ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vande Bharat Express: ವಿಮಾನದಲ್ಲಿನ ವ್ಯವಸ್ಥೆಯಂತೆಯೇ ವಂದೇ ಭಾರತ್‌ನಲ್ಲೂ ಸ್ವಚ್ಛತಾ ಸಿಬ್ಬಂದಿ ಕಸ ಸಂಗ್ರಹಿಸಲಿದ್ದಾರೆ!

Vande Bharat Express: ವಿಮಾನದಲ್ಲಿನ ವ್ಯವಸ್ಥೆಯಂತೆಯೇ ವಂದೇ ಭಾರತ್‌ನಲ್ಲೂ ಸ್ವಚ್ಛತಾ ಸಿಬ್ಬಂದಿ ಕಸ ಸಂಗ್ರಹಿಸಲಿದ್ದಾರೆ!

Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಸ ಎಸೆಯುವ ಕುರಿತು ವರದಿಗಳನ್ನು ಗಮನಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಈ ರೈಲುಗಳಲ್ಲಿ ಸ್ವಚ್ಛತಾ ಅಭ್ಯಾಸವನ್ನು ಮೇಲ್ದರ್ಜೆಗೇರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಂದೇ ಭಾರತ್‌ ರೈಲಿನಲ್ಲಿ ಇನ್ನು ವಿಮಾನ ಮಾದರಿಯಲ್ಲಿ ಕಸ ಸಂಗ್ರಹ ವ್ಯವಸ್ಥೆ
ವಂದೇ ಭಾರತ್‌ ರೈಲಿನಲ್ಲಿ ಇನ್ನು ವಿಮಾನ ಮಾದರಿಯಲ್ಲಿ ಕಸ ಸಂಗ್ರಹ ವ್ಯವಸ್ಥೆ (Twitter)

ವಿಮಾನಗಳಲ್ಲಿ ಇರುವಂತೆಯೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಇನ್ನು ಕಸ ಸಂಗ್ರಹಕ್ಕೆ ಸ್ವಚ್ಛತಾ ಸಿಬ್ಬಂದಿ ಪ್ರಯಾಣಿಕರ ಬಳಿಗೆ ಬರಲಿದ್ದಾರೆ. ಈ ಹೊಸ ಉಪಕ್ರಮದ ವಿಚಾರವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಸ ಎಸೆಯುವ ಕುರಿತು ವರದಿಗಳನ್ನು ಗಮನಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಈ ರೈಲುಗಳಲ್ಲಿ ಸ್ವಚ್ಛತಾ ಅಭ್ಯಾಸವನ್ನು ಮೇಲ್ದರ್ಜೆಗೇರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವೈಷ್ಣವ್ ಅವರು ವಿಮಾನಗಳಲ್ಲಿರುವಂತೆಯೇ ರೈಲಿನಲ್ಲೂ ಸ್ವಚ್ಛತಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲು ಸೂಚಿಸಿದ್ದಾರೆ. ವಿಮಾನದಲ್ಲಿ ನಿಲ್ದಾಣ ಸಮೀಪಿಸುತ್ತಿರುವಂತೆಯ ಸಿಬ್ಬಂದಿ ಕಸ ಸಂಗ್ರಹಿಸುವ ಚೀಲ ಹಿಡಿದು ಸಾಗುತ್ತಾರೆ. ಇದೇ ಮಾದರಿಯಲ್ಲಿ ರೈಲಿನಲ್ಲಿ ಸ್ವಚ್ಛತಾ ಸಿಬ್ಬಂದಿ ಈ ಕೆಲಸ ನಿರ್ವಹಿಸುತ್ತಾರೆ.

ವಂದೇ ಭಾರತ್ ರೈಲುಗಳಲ್ಲಿ ಸ್ವಚ್ಛತಾ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ಎಂದು ಸಚಿವರು ಶನಿವಾರ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಪ್ರಯಾಣಿಕರ ಸಹಕಾರವನ್ನೂ ಅವರು ಕೋರಿದ್ದಾರೆ. ವಂದೇ ಭಾರತ್ ರೈಲುಗಳ ಕೋಚ್‌ನಲ್ಲಿ ವ್ಯಕ್ತಿಯೊಬ್ಬರು ಪ್ರಯಾಣಿಕರಿಂದ ಕಸ ಸಂಗ್ರಹಿಸುತ್ತಿರುವುದನ್ನು ಪ್ರದರ್ಶಿಸುವ ವೀಡಿಯೊವನ್ನು ಸಚಿವರು ಟ್ವೀಟ್ ಮಾಡಿದ್ದಾರೆ. ಬದಲಾವಣೆಯನ್ನು ಸ್ಪಷ್ಟವಾಗಿ ಬಿಂಬಿಸುವ ಕೆಲಸವನ್ನು ಅವರು ಈ ಟ್ವೀಟ್‌ ಮೂಲಕ ಮಾಡಿದ್ದಾರೆ.

ಖಾಲಿ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಆಹಾರ ಪ್ಯಾಕೆಟ್‌ಗಳು ಮತ್ತು ರೈಲಿನಲ್ಲಿ ಹರಡಿರುವ ಕಾಗದದಂತಹ ಕಸವನ್ನು ತೋರಿಸುವ ವಿವಿಧ ಫೋಟೋಗಳು ಮತ್ತು ವೀಡಿಯೊಗಳು ವಂದೇ ಭಾರತ್‌ ರೈಲಿನ ಸ್ವಚ್ಛತೆಯ ಕಡೆಗೆ ಗಮನಸೆಳೆದಿದ್ದವು. ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ ಅವನೀಶ್ ಶರಣ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ನೆಲದ ಮೇಲೆ ಚದುರಿದ ಕಸವನ್ನು ತೋರಿಸುವ ಛಾಯಾಚಿತ್ರವನ್ನು ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣ ಬಳಕೆದಾರರು ಈ ಬಗ್ಗೆ ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಇದಕ್ಕೂ ಮುನ್ನ, ಇತ್ತೀಚೆಗಷ್ಟೇ ಆರಂಭವಾದ ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಅನ್ನು ಕಸದ ರಾಶಿಯಿಂದ ತುಂಬಿರುವ ಬಗ್ಗೆ ವರದಿಯಾಗಿತ್ತು. “ಸ್ವಚ್ಛತೆ ಎಂದರೆ ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕ್ರಿಯೆ. ಸ್ವಚ್ಛ ರೈಲು-ಸ್ವಚ್ಛ ಭಾರತ್ ಎಂಬ ನಮ್ಮ ಧ್ಯೇಯವಾಕ್ಯ. ಈ ರೀತಿ ವರ್ತಿಸಿದರೆ ಅದನ್ನು ಸಾಧಿಸಲು ಸಾಧ್ಯವಿಲ್ಲ. ನಿಮಗೆ ಉತ್ತಮ ಸೇವೆ ನೀಡಲು ರೈಲ್ವೆಯೊಂದಿಗೆ ಸಹಕರಿಸಿ. ಕಸವನ್ನು ಭೋಗಿಯಲ್ಲಿ ಎಲ್ಲೆಂದರಲ್ಲಿ ಎಸೆಯುವುದನ್ನು ನಿಲ್ಲಿಸಿ” ಎಂದು ವಾಲ್ಟೇರ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನುಪ್ ಸತ್ಪತಿ ಎಎನ್‌ಐ ಸುದ್ದಿ ಸಂಸ್ಥೆಗೆ ಘಟನೆಯ ನಂತರ ನೀಡಿದ ಸಂದರ್ಶನದಲ್ಲಿ ಮನವಿ ಮಾಡಿದ್ದರು.

ಗಮನಿಸಬಹುದಾದ ಸುದ್ದಿ

ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ವಿಷಯಗಳು ಸಂವಿಧಾನದ ವ್ಯಾಖ್ಯಾನವನ್ನು ಒಳಗೊಂಡಿರುವ ಕಾರಣ ಐವರು ನ್ಯಾಯಮೂರ್ತಿಗಳ ವಿಸ್ತೃತ ಪೀಠದಿಂದ ಈ ದಾವೆಗಳ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಕೆಯಾಗಿದೆ. ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಕರ್ನಾಟಕದಲ್ಲಿ ಈ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಇದು ಅತ್ಯಂತ ಮಹತ್ವದ ಸಭೆ ಎಂದು ಹೇಳಿದ ಅವರು, ನಾನು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕಳೆದ 5 ದಶಕಗಳಿಂದ ಹೋರಾಟ ಮಾಡುತ್ತಿದ್ದೇನೆ ಎಂದ ಅವರು, ತಾವು ರೈತರಿಗಾಗಿ ಬಜೆಟ್ ಮಂಡಿಸಿದ್ದೆ ಎಂಬುದನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೆನಪಿಸಿಕೊಟ್ಟರು. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point