾಡಲಾಗುವುದು.

ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ʼಅಟ್‌ ಹೋಮ್‌ ರಿಸೆಷನ್ಷ್‌ʼ ಕಾರ್ಯಕ್ರಮವಿರುತ್ತದೆ. ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು, ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಸಂಶೋಧಕರು, ನವೋದ್ಯಮಿಗಳು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮೇರಿ ಮಾಠಿ ಮೇರಾ ದೇಶ್‌ ಅಭಿಯಾನ

ದೇಶದ ಹುತಾತ್ಮರಿಗೆ ಗೌರವ ಸಲ್ಲಿಸಲು ಈ ಸ್ವಾತಂತ್ರ್ಯ ದಿನದಂದು ಮೇರಿ ಮಾಠಿ ಮೇರಾ ದೇಶ್‌ ಎಂಬ ಹೊಸ ಅಭಿಯಾನವನ್ನು ಆರಂಭಿಸಲಾಗಿದೆ.

ಪ್ರಧಾನಿ ಮೋದಿ ಅವರು ತಮ್ಮ 103ನೇ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಈ ಅಭಿಯಾನದ ಬಗ್ಗೆ ತಿಳಿಸಿದ್ದರು. ದೇಶವು ಆಗಸ್ಟ್‌ 9 ರಿಂದ ಆಗಸ್ಟ್‌ 15ರವರೆಗೆ ಅಭಿಯಾನ ಆಚರಿಸಲಿದೆ. ʼಮೇರಿ ಮಾಠಿ ಮೇರಾ ದೇಶ್‌ʼ ಅಭಿಯಾನದ ಹಿಂದಿನ ಕಲ್ಪನೆಯು ಭಾರತದ ಯೋಧರ ಶೌರ್ಯವನ್ನು ಆಚರಿಸುವುದಾಗಿದೆ. ಅಲ್ಲದೆ, ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ʼಅಜಾದಿ ಕಾ ಅಮೃತ್‌ ಮಹೋತ್ಸವʼ ಎಂದು ಭಾಗವಾಗಿದೆ.

ಇಂದಿನ ಸ್ವಾತಂತ್ರ್ಯ ದಿನದ ಮುಖ್ಯ ಅತಿಥಿಗಳು

ಈ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ 1800 ಜನರನ್ನು ವಿಶೇಷ ಅತಿಥಿಗಳಾಗಿ ಕೆಂಪು ಕೋಟೆಗೆ ಆಹ್ವಾನಿಸಲಾಗಿದೆ. ಜನ ಭಾಗಿದಾರಿ ಕಾರ್ಯಕ್ರಮವನ್ನಾಗಿಸಲು ಸರ್ಕಾರ ಈ ನಿಟ್ಟಿನಲ್ಲಿ ಜನರನ್ನು ಆಹ್ವಾನಿಸಿದೆ.

ವಿಶೇಷ ಅತಿಥಿಗಳ ಪಟ್ಟಿಯಲ್ಲಿ 660 ಗ್ರಾಮಗಳ 400 ಸರ್‌ಪಂಚ್‌ಗಳು, ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯಿಂದ 250, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ್‌ ವಿಕಾಸ್‌ ಯೋಜನೆಯಿಂದ 50 ಮಂದಿ, ಕೇಂದ್ರ ವಿಸ್ತಾ ಯೋಜನೆಗಳು 50 ಶ್ರಮಯೋಗಿಗಳು, ಅಮೃತ್‌ ಸರೋವರ ಮತ್ತು ಹರ್‌ ಘರ್‌ ಜಲ ಯೋಜನೆಯ ತಯಾರಕರು, ಪ್ರತಿ ಪ್ರಾಥಮಿಕ ಶಾಲಾ ಶಿಕ್ಷಕರು, ದಾದಿಯರು ಮತ್ತು 50 ಮಂದಿ ಮೀನುಗಾರರನ್ನು ಆಹ್ವಾನಿಸಲಾಗಿದೆ. ಕೆಲವು ಅತಿಥಿಗಳು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಇತರ ಗಣ್ಯರು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ರಕ್ಷಣಾ ಕಾರ್ಯದರ್ಶಿ ದೆಹಲಿ ವಲಯದ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಲೆಫ್ಟಿನೆಂಟ್‌ ಜನರಲ್‌ ಧೀರಜ್‌ ಸೇಠ್‌ ಅವರಿಗೆ ಪರಿಚಯಿಸಲಿದ್ದಾರೆ.

2023ರ ಸ್ವಾತಂತ್ರ್ಯ ದಿನದ ಥೀಮ್‌

ಈ ವರ್ಷದ ಸ್ವಾತಂತ್ರ್ಯ ದಿನದ ಥೀಮ್‌ ‌ʼದೇಶ ಮೊದಲು, ಯಾವಾಗಲೂ ಮೊದಲುʼ ಎಂಬುದಾಗಿದೆ. ಇದು 77ನೇ ಸ್ವಾತಂತ್ರ್ಯ ದಿನದಂದು ಆಚರಿಸುವ ಆಜಾದಿ ಕಾ ಅಮೃತ್‌ ಮಹೋತ್ಸವ್‌ನ ಭಾಗವಾಗಿದೆ.

IPL_Entry_Point