ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Election Result: ಅಸ್ಸಾಂ ಲೋಕಸಭೆ ಚುನಾವಣೆ: ಬಿಜೆಪಿಗೆ ನಿರಾಯಾಸ ಗೆಲುವು, ಕಾಂಗ್ರೆಸ್‌ಗೆ ಸೋಲು

Election Result: ಅಸ್ಸಾಂ ಲೋಕಸಭೆ ಚುನಾವಣೆ: ಬಿಜೆಪಿಗೆ ನಿರಾಯಾಸ ಗೆಲುವು, ಕಾಂಗ್ರೆಸ್‌ಗೆ ಸೋಲು

ಅಸ್ಸಾಂ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಕಾಂಗ್ರೆಸ್‌ ಪ್ರಬಲವಾಗಿರುವ ಅಸ್ಸಾಂನಲ್ಲಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಒಟ್ಟು 14 ಕ್ಷೇತ್ರಗಳಲ್ಲಿ ಬಿಜೆಪಿ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಅಸ್ಸಾಂ ಲೋಕಸಭೆ ಚುನಾವಣೆ: ಬಿಜೆಪಿಗೆ ನಿರಾಯಾಸ ಗೆಲುವು, ಕಾಂಗ್ರೆಸ್‌ಗೆ ಸೋಲು
ಅಸ್ಸಾಂ ಲೋಕಸಭೆ ಚುನಾವಣೆ: ಬಿಜೆಪಿಗೆ ನಿರಾಯಾಸ ಗೆಲುವು, ಕಾಂಗ್ರೆಸ್‌ಗೆ ಸೋಲು

ಅಸ್ಸಾಂ: ದೇಶದಾದ್ಯಂತ ಲೋಕಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಚುರುಕುಗೊಂಡಿದೆ. ಅಸ್ಸಾಂ ಲೋಕಸಭಾ ಕ್ಷೇತ್ರದ (Assam Lok Sabha Constituencies) ಫಲಿತಾಂಶ ಹೊರ ಬಿದ್ದಿದ್ದು, ಈ ಬಾರಿ ಬಿಜೆಪಿ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಪ್ರಾಬಲ್ಯವಿರುವ ಅಸ್ಸಾಂನಲ್ಲಿ ಬಿಜೆಪಿ 9 ಸ್ಥಾನ ಗಳಿಸುವ ಮೂಲಕ ಕಾಂಗ್ರೆಸ್‌ ಅನ್ನು ಧೂಳಿಪಟ ಮಾಡಿದೆ. ಎಕ್ಸಿಟ್‌ ಪೋಲ್‌ನಲ್ಲೂ ಬಿಜೆಪಿ ಮೇಲುಗೈ ಎಂಬ ಫಲಿತಾಂಶ ಬಂದಿತ್ತು. ಒಟ್ಟು 14 ಲೋಕಸಭಾ ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಏಪ್ರಿಲ್‌ 19 ರಿಂದ ಮೇ 7ರವರೆಗೆ ಮತದಾನ ನಡೆದಿತ್ತು. ಸರ್ಬಾನಂದ ಸೋನೋವಾಲ್ ಬಿಜೆಪಿಯ ಪ್ರಮಖರಾದ್ರೆ, ಗೌರವ್ ಗೊಗೊಯ್ ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. 

ಟ್ರೆಂಡಿಂಗ್​ ಸುದ್ದಿ

ಅಸ್ಸಾಂ ಎನ್‌ಡಿಎ ಮೈತ್ರಿ ಹಾಗೂ ಇಂಡಿಯಾ ಮೈತ್ರಿ ಎರಡು ಬಣಗಳ ತೀವ್ರ ಪೈಪೋಟಿ ಇತ್ತು. ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಅಸೋಮ್ ಗಣ ಪರಿಷತ್, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಈ ಮೂರು ಪಕ್ಷಗಳ ಮೈತ್ರಿ ಇದ್ದರೆ, ಇಂಡಿಯಾ ಕಾಂಗ್ರೆಸ್‌ ಹಾಗೂ ಅಸ್ಸಾಂ ರಾಷ್ಟ್ರೀಯ ಪರಿಷತ್ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿತ್ತು. ಈ ಎರಡೂ ಮೈತ್ರಿ ಬಣಗಳ ಜೊತೆಗೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್, ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾಗಳು ಸ್ಪರ್ಧಿಸಿದ್ದವು.

ಕಾಜಿರಂಗ, ಸೋನಿತ್‌ಪುರ್, ಲಖಿಂಪುರ, ದಿಬ್ರುಗಢ, ದರ್ರಂಗ್-ಉದಲ್ಗುರಿ, ದಿಪು, ಕರೀಮ್‌ಗಂಜ್, ಸಿಲ್ಚಾರ್, ಧುಬ್ರಿ, ಕೊಕ್ರಜಾರ್, ಬಾರ್ಪೇಟಾ ಮತ್ತು ಗುವಾಹಟಿ ಇವು ಅಸ್ಸಾಂನ ಕೆಲವು ಪ್ರಮುಖ ಕ್ಷೇತ್ರಗಳಾಗಿವೆ. 

2014-2019 ಫಲಿತಾಂಶ ಅವಲೋಕನ 

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 7 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ತಲಾ ಮೂರು ಸ್ಥಾನಗಳನ್ನು ಗೆದ್ದವು ಮತ್ತು ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿಗೆ ದಕ್ಕಿತು.

2019ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ 10 ಸ್ಥಾನಗಳಲ್ಲಿ, ಎಜಿಪಿ ಮೂರು ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಒಂದರಲ್ಲಿ ಸ್ಪರ್ಧಿಸಿತ್ತು. ಬಿಜೆಪಿ 9 ಸ್ಥಾನ ಗೆದ್ದುಕೊಂಡಿತು. ಬಿಜೆಪಿ 2020 ರಲ್ಲಿ ಬಿಪಿಎಫ್‌ ಅನ್ನು ಹೊರಹಾಕಿತು ಮತ್ತು ಯುಪಿಪಿಎಲ್‌ನೊಂದಿಗೆ ಹೊಸದಾಗಿ ಮೈತ್ರಿ ಮಾಡಿಕೊಂಡಿತು.

 

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಟಿ20 ವರ್ಲ್ಡ್‌ಕಪ್ 2024