ಧಾರಾವಾಡದಲ್ಲಿ ಭಾರೀ ಚಳಿ; ಸತತ 3 ಗಂಟೆಗಳ ಕಾಲ ಮುಸುಕಿದ ಮಂಜು
- ರಾಜ್ಯದಲ್ಲೆಡೆ ಚುಮುಚುಮು ಚಳಿ ಹೆಚ್ಚಾಗುತ್ತಿದೆ. ಮಳೆಗಾಲ ಮುಗಿದು ಚಳಿಗಾಲದ ವಾತಾವರಣ ದಿನೇ ದಿನೇ ಹೆಚ್ಚಾಗುತ್ತದೆ. ಮಂಜು ಮುಸುಕಿದ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತಿದ್ದು, ಕಂಬಳಿ ಹೊದ್ದುಕೊಳ್ಳುವಂತಹ ಮುಂಜಾನೆ ನಿರ್ಮಾಣವಾಗುತ್ತಿದೆ.
- ರಾಜ್ಯದಲ್ಲೆಡೆ ಚುಮುಚುಮು ಚಳಿ ಹೆಚ್ಚಾಗುತ್ತಿದೆ. ಮಳೆಗಾಲ ಮುಗಿದು ಚಳಿಗಾಲದ ವಾತಾವರಣ ದಿನೇ ದಿನೇ ಹೆಚ್ಚಾಗುತ್ತದೆ. ಮಂಜು ಮುಸುಕಿದ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತಿದ್ದು, ಕಂಬಳಿ ಹೊದ್ದುಕೊಳ್ಳುವಂತಹ ಮುಂಜಾನೆ ನಿರ್ಮಾಣವಾಗುತ್ತಿದೆ.
(1 / 10)
ಪೇಡಾ ನಗರಿ ಧಾರವಾಡದಲ್ಲೂ ಇದೇ ವಾತಾವರಣ ನಿರ್ಮಾಣವಾಗಿದೆ. ಇಂದು (ಡಿಸೆಂಬರ್ 21) ಬೆಳಗಿನ ಜಾವ ಸತತವಾಗಿ 3 ಗಂಟೆಗಳ ಕಾಲ ಅತಿಯಾದ ಮಂಜು ವಿದ್ಯಾನಗರಿ ಧಾರವಾಡವನ್ನು ಆವರಿಸಿತ್ತು.
(3 / 10)
ರಾತ್ರಿಯ ಸಮಯದಲ್ಲಿ ಸಹ ವಾತಾವರಣ ಹೆಚ್ಚಿನ ಚಳಿಯಿಂದ ಕೂಡಿದ್ದು, ವೃದ್ಧರು ಮತ್ತು ಚಿಕ್ಕಮಕ್ಕಳು ಮನೆಯಿಂದ ಆಚೆ ಬರಲು ಪರದಾಟ ಅನುಭವಿಸುವಂತಾಯಿತು.
(4 / 10)
ಧಾರವಾಡದ ಪ್ರತಿ ಪ್ರದೇಶವೂ ಮುಸುಕಿನ ಮಂಜಿನಿಂದ ಮುಳುಗಿದ್ದು, ಮುಂಜಾನೆಯಲ್ಲಿ ವಾಕಿಂಗ್ ಮಾಡುವವರು, ಕ್ರೀಡೆಯಲ್ಲಿ ತರಬೇತಿ ಪಡೆಯುವವರು, ವಾಹನ ಸವಾರರು ಇಂದು ಕವಿದ ಮಂಜಿನಲ್ಲಿ ಕಂಡಿದ್ದು ಹೀಗೆ.
(5 / 10)
ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಲ್ಲಲ್ಲಿ ಮಂಜಿನ ವಾತಾವರಣ ಕಂಡು ಬಂದಿದೆ.
(6 / 10)
ಆದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೇಳಿಕೊಳ್ಳುವಂತಹ ಚಳಿ ಇಲ್ಲ. ಹೀಗಾಗಿ ಕೃಷಿಕರು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ವರದಿಗಳು ತಿಳಿಸಿವೆ.
(7 / 10)
ಇತ್ತ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ.
ಇತರ ಗ್ಯಾಲರಿಗಳು