ಕನ್ನಡ ಸುದ್ದಿ  /  Photo Gallery  /  Andre Russell Completes 200 Indian Premier League Sixes During Kkr Vs Srh Match And Breaks Chris Gayles Record Prs

ಐಪಿಎಲ್​ನಲ್ಲಿ ಆ್ಯಂಡ್ರೆ ರಸೆಲ್ ‘ದ್ವಿಶತಕ’; ಕ್ರಿಸ್ ಗೇಲ್ ದಾಖಲೆ ಮುರಿದು ರೋಹಿತ್ ಕ್ಲಬ್​ಗೆ ಸೇರಿದ ಪವರ್ ಹಿಟ್ಟರ್

  • Andre Russell: 2024ರ ಐಪಿಎಲ್​ 3ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ಆ್ಯಂಡ್ರೆ ರಸೆಲ್ ಶ್ರೀಮಂತ ಲೀಗ್ ಸಿಕ್ಸರ್​​ಗಳ ಮೂಲಕ​ ಹೊಸದೊಂದು ದಾಖಲೆ ಬರೆದಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 4 ರನ್​​ಗಳ ರೋಚಕ ಗೆಲುವು ಸಾಧಿಸಿದೆ. ಕೆಕೆಆರ್​ ಪರ ಸುನಾಮಿ ಬ್ಯಾಟಿಂಗ್ ನಡೆಸಿದ ಆ್ಯಂಡ್ರೆ ರಸೆಲ್, 25 ಎಸೆತಗಳಲ್ಲಿ 7 ಸಿಕ್ಸರ್​, 3 ಬೌಂಡರಿ ಸಹಾಯದಿಂದ ಅಜೇಯ 64 ರನ್ ಗಳಿಸಿದ್ದಾರೆ.
icon

(1 / 7)

ಕೋಲ್ಕತ್ತಾದ ಈಡನ್ ಗಾರ್ಡನ್​​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​​ 7 ವಿಕೆಟ್​ ನಷ್ಟಕ್ಕೆ 208 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸನ್​ರೈಸರ್ಸ್ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ 4 ರನ್​​ಗಳಿಂದ ಶರಣಾಯಿತು.
icon

(2 / 7)

ಎಸ್​ಆರ್​ಹೆಚ್​ ವಿರುದ್ಧ ಸಿಕ್ಸರ್​​ಗಳ ಸುರಿಮಳೆಗೈದ ರಸೆಲ್​ ಅವರು ಐಪಿಎಲ್​​ನಲ್ಲಿ 200 ಸಿಕ್ಸರ್​​ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಆ ಮೂಲಕ ಐಪಿಎಲ್​ನಲ್ಲಿ 200 ಸಿಕ್ಸರ್​ ಸಿಡಿಸಿದ 9ನೇ ಬ್ಯಾಟರ್​ ಎಂಬ ದಾಖಲೆಗೆ ರಸೆಲ್​ ಪಾತ್ರರಾಗಿದ್ದಾರೆ. ಸದ್ಯ ಅವರ ಸಿಕ್ಸರ್​ ಸಂಖ್ಯೆ 202.
icon

(3 / 7)

ಮತ್ತೊಂದು ದಾಖಲೆ ಅಂದರೆ ಐಪಿಎಲ್​​ನಲ್ಲಿ ಅತಿ ವೇಗದ 200 ಸಿಕ್ಸರ್​​ಬಾರಿಸಿದ ಆಟಗಾರ ಎನಿಸಿದ್ದಾರೆ. ರಸೆಲ್ 1322 ಎಸೆತಗಳಲ್ಲಿ 200 ಸಿಕ್ಸರ್​​​ಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಕ್ರಿಸ್​ಗೇಲ್ 2ನೇ ಪಡೆದಿದ್ದು, 200 ಸಿಕ್ಸರ್​ ಸಿಡಿಸಲು 1811 ಎಸೆತ ತೆಗೆದುಕೊಂಡಿದ್ದರು. ಆ ಮೂಲಕ ವೇಗದ 200 ಸಿಕ್ಸರ್​ ಸಿಡಿಸಿದ್ದ ಗೇಲ್ ದಾಖಲೆ ಮುರಿದು ರಸೆಲ್ ಅಗ್ರಸ್ಥಾನಕ್ಕೇರಿದ್ದಾರೆ.
icon

(4 / 7)

ಗೇಲ್ ಐಪಿಎಲ್​​ನಲ್ಲಿ ಅತಿ ಹೆಚ್ಚು ಸಿಕ್ಸರ್​​​ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅವರು ಒಟ್ಟು 357 ಸಿಕ್ಸರ್ ಸಿಡಿಸಿದ್ದಾರೆ. 257 ಸಿಕ್ಸರ್ ಸಿಡಿಸಿದ ರೋಹಿತ್​​ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ.
icon

(5 / 7)

ಎಬಿ ಡಿವಿಲಿಯರ್ಸ್ (251), ಎಂಎಸ್ ಧೋನಿ (239), ವಿರಾಟ್ ಕೊಹ್ಲಿ (235), ಡೇವಿಡ್ ವಾರ್ನರ್ (228), ಕೀರನ್ ಪೊಲಾರ್ಡ್ (223) ಮತ್ತು ಸುರೇಶ್ ರೈನಾ (203) ನಂತರದ ಸ್ಥಾನಗಳಲ್ಲಿದ್ದಾರೆ. ಇವರ ನಂತರ ರಸೆಲ್ ಸ್ಥಾನ ಪಡೆದಿದ್ದಾರೆ.
icon

(6 / 7)

ಎಬಿ ಡಿವಿಲಿಯರ್ಸ್ (251), ಎಂಎಸ್ ಧೋನಿ (239), ವಿರಾಟ್ ಕೊಹ್ಲಿ (235), ಡೇವಿಡ್ ವಾರ್ನರ್ (228), ಕೀರನ್ ಪೊಲಾರ್ಡ್ (223) ಮತ್ತು ಸುರೇಶ್ ರೈನಾ (203) ನಂತರದ ಸ್ಥಾನಗಳಲ್ಲಿದ್ದಾರೆ. ಇವರ ನಂತರ ರಸೆಲ್ ಸ್ಥಾನ ಪಡೆದಿದ್ದಾರೆ.(PTI)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಇತರ ಗ್ಯಾಲರಿಗಳು