Poorna Chandra Tejasvi: ಅನನ್ಯ ಸಾಹಿತಿ, ಪರಿಸರ ಪ್ರೀತಿಯ ಪೂರ್ಣ ಚಂದ್ರ ತೇಜಸ್ವಿ ನೆನಪಾಗೋದು ಈ ಕಾರಣದಿಂದ photos
- ಸಾಹಿತಿ, ಪರಿಸರ ಚಿಂತನೆ, ತಂತ್ರಜ್ಞಾನ, ಛಾಯಾಗ್ರಹಣ, ಕೃಷಿ, ಹೋರಾಟಗಳ ಮೂಲಕ ತಮ್ಮದೇ ವಿಭಿನ್ನ ಬದುಕು ರೂಪಿಸಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಜನುಮ ದಿನ ಇಂದು. ಸೆಪ್ಟೆಂಬರ್ 8, 1938 ರಂದು ಜನಿಸಿದ್ದ ಅವರು ಈಗಲೂ ತಮ್ಮ ಕೃತಿಗಳು, ಮಾದರಿ ಬದುಕಿನ ಮೂಲಕ ಜೀವಂತವಾಗಿದ್ದಾರೆ. ಅವರ ಬದುಕಿನ ಕ್ಷಣಗಳ ನೋಟ ಇಲ್ಲಿದೆ.
- ಸಾಹಿತಿ, ಪರಿಸರ ಚಿಂತನೆ, ತಂತ್ರಜ್ಞಾನ, ಛಾಯಾಗ್ರಹಣ, ಕೃಷಿ, ಹೋರಾಟಗಳ ಮೂಲಕ ತಮ್ಮದೇ ವಿಭಿನ್ನ ಬದುಕು ರೂಪಿಸಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಅವರ ಜನುಮ ದಿನ ಇಂದು. ಸೆಪ್ಟೆಂಬರ್ 8, 1938 ರಂದು ಜನಿಸಿದ್ದ ಅವರು ಈಗಲೂ ತಮ್ಮ ಕೃತಿಗಳು, ಮಾದರಿ ಬದುಕಿನ ಮೂಲಕ ಜೀವಂತವಾಗಿದ್ದಾರೆ. ಅವರ ಬದುಕಿನ ಕ್ಷಣಗಳ ನೋಟ ಇಲ್ಲಿದೆ.
(1 / 6)
ಪೂಚಂತೇ.. ಪೂರ್ಣ ಚಂದ್ರ ತೇಜಸ್ವಿ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ. ಕುವೆಂಪು ಪುತ್ರರಾದರೂ ಅವರ ಪ್ರಭಾವದ ನಡುವೆ ತಮ್ಮದೇ ಬದುಕು ರೂಢಿಸಿಕೊಂಡವರು. ನೇರವಂತಿಕೆ ಅವರ ವಿಶೇಷ. ಈ ಕಾರಣದಿಂದಲೇ ಅವರಿಗೆ ಕನ್ನಡದ ಮನಸುಗಳಲ್ಲಿ ಈಗಲೂ ಅವರಿಗೆ ವಿಶೇಷ ಗೌರವ.
(2 / 6)
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಆನಂತರ ತಂತ್ರಜ್ಞಾನ, ಪರಿಸರ, ಕಾಡು, ಕೃಷಿ ಹೀಗೆ ಹಲವು ಆಯಾಮಗಳಲ್ಲಿ ತಮ್ಮ ಬದಕು ಕಟ್ಟಿಕೊಂಡರು. ಸ್ನಾತಕೊತ್ತರ ಪದವಿಯ ಬಳಿಕ ಓರಗೆಯ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿ ಅರಸಿಕೊಂಡು ಹೋಗದೇ ತೆರಳಿದ್ದು ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡರು. ಅವರ ಸಾಧನೆಗೆ ಮನೆ ನಿರುತ್ತರವೇ ಸಾಕ್ಷಿ.
(3 / 6)
ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ತೇಜಸ್ವಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. ಕರ್ವಾಲೋ, ಕರ್ವಾಲೋ, ಚಿದಂಬರ ರಹಸ್ಯ., ಜುಗಾರಿ ಕ್ರಾಸ್,, ಮಾಯಾಲೋಕ, ಕಾಡು ಮತ್ತು ಕ್ರೌರ್ಯ ಪ್ರಮುಖ ಕೃತಿಗಳು.
(4 / 6)
ವ್ಯವಸಾಯ, ಛಾಯಾಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇದು ಅವರ ಅದೆಷ್ಟೋ ಬರೆವಣಿಗೆಗಳಲ್ಲೂ ಮೂಡಿ ಬಂದಿದೆ ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿ ಉತ್ತೇಜನ ನೀಡುತ್ತಿದ್ದವರು.
(5 / 6)
ತೇಜಸ್ವಿ ಅವರು ರಾಜೇಶ್ವರಿ ಅವರನ್ನು ಪ್ರೀತಿಸಿ ವರಿಸಿದರು. ರಾಜೇಶ್ವರಿ ತೇಜಸ್ವಿ ಅವರು ಆತಿಥ್ಯಕ್ಕೆ ಹೆಸರಾಗಿದ್ದವರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.
ಇತರ ಗ್ಯಾಲರಿಗಳು