ಬೆಂಟ್ಲಿ ಫ್ಲೈಯಿಂಗ್ ಸ್ಪುರ್ ಅನಾವರಣ: ಅವಳಿ ಟರ್ಬೊ ಹೈಬ್ರಿಡ್ ವಿ8 ಎಂಜಿನ್‌ನ ಹೊಸ ಬೆಂಟ್ಲಿ ಕಾರು ನೋಡಿರಣ್ಣ- Photos
- ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರನ್ನು ಕಂಪನಿ ಅನಾವರಣ ಮಾಡಿದೆ. ಮುಂದಿನ ವರ್ಷ ರಸ್ತೆಗಿಳಿಯಲಿರುವ ಇದು ಐಷಾರಾಮಿ ಗ್ರ್ಯಾಂಡ್ ಟೂರರ್ ಕಾರಾಗಿದೆ. ಟ್ವಿನ್-ಟರ್ಬೊ ಹೈಬ್ರಿಡ್ ವಿ 8 ಎಂಜಿನ್ ಹೊಂದಿರುವ ಈ ಕಾರು 771 ಬಿಎಚ್‌ಪಿ ಪವರ್ ನೀಡುತ್ತದೆ. ಒಂದು ಫುಲ್ ಚಾರ್ಜ್‌ಗೆ 829 ಕಿ.ಮೀ ದೂರ ಸಾಗುತ್ತದೆ.

(1 / 9)
ನಾಲ್ಕನೇ ತಲೆಮಾರಿನ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಅನಾವರಣಗೊಂಡಿದೆ. ಈ ಬಾರಿ ಐಷಾರಾಮಿ ಗ್ರ್ಯಾಂಡ್ ಟೂರರ್ ಹಳೆಯ ಡಬ್ಲ್ಯು 12 ಎಂಜಿನ್ ಬದಲು ಹೊಸ ಟ್ವಿನ್-ಟರ್ಬೋಚಾರ್ಜ್ಡ್ ಹೈಬ್ರಿಡ್ ವಿ 8 ಎಂಜಿನ್ ಮೂಲಕ ಆಗಮಿಸಿದೆ. ಒಂದು ಫುಲ್ ಟ್ಯಾಂಕ್ ಮತ್ತು ಫುಲ್ ಬ್ಯಾಟರಿ ಚಾರ್ಜಿಂಗ್‌ನಲ್ಲಿ 829 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ.(Bentley)
(2 / 9)
2025ರ ಫ್ಲೈಯಿಂಗ್ ಸ್ಪರ್ ಕಾರಿನಲ್ಲಿ ಹೊಸ ಗ್ರಿಲ್ ಅಳವಡಿಸಲಾಗಿದ್ದು, ಎರಡೂ ಬದಿಗಳಲ್ಲಿ ಏರ್ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಬಂಪರ್ ಮೊದಲಿಗಿಂತ ಹೆಚ್ಚು ಆಕ್ರಮಣಕಾರಿ ಆಕಾರದಲ್ಲಿದೆ, ಕಾರಿನ ಸುತ್ತಲೂ ರೇಖೆಗಳು ಇದ್ದು, ಕಾರನ್ನು ಆಕರ್ಷಕವಾಗಿಸಿದೆ.(Bentley)
(3 / 9)

(4 / 9)
ಬೆಂಟ್ಲಿ ಕ್ಯಾಬಿನ್ ಲಗ್ಷುರಿಯಾಗಿದೆ. ಡೈನಾಮಿಕಾ ಬಟ್ಟೆಯ ಜತೆ ಚರ್ಮದ ತೆಳುಹಾಸಿದೆ. ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋಗೆ ಬೆಂಬಲ ನೀಡುರತ್ತದೆ. ಸ್ಮಾರ್ಟ್‌ಫೋನ್ ಆಪ್‌ಗಳಿಗೆ ಈ ಕಾರು ರಿಮೋಟ್ ಸಂಪರ್ಕ ಒದಗಿಸುತ್ತದೆ. ಹೀಗಾಗಿ, ಕಾರನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದು. (Bentley)
(5 / 9)
ಫ್ಲೈಯಿಂಗ್ ಸ್ಪರ್‌ನ ಕ್ಯಾಬಿನ್ ಪಿಎಂ 2.5 ವಾಯು ಶುದ್ಧೀಕರಣ ವ್ಯವಸ್ಥೆ ಹೊಂದಿದೆ. ಕಾರು ಯಾವ ಸ್ಥಳದಲ್ಲಿದ್ದರೂ ಶುದ್ಧಗಾಳಿ ಒದಗಿಸುತ್ತದೆ. ಕಾರಿನ ಹಿಂಭಾಗದ ಸೀಟ್‌ಗಳಿಗೂ ಏಸಿ ಕಿಂಡಿಗಳಿವೆ. ಜತೆಗೆ, ಟಚ್ ಸ್ಕ್ರೀನ್ ಡಿಸ್‌ಪ್ಲೇ ಮಾಡ್ಯುಲ್‌ಗಳಿವೆ. ಹಿಂಬದಿ ಸೀಟ್‌ನಲ್ಲಿ ಕುಳಿತವರು ಈ ಡಿಸ್‌ಪ್ಲೇ ಬಳಸಿ ಸೌಂಡ್ ಸಿಸ್ಟಮ್ ಇತ್ಯಾದಿಗಳನ್ನು ಬಳಸಬಹುದು.(Bentley)
(6 / 9)
ಫ್ಲೈಯಿಂಗ್ ಸ್ಪರ್ ಪ್ರಕಾಶಮಾನವಾದ ಫ್ಲೈಯಿಂಗ್ ಬಿ ಲಾಂಛನ ಹೊಂದಿದೆ. ವಿಹಂಗಮ ಸನ್‌ರೂಫ್ ಕೂಡ ಈ ಕಾರಲ್ಲಿದೆ. (Bentley)
(7 / 9)
ಫ್ಲೈಯಿಂಗ್ ಸ್ಪರ್ ಸ್ಪೀಡ್ ನ ಬಿಡುಗಡೆಯ ನೆನಪಿಗಾಗಿ ಬೆಂಟ್ಲಿ 'ಫಸ್ಟ್ ಎಡಿಷನ್' ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಈ ಕಾರು ಇನ್ನಷ್ಟು ಆಕರ್ಷಕವಾಗಿದೆ. ಬ್ಯಾಡ್ಜಿಂಗ್, ಅನಿಮೇಟೆಡ್ ವೆಲ್ಕಮ್ ಲ್ಯಾಂಪ್ಸ್ ಮತ್ತು 'ಫಸ್ಟ್ ಎಡಿಷನ್' ಅಕ್ಷರಗಳನ್ನು ಹೊಂದಿರುವ ಸ್ಟೇನ್ಲೆಸ್ ಸ್ಟೀಲ್ ಟ್ರೆಡ್ ಪ್ಲೇಟ್‌ಗಳನ್ನು ಹೊಂದಿದೆ. (Bentley)
(8 / 9)
2025ರ ಫ್ಲೈಯಿಂಗ್ ಸ್ಪರ್ ಕಾರಿನಲ್ಲಿ ಬೆಂಟ್ಲಿಯು ಪರ್ಫಾಮೆನ್ಸ್ ಆಕ್ಟಿವ್ ಚಾಸಿಸ್ ಎಂಜಿನ್ ಅಳವಡಿಸಿದೆ. ಆಲ್ ವೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಸ್ಟೀರಿಂಗ್ ಅನ್ನು ಅಳವಡಿಸಲಾಗಿದೆ. ಈ ಕಾರು ಬೆಂಟ್ಲೆ ಡೈನಾಮಿಕ್ ರೈಡ್ ಸಿಸ್ಟಮ್ ಅನ್ನು ಹೊಂದಿದೆ, ಇದು ಚಾಲನಾ ಪರಿಸ್ಥಿತಿಗೆ ಹೊಂದಿಕೊಳ್ಳಲು ಟ್ವಿನ್-ವಾಲ್ವ್ ಡ್ಯಾಂಪರ್ ಗಳನ್ನು ಒಳಗೊಂಡಿದೆ. ಒಟ್ಟಾರೆ, ಈ ಕಾರು ಮೊದಲ ನೋಟಕ್ಕೆ ಸೂಪರ್ ಆಗಿದೆ. (Bentley)
ಇತರ ಗ್ಯಾಲರಿಗಳು