ಪರಿಷ್ಕೃತ 2024 ನಿಸ್ಸಾನ್ ಮ್ಯಾಗ್ನೈಟ್ ಬಿಡುಗಡೆ: ಹೊಸ ಕಾರಲ್ಲಿ ಏನಿದೆ ವಿಶೇಷ? ಚಿತ್ರ ಮಾಹಿತಿ
- ನಿಸ್ಸಾನ್ ಮ್ಯಾಗ್ನೇಟ್‌ನ ನವೀಕೃತ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಹಬ್ಬದ ಋತುವಿನಲ್ಲಿ ರಿಲೀಸ್ ಆಗುತ್ತಿರುವ ಈ ಫೇಸ್‌ಲಿಫ್ಟೆಡ್ ಮ್ಯಾಗ್ನೇಟ್‌ನಲ್ಲಿ ಕೆಲವು ಹೊಸ ಫೀಚರ್‌ಗಳು ಸೇರ್ಪಡೆಯಾಗಿವೆ.
- ನಿಸ್ಸಾನ್ ಮ್ಯಾಗ್ನೇಟ್‌ನ ನವೀಕೃತ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಹಬ್ಬದ ಋತುವಿನಲ್ಲಿ ರಿಲೀಸ್ ಆಗುತ್ತಿರುವ ಈ ಫೇಸ್‌ಲಿಫ್ಟೆಡ್ ಮ್ಯಾಗ್ನೇಟ್‌ನಲ್ಲಿ ಕೆಲವು ಹೊಸ ಫೀಚರ್‌ಗಳು ಸೇರ್ಪಡೆಯಾಗಿವೆ.
(1 / 9)
ಮ್ಯಾಗ್ನೈಟ್ ಮೊದಲ ನೋಟಕ್ಕೆ ಹಳೆಯ ಆವೃತ್ತಿಯಂತೆಯೇ ಇದೆ. ಆದರೆ, ಕ್ರೋಮ್ ಫಿನಿಶ್ ಇರುವ ಸ್ವಲ್ಪ ಅಗಲವಾದ ಗ್ರಿಲ್ ಈ ಕಾರಿಗೆ ಹೊಸ ಲುಕ್‌ನೀಡಿದೆ. ಕಾರಿನ ಕೆಳಭಾಗದಲ್ಲಿ ಸಾಂಪ್ರದಾಯಿಕ ಬೂಮರಾಂಗ್ ತರಹದ ಎಲ್ಇಡಿ ಡಿಆರ್‌ಎಲ್‌ಗಳು ಸುತ್ತುವರೆದಿವೆ. ಮುಂಭಾಗದಲ್ಲಿ ಹೊಸ ಬಂಪರ್ ಕೂಡ ಅಳವಡಿಸಲಾಗಿದೆ.
(2 / 9)
ಎಲ್ಇಡಿ ಹೆಡ್ ಲ್ಯಾಂಪ್‌ಗಳು ಕ್ರಿಯೇಟಿವ್ ಪ್ರಾಜೆಕ್ಟರ್ ಸೆಟಪ್ ಹೊಂದಿವೆ. ಗ್ರಿಲ್ ಅನ್ನು ಗ್ಲೋಸ್-ಬ್ಲ್ಯಾಕ್ ಫಿನಿಶ್ ನೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ.
(3 / 9)
ಫೆಂಡರ್‌ಗಳ ಮೇಲೆ ಮ್ಯಾಗ್ನೈಟ್ ಬ್ಯಾಡ್ಜಿಂಗ್ ಇದೆ. ಸೈಡ್ ರಿಯರ್ ವ್ಯೂ ಕನ್ನಡಿಗಳು ಮತ್ತು ಛಾವಣಿಯು ಗ್ಲೋಸ್-ಬ್ಲ್ಯಾಕ್ ಟ್ರೀಟ್ ಮೆಂಟ್ ಪಡೆದಿದೆ. ನೂತನ ಮ್ಯಾಗ್ನೈಟ್ ವಿಸಿಯಾ, ವಿಸಿಯಾ +, ಅಸೆಂಟಾ, ಎನ್-ಕನೆಕ್ಟಾ, ಟೆಕ್ನಾ ಮತ್ತು ಟೆಕ್ನಾ + ಸೇರಿದಂತೆ 6 ಆವೃತ್ತಿಗಳಲ್ಲಿ ಲಭ್ಯವಿದೆ.
(4 / 9)
ಮ್ಯಾಗ್ನೈಟ್ ಟೈಲ್ ಲ್ಯಾಂಪ್ ಗಳ ಸುತ್ತಲೂ ಪ್ರಮುಖ ಕ್ರೋಮ್ ವಿನ್ಯಾಸವಿದೆ. ಮತ್ತೊಂದು ಕ್ರೋಮ್ ಅಕ್ಸೆಸರಿ ಮಧ್ಯದಲ್ಲಿರುವ ಲೈಟ್ ಅನ್ನು ಸಂಪರ್ಕಿಸುತ್ತದೆ. ಈ ಹೊಸ ಮಾದರಿಗಾಗಿ ಹಿಂಭಾಗದ ಬಂಪರ್ ಅನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ.
(5 / 9)
ಕಾರಿನ ಕ್ಯಾಬಿನ್ ವಿನ್ಯಾಸ ಮೊದಲಿನಂತೆ ಇದ್ದರೂ ಹೊಸ ಫಾಕ್ಸ್ ಲೆದರ್ ಅಪ್ ಹೋಲ್ಸ್ಟರಿ ಅಳವಡಿಸಲಾಗಿದೆ. ಇದು ಫ್ರೇಮ್ ಲೆಸ್ ವಿನ್ಯಾಸದೊಂದಿಗೆ ಸ್ವಯಂ-ಡಿಮ್ಮಿಂಗ್ ಐಆರ್ ವಿಎಂ ಅನ್ನು ಪಡೆದಿದೆ.
(6 / 9)
ಹೊಸ ಥೀಮ್ ಅನ್ನು ಸನ್ ಶೈನ್ ಆರೆಂಜ್ ಎಂದು ಕರೆಯಲಾಗಿದೆ. ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸ್ಕ್ರೀನ್ ಮತ್ತು ಅರ್ಕಾಮಿಸ್ ನ 3 ಡಿ ಸರೌಂಡ್ ಸಿಸ್ಟಮ್ ಇದೆ. ಇದು ಈ ಹಿಂದಿನ ಆವೃತ್ತಿಗಳಲ್ಲಿಯೂ ಇತ್ತು
(7 / 9)
ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಬದಲಾಗದೆ ಉಳಿದಿದೆ.ಅರ್ಕಾಮಿಸ್ ಸೌಂಡ್ ಸಿಸ್ಟಮ್ ಕೂಡ ಮೊದಲಿನದ್ದೇ ಇದೆ. ಈ ಮಾದರಿಯು ಸೆಂಟರ್ ಕನ್ಸೋಲ್ ಕೆಳಗೆ ವೈರ್ ಲೆಸ್ ಚಾರ್ಜರ್ ಪಡೆಯುತ್ತಿದೆ.
(8 / 9)
ಹೊಸ ಮ್ಯಾಗ್ನೈಟ್ ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು, ಆರು ಏರ್‌ಬ್ಯಾಗ್‌ಗಳು, ಗಟ್ಟಿಮುಟ್ಟಾದ ಬಾಡಿ ರಚನೆ ಹೊಂದಿದೆ. ಹೈಸ್ಪೀಡ್ ಅಲರ್ಟ್ ಸಿಸ್ಟಂ, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಇಎಸ್ಸಿಯೊಂದಿಗೆ ವಿಡಿಸಿ, ಟಿಪಿಎಂಎಸ್, ಇಬಿಡಿಯೊಂದಿಗೆ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಮುಂತಾದ ಸೇಫ್ಟಿ ಫೀಚರ್‌ಗಳು ಇವೆ.
ಇತರ ಗ್ಯಾಲರಿಗಳು