ಭಾರತದ ಮಾರುಕಟ್ಟೆಗೆ ಆಗಮಿಸಿದ ಹೊಸ ಕಿಯಾ ಕಾರ್ನಿವಾಲ್ ಚಿತ್ರಗಳನ್ನು ನೋಡಿ, ಇದು 63.9 ಲಕ್ಷ ರೂನ ಎಂಪಿವಿ
- Kia Carnival 2024 Photos: ಕಿಯಾ ಕಾರ್ನಿವಲ್ 2024 ಎಂಬ ಐಷಾರಾಮಿ ಎಂಪಿವಿ ಬಿಡುಗಡೆಯಾಗಿದೆ. ಇದರ ಎಕ್ಸ್‌ಶೋರೂಂ ದರ 63.90 ಲಕ್ಷ ರೂಪಾಯಿ ಇದೆ. ಈ ಲಿಮೋಸಿನ್ ಎಂಪಿವಿಯ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಹೇಗಿದೆ? ಎಂಪಿವಿಯ ಚಿತ್ರಗಳನ್ನು ನೋಡುತ್ತ ಹೆಚ್ಚಿನ ಮಾಹಿತಿ ಪಡೆಯೋಣ.
- Kia Carnival 2024 Photos: ಕಿಯಾ ಕಾರ್ನಿವಲ್ 2024 ಎಂಬ ಐಷಾರಾಮಿ ಎಂಪಿವಿ ಬಿಡುಗಡೆಯಾಗಿದೆ. ಇದರ ಎಕ್ಸ್‌ಶೋರೂಂ ದರ 63.90 ಲಕ್ಷ ರೂಪಾಯಿ ಇದೆ. ಈ ಲಿಮೋಸಿನ್ ಎಂಪಿವಿಯ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಹೇಗಿದೆ? ಎಂಪಿವಿಯ ಚಿತ್ರಗಳನ್ನು ನೋಡುತ್ತ ಹೆಚ್ಚಿನ ಮಾಹಿತಿ ಪಡೆಯೋಣ.
(1 / 10)
ಕಿಯಾ ಕಂಪನಿಯು ಬಹುನಿರೀಕ್ಷಿತ ಕಾರ್ನಿವಲ್ 2024 ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 2024ರ ಕಿಯಾ ಕಾರ್ನಿವಲ್ ಆರಂಭಿಕ ಎಕ್ಸ್ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ.ಈಗಾಗಲೇ ಹೊಸ ಕಾರ್ನಿವಲ್ ಅನ್ನು 2,796 ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ.
(2 / 10)
2024ರ ಕಿಯಾ ಕಾರ್ನಿವಲ್‌ನ ಎಕ್ಸ್‌ಟೀರಿಯರ್ ಸಾಕಷ್ಟು ಬದಲಾಗಿದೆ. ಹಳೆಯ ಕಾರ್ನಿವಲ್‌ಗೆ ಹೋಲಿಸಿದರೆ ಸಾಕಷ್ಟು ಬೋಲ್ಡ್ ಆಗಿದೆ. ಮೊದಲ ನೋಟಕ್ಕೆ ಎಸ್‌ಯುವಿಯತೆ ಕಾಣಿಸುತ್ತದೆ. ಎಸ್‌ಯುವಿಯಿಂದ ಸ್ಪೂರ್ತಿ ಪಡೆದ ವಿನ್ಯಾಸ ಇದರದ್ದಾಗಿದೆ. ವಿಶಾಲವಾದ ಗ್ರಿಲ್‌ಗಳಿಂದ ಕಾರು ಎದ್ದು ಕಾಣಿಸುತ್ತದೆ. ಇದರೊಂದಿಂಗೆ ಲಂಬವಾಗಿ ಜೋಡಿಸಿರುವ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್ ಆಕಾರದ ಡೇಟೈಮ್ ರನ್ನಿಂಗ್ ಲೈಟ್‌ಗಳು ಇವೆ.
(3 / 10)
ಸೈಡ್‌ನಿಂದ ನೋಡಿದರೂ ನೂತನ ಕಾರ್ನಿವಲ್ ಆಕರ್ಷಕವಾಗಿ ಕಾಣಿಸುತ್ತದೆ. ಅಡ್ವೆಂಚರ್ ಪರ್ಸನಾಲಿಟಿಯತೆ ಕಾಣಿಸುತ್ತದೆ. ಹಿಂಭಾಗದಲ್ಲಿ ಕಿಯಾದ ಸಿಗ್ನೇಚರ್ ಎಲ್‌ಇಡಿ ಟೇಲ್ ಲೈಟ್‌ಗಳಿವೆ. ಕಿಯಾ ಸೆಲ್ಟೋಸ್, ಸೊನೆಟ್ ಬಳಿಕ ಸಾಕಷ್ಟು ಅಪ್‌ಡೇಟ್ ಆದ ವಿನ್ಯಾಸ ಕಾಣಿಸುತ್ತದೆ.
(4 / 10)
ಮುಂಭಾಗದಲ್ಲಿ ಎಲ್-ಆಕಾರದ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹಿಂಭಾಗದಲ್ಲಿರುವಂತೆಯೇ ಹೊಂದಿದ್ದು, ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳೊಂದಿಗೆ ಜೋಡಿಸಲಾಗಿದೆ. ಪ್ರತಿ ಹೆಡ್ ಲ್ಯಾಂಪ್ ನಲ್ಲಿ ನಾಲ್ಕು ಪ್ರೊಜೆಕ್ಟರ್ ಎಲ್ಇಡಿ ಸೆಟಪ್ಗಳಿವೆ. ಹೆಡ್ ಲ್ಯಾಂಪ್ ಫೆಂಡರ್ಗಳಿಗೆ ಸುತ್ತುತ್ತದೆ.
(5 / 10)
ಚಕ್ರಗಳು ಡೈಮಂಡ್ ಕಟ್ ಆಗಿದ್ದು, ಕಪ್ಪು ಮತ್ತು ಕ್ರೋಮ್ ಫಿನಿಶ್ ನಲ್ಲಿ ಹೊಸ ವಿನ್ಯಾಸವನ್ನು ಹೊಂದಿವೆ. 18-ಇಂಚು ಗಾತ್ರವಿದೆ. 2024ರ ಕಾರ್ನಿವಲ್ ನ ಒಟ್ಟಾರೆ ವೀಲ್‌ಬೇಸ್ 3090 ಎಂಎಂ ಆಗಿದೆ.
(6 / 10)
ವಾಹನದ ಮುಂಭಾಗದಲ್ಲಿ 'ಟೈಗರ್ ನೋಸ್' ಗ್ರಿಲ್ ಇದ್ದು, ಕೆಳಭಾಗ ಮತ್ತು ಬದಿಗಳಲ್ಲಿ ಕ್ರೋಮ್ ಲೈನಿಂಗ್ ಇದೆ. ಐಷಾರಾಮಿ ಲಿಮೋ 5 ಮೀಟರ್ ಉದ್ದವಿದೆ. ಇದನ್ನು ಗ್ಲೇಸಿಯರ್ ವೈಟ್ ಪರ್ಲ್ ಮತ್ತು ಫ್ಯೂಷನ್ ಬ್ಲ್ಯಾಕ್ ಸೇರಿದಂತೆ ಎರಡು ಬಣ್ಣಗಳ ಆಯ್ಕೆಗಳಲ್ಲಿ ಕಂಪನಿಯು ಮಾರಾಟ ಮಾಡುತ್ತಿದೆ.
(7 / 10)
ಕಿಯಾ ಕಾರ್ನಿವಲ್‌ನ ಇಂಟೀರಿಯರ್ ಕೂಡ ಅತ್ಯಾಕರ್ಷಕವಾಗಿದೆ. ಗುಣಮಟ್ಟದ ವಸ್ತುಗಳಿದ ನಿರ್ಮಾಣದ ಜತೆಗೆ ಅತ್ಯಾಧುನಿಕ ಟೆಕ್ ಫೀಚರ್‌ಗಳು ಗಮನ ಸೆಳೆಯುತ್ತವೆ. ಕಂದು ಮತ್ತು ಕಪ್ಪು ಥೀಮ್‌ನಲ್ಲಿ ಈ ಏಳು ಸೀಟಿನ ಎಂಪಿವಿಯನ್ನು ವಿನ್ಯಾಸ ಮಾಡಲಾಗಿದೆ.
(8 / 10)
ಡ್ಯೂಯೆಲ್ ಪನೋರಾಮಿಕ್ ಡಿಸ್ಪ್ಲೇಗಳೊಂದಿಗೆ ಮೂರು ಸ್ಕ್ರೀನ್‌ಗಳಿವೆ. 12.3 ಇಚಿನ ಇನ್‌ಫೋಟೈನ್‌ಮೆಂಟ್ ಸ್ಕ್ರೀನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಗೆ ಬೆಂಬಲ ನೀಡುತ್ತದೆ. 12.3 ಇಂಚಿನ ಡ್ರೈವರ್ ಡಿಸ್‌ಪ್ಲೇ ಇದೆ. 12 ಸ್ಪೀಕರ್‌ನ ಬಾಷ್ ಸೌಂಡ್ ಸಿಸ್ಟಮ್ ಇದೆ. 11 ಇಂಚಿನ ಹೆಡ್ಸ್ ಅಪ್ ಡಿಸ್‌ಪ್ಲೇ ಕೂಡ ಇದೆ. ಮೊದಲ ಮತ್ತು ಎರಡನೇ ಸಾಲಿನಲ್ಲಿ ಪವರ್ಡ್ ಮತ್ತು ವೆಂಟಿಲೇಟೆಡ್ ಸೀಟುಗಳಿವೆ.
(9 / 10)
ಎಂಟು ಏರ್‌ಬ್ಯಾಗ್‌ಗಳು, ಇಬಿಡಿ ಜತೆಗೆ ಎಬಿಎಸ್, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ವ್ಯವಸ್ಥೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‌ಗಳು ಇವೆ. ಇದರೊಂದಿಗೆ 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ, ಲೆವೆಲ್ 2 ಎಡಿಎಸ್ ವ್ಯವಸ್ಥೆ, 23 ಸುರಕ್ಷತಾ ಫೀಚರ್‌ಗಳು ಇವೆ. ಅಂದರೆ, ಮುಂಭಾಗಕ್ಕೆ ಪಲ್ಟಿಯಾಗುವುದನ್ನು ತಪ್ಪಿಸುವ ವ್ಯವಸ್ಥೆ, ಲೇನ್ ತಪ್ಪಿ ಪ್ರಯಾಣಿಸಿದರೆ ಎಚ್ಚರಿಸುವ ವ್ಯವಸ್ಥೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮುಂತಾದ ಫೀಚರ್‌ಗಳಿವೆ.
ಇತರ ಗ್ಯಾಲರಿಗಳು