ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪ್ರಸಂಗ; ಧರ್ಮ ಸಂಕಟದಲ್ಲಿ ಸಿಲುಕಿದ ಧರ್ಮ; ಸೂಪರ್ ಸಂಡೆ ವಿತ್ ಬಾದ್‌ಷಾ ಸುದೀಪ
- Bigg Boss 11: ಬಿಗ್ ಬಾಸ್ ಮನೆಯಲ್ಲಿ ಪ್ರತಿ ಬಾರಿಯೂ ಒಂದಲ್ಲ ಒಂದು ಜೋಡಿಯ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಅಷ್ಟಾಗಿ ಇನ್ನೂ ಯಾವ ಜೋಡಿಯೂ ಸುದ್ದಿಯಾಗಿರಲಿಲ್ಲ. ಆದರೆ ಧರ್ಮ ಹಾಗೂ ಅನುಷಾ ರೈ ನಡುವೆ ಏನೋ ಹಳೆಯ ಸಂಬಂಧ ಇದೆ ಎಂಬ ವಿಚಾರ ಬಹಿರಂಗ ಆಗುತ್ತಿದೆ.

(1 / 6)
ಧರ್ಮ, ಅನುಷಾ ಮತ್ತು ಐಶ್ವರ್ಯ ಈ ಮೂರು ಜನರ ನಡುವೆ ಒಂದು ಸಂಬಂಧ ಇದೆ. ಆದರೆ ಒಬ್ಬರು ಮಾತಾಡಿದಾಗ ಇನ್ನೊಬ್ಬರಿಗೆ ಬೇಸರ ಆಗುತ್ತದೆ ಎಂದು ಹೇಳಲಾಗುತ್ತಿದೆ. (Colors Kannada)
(2 / 6)
ಅವಳ ಕಣ್ಣು ಇವನ ಮೇಲೆ, ಇವನ ಕಣ್ಣು ಮತ್ತೊಬ್ಬಳ ಮೇಲೆ, ಮನೆಯವರೆಲ್ಲರ ಕಣ್ಣು ಈ ಮೂವರ ಮೇಲೆ ಎನ್ನುವ ಪ್ರಸಂಗ ಎದುರಾಗಿದ್ದು ಹೌದಾ ಎನ್ನುವ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ.(Colors Kannada)
(3 / 6)
ಆಗ ಮನೆಯ ಎಲ್ಲಾ ಸ್ಪರ್ಧಿಗಳೂ ಸಹ ಹೌದು ಎಂಬ ಒಂದು ಗ್ರೀನ್ ಕಾರ್ಡ್ ತೋರಿಸುತ್ತಾರೆ. ಆದರೆ ಆ ಮೂರು ಜನ ಅಂದರೆ ಧರ್ಮ, ಅನುಷಾ ಹಾಗೂ ಐಶ್ವರ್ಯ ನೋ ಎಂಬ ರೆಡ್ ಕಾರ್ಡ್ ತೋರಿಸಿರುತ್ತಾರೆ. (Colors Kannada)
(4 / 6)
ಆ ನಂತರ ಉಗ್ರಂ ಮಂಜು ಅವರನ್ನು ಪ್ರಶ್ನೆ ಮಾಡಿದಾಗ ಅವರು, ಹೌದು ಸರ್ ಆ ರೀತಿ ಒಂದು ವಾತಾವರಣ ಮನೆಯಲ್ಲಿ ಇದೆ. “ಅವರನ್ನೇ ನೋಡೋದು, ಎಲ್ಲೋಗ್ತಾ ಇದಾರೆ, ಏನ್ ಮಾಡ್ತಾ ಇದಾರೆ ಅದೆಲ್ಲವನ್ನೂ ಐಶ್ವರ್ಯ ಗಮನಿಸುತ್ತಾರೆ” ಎಂದು ಹೇಳುತ್ತಾರೆ.(Colors Kannada)
(5 / 6)
ಆದರೆ ಹಾಗೆಲ್ಲ ನಮ್ಮ ನಡುವೆ ಏನೂ ಇಲ್ಲ ಎಂದು ಅನುಷಾ ಅವರು ಹೇಳುತ್ತಾರೆ. ಧರ್ಮ ಕೂಡ ಇದನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಅನುಷಾ ಮೂರ್ನಾಲ್ಕು ವರ್ಷಗಳಿಂದ ಸ್ನೇಹಿತರು ಎಂದು ಹೇಳುತ್ತಾರೆ. (Colors Kannada)
ಇತರ ಗ್ಯಾಲರಿಗಳು