ಕನ್ನಡ ಸುದ್ದಿ  /  Photo Gallery  /  Bengaluru News Explosion At Itpl Main Road Rameshwaram Cafe Brookfield Bengaluru Check Fist Pics Uks

Bengaluru Blast: ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ; ಘಟನಾ ಸ್ಥಳದ ಕೆಲವು ಫೋಟೋಸ್

ಬೆಂಗಳೂರಿನ ಐಟಿಪಿಎಲ್ ಮೇನ್‌ ರೋಡ್‌ನಲ್ಲಿರುವ ಬ್ರೂಕ್‌ಫೀಲ್ಡ್‌ನ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದ್ದು ಹಲವರು ಗಾಯಗೊಂಡಿದ್ದಾರೆ. ಸ್ಫೋಟ ಸ್ಥಳದ ಮೊದಲ ಚಿತ್ರಗಳು ಹಿಂದೂಸ್ತಾನ್ ಟೈಮ್ಸ್‌ ಕನ್ನಡಕ್ಕೆ ಲಭ್ಯವಾಗಿದ್ದು, ಇಲ್ಲಿದೆ ಒಂದು ಚಿತ್ರನೋಟ.

ಬೆಂಗಳೂರಿನ ಇಂದಿರಾನಗರ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ರಾಮೇಶ್ವರಂ ಕೆಫೆಯ ಮುಂಭಾಗ ಮತ್ತು ಸೈಡ್‌ನ ನೋಟ. ಮುಂಭಾಗ ಖಾಲಿ ಇದ್ದರೆ ಒಳಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡುತ್ತಿರುವುದು ಕಾಣಬಹುದು.
icon

(1 / 8)

ಸ್ಫೋಟಸಂಭವಿಸಿದ ಕೂಡಲೇ ಅಗ್ನಿಶಾಮಕ ಸೇವೆ ತಂಡ ಸ್ಥಳಕ್ಕೆಆಗಮಿಸಿದ್ದು, ಪರಿಹಾರ ಕಾರ್ಯ ನಡೆಸಿತ್ತು. ಆ ಕ್ಷಣದ ಚಿತ್ರಣಈ ಎರಡು ಚಿತ್ರದಲ್ಲಿದೆ.
icon

(2 / 8)

ನಿಗೂಢಸ್ಫೋಟದ ಬಳಿಕ ರಾಮೇಶ್ವರಂ ಕೆಫೆಯಹೊರಗೆ ಛಿದ್ರವಾಗಿ ಬಿದ್ದಿದ್ದ ವಸ್ತುಗಳ ನಡುವೆ ಕಂಡುಬಂದ ಶಂಕಿತ ವಸ್ತು. (ಎಡ ಚಿತ್ರ); ಸ್ಫೋಟಸಂಭವಿಸಿದ ಕುಂದಲಹಳ್ಳಿ ರಾಮೇಶ್ವರಂ ಕೆಫೆಯೊಳಗೆ ಅಗ್ನಿಶಾಮಕ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಸಂದರ್ಭ. (ಬಲ ಚಿತ್ರ)
icon

(3 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(4 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)

ನಿಗೂಢ ಸ್ಫೋಟದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಸ್ಥಳ ಪರಿಶೀಲನೆ ನಡೆಸಿತು. ಸಾಕ್ಷ್ಯಗಳನ್ನು ಕಲೆಹಾಕಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದೆ.
icon

(5 / 8)

ಕುಂದಲಹಳ್ಳಿ ರಾಮೇಶ್ವರಂ ಕೆಫೆಯ ಹೊರಗೆ ನಿಂತುಕೊಂಡಿದ್ದ ಅಗ್ನಿಶಾಮಕ ಸೇವಾ ವಾಹನ. 
icon

(6 / 8)

ಕುಂದಲಹಳ್ಳಿ ರಾಮೇಶ್ವರಂ ಕೆಫೆಯ ಹೊರಗೆ ನಿಂತುಕೊಂಡಿದ್ದ ಅಗ್ನಿಶಾಮಕ ಸೇವಾ ವಾಹನ. 

ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಬಾಯ್ಲರ್ ಅಥವಾ ಸಿಲಿಂಡರ್ ಕಾರಣವೋ ಎಂಬುದು ದೃಢಪಟ್ಟಿಲ್ಲ. ಪೊಲೀಸರು ಈ ಕುರಿತು ತನಿಖೆ ನಡೆಸಿದ್ದು ಎಫ್‌ಎಸ್‌ಎಲ್ ತಂಡ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿ ಇದನ್ನು ದೃಢೀಕರಿಸಲು ನೆರವಾಗಲಿದೆ. ಇದೇ ವೇಳೆ, ಹೋಟೆಲ್ ಸಮೀಪ ಶಂಕಿತರು ಕೆಲವರು ಓಡಾಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. 
icon

(7 / 8)

ನಿಗೂಢ ಸ್ಫೋಟ ಸಂಭವಿಸಿದ ದಿ ರಾಮೇಶ್ವರಂ ಕೆಫೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು