OTT Horror Thriller: ಕೂತಲ್ಲೇ ಬೆವರಿಳಿಸುವ ಹಾರರ್ ಸಿನಿಮಾ ‘ಹೆರಿಡಿಟರಿ’; ಇದೀಗ ಒಟಿಟಿಯಲ್ಲಿ ಲಭ್ಯ
ಹಾರರ್ ಸಿನಿಮಾ ನೋಡಬೇಕು ಎಂದುಕೊಂಡಿದ್ದರೆ ಹಾಲಿವುಡ್‌ನ ಸಿನಿಮಾ ‘ಹೆರಿಡಿಟರಿ’ ನೋಡಿ. ಅದ್ಭುತ ಕಥೆ ಹಾಗೂ ಕ್ಷಣ ಕ್ಷಣವೂ ರೋಚಕತೆ ಹೊಂದಿರುವ ಈ ಸಿನಿಮಾ ನಿಮಗೂ ಇಷ್ಟವಾಗಬಹುದು.
ಅನೇಕ ಜನರು ಹಾರರ್ ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಅಂಥವರಿಗೆ ಇಷ್ಟವಾಗುವ ಸಿನಿಮಾ ಹೆರಿಡಿಟರಿ. ಕೆಲವರಂತೂ ತಮಗೆ ಎಷ್ಟೇ ಭಯ ಇದ್ದರೂ ಆ ಭಯಕ್ಕೋಸ್ಕರವೇ ಸಿನಿಮಾವನ್ನು ನೋಡುತ್ತಾರೆ. ಆ ಭಯವನ್ನು ಥ್ರಿಲ್‌ನ ಜೊತೆಗೆ ಅನುಭವಿಸುತ್ತಾರೆ. ನೀವೂ ಹೆದರಿಕೊಂಡೇ ಒಂದು ಹಾರರ್ ಸಿನಿಮಾವನ್ನು ನೋಡಬೇಕು ಎಂದು ಅಂದುಕೊಂಡಿದ್ದರೆ ಈ ಸಿನಿಮಾ ಬೆಸ್ಟ್. ಇದೊಂದು ಹಾಲಿವುಡ್ ಮೂವಿ. ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಚಿಕ್ಕ ಹುಡುಗಿಯೊಬ್ಬಳು ಮುಂದೆ ಯಾರೆಲ್ಲ ಸಾಯುತ್ತಾರೆ ಎಂಬುದನ್ನು ಮೊದಲೇ ನಿರ್ಣಯಿಸಿ ಹೇಳುತ್ತಾ ಸಾಗುತ್ತಾಳೆ. ಆ ರೀತಿಯಾದ ಕಥೆ ಇದರಲ್ಲಿದೆ.
ಭಯಾನಕ ದೃಶ್ಯಗಳು ಹೇರಳವಾಗಿವೆ. ಸಂಪೂರ್ಣ ಭಯಾನಕ ಭಾವನೆಯನ್ನು ಹುಟ್ಟು ಹಾಕುವ ಸಾಕಷ್ಟು ದೃಶ್ಯಗಳನ್ನು ನೀವು ಈ ಸಿನಿಮಾದಲ್ಲಿ ಕಾಣಬಹುದು. ಕ್ಷಣ ಕ್ಷಣಕ್ಕೂ ರೋಚಕತೆಯನ್ನು ಹೊಂದಿರುವ ಈ ಸಿನಿಮಾವನ್ನು ನೀವು ಬಿಟ್ಟು ಬಿಟ್ಟು ನೋಡಲು ಸಾಧ್ಯವೇ ಇಲ್ಲ. ಯಾಕೆಂದರೆ ಕಥೆ ನಿಮ್ಮನ್ನು ಅಷ್ಟಾಗಿ ಕಾಡುತ್ತದೆ. ಇಂತಹ ಸಿನಿಮಾವೊಂದನ್ನು ನಾನು ನೋಡಲೇಬೇಕು ಎಂದು ನೀವು ಅಂದುಕೊಂಡಿದ್ದರೆ ಇಂದೇ ನೀವು ಈ ಸಿನಿಮಾವನ್ನು ನೋಡಬಹುದು. ಈ ಚಲನಚಿತ್ರವು OTT ನಲ್ಲಿ ಲಭ್ಯವಿದೆ. ತೆಲುಗಿನಲ್ಲೂ ಸ್ಟ್ರೀಮ್ ಆಗುತ್ತಿದೆ.
ಈ ಸಿನಿಮಾದ ಬಜೆಟ್ ವಿವರ
ಅಮೆಜಾನ್ ಪ್ರೈಮ್ ವೀಡಿಯೊ OTTಯಲ್ಲಿ ನೀವು ಈ ಸಿನಿಮಾ ನೋಡಬಹುದು. ಈ ಸಿನಿಮಾವನ್ನು ಇಂಗ್ಲಿಷ್‌ನಲ್ಲಿ ನೋಡಬಹುದು. ಸಬ್‌ಟೈಟಲ್ಸ್ ಕೂಡ ಲಭ್ಯವಿದೆ. ಜೂನ್ 2018 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಹೆರಿಡಿಟರಿ. ಸೂಪರ್ ಟಾಕ್ ಪಡೆದು ಬ್ಲಾಕ್ ಬಸ್ಟರ್ ಆಯಿತು. ಸುಮಾರು 10 ಮಿಲಿಯನ್ ಡಾಲರ್ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಚಿತ್ರತಂಡ
ಈ ಹಾರರ್ ಸಿನಿಮಾ 87.8 ಮಿಲಿಯನ್ ಡಾಲರ್ ಗಳಿಸಿದೆ. ಈ ಚಿತ್ರವು ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಟೋನಿ ಕೊಲೆಟ್ಟೆ, ಅಲೆಕ್ಸ್ ವೋಲ್ಫ್, ಗೇಬ್ರಿಯಲ್ ಬ್ರೈನ್, ಮಿಲ್ಲಿ ಶಾರ್ಪಿರೋ, ಕ್ರಿಸ್ಟಿ ಸಮ್ಮರ್‌ಹೈಸ್ ನಟಿಸಿರುವ ಹೆರಿಡಿಟಿ ಸಿನಿಮಾವನ್ನು ಆರಿ ಆಸ್ಟರ್ ನಿರ್ದೇಶಿಸಿದ್ದಾರೆ. ಎ 24, ಪಾಮ್‌ಸ್ಟಾರ್ ಮೀಡಿಯಾ, ಫಿಂಚ್ ಎಂಟರ್‌ಟೈನ್‌ಮೆಂಟ್ ಮತ್ತು ವಿಂಡಿ ಹಿಲ್ ಪಿಕ್ಚರ್ಸ್ ನಿರ್ಮಿಸಿದ ಈ ಚಲನಚಿತ್ರವನ್ನು ಕಾಲಿನ್ ಸ್ಟೆಟ್ಸನ್ ಸಂಯೋಜಿಸಿದ್ದಾರೆ.
ಅನ್ನಿ ಗ್ರಹಾಂ (ಟೋನಿ ಕೊಲೆಟ್ಟೆ) ಎಂಬ ಮಹಿಳೆ ತನ್ನ ಪತಿ, ಮಗ ಮತ್ತು ಮಾನಸಿಕ ಅಸ್ವಸ್ಥ ಮಗಳೊಂದಿಗೆ ವಾಸಿಸುತ್ತಾಳೆ. ಆದರೆ ಆ ಮಗಳು ಹೇಳುವ ಮಾತು, ಅವಳ ವಿಚಿತ್ರ ವರ್ತನೆಗಳೇ ಸಿನಿಮಾದಲ್ಲಿ ಭಯ ಹುಟ್ಟಿಸುತ್ತದೆ. ಒಂದು ಪಾರಿವಾಳದ ರುಂಡ ಹಾಗೂ ಮುಂಡವನ್ನು ಆ ಮಗಳು ಬೇರೆ ಮಾಡುತ್ತಾಳೆ. ಅದೇ ರೀತಿ ಇನ್ನೊಬ್ಬರಿಗೂ ಆಗುತ್ತದೆ. ಕೆಲ ದೃಶ್ಯಗಳಲ್ಲಿ ರಕ್ತಗಳು ಕಣ್ಣಿಗೆ ರಾಚುತ್ತವೆ. ಭಯದಿಂದ ಎದೆಬಡಿತ ಜೋರಾಗುತ್ತದೆ. ಇದೆಲ್ಲದಕ್ಕೂ ನೀವು ರೆಡಿ ಇದ್ದರೆ ಈ ಸಿನಿಮಾ ನೋಡಿ.