ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ; ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೂ ಬಡ, ಮಧ್ಯಮ ವರ್ಗದಿಂದ ಉತ್ತಮ ಪ್ರತಿಕ್ರಿಯೆ
ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿಯಂತೆ ಮಂಗಳವಾರ (ಫೆ.6) ಮಾರಾಟ ಶುರುವಾಗಿದೆ. ದೇಶಾದ್ಯಂತ ಇನ್ನು ಭಾರತ್ ಅಕ್ಕಿ ಎಲ್ಲೆಡೆ ಲಭ್ಯವಾಗಲಿದೆ. ಈಗಾಗಲೇ, ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೂ ಬಡ, ಮಧ್ಯಮ ವರ್ಗದಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಕಾರಣ, ಭಾರತ ಸರ್ಕಾರವು ಅಕ್ಕಿ ಬೆಲೆ ನಿಯಂತ್ರಣಕ್ಕಾಗಿ ಭಾರತ್ ಅಕ್ಕಿಯನ್ನು ಪರಿಚಯಿಸಿದೆ.
(1 / 8)
ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ ಇದ್ದು, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಇದನ್ನು ಮಂಗಳವಾರ (ಫೆ.6) ದೆಹಲಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಅಕ್ಕಿಯನ್ನೂ ಪರಿಚಯಿಲಾಗಿದೆ.
(2 / 8)
ಫಲಾನುಭವಿಗಳಿಗೆ 29 ರೂಪಾಯಿ ದರದ ಭಾರತ್ ಅಕ್ಕಿಯನ್ನು ನೀಡುವ ಮೂಲಕ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ದೆಹಲಿಯಲ್ಲಿ ಅಗ್ಗದ ದರದಲ್ಲಿ ಅಕ್ಕಿ ವಿತರಣೆಗೆ ಚಾಲನೆ ನೀಡಿದರು. ಸಚಿವರಾದ ಅಶ್ವಿನಿ ಕುಮಾರ್ ಚೌಬೆ, ಸಾಧ್ವಿ ನಿರಂಜನ್ ಜ್ಯೋತಿ ಕೂಡ ಉಪಸ್ಥಿತರಿದ್ದರು. (Hindustan Times)
(3 / 8)
ಭಾರತ್ ರೈಸ್ 5 ಕಿಲೋ ಮತ್ತು 10 ಕಿಲೋ ಬ್ಯಾಗ್‌ನಲ್ಲಿ ಲಭ್ಯವಿದೆ. ಸಗಟು ಮಾರಾಟ ದರದಲ್ಲಿ ಅಕ್ಕಿಯನ್ನು ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೆಲೆ ನಿಯಂತ್ರಿಸುವುದಕ್ಕೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಮಂಗಳವಾರ ಅಕ್ಕಿ ಬಿಡುಗಡೆ ಮಾಡಿ ಹೇಳಿದರು.(ANI Photo/ Sanjay Sharma)
(4 / 8)
ಕಳೆದ ಒಂದು ವರ್ಷದಲ್ಲಿ ಧಾನ್ಯದ ಚಿಲ್ಲರೆ ಬೆಲೆಯಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿದ್ದು, ಗ್ರಾಹಕ ಹಿತ ಕಾಪಾಡಲು ಕೇಂದ್ರ ಸರ್ಕಾರವು ಭಾರತ್ ಬ್ರ್ಯಾಂಡ್‌ನಲ್ಲಿ ಭಾರತ್ ಅಟ್ಟಾ, ಭಾರತ್ ಚನಾ ಪರಿಚಯಿಸಿತ್ತು. ಇದರ ಯಶಸ್ಸಿನ ಹಿನ್ನೆಲೆಯಲ್ಲಿ ಮಂಗಳವಾರ ಪ್ರತಿ ಕಿಲೋಗ್ರಾಂಗೆ 29 ರೂಪಾಯಿಗಳ ಸಬ್ಸಿಡಿ ದರದ 'ಭಾರತ್ ರೈಸ್' ಅನ್ನು ಮಾರುಕಟ್ಟಗೆ ಬಿಡುಗಡೆ ಮಾಡಿದೆ.(ANI Photo/ Sanjay Sharma)
(5 / 8)
ಭಾರತ್ ರೈಸ್‌ನ ಬ್ಯಾಗ್‌ನಲ್ಲಿ ಶೇಕಡ 5 ಕಡಿ ಅಕ್ಕಿ ಇರಲಿದೆ. ಇದನ್ನು ಮಧ್ಯಮ ಮತ್ತು ಬಡ ವರ್ಗದ ಜನರಿಗಾಗಿ ಬಿಡುಗಡೆ ಮಾಡಲಾಗಿದೆ. ಮಂಗಳವಾರ 100 ಮೊಬೈಲ್ ವ್ಯಾನ್‌ಗಳಿಗೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಚಾಲನೆ ನೀಡಿದರು. (ANI Photo/ Sanjay Sharma)
(6 / 8)
ಭಾರತ್ ಅಟ್ಟಾ ಮಾರಾಟ ಶುರುಮಾಡಿದ ಕಾರಣ ಕಳೆದ 6 ತಿಂಗಳ ಅವಧಿಯಲ್ಲಿ ಗೋಧಿ ಸಂಬಂಧಿತ ಹಣದುಬ್ಬರ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಸಾಧ್ಯವಾಗಿದೆ ಎಂದು ಸಚಿವ ಪಿಯೂಷ್ ಗೋಯೆಲ್ ಮಂಗಳವಾರ ಹೇಳಿದರು.(ANI Photo/ Sanjay Sharma)
(7 / 8)
ಭಾರತ್ ರೈಸ್ ಪ್ಯಾಕ್‌ಗಾಗಿ ಭಾರತದ ಆಹಾರ ನಿಗಮ (ಎಫ್‌ಸಿಐ) 5 ಲಕ್ಷ ಟನ್ ಅಕ್ಕಿಯನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಕೋ ಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾಗೆ ಒದಗಿಸುತ್ತಿದೆ. ಕೇಂದ್ರೀಯ ಭಂಡಾರದ ಮೂಲಕ ಭಾರತ್ ರೈಸ್ ಮಾರುಕಟ್ಟೆ ಪ್ರವೇಶಿಸಿದೆ.(Hindustan Times)
ಇತರ ಗ್ಯಾಲರಿಗಳು