Cyber Security Course: ಸೈಬರ್ ಭದ್ರತಾ ವೃತ್ತಿಪರರಾಗಿ, ಕೈತುಂಬಾ ವೇತನ ಪಡೆಯಿರಿ, ಇಲ್ಲಿದೆ ಅತ್ಯುತ್ತಮ 5 ಸೈಬರ್ ಸೆಕ್ಯುರಿಟಿ ಕೋರ್ಸ್
ಅತ್ಯುತ್ತಮ ವೇತನ ದೊರಕುವಂತಹ ಟೆಕ್ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಸೈಬರ್ ಅಪರಾಧಿಗಳ ವಿರುದ್ಧ ಹೋರಾಡಿ, ಹ್ಯಾಕರ್‌ಗಳಿಂದ ಡಿಜಿಟಲ್ ಸ್ವತ್ತುಗಳನ್ನು ರಕ್ಷಿಸುವ ಸಲುವಾಗಿ ನೀವು ಸೈಬರ್ ಭದ್ರತಾ ವೃತ್ತಿಪರರಾಗಬಹುದು. ಅತ್ಯುತ್ತಮ ವೇತನದ ಈ ಉದ್ಯೋಗ ಪಡೆಯಲು ನೆರವಾಗುವ ಐದು ಅತ್ಯುತ್ತಮ ಕೋರ್ಸ್‌ಗಳ ವಿವರ ಇಲ್ಲಿದೆ.
(1 / 6)
IBM Cybersecurity Analyst Professional Certificate: ಐಬಿಎಂ ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ ಪ್ರೊಫೆಷನಲ್ ಸರ್ಟಿಫಿಕೇಟ್ ಪಡೆದು ನೀವು ಸೈಬರ್ ಭದ್ರತಾ ವೃತ್ತಿಪರರಾಗಬಹುದು. ಸೈಬರ್ ಸೆಕ್ಯುರಿಟಿ ವಿಶ್ಲೇಷಣೆ ಟೂಲ್‌ಗಳ ಜ್ಞಾನ ಹೆಚ್ಚಿಸುವುದರ ಜತೆಗೆ ಸೈಬರ್ ಖದೀಮರನ್ನು ಮಟ್ಟ ಹಾಕಲು ಬೇಕಾದ ಕೌಶಲಗಳನ್ನು ಈ ಕೋರ್ಸ್ ಮೂಲಕ ಕಲಿಯಬಹುದು. ಈ ಕೋರ್ಸ್ coursera ತಾಣದಲ್ಲಿದೆ. (Pexels)
(2 / 6)
ಸೈಬರ್ ಭದ್ರತಾ ಪರಿಣತರಾಗಲು ನೆರವಾಗುವ ಇನ್ನೊಂದು ಕೋರ್ಸ್ ಹೆಸರು The Complete Cyber Security Course: Hackers Exposed. ಈ ಕೋರ್ಸ್ ಉಡೆಮಿ ತಾಣದಲ್ಲಿದೆ. ಡಾರ್ಕ್‌ನೆಟ್ಸ್, ಡಾರ್ಕ್ ಮಾರ್ಕೆಟ್ಸ್, ಝೀರೋ ಡೇ ವಾಲ್ಯುನೇರಬಿಲಿಟಿಸ್ಸ್, ಎಕ್ಸ್‌ಪ್ಲೋಯಿಟ್ ಕಿಟ್ಸ್, ಮಾಲ್‌ವೇರ್, ಫಿಶಿಂಗ್ ಇತ್ಯಾದಿಗಳ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಲು ಈ ಕೋರ್ಸ್ ಸಹಾಯಕ. ಆನ್‌ಲೈನ್ ವಂಚನೆಯನ್ನು ತಡೆಗಟ್ಟಲು ಅಡ್ವಾನ್ಸಡ್ ಪ್ರಾಕ್ಟಿಕಲ್ ಕೌಶಲವನ್ನು ಈ ಕೋರ್ಸ್ ಒದಗಿಸುತ್ತದೆ. (Pexels)
(3 / 6)
Complete Cybersecurity Bootcamp: ಈ ಕೋರ್ಸ್ ZTM (zerotomastery)ನಲ್ಲಿ ಲಭ್ಯವಿದೆ. ಸೈಬರ್ ಭದ್ರತೆ, ಉದ್ಯೋಗ, ಅವಶ್ಯವಿರುವ ಕೌಶಲಗಳ ಕುರಿತು ಅರಿತುಕೊಳ್ಳಲು ಈ ಕೋರ್ಸ್ ಸಹಾಯಕ. (Pexels)
(4 / 6)
Web Security and Bug Bounty: ನೀವು ಬಗ್ ಬೌಂಟಿಯಾಗಿ ಸೈಡ್ ಜಾಬ್ ಮಾಡಲು ಬಯಸಿದರೆ ಈ ಕೋರ್ಸ್ ಸೂಕ್ತ. ನೀವು ನಿಮ್ಮ ಸ್ವಂತ ಹ್ಯಾಕಿಂಗ್ ಲ್ಯಾಬ್ ಹಾಕಿಕೊಂಡು ಎಲ್ಲಾ ಬಗೆಯ ವೆಬ್ ದೌರ್ಬಲ್ಯಗಳನ್ನು ಅರಿತುಕೊಳ್ಳಲು ನೆರವಾಗುತ್ತವೆ. ವಿವಿಧ ಪ್ರಮುಖ ಸಂಸ್ಥೆಗಳ ವೆಬ್‌ಸೈಟ್‌ನಲ್ಲಿರುವ ಬಗ್‌ಗಳನ್ನು ಪತ್ತೆಹಚ್ಚಿದರೆ ನಿಮಗೆ ಸೂಕ್ತ ಬಹುಮಾನ/ವೇತನ ದೊರಕುತ್ತದೆ. (Unsplash)
(5 / 6)
Cybersecurity Specialization: ಈ ಕೋರ್ಸ್ ಕೋರ್ಸ್‌ಇರಾದಲ್ಲಿ ಲಭ್ಯವಿದೆ. ಇದು ಮೇರಿಲ್ಯಾಂಡ್ ಯೂನಿವರ್ಸಿಟಿಯ ಕೋರ್ಸ್. ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಭದ್ರತೆ, ಕಂಪ್ಯೂಟರ್ ಹ್ಯೂಮನ್ ಇಂಟರ್‌ವೆನ್ಸನ್, ಕ್ರಿಪ್ಟೊಗ್ರಫಿ ಇತ್ಯಾದಿ ಹಲವು ವಿಷಯಗಳನ್ನು ಕಲಿಸುತ್ತದೆ.(Pexels)
ಇತರ ಗ್ಯಾಲರಿಗಳು