ಭಾರತ vs ಬಾಂಗ್ಲಾದೇಶ 2ನೇ ಟೆಸ್ಟ್; ಕಾನ್ಪುರದಲ್ಲಿ ಮೊದಲೆರಡು ದಿನದಾಟ ನಡೆಯೋದೇ ಅನುಮಾನ
- ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವು, ನಾಳೆ (ಸೆಪ್ಟೆಂಬರ್ 27)ರಿಂದ ಆರಂಭವಾಗಲಿದೆ. ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಮುನ್ಸೂಚನೆಗಳಿವೆ. ಪಂದ್ಯಕ್ಕೂ ಮುನ್ನ ಕಾನ್ಪುರ ಹವಾಮಾನ ವರದಿ ನೋಡೋಣ.
- ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವು, ನಾಳೆ (ಸೆಪ್ಟೆಂಬರ್ 27)ರಿಂದ ಆರಂಭವಾಗಲಿದೆ. ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಮುನ್ಸೂಚನೆಗಳಿವೆ. ಪಂದ್ಯಕ್ಕೂ ಮುನ್ನ ಕಾನ್ಪುರ ಹವಾಮಾನ ವರದಿ ನೋಡೋಣ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 6)
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ಭಾರತ, ಇದೀಗ ಎರಡನೇ ಟೆಸ್ಟ್ ಕೂಡಾ ಗೆದ್ದು ಸರಣಿ ಗೆಲ್ಲಲು ಎದುರು ನೋಡುತ್ತಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಸೆಪ್ಟೆಂಬರ್ 27ರ ಶುಕ್ರವಾರ ಪ್ರಾರಂಭವಾಗಲಿದೆ.(AFP)
(2 / 6)
ಎರಡನೇ ಟೆಸ್ಟ್ ಪಂದ್ಯವು ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈಗಾಗಲೇ ಭಾರತ ತಂಡ ಕಾನ್ಪುರದಲ್ಲಿ ಅಭ್ಯಾಸ ಅವಧಿಯಲ್ಲಿ ಭಾಗಿಯಾಗಿದೆ. ಆದರೆ, ನಾಳೆ ಆರಂಭವಾಗುವ ಎರಡನೇ ಟೆಸ್ಟ್‌ಗೆ ಮಳೆಯ ಭೀತಿ ಇದೆ.
(3 / 6)
ಅಕ್ಯುವೆದರ್ ಪ್ರಕಾರ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವಾದ ಸೆಪ್ಟೆಂಬರ್ 27ರಂದು ಕಾನ್ಪುರದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 92ರಷ್ಟು ಇದೆ. ಹೀಗಾಗಿ ಭಾರತದ ಅಭಿಮಾನಿಗಳಿಗೆ ನಿರಾಶೆಯಾಗಿದೆ.
(4 / 6)
ಪಂದ್ಯದ ಎರಡನೇ ದಿನವಾದ ಸೆಪ್ಟೆಂಬರ್ 28ರಂದು ಕೂಡಾ ಕಾನ್ಪುರ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡಾ 80ರಷ್ಟು ಇದೆ. ಮೂರನೇ ದಿನದ ವೇಳೆಗೆ ಈ ಪ್ರಮಾಣ ಶೇ.59ಕ್ಕೆ ಇಳಿದಿದೆ. ಪಂದ್ಯದ ನಾಲ್ಕನೇ ಮತ್ತು ಐದನೇ ದಿನ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಮುನ್ಸೂಚನೆ ಹೇಳಿದೆ. ಹೀಗಾಗಿ ಕಾನ್ಪುರ ಟೆಸ್ಟ್‌ನ ಮೊದಲ ಎರಡು ದಿನಗಳ ಾಟ ನಡೆಯುವುದೇ ಅನುಮಾನವಾಗಿದೆ.
(5 / 6)
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು 280 ರನ್ ಗಳಿಂದ ಸೋಲಿಸಿತು. ಅದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತವು ಮೊದಲ ಬಾರಿಗೆ ಸೋಲಿಗಿಂತ ಹೆಚ್ಚು ಗೆಲುವು ದಾಖಲಿಸಿತು. ಸೆಪ್ಟೆಂಬರ್ 27ರಿಂದ ಕಾನ್ಪುರದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಗೆಲುವಿನೊಂದಿಗೆ ಭಾರತವು ಕ್ಲೀನ್ ಸ್ವೀಪ್ ಮಾಡಲು ಎದುರು ನೋಡುತ್ತಿದೆ.(PTI)
ಇತರ ಗ್ಯಾಲರಿಗಳು