Jawa 42 FJ 350: ಸ್ಟೈಲಿಶ್ ಆಗಿದೆ ಜಾವಾ 42 ಎಫ್ ಜೆ 350 ಹೊಸ ಬೈಕ್, ಬೆಲೆ ಎಷ್ಟು, ಬೈಕ್‌ನ ವಿಶೇಷತೆಗಳೇನು? PHOTOS
- Jawa 42 FJ 350: ಜಾವಾ 42 ಬೈಕಿನ ಹೊಸ ಮಾಡೆಲ್ ಜಾವಾ 42 ಎಫ್ ಜೆ ಬೈಕ್ ಭಾರತದಲ್ಲಿ ಲಾಂಚ್ ಆಗಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.99 ಲಕ್ಷಗಳು. ಈ ಬೈಕ್‌ನ ಫೀಚರ್ಸ್‌ಗಳು ಹೀಗಿವೆ.
- Jawa 42 FJ 350: ಜಾವಾ 42 ಬೈಕಿನ ಹೊಸ ಮಾಡೆಲ್ ಜಾವಾ 42 ಎಫ್ ಜೆ ಬೈಕ್ ಭಾರತದಲ್ಲಿ ಲಾಂಚ್ ಆಗಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.99 ಲಕ್ಷಗಳು. ಈ ಬೈಕ್‌ನ ಫೀಚರ್ಸ್‌ಗಳು ಹೀಗಿವೆ.
(1 / 6)
ಕ್ಲಾಸಿಕ್ ಲೆಜೆಂಡ್ಸ್ ಇತ್ತೀಚೆಗೆ ಜಾವಾ 42 ಎಫ್ ಜೆ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೊಸ ಜಾವಾ 42 ಎಫ್ ಜೆ 350 ಸಿಸಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.99 ಲಕ್ಷಗಳಾಗಿದೆ. ಅಕ್ಟೋಬರ್ 2 ರಿಂದ ವಿತರಣೆ ಪ್ರಾರಂಭವಾಗಲಿದೆ. ಹೊಸ 42 ಎಫ್ ಜೆ ಬೈಕಿನಲ್ಲಿ 334 ಸಿಸಿ ಎಂಜಿನ್ ಅಳವಡಿಸಲಾಗಿದೆ. ಇದು ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. (Jawa Motorcycles)
(2 / 6)
ಕ್ಲಾಸಿಕ್ ಲೆಜೆಂಡ್ಸ್ ಹೊಸ ಜಾವಾ 42 ಎಫ್ ಜೆ 350 ಬೈಕ್ ಅನ್ನು ಕ್ರೋಮ್ ಆಯ್ಕೆಯೊಂದಿಗೆ ನಾಲ್ಕು ಮ್ಯಾಟ್ ಬಣ್ಣಗಳ ಆಯ್ಕೆಗಳೊಂದಿಗೆ ನೀಡುತ್ತಿದೆ. ಅರೋರಾ ಫಾರೆಸ್ಟ್, ಕಾಸ್ಮೋ ಬ್ಲೂ ಮ್ಯಾಟ್, ಡೀಪ್ ಬ್ಲ್ಯಾಕ್ ಮ್ಯಾಟ್ ರೆಡ್ ಕ್ಲೇಡ್, ಡೀಪ್ ಬ್ಲ್ಯಾಕ್ ಮ್ಯಾಟ್ ಮತ್ತು ಬ್ಲ್ಯಾಕ್ ಕ್ಲೇಡ್ ಆಯ್ಕೆಗಳನ್ನು ಹೊಂದಿದೆ. ಏಕೈಕ ಕ್ರೋಮ್ ಆಯ್ಕೆಯನ್ನು ಮಿಸ್ಟಿಕ್ ಕಾಪರ್ ಎಂದು ಕರೆಯಲಾಗುತ್ತದೆ. (Jawa Motorcycles)
(3 / 6)
ಡಬಲ್ ಕ್ರೇಡಲ್ ಚಾಸಿಸ್ ಮೇಲೆ ನಿರ್ಮಿಸಲಾದ ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಗಳನ್ನು ಪ್ರಿ-ಲೋಡ್ ಅಡ್ಜಸ್ಟ್ಮೆಂಟ್ ಜತೆಗೆ ಅಳವಡಿಸಲಾಗಿದೆ. (Jawa Motorcycles)
(4 / 6)
ಜಾವಾ 42 ಎಫ್ ಜೆ 350 ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರುವ ಈ ಬೈಕ್ 178 ಎಂಎಂ ಆಕ್ಸೆಸ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. (Jawa Motorcycles)
(5 / 6)
ಹೊಸ ಜಾವಾ 42 ಎಫ್ ಜೆ ಸ್ಟ್ಯಾಂಡರ್ಡ್ 42 ಬೈಕಿಗಿಂತ ಹೆಚ್ಚು ಸ್ಟೈಲಿಶ್ ಆಗಿ ಬರುತ್ತದೆ. ಫ್ಯೂಯಲ್ ಟ್ಯಾಂಕ್ ವಿಭಿನ್ನ ವಿನ್ಯಾಸದಲ್ಲಿದೆ. (Jawa Motorcycles)
(6 / 6)
ಈ ಬೈಕಿನಲ್ಲಿ ಮಷಿನ್ಡ್ ಫಿನಿಶ್ ನೊಂದಿಗೆ ವಿಭಿನ್ನ ಅಲಾಯ್ ವ್ಹೀಲ್ ಅಳವಡಿಸಲಾಗಿದೆ. ಇತರ ಬದಲಾವಣೆಗಳ ನಡುವೆ, ಜಾವಾ 42 ಎಫ್ ಜೆ ಆಫ್-ಸೆಟ್ ಫ್ಯೂಯಲ್ ಟ್ಯಾಂಕ್ ಕ್ಯಾಪ್, ಅಪ್ ಡ್ಯುಯಲ್-ಪೈಪ್ ಎಕ್ಸಾಸ್ಟ್ ಸೆಟಪ್ ಹೊಂದಿದೆ. ಇದರಲ್ಲಿ ಎಲ್ಇಡಿ ಹೆಡ್ ಲ್ಯಾಂಪ್, ಡಿಜಿ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅಸಿಸ್ಟ್, ಸ್ಲಿಪ್ಪರ್ ಕ್ಲಚ್ ಸೇರಿವೆ. (Jawa Motorcycles)
ಇತರ ಗ್ಯಾಲರಿಗಳು