Bangalore potholes: ಬೆಂಗಳೂರು ನಗರ ಗಂಡಾಗುಂಡಿ; ನಡುರಾತ್ರಿಯಲ್ಲಿ ಡಿಸಿಎಂ ಡಿಕೆಶಿ ರೌಂಡ್ಸ್, ಕಾಮಗಾರಿ ಪರಿಶೀಲನೆ ಹೀಗಿತ್ತು
- ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಬೇಕು ಎನ್ನುವ ಗಡುವು ನೀಡಿ ಅಮೆರಿಕಾಕ್ಕೆ ತೆರಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ವಾಪಾಸ್ ಬಂದ ನಂತರ ಮಧ್ಯರಾತ್ರಿಯಲ್ಲಿ ಸುತ್ತುಹಾಕಿ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು. ಹೀಗಿತ್ತು ಮಿಡ್ ನೈಟ್ ರೌಂಡ್ಸ್ ಕ್ಷಣಗಳು.
- ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಬೇಕು ಎನ್ನುವ ಗಡುವು ನೀಡಿ ಅಮೆರಿಕಾಕ್ಕೆ ತೆರಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ವಾಪಾಸ್ ಬಂದ ನಂತರ ಮಧ್ಯರಾತ್ರಿಯಲ್ಲಿ ಸುತ್ತುಹಾಕಿ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು. ಹೀಗಿತ್ತು ಮಿಡ್ ನೈಟ್ ರೌಂಡ್ಸ್ ಕ್ಷಣಗಳು.
(1 / 8)
ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತ ಆಗಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಲೇ ಇರುವ ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ಮಧ್ಯರಾತ್ರಿ ಬೆಂಗಳೂರು ಪ್ರದಕ್ಷಿಣೆ ಹಾಕಿದರು.
(2 / 8)
ಈಗಾಗಲೇ ಸೆಪ್ಟಂಬರ್ ಎರಡನೇ ವಾರದೊಳಗೆ ಬೆಂಗಳೂರು ನಗರದ ಗುಂಡಿಗಳನ್ನು ಮುಚ್ಚಬೇಕು ಎನ್ನುವ ಗಡುವು ನೀಡಿದ್ದ ಡಿಕೆ ಶಿವಕುಮಾರ್ ಹಲವಾರು ಭಾಗಗಳಲ್ಲಿ ಸುತ್ತು ಹಾಕಿ ಕಾಮಗಾರಿಗಳನ್ನು ಕಣ್ಣಾರೆ ಕಂಡು ವಿಡಿಯೋ ಮಾಡಿಕೊಂಡರು.
(3 / 8)
ಬೆಂಗಳೂರಿನ ನಾನಾ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವು ಭಾಗಗಳಲ್ಲಿ ನಡೆದಿರುವ ರಸ್ತೆ ದುರಸ್ಥಿ ಕಾಮಗಾರಿಗಳನ್ನು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಸೇರಿದಂತೆ ಹಲವೊಂದಿಗೆ ಪರಿಶೀಲಿಸಿದರು.
(4 / 8)
ರಸ್ತೆ ದುರಸ್ಥಿ ಕಾಮಗೃಿಗಳು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ನಡೆಯುತ್ತಿದ್ದು ಇದನ್ನೂ ಡಿಕೆಶಿ ಪರಿಶೀಲಿಸಿದರು.
(5 / 8)
ದೊಮ್ಮಲೂರು ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಿರುವ ರಸ್ತೆ ಗುಣಮಟ್ಟವನ್ನು ಪರಿಶೀಲಿಸಲು ಡಿಕೆ ಶಿವಕುಮಾರ್ ತಾವೇ ಹಾರೆ ಹಿಡಿದುಕೊಂಡರು.
(6 / 8)
ಕೆಲವು ಭಾಗಗಳಲ್ಲಿ ಇನ್ನೂ ಕಾಮಗಾರಿ ಮುಂದುವರಿದಿದ್ದು. ಈ ತಿಂಗಳೊಳಗೆ ಎಲ್ಲವನ್ನೂ ಮುಗಿಸಬೇಕು. ಬೆಂಗಳೂರು ನಗರ ರಸ್ತೆಗಳು ಗುಂಡಿ ಮುಕ್ತವಾಗಬೇಕು ಎಂದು ಡಿಕೆಶಿ ಸೂಚಿಸಿದರು.
(7 / 8)
ದೊಮ್ಮಲೂರು ಸೇರಿದಂತೆ ಹಲವು ಭಾಗಗಳಲ್ಲಿ ನಡೆದಿರುವ ಕಾಮಗಾರಿಗಳ ಕುರಿತಾಗಿ ಅಧಿಕಾರಿಗಳು ಖುದ್ದು ಮಾಹಿತಿಯನ್ನು ಡಿಸಿಎಂ ಅವರಿಗೆ ಒದಗಿಸಿದರು.
ಇತರ ಗ್ಯಾಲರಿಗಳು