Renault Embleme: ಕಾರು ಅಂದ್ರೆ ಹೀಗಿರಬೇಕು, ಡಬಲ್ ಎಂಜಿನ್‌ನ ರೆನೊ ಎಂಬ್ಲೆಮ್ ಅಂದ ನೋಡಲೆರಡು ಕಣ್ಣು ಸಾಲದಮ್ಮ
- Renault Embleme Photos: ರೆನೊ ಕಂಪನಿಯು ಎಂಬ್ಲೆಮ್ ಎಂಬ ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಲು ಸಜ್ಜಾಗಿದೆ. ಅಂದಹಾಗೆ ಇದು ಎಲೆಕ್ಟ್ರಿಕ್ ಕಾರು. ಜತೆಗೆ, ಹೈಡ್ರೋಜನ್‌ನಲ್ಲೂ ಚಾಲನೆ ಮಾಡಬಹುದು. ಈ ರೀತಿ ಎರಡು ಎಂಜಿನ್ ಸೆಟಪ್‌ನೊಂದಿಗೆ ಆಗಮಿಸಲಿರುವ ಕಾರಿನ ಪರಿಕಲ್ಪನೆ ಮಾದರಿಯನ್ನು ವಾಹನ ಪ್ರೇಮಿಗಳು ವಾಹ್ ಎಂದಿದ್ದಾರೆ.
- Renault Embleme Photos: ರೆನೊ ಕಂಪನಿಯು ಎಂಬ್ಲೆಮ್ ಎಂಬ ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಲು ಸಜ್ಜಾಗಿದೆ. ಅಂದಹಾಗೆ ಇದು ಎಲೆಕ್ಟ್ರಿಕ್ ಕಾರು. ಜತೆಗೆ, ಹೈಡ್ರೋಜನ್‌ನಲ್ಲೂ ಚಾಲನೆ ಮಾಡಬಹುದು. ಈ ರೀತಿ ಎರಡು ಎಂಜಿನ್ ಸೆಟಪ್‌ನೊಂದಿಗೆ ಆಗಮಿಸಲಿರುವ ಕಾರಿನ ಪರಿಕಲ್ಪನೆ ಮಾದರಿಯನ್ನು ವಾಹನ ಪ್ರೇಮಿಗಳು ವಾಹ್ ಎಂದಿದ್ದಾರೆ.
(1 / 5)
ಫ್ರೆಂಚ್ ಆಟೋ ದೈತ್ಯ ರೆನೊ (ಕೆಲವರು ರೆನಾಲ್ಟ್ ಎಂದು ಉಚ್ಚರಿಸುತ್ತಾರೆ) ತನ್ನ ಇತ್ತೀಚಿನ ಕಾನ್ಸೆಪ್ಟ್ ಕಾರು ಎಂಬ್ಲೆಮ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಇದು ಶೂಟಿಂಗ್-ಬ್ರೇಕ್ ಶೈಲಿಯ ಎಲೆಕ್ಟ್ರಿಕ್ ಕಾರಾಗಿದೆ. ಇದು ಡ್ಯುಯಲ್ ಪವರ್ ಟ್ರೇನ್ ಸೆಟಪ್ ಅನ್ನು ಹೊಂದಿದೆ. ಇದು ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ಶಕ್ತಿ ಎರಡರಲ್ಲೂ ಪ್ರಯಾಣಿಸಲಿದೆಯಂತೆ.
(2 / 5)
ಅಕ್ಟೋಬರ್ 14ರಿಂದ ಆರಂಭವಾಗಲಿರುವ 2024 ಪ್ಯಾರಿಸ್ ಮೋಟಾರ್ ಶೋನಲ್ಲಿ ರೆನೊ ಕಂಪನಿಯು ಎಂಬ್ಲೆಮ್ ಕಾನ್ಸೆಪ್ಟ್ ಇವಿಯನ್ನು ರೆನಾಲ್ಟ್ ಸ್ಟ್ಯಾಂಡ್‌ನಲ್ಲಿ ಪ್ರದರ್ಶಿಸಲಿದೆ. ಮುಂದಿನ ದಿನಗಳಲ್ಲಿ ಈ ಕಾರು ರಸ್ತೆಗಿಳಿಯಲಿದೆ. ಕಂಪನಿಯು ತನ್ನ ವಾಹನಗಳಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಸಾಧ್ಯವಿರುವಷ್ಟು ಪ್ರಯತ್ನಿಸಲಾಸಲಾಗುವುದು ಎಂದಿದೆ. ಇದೇ ಕಾರಣಕ್ಕೆ ವಿದ್ಯುತ್ ಮತ್ತು ಜಲಜನಕ ಚಾಲಿತ ಕಾರಿನ ಪರಿಕಲ್ಪನೆಯೊಂದಿಗೆ ಹೊರಬಂದಿದೆ. ಇದು ಕುಟುಂಬ ಪ್ರಯಾಣಕ್ಕೆ ಸೂಕ್ತವಾದ ಕಾರಾಗಿದೆ.
(3 / 5)
ಎಂಬ್ಲೆಮ್ ಪರಿಕಲ್ಪನೆಯು ಕಾರು ವಿನ್ಯಾಸದ ಕುರಿತು ಕಂಪನಿಯ ಹೊಸ ದೃಷ್ಟಿಕೋನವನ್ನು ಸೂಚಿಸುತ್ತದೆ. ಬಾಹ್ಯ ವಿನ್ಯಾಸದ ವಕ್ರತೆ ಮತ್ತು ಗ್ರಾಫಿಕ್, ತಾಂತ್ರಿಕ ಪಾತ್ರ ರೇಖೆಗಳ ಮೂಲಕ ಸ್ಪೋರ್ಟಿನೆಸ್, ಸೊಬಗು ಮತ್ತು ಭಾವನೆಗಳ ಸಂಕೇತ ನೀಡಲಾಗಿದೆ ಎಂದು ರೆನೊ ಹೇಳಿದೆ. ರೆನಾಲ್ಟ್ ಎಂಬ್ಲೆಮ್ ನ ಅತ್ಯಾಕರ್ಷಕ ವಿನ್ಯಾಸದ ಅಂಶವೆಂದರೆ ಬಾಹ್ಯ ರಿಯರ್ ವ್ಯೂ ಮಿರರ್. ವಿಂಡ್ ಸ್ಕ್ರೀನ್ ವೈಪರ್ ಗಳನ್ನು ಬಾನೆಟ್ ಅಡಿಯಲ್ಲಿ ಅಡಗಿಸಲಾಗಿದೆ.
(4 / 5)
ಈ ಶೂಟಿಂಗ್ ಬ್ರೇಕ್ ಶೈಲಿಯ ಇವಿ ಕಾರು ಅತ್ಯುತ್ತಮ ಏರೋ ಡೈನಾಮಿಕ್ಸ್ ವಿನ್ಯಾಸ ಹೊಂದಿದೆ. 4,800 ಎಂಎಂ ಉದ್ದದ ಕಾನ್ಸೆಪ್ಟ್ ಇವಿಗೆ 40 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಶಕ್ತಿ ತುಂಬಲಿದೆ. ಇದರೊಂದಿಗೆ ಹೈಡ್ರೋಜನ್ ಇಂಧನ ಕೋಶಗಳನ್ನೂ ಜೋಡಿಸಲಾಗಿದೆ.
(5 / 5)
ರೆನೊ (ರೆನಾಲ್ಟ್) ಎಂಬ್ಲೆಮ್ ನ 160 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ವಿನ್ಯಾಸದ ಕಡೆಗೂ ಕಂಪನಿ ವಿಶೇಷ ಆದ್ಯತೆ ನೀಡಿದೆ. ಸಾಧ್ಯವಿರುವಷ್ಟು ಪರಿಸರಸ್ನೇಹಿ ಅಂಶಗಳಿಂದ ರಚಿಸಲು ಯತ್ನಿಸಿದೆ. ಇದು ಸಣ್ಣ 40 ಕಿಲೋವ್ಯಾಟ್ ಎನ್ ಎಂಸಿ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಹಗುರವಾಗಿದೆ. ಮತ್ತೊಂದೆಡೆ 30 ಕಿಲೋವ್ಯಾಟ್ ಪಿಇಎಂಎಫ್‌ಸಿ ಇಂಧನ ಕೋಶವು 2.8 ಕೆಜಿ ಟ್ಯಾಂಕ್ ಮೂಲಕ ಕಡಿಮೆ ಇಂಗಾಲದ ಹೈಡ್ರೋಜನ್‌ನಲ್ಲಿ ಚಲಿಸುತ್ತದೆ. ಲಾಂಗ್‌ಡ್ರೈವ್‌ಗೆ ಈ ಡಬಲ್ ಎಂಜಿನ್ ಸೂಕ್ತವಾಗಿದೆ. ಪೆಟ್ರೋಲ್ ಡೀಸೆಲ್ ಹಂಗಿಲ್ಲದೆ ಒಂದು ಫುಲ್ ಚಾರ್ಜ್ ಮತ್ತು ಹೈಡ್ರೋಜನ್ ನೆರವಿನಿಂದ 1 ಸಾವಿರ ಕಿ.ಮೀ. ರೇಂಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ.
ಇತರ ಗ್ಯಾಲರಿಗಳು