ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ

ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ

Maharashtra Election Results 2024: ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಎದುರು ನೋಡುವ ಹೊತ್ತು. ಅದಕ್ಕೂ ಮೊದಲು ಮಹಾರಾಷ್ಟ್ರ ಚುನಾವಣೆ ಕಣದಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ ಅಂತ ನೋಡೋಣ, ಇಲ್ಲಿದೆ ಬಾರ್‌ ಚಾರ್ಟ್‌ ಸಹಿತ ವಿವರಣೆ.

ಮಹಾರಾಷ್ಟ್ರ ಚುನಾವಣೆ: ಫಲಿತಾಂಶ ಬರುವ ಹೊತ್ತಿನಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ ಎಂಬುದರ ವಿವರಣೆ ಇಲ್ಲಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರಾದ ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆ, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.
ಮಹಾರಾಷ್ಟ್ರ ಚುನಾವಣೆ: ಫಲಿತಾಂಶ ಬರುವ ಹೊತ್ತಿನಲ್ಲಿ ಪಕ್ಷವಾರು ನೇರ ಸ್ಪರ್ಧೆ ಎಷ್ಟು ಕ್ಷೇತ್ರದಲ್ಲಿ? ಪ್ರಮುಖ ಅಭ್ಯರ್ಥಿಗಳಾರು, ಪಕ್ಷಗಳ ಬಲಾಬಲ ಹೇಗಿದೆ ಎಂಬುದರ ವಿವರಣೆ ಇಲ್ಲಿದೆ. ಮಹಾರಾಷ್ಟ್ರದ ರಾಜಕೀಯ ನಾಯಕರಾದ ಅಜಿತ್ ಪವಾರ್, ಶರದ್ ಪವಾರ್‌, ದೇವೇಂದ್ರ ಫಡ್ನವೀಸ್, ಏಕನಾಥ ಶಿಂಧೆ, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

Maharashtra Election Results: ಮಹಾರಾಷ್ಟ್ರ ಚುನಾವಣೆ ಮತದಾನ ಮುಗಿದು ನಿರ್ಣಾಯಕ ಘಟ್ಟಕ್ಕೆ ಬಂದಿದ್ದು ನಾಳೆಯೇ (ನವೆಂಬರ್ 20) ಮತ ಎಣಿಕೆ ನಡೆದು ಸಂಜೆ ವೇಳೆಗೆ ನಿಖರ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 20ರಂದು ಮತ ಎಣಿಕೆ ಮುಗಿದ ಕೂಡಲೆ ಮಹಾರಾಷ್ಟ್ರ ಎಕ್ಸಿಟ್ ಪೋಲ್‌ ಫಲಿತಾಂಶ ಪ್ರಕಟವಾಗಿದೆ. ಆರು ಪ್ರಮುಖ ಎಕ್ಸಿಟ್‌ಪೋಲ್‌ಗಳ ಪೈಕಿ 4ರಲ್ಲಿ ಆಡಳಿತಾರೂಢ ಮಹಾಯುತಿ ಮೇಲುಗೈ ಸಾಧಿಸಿದ್ದು, ಇನ್ನೆರಡಲ್ಲಿ ಮಹಾ ವಿಕಾಸ್ ಅಘಾಡಿ ಜತೆಗೆ ಸಮಬಲದ ಸ್ಪರ್ಧೆ ತೋರಿಸಿದೆ. ಯಾವುದಕ್ಕೂ ನಿಖರ ಫಲಿತಾಂಶ ನಾಳೆ ಪ್ರಕಟವಾಗುವ ಕಾರಣ ಸದ್ಯ ಮಹಾರಾಷ್ಟ್ರ ಚುನಾವಣಾ ಕಣದ 288 ಕ್ಷೇತ್ರಗಳ ಕಡೆಗೊಮ್ಮೆ ನೋಟ ಹರಿಸುವುದಕ್ಕೆ ಈ ಕ್ಷಣ ಒಂದು ನಿಮಿತ್ತ. ಎಷ್ಟು ಕ್ಷೇತ್ರಗಳಲ್ಲಿ ಮಹಾಯುತಿ ಪಕ್ಷಗಳಿಗೂ ಮಹಾ ವಿಕಾಸ್ ಅಘಾಡಿ ಪಕ್ಷಗಳಿಗೂ ನೇರ ಸ್ಪರ್ಧೆ ಇದೆ? ಪ್ರಮುಖ ಸ್ಪರ್ಧಿಗಳು ಯಾರು ಎಂಬಿತ್ಯಾದಿ ವಿವರಗಳನ್ನೊಮ್ಮೆ ನೋಡೋಣ.

ಮಹಾರಾಷ್ಟ್ರ ಚುನಾವಣೆ; ನೇರ ಸ್ಪರ್ಧೆ ಎಷ್ಟು ಕ್ಷೇತ್ರಗಳಲ್ಲಿ

ಮಹಾರಾಷ್ಟ್ರದಲ್ಲಿ, ಪ್ರಸ್ತುತ ಅಧಿಕಾರದಲ್ಲಿರುವ ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಮತ್ತು ಮಹಾ ವಿಕಾಸ್ ಅಗಾಡಿ (ಎಂವಿಎ) ಎರಡು ಪ್ರಮುಖ ಮೈತ್ರಿಗಳ ಪಾಲಿಗೆ ಈ ಸಲದ ಚುನಾವಣೆ ಅತ್ಯಂತ ಪ್ರತಿಷ್ಠೆಯ ರಾಜಕೀಯ ಸಮರವಾಗಿದೆ. ಮಹಾರಾಷ್ಟ್ರ ವಿಧಾನಸಭೆಗೆ 2019ರಲ್ಲಿ ಚುನಾವಣೆ ನಡೆದ ಬಳಿಕ ಬಿಜೆಪಿ 105 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅದನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ಮೊದಲು ಆಡಳಿತ ಚುಕ್ಕಾಣಿ ಹಿಡಿದುದು ಶಿವ ಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ). ಇದರಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಪಕ್ಷ ಕೈ ಜೋಡಿಸಿಕೊಂಡಿದ್ದವು. ಅವಿಭಜಿತ ಶಿವ ಸೇನಾ 56, ಅವಿಭಜಿತ ಎನ್‌ಸಿಪಿ 54, ಕಾಂಗ್ರೆಸ್ ಪಕ್ಷ 44 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದರಿಂದ ಸರಳ ಬಹುಮತದ 145 ಸ್ಥಾನಗಳ ಗಡಿಯನ್ನು ಈ ಮೈತ್ರಿಕೂಟ ದಾಟಿತ್ತು. ಸರ್ಕಾರ ರಚನೆಯಾಗಿ ಎರಡು ವರ್ಷ ದಾಟುತ್ತಲೇ ಅಜಿತ್ ಪವಾರ್ ಎನ್‌ಸಿಪಿಯನ್ನು ಏಕನಾಥ ಶಿಂಧೆ ಶಿವ ಸೇನಾವನ್ನು ಒಡೆದು ತಮ್ಮ ಬೆಂಬಲಿಗರೊಂದಿಗೆ ಹೊರಬಂದು ಬಿಜೆಪಿ ಜತೆಗೆ ಕೈ ಜೋಡಿಸಿದ್ದರಿಂದ ಮಹಾಯುತಿ ಸರ್ಕಾರ ರಚನೆಯಾಯಿತು. ಸದ್ಯದ ಪಕ್ಷವಾರು ಬಲಾಬಲ ಹೀಗಿದೆ ನೋಡಿ

2 ಪ್ರಮುಖ ಪಕ್ಷಗಳ ವಿಭಜನೆ ಬಳಿಕ ನಡೆದ ಮೊದಲ ಚುನಾವಣೆ, ನೇರ ಚುನಾವಣೆಯ ಕ್ಷೇತ್ರಗಳಿವು

ಮಹಾರಾಷ್ಟ್ರದ ರಾಜಕಾರಣಕ್ಕೆ ಸಂಬಂಧಿಸಿದಂತೆ ಇದು ಮಹತ್ವದ ಚುನಾವಣೆ. ಸ್ಥಳೀಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಶಿವ ಸೇನಾ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಗಳು ಎರಡು ಹೋಳಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದು. ಶಿವ ಸೇನಾ ಈಗ ಶಿವ ಸೇನಾ (ಯುಬಿಟಿ) ಮತ್ತು ಶಿವ ಸೇನಾ (ಏಕನಾಥ ಶಿಂಧೆ) ಆಗಿ ಎದುರಾಳಿಗಳಾಗಿವೆ. ಎನ್‌ಸಿಪಿ ಈಗ ಎನ್‌ಸಿಪಿ (ಶರದ್ ಪವಾರ್‌) ಮತ್ತು ಎನ್‌ಸಿಪಿ (ಅಜಿತ್ ಪವಾರ್‌) ಆಗಿ ಪ್ರತಿಸ್ಪರ್ಧಿಗಳಾಗಿವೆ. ಯಥಾ ಪ್ರಕಾರ ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ್ ಅಘಾಡಿಯಲ್ಲಿ ಎನ್‌ಸಿಪಿ (ಶರದ್ ಪವಾರ್‌) ಮತ್ತು ಶಿವ ಸೇನಾ (ಯುಬಿಟಿ) ಇದ್ದರೆ, ಬಿಜೆಪಿ ನೇತೃತ್ವದ ಮಹಾಯುತಿಯಲ್ಲಿ ಶಿವ ಸೇನಾ (ಏಕನಾಥ ಶಿಂಧೆ) ಮತ್ತು ಎನ್‌ಸಿಪಿ (ಅಜಿತ್ ಪವಾರ್‌) ಗಳಿವೆ. 288 ಕ್ಷೇತ್ರಗಳ ಪೈಕಿ ನೇರ ಸ್ಪರ್ಧೆಗಳನ್ನು ಗಮನಿಸುವಾಗ 75 ಕ್ಷೇತ್ರಗಳಲ್ಲಿ ಬಿಜೆಪಿ vs ಕಾಂಗ್ರೆಸ್‌, 36 ಕ್ಷೇತ್ರಗಳಲ್ಲಿ ಎನ್‌ಸಿಪಿ (ಶರದ್ ಪವಾರ್‌) vs ಎನ್‌ಸಿಪಿ (ಅಜಿತ್ ಪವಾರ್‌), 51 ಕ್ಷೇತ್ರಗಳಲ್ಲಿ ಶಿವ ಸೇನಾ (ಏಕನಾಥ ಶಿಂಧೆ) vs ಶಿವ ಸೇನಾ (ಯುಬಿಟಿ) ನೇರ ಸ್ಪರ್ಧೆ ಇರುವುದು ಖಚಿತವಾಗಿದೆ.

ಪ್ರಮುಖರ ಸ್ಪರ್ಧೆ ಎಲ್ಲಿ?

ಮಹಾರಾಷ್ಟ್ರ ವಿಧಾನಸಭೆ 288 ಕ್ಷೇತ್ರಗಳ ಪೈಕಿ ಆಯ್ದ ಈ 10 ಕ್ಷೇತ್ರಗಳು ತಮ್ಮದೇ ಆದ ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದ್ದು ಪ್ರಮುಖ ಕ್ಷೇತ್ರಗಳಾಗಿ ಗುರುತಿಸಿಕೊಂಡಿವೆ. ಈ ಪೈಕಿ ವರ್ಲಿ, ಬಾರಾಮತಿ, ವಾಂದ್ರೆ ಈಸ್ಟ್‌, ನಾಗಪುರ ನೈಋತ್ಯ, ಕೊಪ್ರಿ-ಪಚ್ಪಖಾಡಿ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿದ್ದು, 10 ಕ್ಷೇತ್ರಗಳಲ್ಲಿ ಗಮನಿಸಬಹುದಾದ ಪ್ರಮುಖರ ವಿವರ ಇಲ್ಲಿದೆ.

ಮಹಾರಾಷ್ಟ್ರ ಚುನಾವಣೆ 2024 ಸ್ಪರ್ಧೆಯಲ್ಲಿರುವ ಪ್ರಮುಖರು

ಅಭ್ಯರ್ಥಿಪಕ್ಷಕ್ಷೇತ್ರ
ಏಕನಾಥ ಶಿಂಧೆ (ಹಾಲಿ ಮುಖ್ಯಮಂತ್ರಿ)ಶಿವ ಸೇನಾ (ಶಿಂಧೆ)ಕೊಪ್ರಿ-ಪಚ್ಪಖಾಡಿ
ದೇವೇಂದ್ರ ಫಡ್ನಾವಿಸ್ (ಉಪ ಮುಖ್ಯಮಂತ್ರಿಬಿಜೆಪಿನಾಗಪುರ ನೈಋತ್ಯ
ಅಜಿತ್ ಪವಾರ್ (ಉಪ ಮುಖ್ಯಮಂತ್ರಿ)ಎನ್‌ಸಿಪಿ (ಎಪಿ)ಬಾರಾಮತಿ
ಆದಿತ್ಯ ಠಾಕ್ರೆ ಶಿವ ಸೇನಾ (ಯುಬಿಟಿ)ವರ್ಲಿ
ಮಿಲಿಂದ್ ದಿಯೋರಾಶಿವ ಸೇನಾ (ಶಿಂಧೆ)ವರ್ಲಿ
ನಾನಾ ಪಟೋಲೆ ಕಾಂಗ್ರೆಸ್‌ಸಕೋಲಿ
ಜೀಶನ್ ಸಿದ್ಧಿಕ್ಎನ್‌ಸಿಪಿ (ಎಪಿ)ಬಾಂದ್ರಾ ಈಸ್ಟ್
ನವಾಬ್ ಮಲಿಕ್ಎನ್‌ಸಿಪಿ (ಎಪಿ)ಮನ್‌ಖುರ್ದ್ ಶಿವಾಜಿ ನಗರ
ರೋಹಿತ್ ಪಾಟೀಲ್ ಎನ್‌ಸಿಪಿ (ಎಪಿ)ತಾಸ್‌ಗಾಂವ್‌

ಮಹಾರಾಷ್ಟ್ರ ಚುನಾವಣೆಯಲ್ಲಿ 288 ಸ್ಥಾನಗಳಿಗೆ ಮತದಾನ ನಡೆದಿದ್ದು, ಶೇಕಡ 66ರಷ್ಟು ಮತದಾನವೂ ಆಗಿದೆ. ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2086 ಸ್ವತಂತ್ರ ಅಭ್ಯರ್ಥಿಗಳು. 9.7 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 6101 ತೃತೀಯ ಲಿಂಗಿಗಳು, 6.41 ಲಕ್ಷ ಅಂಗವೈಕಲ್ಯ ಇರುವ ಮತದಾರರು ಇದ್ದಾರೆ. ಚುನಾವಣಾ ಆಯೋಗವು 1,00,186 ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. 6 ಲಕ್ಷ ಸರ್ಕಾರಿ ಉದ್ಯೋಗಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.