Maruti Suzuki Jimny: ಜೂನ್‌ನಲ್ಲಿ ಮಾರುತಿ ಸುಜುಕಿ ಜಿಮ್ನಿ ಲಾಂಚ್‌; ಐದು ಡೋರ್‌ಗಳ ಈ ಎಸ್‌ಯುವಿ ಹೈಲೈಟ್ಸ್ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maruti Suzuki Jimny: ಜೂನ್‌ನಲ್ಲಿ ಮಾರುತಿ ಸುಜುಕಿ ಜಿಮ್ನಿ ಲಾಂಚ್‌; ಐದು ಡೋರ್‌ಗಳ ಈ ಎಸ್‌ಯುವಿ ಹೈಲೈಟ್ಸ್ ಹೀಗಿದೆ

Maruti Suzuki Jimny: ಜೂನ್‌ನಲ್ಲಿ ಮಾರುತಿ ಸುಜುಕಿ ಜಿಮ್ನಿ ಲಾಂಚ್‌; ಐದು ಡೋರ್‌ಗಳ ಈ ಎಸ್‌ಯುವಿ ಹೈಲೈಟ್ಸ್ ಹೀಗಿದೆ

Maruti Suzuki Jimny: ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿಗಾಗಿ ಕಾಯುವ ಸಮಯ ಮುಗಿಯುತ್ತಿದ್ದು, ಜೂನ್ 7 ರಂದು ಮಾರುಕಟ್ಟೆಗೆ ಬರುತ್ತಿದೆ. ಈ ಕಾರಿನ ವೈಶಿಷ್ಟ್ಯತೆಗಳು ಏನು ಅನ್ನೋದರ ಮಾಹಿತಿ ಇಲ್ಲಿದೆ.

ಭಾರತದ ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಭಾರಿ ಚರ್ಚೆಯಾಗುತ್ತಿರುವ ಕಾರು ಮಾರುತಿ ಸುಜುಕಿ ಜಿಮ್ನಿ. ಈ ಎಸ್‌ಯುವಿಯನ್ನು ಜೂನ್ 7 ರಂದು ಲಾಂಚ್ ಮಾಡಲಾಗುತ್ತಿದೆ. ಕಾರಿನ ಬುಕಿಂಗ್ ಆರಂಭವಾಗಿದ್ದು, ಭಾರಿ ಬೇಡಿಕೆಯನ್ನು ಹೊಂದಿದೆ.
icon

(1 / 12)

ಹೊಸ ಮಾದರಿಯ ಈ ಕಾರು 1970ರ ಜಿಮ್ನಿಯಿಂದ ಪ್ರೇರಿತವಾಗಿದ. ಇಂದಿನ ಪೀಳಿಗೆಯ ಗ್ರಾಹಕರನ್ನು ಆಕರ್ಷಿಸಲು ಜಿಮ್ನಿಯನ್ನು ಈಗಿನ ತಂತ್ರಜ್ಞಾನಕ್ಕೆ ತಕ್ಕಂತೆ ಮಾರ್ಪಡಿಸಲಾಗಿದೆ.
icon

(2 / 12)

ಮಾರುತಿ ಸುಜುಕಿ ಜಿಮ್ನಿ ಉದ್ದ 3,985 ಎಂಎಂ ಇದ್ದು, ಅಗಲ 1,645 ಮಿಲಿ ಮೀಟರ್ ಇದೆ. ಎತ್ತರ 1,720 ಎಂಎಂ ಇದೆ. 
icon

(3 / 12)

ಈ ಜಿಮ್ನಿಯ ವ್ಹೀಲ್ ಬೇಸ್ 2,590 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ ಇದೆ. 
icon

(4 / 12)

ಈ ಜಿಮ್ನಿಯ ವ್ಹೀಲ್ ಬೇಸ್ 2,590 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ ಇದೆ. 

ಮಾರುತಿ ಸುಜುಕಿ ಜಿಮ್ನಿ ಬೂಟ್ ಸ್ಪೇಸ್ ಸುಮಾರು 211 ಲೀಟರ್ ಆಗಿದೆ. ವಿಶೇಷ ಸೀಟುಗಳನ್ನು ಮುಚ್ಚಿದರೆ 332 ಲೀಟರ್ ಬೂಟ್ ಸ್ಪೇಸ್ ಸಿಗುತ್ತದೆ. 
icon

(5 / 12)

ಜಿಮ್ನಿಯ ಮುಂಭಾಗದ ವಿನ್ಯಾಸಕ್ಕೆ ಸಂಬಂಧಿಸಿದಂತೆ 5 ಸ್ಲಾಟ್ ಗ್ರಿಲ್ ಆಕರ್ಷಕವಾಗಿ ಕಾಡುತ್ತಿದೆ. ರೆಟ್ರೋ ಶೈಲಿಯ ರೌಂಡ್ ಹೆಡ್ ಲೈಟ್‌ಗಳು ಮತ್ತು ಫಾಗ್ ಲೈಟ್‌ಗಳು ಬರುಲಿವೆ. 
icon

(6 / 12)

ಮಾರುತಿ ಸುಜುಕಿ ಜಿಮ್ನಿ ಎಸ್‌ಯುವಿ ಡಾರ್ಕ್ ಮಿಶ್ರಲೋಹ ವಿನ್ಯಾಸದೊಂದಿಗೆ 15 ಇಂಚಿನ ಚಕ್ರಗಳನ್ನು ಹೊಂದಿದೆ. ಇದನ್ನು ಬಹು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತಿದೆ. ನೀಲಿ, ಕಪ್ಪು, ಕೆಂಪು, ಬೂದು, ಬಿಳಿ ಹಾಗೂ ಎರಡು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಬರ್ತಿದೆ.
icon

(7 / 12)

ಹಿಂಬಾಗಿಲಿನ ಮೇಲೆ ಸ್ಟೆಪ್ನಿ ಟೈರ್ ಅಳವಡಿಸಲಾಗಿದೆ. ಹಳೆಯ ಲುಕ್‌ನಲ್ಲೇ ಭಾರಿ ಆಕರ್ಷಿತವಾಗುತ್ತಿದೆ. 
icon

(8 / 12)

ಜಿಮ್ನಿ ಕ್ಯಾಬಿನ್ ಸಾಮಾನ್ಯವಾಗಿದ್ದು, ಯಾವುದೇ ಅಲಂಕಾರ ಇಲ್ಲ. ಇದನ್ನು ಆಫ್‌ ರೋಡ್‌ಗಾಗಿ ವಿನ್ಯಾಸಗೊಳಿಸಿದಂತೆ ಕಾಣುತ್ತಿದೆ.
icon

(9 / 12)

ಜಿಮ್ನಿ ಎಸ್‌ಯುವಿಯಲ್ಲಿ 9 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಹಾಗೂ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿದೆ. ಆಧುನಿಕರ ವೈಶಿಷ್ಟ್ಯಗಳೊಂದಿಗೆ ಈ ಕಾರು ಮಾರುಕಟ್ಟೆಗೆ ಬರುತ್ತಿದೆ.
icon

(10 / 12)

ಮಾರುತಿ ಸುಜುಕಿ ಜಿಮ್ನಿ 1.5 ಲೀಟರ್ ಕೆ15 ಪೆಟ್ರೋಲ್ ಇಂಜಿನ್‌ ಹೊಂದಿದ್ದು, ಇದು 103 ಬಿಎಚ್‌ಪಿ ಪವರ್ ಹಾಗೂ 134.2 ಟಾರ್ಕ್ ಅನ್ನು ಉತ್ಪಾದಿಸುತ್ತದೆ.
icon

(11 / 12)

4X4 ಸಿಸ್ಟಮ್ ಸ್ಟ್ಯಾಂಡರ್ಡ್ ಆಗಿ ಈ ಕಾರು ಬರುತ್ತಿದ್ದು, ಅಪ್ರೋಚ್ ಕೋನ 36 ಡಿಗ್ರಿ ಇದೆ. ನಿರ್ಗಮನ ಕೋನ 47 ಡಿಗ್ರಿ, ರಾಂಪೋವರ್ ಕೋನ 24 ಡಿಗ್ರಿ ಹೊಂದಿದೆ.
icon

(12 / 12)

ಇತರ ಗ್ಯಾಲರಿಗಳು