Beauty Tips: ಪಿಗ್ಮಂಟೇಷನ್ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು, ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ
ಪಿಗ್ಮಂಟೇಷನ್ ಕಾರಣದಿಂದ ಅಂದಗೆಡುವುದು ಸಹಜ. ಇದರ ನಿವಾರಣೆಗೆ ಕ್ರೀಮ್, ಫೇಶ್‌ವಾಶ್ ಬಳಸುವ ಬದಲು ಮನೆಯಲ್ಲೇ ತಯಾರಿಸಬಹುದಾದ ಈ ಫೇಸ್‌ಪ್ಯಾಕ್ ಬಳಸಿ. ಕೆಲವೇ ದಿನಗಳಲ್ಲಿ ನಿಮ್ಮ ಮುಖದ ಮೇಲೆ ವ್ಯತ್ಯಾಸ ಗೋಚರವಾಗುತ್ತದೆ.
(1 / 7)
ಮೊಸರಿನಿಂದ ಫೇಸ್ ಪ್ಯಾಕ್ ತಯಾರಿಸಿ: ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡಲಾದ ಮೊಸರು ತುಂಬಾ ದಪ್ಪವಾದ ಸ್ಥಿರತೆಯನ್ನು ಹೊಂದಿರುತ್ತದೆ. ಕೆನೆ, ಹಾಲು ಮತ್ತು ನೀರಿನ ನಡುವೆ ಸಮತೋಲನ ಹೊಂದಿರುತ್ತದೆ. ಅಂತಹ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಲೈಕೋರೈಸ್ ಸೇರಿಸಿ ಮತ್ತು ಪೇಸ್ಟ್ ಮಾಡಿ.
(2 / 7)
ಪಿಗ್ಮಂಟೇಷನ್ ಅಥವಾ ನಸುಕಂದು ಮಚ್ಚೆಗಳ ಮೇಲೆ ಫೇಸ್ ಪ್ಯಾಕ್ ಅನ್ನು ಹೇಗೆ ಹಚ್ಚಬೇಕು: ಈ ಫೇಸ್ ಪ್ಯಾಕ್ ಅನ್ನು ಬೆಳಿಗ್ಗೆ ಮತ್ತು ಸಂಜೆ ಎರಡೂ ಸಮಯಗಳಲ್ಲಿ ಬಳಸಿ ಮತ್ತು 5 ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಇರಿಸಿ ನಂತರ ಅದನ್ನು ನಿಧಾನವಾಗಿ ಮಸಾಜ್ ಮಾಡಿ ಮತ್ತು ಸುಮಾರು ಹತ್ತು ನಿಮಿಷದ ನಂತರ ನೀರಿನಿಂದ ತೊಳೆಯಿರಿ.
(3 / 7)
ಫೇಸ್ ವಾಶ್ ಬಳಸಬೇಡಿ: ಇದನ್ನು ಬಳಸುವ ಸಂದರ್ಭ ಮುಖ ತೊಳೆಯಲು ಯಾವುದೇ ರೀತಿಯ ಫೇಸ್ ವಾಶ್ ಬಳಸಬೇಡಿ. ಒಂದು ತಿಂಗಳೊಳಗೆ ನಿಮ್ಮ ಮುಖದಲ್ಲಿ ವ್ಯತ್ಯಾಸವನ್ನು ನೀವು ಗುರುತಿಸುತ್ತೀರಿ.
(4 / 7)
ಹಾಲು ಹಾಗೂ ಮೊಸರನ್ನು ಮಿಶ್ರಣ ಮಾಡಿ, ಅದನ್ನು ಮುಖಕ್ಕೆ ಹಚ್ಚುವುದರಿಂದ ಕೂಡ ಪಿಗ್ಮಂಟೇಷನ್ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಚರ್ಮದ ಅಲರ್ಜಿ ಇರುವವರು ಈ ಬಗ್ಗೆ ತಜ್ಞರಿಂದ ಅಭಿಪ್ರಾಯ ಪಡೆಯುವುದು ಉತ್ತಮ.
(5 / 7)
ರಾತ್ರಿ ಮಲಗುವ ಮುನ್ನ ಆಲೊವೆರಾ ಜೆಲ್ ಹಚ್ಚಿ, ರಾತ್ರಿ ಪೂರ್ತಿ ಹಾಗೇ ಬಿಡಿ. ಬೆಳಗೆದ್ದು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯುವುದರಿಂದ ಕೂಡ ಪಿಗ್ಮಂಟೇಷನ್ ಸಮಸ್ಯೆ ನಿವಾರಣೆಯಾಗುತ್ತದೆ.
(6 / 7)
ಅಕ್ಕಿಹಿಟ್ಟಿನೊಂದಿಗೆ ಮೊಸರನ್ನು ಮಿಶ್ರಣ ಮಾಡಿ ಫೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಕೂಡ ಪಿಗ್ಮಂಟೇಷನ್ ಸಮಸ್ಯೆ ನಿವಾರಣೆಗೆ ಉತ್ತಮ ಮನೆಮದ್ದು.
ಇತರ ಗ್ಯಾಲರಿಗಳು