ಅಫ್ಘನ್ ಸರಣಿ ಬಳಿಕ ರಣಜಿಯತ್ತ ಹೆಜ್ಜೆ ಹಾಕಿದ ರಿಂಕು, ಸಂಜು, ತಿಲಕ್; ಇಶಾನ್ ಕಿಶನ್ ನಾಪತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಫ್ಘನ್ ಸರಣಿ ಬಳಿಕ ರಣಜಿಯತ್ತ ಹೆಜ್ಜೆ ಹಾಕಿದ ರಿಂಕು, ಸಂಜು, ತಿಲಕ್; ಇಶಾನ್ ಕಿಶನ್ ನಾಪತ್ತೆ

ಅಫ್ಘನ್ ಸರಣಿ ಬಳಿಕ ರಣಜಿಯತ್ತ ಹೆಜ್ಜೆ ಹಾಕಿದ ರಿಂಕು, ಸಂಜು, ತಿಲಕ್; ಇಶಾನ್ ಕಿಶನ್ ನಾಪತ್ತೆ

  • Sanju Samson Rinku Singh in Ranji Trophy 2024: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20ಐ ಸರಣಿಯ ಕೊನೆಗೊಂಡ ಕೆಲವೇ ಗಂಟೆಗಳಲ್ಲಿ ಕೆಲ ಆಟಗಾರರು ರಣಜಿ ಆಡಲು ತಮ್ಮ ತವರು ರಾಜ್ಯಗಳತ್ತ ಮರಳಿದ್ದು, ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇಶಾನ್ ಕಿಶನ್ ಮಾತ್ರ ಇನ್ನೂ ನಾಪತ್ತೆಯಾಗಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಚುಟುಕು ಸರಣಿಯ ನಂತರ ತಂಡದಲ್ಲಿದ್ದ ಕೆಲ ಆಟಗಾರರು ಅಫ್ಘನ್ ಸರಣಿ ಮುಗಿದ ಕೆಲವೇ ಗಂಟೆಗಳಲ್ಲಿ ರಣಜಿ ಕ್ರಿಕೆಟ್​ಗೆ ಮರಳಿದ್ದಾರೆ.
icon

(1 / 9)

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಚುಟುಕು ಸರಣಿಯ ನಂತರ ತಂಡದಲ್ಲಿದ್ದ ಕೆಲ ಆಟಗಾರರು ಅಫ್ಘನ್ ಸರಣಿ ಮುಗಿದ ಕೆಲವೇ ಗಂಟೆಗಳಲ್ಲಿ ರಣಜಿ ಕ್ರಿಕೆಟ್​ಗೆ ಮರಳಿದ್ದಾರೆ.(PTI)

ಆದರೆ ರಣಜಿ ಕ್ರಿಕೆಟ್​ ಆಡುವಂತೆ ಹೆಡ್​​ಕೋಚ್​ ರಾಹುಲ್ ದ್ರಾವಿಡ್ ಸೂಚಿಸಿದ್ದರೂ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಅವರ ಮಾತನ್ನು ಧಿಕ್ಕರಿಸಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಸಲಹೆಗೂ ಕಿಮ್ಮತ್ತು ನೀಡಲಿಲ್ಲ.
icon

(2 / 9)

ಆದರೆ ರಣಜಿ ಕ್ರಿಕೆಟ್​ ಆಡುವಂತೆ ಹೆಡ್​​ಕೋಚ್​ ರಾಹುಲ್ ದ್ರಾವಿಡ್ ಸೂಚಿಸಿದ್ದರೂ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಅವರ ಮಾತನ್ನು ಧಿಕ್ಕರಿಸಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಸಲಹೆಗೂ ಕಿಮ್ಮತ್ತು ನೀಡಲಿಲ್ಲ.(PTI)

ಅಫ್ಘಾನಿಸ್ತಾನ ಸರಣಿ ಮುಗಿದ ಬಳಿಕ ರಣಜಿಗೆ ಯಾವೆಲ್ಲಾ ಆಟಗಾರರು ಮರಳಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
icon

(3 / 9)

ಅಫ್ಘಾನಿಸ್ತಾನ ಸರಣಿ ಮುಗಿದ ಬಳಿಕ ರಣಜಿಗೆ ಯಾವೆಲ್ಲಾ ಆಟಗಾರರು ಮರಳಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ರಣಜಿಯಲ್ಲಿ ಕೇರಳ ತಂಡದ ಭಾಗವಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಕೊನೆ ಟಿ20ಯಲ್ಲಿ ಸಿಕ್ಕ ಅವಕಾಶದಲ್ಲಿ ಡಕೌಟ್ ಆದರು. ಜೊತೆಗೆ ಸೂಪರ್ ಓವರ್‌ನಲ್ಲೂ ರನ್ ಗಳಿಸಲಿಲ್ಲ. ಕೇರಳ ಪರ ಕಣಕ್ಕಿಳಿದ ಸಂಜು ಮುಂಬೈ ವಿರುದ್ಧ 38 ರನ್ ಗಳಿಸಿದ್ದಾರೆ.
icon

(4 / 9)

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ರಣಜಿಯಲ್ಲಿ ಕೇರಳ ತಂಡದ ಭಾಗವಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಕೊನೆ ಟಿ20ಯಲ್ಲಿ ಸಿಕ್ಕ ಅವಕಾಶದಲ್ಲಿ ಡಕೌಟ್ ಆದರು. ಜೊತೆಗೆ ಸೂಪರ್ ಓವರ್‌ನಲ್ಲೂ ರನ್ ಗಳಿಸಲಿಲ್ಲ. ಕೇರಳ ಪರ ಕಣಕ್ಕಿಳಿದ ಸಂಜು ಮುಂಬೈ ವಿರುದ್ಧ 38 ರನ್ ಗಳಿಸಿದ್ದಾರೆ.(PTI)

ಬೆಂಗಳೂರಿನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಂಕು ಸಿಂಗ್, ಪಂದ್ಯದ ನಂತರ ಅವರು ಮೀರತ್ ತಲುಪಿದರು. ಅಲ್ಲಿ ರಿಂಕು ಉತ್ತರ ಪ್ರದೇಶ ಪರ ರಣಜಿ ಟ್ರೋಫಿಯಲ್ಲಿ ಬಿಹಾರ ವಿರುದ್ಧ ಪಂದ್ಯ ಆಡುತ್ತಿದ್ದಾರೆ.
icon

(5 / 9)

ಬೆಂಗಳೂರಿನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಂಕು ಸಿಂಗ್, ಪಂದ್ಯದ ನಂತರ ಅವರು ಮೀರತ್ ತಲುಪಿದರು. ಅಲ್ಲಿ ರಿಂಕು ಉತ್ತರ ಪ್ರದೇಶ ಪರ ರಣಜಿ ಟ್ರೋಫಿಯಲ್ಲಿ ಬಿಹಾರ ವಿರುದ್ಧ ಪಂದ್ಯ ಆಡುತ್ತಿದ್ದಾರೆ.(AFP)

ತಿಲಕ್ ವರ್ಮಾ ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯವನ್ನು ಆಡುವ ಅವಕಾಶ ಪಡೆದರು. ಆದರೆ ವಿರಾಟ್ ಕೊಹ್ಲಿ ಮರಳಿದ ನಂತರ, ಅವರು ಆಡುವ ಹನ್ನೊಂದರಿಂದ ಹೊರಗುಳಿದರು. 2 ಪಂದ್ಯಗಳಿಗೆ ಬೆಂಚ್ ಕಾದ ತಿಲಕ್, ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ಪರ ಆಡುತ್ತಿದ್ದಾರೆ. ರಣಜಿಗೆ ಮರಳಿದ ಬೆನ್ನಲ್ಲೇ ಶತಕ (103) ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 
icon

(6 / 9)

ತಿಲಕ್ ವರ್ಮಾ ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯವನ್ನು ಆಡುವ ಅವಕಾಶ ಪಡೆದರು. ಆದರೆ ವಿರಾಟ್ ಕೊಹ್ಲಿ ಮರಳಿದ ನಂತರ, ಅವರು ಆಡುವ ಹನ್ನೊಂದರಿಂದ ಹೊರಗುಳಿದರು. 2 ಪಂದ್ಯಗಳಿಗೆ ಬೆಂಚ್ ಕಾದ ತಿಲಕ್, ರಣಜಿ ಟ್ರೋಫಿಯಲ್ಲಿ ಹೈದರಾಬಾದ್ ಪರ ಆಡುತ್ತಿದ್ದಾರೆ. ರಣಜಿಗೆ ಮರಳಿದ ಬೆನ್ನಲ್ಲೇ ಶತಕ (103) ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. (PTI)

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡುವ ಹನ್ನೊಂದರ ಭಾಗವಾಗಿದ್ದರು. 3ನೇ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈಗ ವಿದರ್ಭ ಪರ ಸೌರಾಷ್ಟ್ರ ಪರ ರಣಜಿ ಆಡುತ್ತಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ 28 ರನ್ ಕಲೆ ಹಾಕಿದ್ದಾರೆ. ಈ ಪಂದ್ಯದಲ್ಲಿ ವಿದರ್ಭ ಪರ ಗಳಿಸಿದ ಗರಿಷ್ಠ ಸ್ಕೋರ್. ಏಕೆಂದರೆ ತಂಡ 78 ರನ್​ಗಳಿಗೆ ಆಲೌಟ್ ಆಗಿದೆ.
icon

(7 / 9)

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡುವ ಹನ್ನೊಂದರ ಭಾಗವಾಗಿದ್ದರು. 3ನೇ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈಗ ವಿದರ್ಭ ಪರ ಸೌರಾಷ್ಟ್ರ ಪರ ರಣಜಿ ಆಡುತ್ತಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ 28 ರನ್ ಕಲೆ ಹಾಕಿದ್ದಾರೆ. ಈ ಪಂದ್ಯದಲ್ಲಿ ವಿದರ್ಭ ಪರ ಗಳಿಸಿದ ಗರಿಷ್ಠ ಸ್ಕೋರ್. ಏಕೆಂದರೆ ತಂಡ 78 ರನ್​ಗಳಿಗೆ ಆಲೌಟ್ ಆಗಿದೆ.

ಅಫ್ಘಾನಿಸ್ತಾನ ಸರಣಿಯಲ್ಲಿ ಶಿವಂ ದುಬೆ ಅದ್ಭುತ ಪ್ರದರ್ಶನ ನೀಡಿದರು. ಮೊದಲ 2 ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಗಳಿಸಿದರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದರು. ಬೆಂಗಳೂರಿನಲ್ಲಿ ಪಂದ್ಯ ಆಡಿದ ಬಳಿಕ ನೇರವಾಗಿ ತಿರುವನಂತಪುರಂ ತಲುಪಿದರು. ಅಲ್ಲಿ ಮುಂಬೈನಿಂದ ಕೇರಳ ವಿರುದ್ಧ ಪಂದ್ಯ ಆಡುತ್ತಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ 51 ರನ್ ಬಾರಿಸಿದ್ದಾರೆ.
icon

(8 / 9)

ಅಫ್ಘಾನಿಸ್ತಾನ ಸರಣಿಯಲ್ಲಿ ಶಿವಂ ದುಬೆ ಅದ್ಭುತ ಪ್ರದರ್ಶನ ನೀಡಿದರು. ಮೊದಲ 2 ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಗಳಿಸಿದರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದರು. ಬೆಂಗಳೂರಿನಲ್ಲಿ ಪಂದ್ಯ ಆಡಿದ ಬಳಿಕ ನೇರವಾಗಿ ತಿರುವನಂತಪುರಂ ತಲುಪಿದರು. ಅಲ್ಲಿ ಮುಂಬೈನಿಂದ ಕೇರಳ ವಿರುದ್ಧ ಪಂದ್ಯ ಆಡುತ್ತಿದ್ದು, ಮೊದಲ ಇನ್ನಿಂಗ್ಸ್​​ನಲ್ಲಿ 51 ರನ್ ಬಾರಿಸಿದ್ದಾರೆ.(PTI)

ಅಯೋಧ್ಯೆ ರಾಮ ಮಂದಿರ ಕುರಿತು ಕ್ಷಣ ಕ್ಷಣ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್​ ಕನ್ನಡ ಓದಿ.
icon

(9 / 9)

ಅಯೋಧ್ಯೆ ರಾಮ ಮಂದಿರ ಕುರಿತು ಕ್ಷಣ ಕ್ಷಣ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್​ ಕನ್ನಡ ಓದಿ.


ಇತರ ಗ್ಯಾಲರಿಗಳು