Asian Games 2023: ಏಷ್ಯನ್ ಗೇಮ್ಸ್; ಶೂಟಿಂಗ್‌ನಲ್ಲಿ ಮತ್ತೊಂದು ಚಿನ್ನ ಸೇರಿ 5ನೇ ದಿನ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ; ಫೋಟೋಸ್
ಏಷ್ಯನ್ ಗೇಮ್ಸ್‌ನಲ್ಲಿ ಭಾರತ 5ನೇ ದಿನವೂ ಪದಕಗಳ ಬೇಟೆಯಾಡಿದ್ದು, 5 ಚಿನ್ನ, 6 ಬೆಳ್ಳಿ ಹಾಗೂ 11 ಕಂಚಿನ ಪದಕಗಳೊಂದಿಗೆ ಒಟ್ಟು 25 ಮೆಡಲ್‌ಗಳೊಂದಿಗೆ ಪದಕಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಚೀನಾ 87 ಚಿನ್ನ ಸೇರಿ ಒಟ್ಟು 167 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
(1 / 7)
ಪುರುಷರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಭಾರತದ ಸರಬ್‌ಜ್ಯೋತ್ ಸಿಂಗ್, ಅರ್ಜುನ್ ಸಿಂಗ್ ಚೀಮ ಹಾಗೂ ಶಿವ ನರ್ವಾಲ್ ಅವರು ಚಿನ್ನದ ಪದಕ ಗೆದ್ದಿದ್ದಾರೆ. (PTI)
(3 / 7)
ಈಕ್ವಿಸ್ಟ್ರಿಯನ್ ಡ್ರೆಸ್ಸೇಜ್ ವೈಯಕ್ತಿಕ ಇಂಟರ್ಮಿಡಿಯೇಟ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಅನುಷ್ ಅಗರ್ವಾಲಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.(PTI)
(4 / 7)
ಟೆನಿಸ್ ಪುರುಷರ ಡಬಲ್ಸ್‌ನಲ್ಲಿ ಸಾಕೇತ್ ಮೈನೇನಿ ಮತ್ತು ರಾಮ್ ಕುಮಾರ್ ರಾಮನಾಥನ್ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ. ಇಂದು (ಸೆ.29, ಶುಕ್ರವಾರ) ಚೈನೀಸ್ ತೈಪೆಯ ಜೇಸನ್ ಜಂಗ್ ಮತ್ತು ಯು-ಹ್ಸಿಯು ಹ್ಸು ಅವರನ್ನು ಎದುರಿಸಲಿದ್ದಾರೆ.(PTI)
(5 / 7)
ಟೆನಿಸ್ ವಿಭಾಗದ ಮಿಶ್ರ ಡಬಲ್ಸ್‌ನಲ್ಲಿ ರೋಹಣ್ ಬೋಪಣ್ಣ ಮತ್ತು ರುತುಜಾ ಭೋಸಲೆ ಕೂಡ ಸಮಿ ಫೈನಲ್‌ಗೆ ತಲುಪುವ ಮೂಲಕ ಕನಿಷ್ಠ ಕಂಚಿನ ಪಂದಕವನ್ನು ಖಚಿತಪಡಿಸಿದ್ದಾರೆ.(PTI)
ಇತರ ಗ್ಯಾಲರಿಗಳು