Extra Income Ideas From Home: ವರ್ಕ್ ಫ್ರಮ್ ಹೋಮ್ ಜೊತೆ ಗಳಿಸಿರಿ 'ಹೆಚ್ಚುವರಿ ಆದಾಯ': ಇಲ್ಲಿದೆ ಐದು ಸರಳ ಉಪಾಯ
ಕೋವಿಡ್ ಹಾವಳಿ ಬಳಿಕ 'ವರ್ಕ್ ಫ್ರಂ ಹೋಮ್' ಪರಿಸ್ಥಿತಿಗಳಿಗೆ ಒಗ್ಗಿಕೊಂಡಿರುವ ಬಹುತೇಕರು, ತಮಗೆ ದೊರೆಯುತ್ತಿರುವ ಹೆಚ್ಚುವರಿ ಸಮಯವನ್ನು ಅಧಿಕ ಆದಾಯ ಗಳಿಸಲು ವ್ಯಯಿಸಲು ಚಿಂತಿಸುತ್ತಿದ್ದಾರೆ. ಈ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ ಸದೃಢಗೊಳಿಸಲು ಮುಂದಡಿ ಇಟ್ಟಿದ್ದಾರೆ. ಅದರಂತೆ ವರ್ಕ್ ಫ್ರಮ್ ಹೋಮ್ ಜೊತೆಗೆ ಹೆಚ್ಚುವರಿ ಆದಾಯ ಗಳಿಸುವ ಐದು ಸರಳ ಉಪಾಯದ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
ನವದೆಹಲಿ: ಕೋವಿಡ್ ಹಾವಳಿ ಬಳಿಕ 'ವರ್ಕ್ ಫ್ರಂ ಹೋಮ್' ಪರಿಸ್ಥಿತಿಗಳಿಗೆ ಒಗ್ಗಿಕೊಂಡಿರುವ ಬಹುತೇಕರು, ತಮಗೆ ದೊರೆಯುತ್ತಿರುವ ಹೆಚ್ಚುವರಿ ಸಮಯವನ್ನು ಅಧಿಕ ಆದಾಯ ಗಳಿಸಲು ವ್ಯಯಿಸಲು ಚಿಂತಿಸುತ್ತಿದ್ದಾರೆ. ಈ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ ಸದೃಢಗೊಳಿಸಲು ಮುಂದಡಿ ಇಟ್ಟಿದ್ದಾರೆ. ಅದರಂತೆ ವರ್ಕ್ ಫ್ರಮ್ ಹೋಮ್ ಜೊತೆಗೆ ಹೆಚ್ಚುವರಿ ಆದಾಯ ಗಳಿಸುವ ಐದು ಸರಳ ಉಪಾಯದ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ.
ಕೌಟುಂಬಿಕ ಖರ್ಚುಗಳು ನಮ್ಮ ಆದಾಯವನ್ನು ಮೀರುತ್ತಿದ್ದು, ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಕೆಲವರು ಯಾವುದೇ ಹಿಂಜರಿಕೆಯಿಲ್ಲದೆ ನಿಷ್ಕ್ರಿಯ ಆದಾಯದ ಮೂಲವನ್ನು ಹುಡುಕುವುದು ಸಾಮಾನ್ಯ ಸಂಗತಿ. ದೇಶದಲ್ಲಿ ಸದ್ಯ ಡಿಜಿಟಲ್ ಸಾಮರ್ಥ್ಯ ವೃದ್ಧಿಸಿದ್ದು, ವಿವಿಧ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ನಿರ್ವಹಿಸಲು ಆನ್‌ಲೈನ್ ಪರಿಕರಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ತಂತ್ರಜ್ಞಾನ ಜೀವನವನ್ನು ಸರಳಗೊಳಿಸಿದ್ದು, ಇದು ಹೆಚ್ಚುವರಿ ಆದಾಯ ಗಳಿಕೆಗೂ ಸಹಾಯ ಮಾಡಬಲ್ಲದು. ಕನಿಷ್ಠ ತಂತ್ರಜ್ಞಾ ತಿಳುವಳಿಕೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದು. ಹಾಗಾದರೆ ವರ್ಕ್ ಫ್ರಮ್ ಹೋಮ್ ಜೊತೆಗೆ ಹೆಚ್ಚುವರಿ ಆದಾಯ ಗಳಿಸುವ ಐದು ಸರಳ ಉಪಾಯಗಳನ್ನು ನೋಡುವುದಾದರೆ..
1) ಡ್ರಾಪ್‌ಶಿಪಿಂಗ್:
ಸೂಕ್ತ ವ್ಯಾಪಾರಕ್ಕಾಗಿ ಹೂಡಿಕೆ ಮಾಡಲು ಸಾಕಷ್ಟು ಹಣವನ್ನು ಹೊಂದಿಲ್ಲದವರು, ಡ್ರಾಪ್‌ಶಿಪಿಂಗ್ ಮೂಲಕ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಬಹುದು. ಇದು ಇ-ಕಾಮರ್ಸ್ ಚಿಲ್ಲರೆ ಮಾದರಿಯಾಗಿದ್ದು, ನೀವು ಯಾವುದೇ ದಾಸ್ತಾನು ನಿರ್ವಹಿಸದೆ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ನೀವು ಆರ್ಡರ್‌ಗಳನ್ನು ಗ್ರಾಹಕರಿಗೆ ನೇರವಾಗಿ ತಯಾರಕರಿಂದ ತಲುಪಿಸುವ ಮೂಲಕ ಲಾಭಾಂಶವನ್ನು ಗಳಿಸಬಹುದು.
2) ಕೌಶಲ್ಯ ಮಾರಾಟ:
ನೀವು ಅನಿಮೇಷನ್‌ಗಳು, ಪವರ್‌ಪಾಯಿಂಟ್ ಪ್ರಸ್ತುತಿಗಳು ಅಥವಾ ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸುವಲ್ಲಿ ಸಿದ್ಧಹಸ್ತರಾಗಿದ್ದರೆ, ಅದನ್ನು ಇತರರಿಗೆ ಕಲಿಸುವ ಮೂಲಕ ಆದಾಯ ಗಳಿಸಬಹುದಾಗಿದೆ. ಹಲವಾರು ಕಲಿಕೆಯ ಅಪ್ಲಿಕೇಶನ್‌ಗಳಿದ್ದು, ಅಲ್ಲಿ ನೀವು ನೋಂದಾಯಿಸಿಕೊಳ್ಳುವ ಮೂಲಕ ನಿಮ್ಮ ಕೌಶಲ್ಯವನ್ನು ಹಂಚಿಕೊಳ್ಳಬಹುದು.
3) ಅಫಿಲಿಯೆಂಟಿಗ್ ಮಾರ್ಕೆಟಿಂಗ್:
ಹೆಚ್ಚು ಹೂಡಿಕೆ ಮಾಡದೆ ಹೆಚ್ಚುವರಿ ಆದಾಯವನ್ನು ಪಡೆಯುವ ಮತ್ತೊಂದು ಮಾರ್ಗವೆಂದರೆ ಅಂಗಸಂಸ್ಥೆ ಮಾರ್ಕೆಟಿಂಗ್. ಇಲ್ಲಿ ನೀವು ಕಂಪನಿಯ ಅಂಗಸಂಸ್ಥೆಯಾಗಲು ಸೈನ್ ಅಪ್ ಮಾಡಿ, ಅದರ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸಹಾಯ ಮಾಡಬಹುದು. ನೀವು ಸಾಮಾಜಿಕ ಜಾಲತಾಣ ಅಥವಾ ನಿಮ್ಮ ವೆಬ್ ಪುಟದ ಮೂಲಕ ಉತ್ಪನ್ನದ ಪ್ರಚಾರ ಮಾಡಬೇಕಾಗುತ್ತದೆ. ಉತ್ಪನ್ನವನ್ನು ಖರೀದಿಸಲು ಜನರು ಆ ಲಿಂಕ್ ಬಳಸಿದಾಗ ನೀವು ಆದಾಯವನ್ನು ಗಳಿಸುತ್ತೀರಿ.
4) ಟ್ಯೂಷನ್:
ಬೋಧನೆಯನ್ನು ನೀಡುವುದು ಹಳೆಯ-ಶಾಲಾ ಕಲ್ಪನೆಯಂತೆ ತೋರುತ್ತದಾದರೂ, ಇದರಿಂದ ನೀವು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ. ನೆರೆಹೊರೆಯ ಮಕ್ಕಳಿಗೆ ಟ್ಯೂಷನ್ ನೀಡುವುದು ಅಥವಾ ಅಥವಾ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಸಹ ನೀಡಬಹುದು. ಇದು ನಿಮ್ಮ ನಿಷ್ಕ್ರಿಯ ಆದಾಯದ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.
5) ಡೇಟಾ ಎಂಟ್ರಿ:
ಡೇಟಾ ಎಂಟ್ರಿ ನೀವು ಆಯ್ಕೆಮಾಡಬಹುದಾದ ಸುಲಭವಾದ ಉದ್ಯೋಗಗಳಲ್ಲಿ ಒಂದಾಗಿದೆ. ಇದಕ್ಕೆ ಹೆಚ್ಚಿನ ಕೌಶಲ್ಯಗಳ ಅಗತ್ಯವಿರುವುದಿಲ್ಲ. ಅಲ್ಲದೇ ಇತರ ಉದ್ಯೋಗಗಳಿಗಿಂತ ಇದು ತುಲನಾತ್ಮಕವಾಗಿ ಸುಲಭವಾಗಿದೆ. ಇದು ಸಾಕಷ್ಟು ಲಾಭದಾಯಕವಾಗಿದೆ.
ಹೀಗೆ ವರ್ಕ್ ಫ್ರಂ ಹೋಮ್ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಹೆಚ್ಚಿನ ಆದಾಯ ಗಳಿಸುವ ಮೂಲಕ ನಿಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೀವು ವೃದ್ಧಿಸಬಹುದಾಗಿದೆ. ಆದರೆ ಮೂನ್‌ಲೈಟಿಂಗ್ ಬಗ್ಗೆ ನೀವು ಅತ್ಯಂತ ಎಚ್ಚರದಿಂದ ಇರಬೇಕು. ನೀವು ಮಾಡುವ ಹೆಚ್ಚುವರಿ ಕೆಲಸ ನಿಮ್ಮ ಮೂಲ ಕೆಲಸಕ್ಕೆ ಹೊಂದುವಂತಿದ್ದರೆ, ನೀವು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.
ವಿಭಾಗ