BBK 11: ಮೊದಲ ದಿನದಿಂದಲೇ ಜಗಳ ಪ್ರಾರಂಭ; ಜ್ಞಾನ ಇಲ್ಲದವರು ಮಾತನಾಡಬಾರದು ಎಂದ ಚೈತ್ರಾ, ಮಾನಸಾ ಫುಲ್ ಗರಂ
- ಮಾನಸಾ ಹಾಗೂ ಚೈತ್ರಾ ಜಗಳ ಆರಂಭ ಮಾಡಿದ್ದಾರೆ. ಧ್ಯಾನ ಮಾಡುವ ವಿಚಾರವಾಗಿ ಈ ಜಗಳ ಆರಂಭವಾಗಿದೆ. ಚೈತ್ರಾ ಮಾನಸಾ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಧ್ಯಾನ ಮಾಡ್ತಾರಾ? ಇಲ್ಲ ನಿದ್ರೆ ಮಾಡ್ತಾರಾ? ಅಂತ ಗೊತ್ತಾಗ್ತಾ ಇಲ್ಲ ಎಂದು ಮಾನಸಾ ಹೇಳಿದ್ದರು.
- ಮಾನಸಾ ಹಾಗೂ ಚೈತ್ರಾ ಜಗಳ ಆರಂಭ ಮಾಡಿದ್ದಾರೆ. ಧ್ಯಾನ ಮಾಡುವ ವಿಚಾರವಾಗಿ ಈ ಜಗಳ ಆರಂಭವಾಗಿದೆ. ಚೈತ್ರಾ ಮಾನಸಾ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಧ್ಯಾನ ಮಾಡ್ತಾರಾ? ಇಲ್ಲ ನಿದ್ರೆ ಮಾಡ್ತಾರಾ? ಅಂತ ಗೊತ್ತಾಗ್ತಾ ಇಲ್ಲ ಎಂದು ಮಾನಸಾ ಹೇಳಿದ್ದರು.
(1 / 8)
ಮಾನಸಾ ಅವರು ಮಾತನಾಡುತ್ತಾ “ನನಗೆ ಧ್ಯಾನ ಮಾಡುವವರನ್ನು ಕಂಡರೆ ಯಾಕೋ ಅನುಮಾನ ಬರುತ್ತೆ. ಅವರು ಧ್ಯಾನ ಮಾಡ್ತಾರಾ ಅಥವಾ ನಿದ್ರೆ ಮಾಡ್ತಾರಾ? ಅಂತ ಗೊತ್ತಾಗೋದಿಲ್ಲ” ಎಂದು ಹೇಳುತ್ತಾರೆ. (Facebook\ Colors Kannada)
(2 / 8)
ಚೈತ್ರಾ ಅವರ ಕಿವಿಗೆ ಈ ಮಾತು ಬೀಳುತ್ತದೆ. ಅವರು ತುಂಬಾ ಕೋಪ ಮಾಡಿಕೊಂಡು ಈ ಬಗ್ಗೆ ಮಾನಸಾ ಅವರ ಹತ್ತಿರವೇ ಮಾತನಾಡಲು ಬರುತ್ತಾರೆ,(Facebook\ Colors Kannada)
(3 / 8)
"ನಿಮ್ದೆಷ್ಟಿದ್ಯೋ ಅಷ್ಟನ್ನು ಮಾತ್ರ ನೀವು ನೋಡ್ಕೊಳಿ ಅದನ್ನು ಬಿಟ್ಟು ನನ್ನ ಜಡ್ಜ್ ಮಾಡೋಕೆ ನೀವು ಬರಲೇಬೇಡಿ" ಎಂದು ಚೈತ್ರಾ ಹೇಳುತ್ತಾರೆ.(Facebook\ Colors Kannada)
(4 / 8)
“ನಿಮಗೇನು ಬೇಕೋ ಅದನ್ನು ನಾನು ಹೇಳೋಕೆ ಆಗೋದಿಲ್ಲ. ನನ್ನ ಮನಸಿಗೆ ಬಂದದ್ದನ್ನು ನಾನು ಹೇಳ್ಬೇಕಾಗುತ್ತದೆ” ಎಂದು ಮಾನಸಾ ಹೇಳುತ್ತಾರೆ. ಆ ಮಾತಿಗೆ ಮತ್ತೆ ಪ್ರತಿವಾದ ನಡೆಯುತ್ತಲೇ ಸಾಗುತ್ತದೆ. (Facebook\ Colors Kannada)
(5 / 8)
ಧ್ಯಾನದ ಬಗ್ಗೆ ಮಾತಾಡೋಕೂ ಒಂದು ಲೆವೆಲ್ ಬೇಕು ಎಂದು ಚೈತ್ರಾ ಹೇಳುತ್ತಾರೆ. ನಾನು ಏನು ಮಾಡಿದರೂ ಅದು ತಪ್ಪು ಇದು ತಪ್ಪು ಎಂದು ಹೇಳೋಕೆ ಇವರು ಯಾರು ಎಂದು ಪ್ರಶ್ನೆ ಮಾಡುತ್ತಾರೆ ಚೈತ್ರಾ.(Facebook\ Colors Kannada)
(6 / 8)
ಅವರಿಬ್ಬರ ಮಾತುಕತೆ ನಡೆಯುತ್ತಾ ಇರುವ ಸಂದರ್ಭದಲ್ಲಿ ಮನೆಯ ಇತರ ಸ್ಪರ್ಧಿಗಳೂ ಸಹ ಅಲ್ಲೇ ಕುಳಿತುಕೊಂಡು ಇರುತ್ತಾರೆ. ಸಮಾಧಾನ ಮಾಡುವ ಪ್ರಯತ್ನವನ್ನೂ ಮಾಡುತ್ತಾರೆ. (Facebook\ Colors Kannada)
(7 / 8)
ಸುಮ್ಮನೆ ನಗುತ್ತಾ ಮಾತಾಡಿದರೂ ಅದು ಇಷ್ಟು ಪರಿಣಾಮ ಬೀರುತ್ತದೆ ಎಂದು ಮಾನಸಾ ಅಂದುಕೊಂಡಿದ್ದರೂ ಇಲ್ಲವೋ ತಿಳಿದಿಲ್ಲ. ಆದರೆ ಮನೆಯಲ್ಲಿ ಮೊದಲ ದಿನದಿಂದಲೇ ಜಗಳ ಆರಂಭವಾಗಿದೆ. (Facebook\ Colors Kannada)
ಇತರ ಗ್ಯಾಲರಿಗಳು