Kundapura Kannada Habba: ವಿಶ್ವ ಕುಂದಾಪ್ರ ಕನ್ನಡ ದಿನ; ಟೀಮ್ ಕುಂದಾಪುರಿಯನ್ಸ್ ಮಾತಿನ ಹಬ್ಬ ಕಾರ್ಯಕ್ರಮ; ಗಮನ ಸೆಳೆದ ಗಂಜಿ ಊಟ
- Matina Habba Programme: ಪ್ರತಿ ವರ್ಷ ಆಷಾಡಿ ಅಮಾವಾಸ್ಯೆಯಂದು ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ಜನರು ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸುತ್ತಾರೆ. ಈ ಬಾರಿ ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ಸ್ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ʼಮಾತಿನ ಹಬ್ಬʼ ಕಾರ್ಯಕ್ರಮ ಆಯೋಜಿಸಿತ್ತು.
- Matina Habba Programme: ಪ್ರತಿ ವರ್ಷ ಆಷಾಡಿ ಅಮಾವಾಸ್ಯೆಯಂದು ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ಜನರು ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸುತ್ತಾರೆ. ಈ ಬಾರಿ ಬೆಂಗಳೂರಿನಲ್ಲಿ ಟೀಮ್ ಕುಂದಾಪುರಿಯನ್ಸ್ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ʼಮಾತಿನ ಹಬ್ಬʼ ಕಾರ್ಯಕ್ರಮ ಆಯೋಜಿಸಿತ್ತು.
(1 / 6)
ಉದ್ಯೋಗ, ವ್ಯವಹಾರ ನಿಮಿತ್ತ ಕುಂದಾಪುರದಿಂದ ಬೆಂಗಳೂರಿಗೆ ಬಂದು ನೆಲೆ ಕಂಡುಕೊಂಡ ಹಲವರು ಸೇರಿ ಟೀಮ್ ಕುಂದಾಪುರಿಯನ್ಸ್ ಎಂಬ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ಈ ತಂಡ ತಮ್ಮ ಭಾಷೆ, ಬದುಕಿನ ಮೇಲಿನ ಒಲವನ್ನು ತೋರುವ ಉದ್ದೇಶದಿಂದ ಜುಲೈ 16 ರಂದು ಬೆಂಗಳೂರಿನ ಬಸವೇಶ್ವರ ನಗರದ ನೇತಾಜಿ ಗ್ರೌಂಡ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಮಾತಿನ ಹಬ್ಬವನ್ನಾಗಿ ಆಚರಿಸಿತ್ತು, ಅಲ್ಲದೆ ಈ ಕಾರ್ಯಕ್ರಮಕ್ಕೆ ಕುಂದಾಪುರದ ಹಲವು ಗಣ್ಯರನ್ನು ಆಹ್ವಾನಿಸಿತ್ತು. ಈ ಮಾತಿನ ಹಬ್ಬದಲ್ಲಿ ಕುಂದಾಪುರದ ಗೌಜಿ ಘಮ್ಮತ್ತು ಜೋರಾಗಿತ್ತು.
(2 / 6)
ಈಗಾಗಲೇ ಹತ್ತು-ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಹಾನಗರಿಯಲ್ಲಿ ಮನೆಮಾತಾದ ಟೀಮ್ ಕುಂದಾಪುರಿಯನ್ಸ್ ತಂಡ, ಈಗ ಕುಂದಾಪುರದ ಹಬ್ಬದ ಆಚರಣೆಯ ಮೂಲಕ ಊರಿನ ಪ್ರೇಮವನ್ನು ಮೆರೆದಿದೆ.
(3 / 6)
ಕುಂದಾಪುರ ಕನ್ನಡ ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ಮಾತನಾಡಿ ಕುಂದಾಪುರ ಭಾಷೆಯ ಸೊಗಡನ್ನು ಹಂಚಿಕೊಂಡರು.
(4 / 6)
ಕಾರ್ಯಕ್ರಮದಲ್ಲಿ ಕುಂದಾಪುರ ಕ್ವಿಜ್, ಕಠಿಣ ಪದಗಳ ಅರ್ಥ ಹೇಳುವ ಸ್ಪರ್ಧೆ ಸೇರಿದಂತೆ ಹಲವು ಆಟೋಟ ಸ್ಪರ್ಧೆಗಳು ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನೂ ನೀಡಲಾಯಿತು.
(5 / 6)
ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ, ಬರಿಗಾರಿನ ಸಂತ ಎಂದು ಕರೆಸಿಕೊಳ್ಳುವ ಗುರುರಾಜ್ ಗಂಟಿಹೊಳೆ ಭಾಗವಹಿಸಿದ್ದು ವಿಶೇಷವಾಗಿತ್ತು. ಕುಂದಾಪುರ ಶೈಲಿಯ ಗಂಜಿ-ಉಪ್ಪಿನೊಡಿ ಊಟ ಬಂದವರ ಹೊಟ್ಟೆ ತಣಿಸಿತು.
ಇತರ ಗ್ಯಾಲರಿಗಳು