Bangalore News: ಬೆಂಗಳೂರಿನ ವಿಜಯನಗರದಲ್ಲಿ ಶುರುವಾಯ್ತು ದಕ್ಷಿಣ ಭಾರತದ ಮೊದಲ ಎಸಿ ಮಾರುಕಟ್ಟೆ, ಏನಿದರ ವಿಶೇಷ photos
Bangalore Business News ಬೆಂಗಳೂರಿನ ಸಂಪೂರ್ಣ ಹವಾನಿಯಂತ್ರಿತ ಮಾರುಕಟ್ಟೆ ಕೃಷ್ಣದೇವರಾಯ ಪಾಲಿಕೆ ಬಜಾರ್ ಅನ್ನು ಉದ್ಘಾಟಿಸಲಾಗಿದೆ. ಇದರ ವಿಶೇಷ ಚಿತ್ರನೋಟ ಇಲ್ಲಿದೆ.
(1 / 7)
ಇದು ಸಂಪೂರ್ಣ ಎಸಿ ಮಾರುಕಟ್ಟೆ. ಬೆಂಗಳೂರಿನ ವಿಜಯನಗರದಲ್ಲಿ ಬೃಹತ್ ಬೆಂಗಳೂರು ನಗರ ಪಾಲಿಕೆ ರೂಪಿಸಿದೆ. ಹಿಂದೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ತೊಂದರೆಗೆ ಒಳಗಾಗಿದ್ದ ಹಲವರಿಗೆ ಆಸರೆ ನೀಡುವ ಜತೆಗೆ ವಹಿವಾಟಿಗೆ ಉತ್ತೇಜನ ನೀಡಲು ಇದನ್ನು ರೂಪಿಸಲಾಗಿದೆ.
(2 / 7)
ಕೃಷ್ಣದೇವರಾಯ ಪಾಲಿಕೆ ಬಜಾರ್ ಸಂಪೂರ್ಣ ಅಂಡರ್‌ಗೌಂಡ್ ವಹಿವಾಟು ಕೇಂದ್ರ. ನಿಮಗೆ ಎಲ್ಲ ರೀತಿಯ ವಸ್ತುಗಳು ಇಲ್ಲಿ ಸಿಗಲಿವೆ. ಹಣ್ಣಿನಿಂದ ಆರಂಭಗೊಂಡ ದಿನಬಳಕೆ ವಸ್ತುಗಳು ಕೂಡ ಸಿಗಲಿವೆ.
(3 / 7)
13 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಹೈಟೆಕ್, ಹವಾನಿಯಂತ್ರಿತ ಮಾರುಕಟ್ಟೆಯು ನವದೆಹಲಿಯ ಪಾಲಿಕಾ ಬಜಾರ್ ಮಾದರಿಯಲ್ಲಿದೆ ಮತ್ತು ದಕ್ಷಿಣ ಭಾರತದಲ್ಲಿ ಈ ರೀತಿಯ ಮೊದಲನೆಯದಾಗಿದೆ
(4 / 7)
ಈ ಮಾರುಕಟ್ಟೆಯಲ್ಲಿ ಸಣ್ಣ ಮಾರಾಟಗಾರರ ವಲಯದಲ್ಲಿ 136 ಮಳಿಗೆಗಳು, ವಿಶೇಷ ಮಾರಾಟಗಾರರಿಗೆ 11 ಮಳಿಗೆಗಳು ಮತ್ತು ಒಂಬತ್ತು ಸಾಮಾನ್ಯ ಮಾರಾಟಗಾರರ ವಲಯಗಳಿವೆ.
(6 / 7)
ಪಾಲಿಕೆ ಬಜಾರ್ ನ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು, 79 ಮಾರುಕಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮಳಿಗೆಗಳನ್ನು ಬೇಡಿಕೆ ಆಧರಿಸಿ ಹಂಚಿಕೆ ಮಾಡಲಾಗುತ್ತದೆ.
ಇತರ ಗ್ಯಾಲರಿಗಳು